ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chikkaballapur News: ಮೊಬೈಲ್ ಮೋಹದಿಂದ ಮಕ್ಕಳು ಹಾದಿ ತಪ್ಪುವುದನ್ನು ತಡೆಯಬೇಕಿದೆ: ವಕೀಲ ಆರ್.ಮಟಮಪ್ಪ

ಮೊಬೈಲ್ ಹೆಚ್ಚೆಚ್ಚು ಬಳಕೆಯಿಂದಾಗಿ ಮಕ್ಕಳು ದಾರಿ ತಪ್ಪುತ್ತಿರುವ ಬಗ್ಗೆ ಅನೇಕ ವರದಿ ಗಳನ್ನು ನಾವು ನೋಡುತ್ತಿರುತ್ತೇವೆ. ಒಂದು ವೇಳೆ ಜ್ಞಾನದ ಅವಶ್ಯಕತೆಗೆ ಮಾತ್ರ ಮೊಬೈಲ್ ನೀಡಿದರು ತಂದೆ ತಾಯಿಗಳು ಮಕ್ಕಳ ಬಳಿಯೇ ಇದ್ದು ಗಮನಿಸಬೇಕು. ಇಲ್ಲದಿದ್ದರೆ ಮಕ್ಕಳ ಆರೋಗ್ಯಕ್ಕೆ ಮಾನಸಿಕವಾಗಿ ದೈಹಿಕವಾಗಿ ಜೊತೆಗೆ ಮುಂದಿನ ಭವಿಷ್ಯತ್ತಿಗೆ ತೊಂದರೆ ಯಾಗಲಿದೆ ಎಂದು ತಿಳಿಸಿದರು.

ತಾಲ್ಲೂಕಿನ ಮುದ್ದೇನಹಳ್ಳಿಯ ಗ್ರಂಥಾಲಯದಲ್ಲಿ ಎರ್ಪಡಿಸಿದ್ದ "ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ" ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳೊಂದಿಗೆ ಗಣ್ಯರು

ಚಿಕ್ಕಬಳ್ಳಾಪುರ: ಪೋಷಕರು ಯಾವ ಕಾರಣಕ್ಕೂ ಮಕ್ಕಳಿಗೆ ಮೊಬೈಲ್ ಅನ್ನು ಬೇಕಾ ಬಿಟ್ಟಿ ಬಳಸಲು ನೀಡಿದಲ್ಲಿ ಅವರ ಭವಿಷ್ಯಕ್ಕೆ ಮುಳ್ಳಾಗುವುದು ಖಚಿತ ಎಂದು ವಕೀಲ ಆರ್.ಮಟಮಪ್ಪ ಎಚ್ಚರಿಕೆ ನೀಡಿದರು.

ತಾಲ್ಲೂಕಿನ ಮುದ್ದೇನಹಳ್ಳಿಯ ಗ್ರಂಥಾಲಯದಲ್ಲಿ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮತ್ತು  ಪಂಚಾಯತ್ ರಾಜ್ ಇಲಾಖೆ ಸಹಯೋಗದೊಂದಿಗೆ ಏರ್ಪಡಿಸಿದ್ದ "ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ" ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮೊಬೈಲ್ ಹೆಚ್ಚೆಚ್ಚು ಬಳಕೆಯಿಂದಾಗಿ ಮಕ್ಕಳು ದಾರಿ ತಪ್ಪುತ್ತಿರುವ ಬಗ್ಗೆ ಅನೇಕ ವರದಿ ಗಳನ್ನು ನಾವು ನೋಡುತ್ತಿರುತ್ತೇವೆ. ಒಂದು ವೇಳೆ ಜ್ಞಾನದ ಅವಶ್ಯಕತೆಗೆ ಮಾತ್ರ ಮೊಬೈಲ್ ನೀಡಿದರು ತಂದೆ ತಾಯಿಗಳು ಮಕ್ಕಳ ಬಳಿಯೇ ಇದ್ದು ಗಮನಿಸಬೇಕು. ಇಲ್ಲದಿದ್ದರೆ ಮಕ್ಕಳ ಆರೋಗ್ಯಕ್ಕೆ ಮಾನಸಿಕವಾಗಿ ದೈಹಿಕವಾಗಿ ಜೊತೆಗೆ ಮುಂದಿನ ಭವಿಷ್ಯತ್ತಿಗೆ  ತೊಂದರೆ ಯಾಗಲಿದೆ ಎಂದು ತಿಳಿಸಿದರು.        

ಇದನ್ನೂ ಓದಿ: Chinthamani News: ಶಿಷ್ಯನಾದವನು ಭಕ್ತಿಯಿಂದ ಶರಣಾಗತನಾದರೆ ಗುರು ಶಿಷ್ಯರ ಭಾರ ಹೊರುತ್ತಾನೆ : ಧರ್ಮಾಧಿಕಾರಿ ಎಂ.ಆರ್.ಜಯರಾಮ್

18 ವರ್ಷದ ಒಳಗಿರುವ ಎಲ್ಲಾ ಮಕ್ಕಳ ಹಕ್ಕುಗಳ ರಕ್ಷಣೆ ಮಾಡಲು ಸರ್ಕಾರಗಳು ಹಲವಾರು ಕಾಯ್ದೆಗಳನ್ನು ಜಾರಿಗೆ ತಂದಿವೆ. ಮಕ್ಕಳಿಗೆ ಬದುಕುವ ಹಕ್ಕು ಮತ್ತು ಮಕ್ಕಳ ರಕ್ಷಣೆ ಹಕ್ಕು ಹಾಗೂ ಮಕ್ಕಳ ವಿಕಾಸನ ಹೊಂದುವ ಹಕ್ಕು ವಿಶೇಷವಾಗಿ ಮಾನಸಿಕ ಹಾಗೂ ದೈಹಿಕವಾಗಿ ಹಾಗೂ ಭಾಗವಹಿಸುವ ಹಕ್ಕು, ಮಕ್ಕಳು ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾಹಿತಿಯನ್ನು ಪಡೆದುಕೊಳ್ಳುವ ಹಕ್ಕು ನೀಡಲಾಗಿದೆ. ಈ ವಿಚಾರದಲ್ಲಿ ತಂದೆ ತಾಯಿಗಳಾಗಲಿ ಅಥವಾ ಯಾರೇ ಆಗಲಿ ಯಾವುದೇ ರೀತಿ ಹಿಂಸೆ ಅಥವಾ ಪ್ರಚೋ ದನೆ ನೀಡುವ ಹಾಗಿಲ್ಲ ಹಾಗೂ ಮಕ್ಕಳಿಗೆ ತೊಂದರೆಯನ್ನು ಸಹ ನೀಡುವ ಆಗಿಲ್ಲ ಮಕ್ಕಳಿಗೆ ಪ್ರೋತ್ಸಾಹ ನೀಡಿ ಮಕ್ಕಳ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದು ಮಕ್ಕಳ ಹಕ್ಕುಗಳ ಬಗ್ಗೆ ಕಾನೂನಿನ ಅರಿವನ್ನು ಮೂಡಿಸಿದರು.      

ದೇಶವು ಮುನ್ನಡೆ ಸಾದಿದ್ದರೂ ಬಾಲ್ಯ ವಿವಾಹ ನಿಷೇಧ ಸಂಪೂರ್ಣವಾಗಿ ಆಗಿಲ್ಲ. ಕಾನೂನುಗಳು ಜಾರಿಯಲ್ಲಿದ್ದರೂ ಅಲ್ಲಲ್ಲಿ ಈ ಅಕ್ರಮ ಪಿಡುಗು ನಡೆಯುತ್ತಲೇ ಇದೆ. ಬಾಲಕಾರ್ಮಿಕ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಅಲ್ಲಲ್ಲಿ ಮಕ್ಕಳನ್ನ ದುಡಿಮೆಗಾಗಿ ಬಳಸಿಕೊಂಡು ಮಕ್ಕಳಿಗೆ ತೊಂದರೆ ಆಗುವಂತೆ ನಡೆಯುತ್ತಿರುವುದು ದುರಾದೃಷ್ಟಕರ. ಜೊತೆಗೆ ಮಕ್ಕಳ ಪಾಲನೆ ಸಂರಕ್ಷಣೆ ಅಧಿನಿಯಮದಂತೆ ಮಕ್ಕಳು ಯಾವುದೇ ಅಹಿತಕರ ಘಟನೆಗಳನ್ನ ಮಾಡದೆ ಇರಲು ತಂದೆ ತಾಯಿಗಳು ಮಕ್ಕಳ ಬಗ್ಗೆ ವಿಶೇಷವಾದಂತಹ ಕಾಳಜಿ ವಹಿಸಬೇಕಾಗಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುದ್ದೇನಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಂ.ಎನ್. ತಿಪ್ಪಯ್ಯ, ಮುದ್ದೇನಹಳ್ಳಿ ಗ್ರಂಥಾಲಯ ಮೇಲ್ವಿಚಾರಕ  ಹಾಗೂ ಜಿಲ್ಲಾ ಗ್ರಂಥಾಲಯ ಅಧ್ಯಕ್ಷ  ಅಶ್ವತ್,ಮಕ್ಕಳು ಮತ್ತಿತರರು ಇದ್ದರು.