ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chikkaballapur News: ಮಕ್ಕಳಿಗೆ ಭೂಮಿ ಆಕಾಶ ಮಣ್ಣು ಮಳೆಯ ಗಮಲಿನ ಸಂಬಂಧ ಅನುಬಂಧ ಕಲಿಸಬೇಕಿದೆ: ಗೊಲ್ಲಹಳ್ಳಿ ಶಿವಪ್ರಸಾದ್ ಅಭಿಮತ

ಇದು ಮೊಬೈಲ್ ಕಾಲ ಮೋಹದ ಕಾಲ ನೆಲಮೂಲ ಭಾವನೆಗಳಿಗೆ ಕೊಳ್ಳಿಯಿಟ್ಟ ಕಾಲ ಇದಾ ಗಿದೆ. ಕೆರೆ-ಕುಂಟೆ ಬಾವಿ, ನದಿ, ಹಳ್ಳ, ಕಾಡು ಕಣಿವೆ ತೋಪು ಅರಣ್ಯ,ಬೆಟ್ಟ ಗುಡ್ಡ ಮಣ್ಣು ಮಳೆಯ ವಾಸನೆಯಂತಹ ಸಹಜ ಗುಣಗಳನ್ನು ಮಕ್ಕಳಿಗೆ ಪರಿಚಯ ಮಾಡ ಬೇಕೆಂಬ ಕನಿಷ್ಟ ಪ್ರಜ್ಞೆಯನ್ನು ನಾವು ಕಳೆದುಕೊಂಡಿದ್ದೇವೆ.

ಚಿಕ್ಕಬಳ್ಳಾಪುರ: ಬುದ್ದಿ ಕಲಿಸಲು ಹೆತ್ತವರೇ ಮಕ್ಕಳಿಗೆ ಮೆಣಸಿನಕಾಯಿ ಘಾಟು ಹಾಕುತ್ತಿದ್ದರೂ ಆ ಕಾಲದಲ್ಲಿ ನಾವು ಸಾಯಲಿಲ್ಲ. ಈ ಕಾಲದಲ್ಲಿ ಹೊಡೆಯುವುದಿರಲಿ ಬುದ್ದಿ ಮಾತು ಹೇಳಿದರೂ ಆತ್ಮಹತ್ಯೆಗೆ ಶರಣಾಗುವ ಕಾಲಬಂದಿದೆ. ಇಂತಹ ಅಪಸವ್ಯ ಗಳಿಗೆ ಯಾರು ಕಾರಣ ಎಂಬದನ್ನು ಗಂಭೀರವಾಗಿ ಚಿಂತಿಸಬೇಕಿದೆ ಎಂದು ಚಿತ್ರಸಾಹಿತಿ ಗೀತರಚನೆಕಾರ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ಸಕಲರಂಗ ಹೆಜ್ಜೆ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ನಡೆದ ವಸಂತಚಿಟ್ಟೆಗಳು-26 ಒಂದು ತಿಂಗಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಇದು ಮೊಬೈಲ್ ಕಾಲ ಮೋಹದ ಕಾಲ ನೆಲಮೂಲ ಭಾವನೆಗಳಿಗೆ ಕೊಳ್ಳಿಯಿಟ್ಟ ಕಾಲ ಇದಾಗಿದೆ.ಕೆರೆ-ಕುಂಟೆ ಬಾವಿ, ನದಿ, ಹಳ್ಳ, ಕಾಡು ಕಣಿವೆ ತೋಪು ಅರಣ್ಯ,ಬೆಟ್ಟ ಗುಡ್ಡ ಮಣ್ಣು ಮಳೆಯ ವಾಸನೆಯಂತಹ ಸಹಜ ಗುಣಗಳನ್ನು ಮಕ್ಕಳಿಗೆ ಪರಿಚಯ ಮಾಡ ಬೇಕೆಂಬ ಕನಿಷ್ಟ ಪ್ರಜ್ಞೆಯನ್ನು ನಾವು ಕಳೆದುಕೊಂಡಿದ್ದೇವೆ. ಪೋಷಕರಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇನೆ. ಶಿಕ್ಷಣ ಬೇಕು ಇದರೊಟ್ಟೊಗೆ ಸಂಸ್ಕಾರವೂ ಬೇಕು ಎಂಬುದನ್ನು ಮರೆಯಬೇಡಿ ಎಂದರು.

ಇದನ್ನೂ ಓದಿ: Chikkaballapur News: ಯಶಸ್ವಿಯಾಗಿ ಮುಗಿದ ಸರಗಳ್ಳತನ ತಡೆ ಕುರಿತು ಜಾಗೃತಿ ಕಾರ್ಯಕ್ರಮ

ಪೋಷಕರ ಮನದಾಸೆಗಳನ್ನು ಮಕ್ಕಳ ಮೇಲೆ ಹೇರುತ್ತಾ ಅವರನ್ನು ಶೋಕೇಸಿನ ಗೊಂಬೆ ಗಳಾಗಿಸಬೇಡಿ.ಒಳ್ಳೆಯದನ್ನು ಬಿತ್ತಿದರೆ ಒಳ್ಳೆಯದೇ ಬರುವಂತೆ ಸತ್ಯವನ್ನು ಬಿತ್ತೋಣ. ಸಮಾನತೆ ಸಾರುವ ಆರೋಗ್ಯವಂತ ಸಮಾಜ ಕಟ್ಟೋಣ ಎಂದರು.

ರಂಗ ಚಟವಟಿಕೆಗಳಲ್ಲಿ ಪಾಲ್ಗೊಳ್ಳುವ ನಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವಿರುವ ಹಾಗೆ ನಾಳಿನ ಸಮಾಜವನ್ನು ನೋಡಲು ಆರೋಗ್ಯವಂತೆ ಮನಸ್ಸು ಮತ್ತು ಕಣ್ಣುಗಳನ್ನು ಕೊಡಲಿದೆ. ನಮ್ಮ ಸುತ್ತಮುತ್ತಲ ಪರಿಸರವನ್ನು ಆರೋಗ್ಯ ಪೂರ್ಣವಾಗಿ ಇಡಲು ಸಹಾಯ ಮಾಡಲಿದೆ.ಈ ದಿಸೆಯಲ್ಲಿ ಪರಂಪರೆ ಮತ್ತು ಸಂಸ್ಕೃತಿಯನ್ನು ಕಾಪಾಡುವ ಕೆಲಸ ವಸಂತ ಚಿಟ್ಟೆಗಳು 2026 ಮಾಡುತ್ತಿರುವುದು ಸಂತೋಷ ತಂದಿದೆ ಎಂದರು.

8u

ಖ್ಯಾತ ರಂಗಕರ್ಮಿ ರಂಗಾಯಣದ ಮಾಜಿ ನಿರ್ದೇಶಕರು ಸಿ. ಬಸವಲಿಂಗಯ್ಯ ಮಾತನಾಡಿ, ಚಿಕ್ಕಬಳ್ಳಾಪುರದಂತಹ ಗಡಿ ಜಿಲ್ಲೆಯಲ್ಲಿ ದಿಲೀಪ್ ಅಂತಹ ಉದಯೋನ್ಮುಖ ರಂಗಕರ್ಮಿ ವಸಂತ ಚಿಟ್ಟೆಗಳು 2026 ಮೂಲಕ ಮಕ್ಕಳಿಗೆ ರಂಗಶಿಕ್ಷಣದ ಊಟ ಉಣಬಡಿಸುತ್ತಿರುವುದು ನಿಜಕ್ಕೂ ಸಂತೋಷ ತಂದಿದೆ. ಒಂದು ತಿಂಗಳ ಕಾಲ ವಸಂತ ಚಿಟ್ಟೆಗಳು-26 ಎಂಬ ಬೇಸಿಗೆ ಶಿಬಿರದ ಹೆಸರಿನಲ್ಲಿ ಮಕ್ಕಳಿಗೆ ಅಭಿನಯ, ಭಾಷಣಕಲೆ, ಚಿತ್ರಕಲೆ, ಹಾಡು ಕುಣಿತ, ನಾಟಕ ಹೀಗೆ ಹತ್ತು ಹಲವು ಚಟವಟಿಕೆಗಳನ್ನು ಏಕಾಗ್ರತೆಯಿಂದ ಕಲಿಸಿರುವ ಇವರ ಸಾಹಸ ಮೆಚ್ಚಲೇಬೇಕು ಎಂದರು.

ರಂಗಭೂಮಿ ಮುಲತಃ ಸಮಷ್ಟಿ ಕಲೆ. ಲಲಿತಕಲೆಗಳನ್ನು ಒಳಗೊಂಡಿರುವ ರಂಗಭೂಮಿ ಮಕ್ಕಳನ್ನು ಸುಲಭವಾಗಿ ತಲುಪುತ್ತದೆ.ವಿಭಿನ್ನ ಚಟವಟುಕೆಗಳ ಮೂಲಕ ಮಕ್ಕಳನ್ನು ಕ್ರಿಯಾಶೀಲರನ್ನಾಗಿಸುವುದಷ್ಟೇ ಅಲ್ಲ, ಅವರ ಮಾನಸಿಕ ಬೆಲವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸಿ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ.ಇಂತಹ ಕೆಲಸವನ್ನು ದಿಲೀಪ್ ಮತ್ತವರ ತಂಡ ಮಾಡಿದೆ. ಇವು ಇನ್ನೂ ಹೆಚ್ಚೆಚ್ಚು ನಡೆಯಲಿ, ಗಡಿ ಜಿಲ್ಲೆಯಲ್ಲಿ ಕನ್ನಡ ಕಹಳೆ ಮೊಳಗಲಿ ಎಂದರು.

ಆಧುನಿಕತೆಯ ದಾಳಿಗೆ ಸಿಕ್ಕಿ ದೇಸೀ ಶಿಕ್ಷಣ ಮರೆಯಾಗುತ್ತಿರುವ ಈ ಕಾಲದಲ್ಲಿ ಗಡಿ ಜಿಲ್ಲೆಯಲ್ಲಿ ಮಕ್ಕಳನ್ನು ಕಟ್ಟಿಕೊಂಡು ನಾಟಕೋತ್ಸವ ಮಾಡುತ್ತಿರುವುದು ಸಾಹಸದ ಕೆಲಸವಾಗಿದೆ. ಏಕೆಂದರೆ ತಾಂತ್ರಿಕ ನೆಲೆಯಿಂದಾಗಿ ಕನ್ನಡ ರಂಗಭೂಮಿ ಬಿಕ್ಕಟ್ಟಿನಲ್ಲಿದೆ.

kamsa

ರಂಗಶಾಲೆಗಿಂತ ನಟರನ್ನು ತರಬೇತುಗೊಳಿಸುವ ಸಂಸ್ಥೆಗಳು ಬೇಕು ಎನ್ನುವುದು ಬಿ.ವಿ.ಕಾರಂತರ ಮಾತಾಗಿತ್ತು. ನಾಟಕವೆಂದರೆ ಶಾಸ್ತ್ರ. ಅಲ್ಲಿ ಕೆಲವರಿಗಷ್ಟೇ ಅವಕಾಶ ವಿರುತ್ತದೆ. ಆದರೆ ರಂಗಭೂಮಿಗೆ ಯಾರು ಬೇಕಾದರೂ ಬರಬಹುದು. ಈ ನಿಟ್ಟಿನಲ್ಲಿ ಸಕಲರಂಗಹೆಜ್ಜೆ ಟ್ರಸ್ಟ್ ಒಳ್ಳೆಯ ಕೆಲಸ ಮಾಡುತ್ತಿದೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಕ್ಕಳಿಂದ ಮೂಡಿಬಂದ  ಕಂಸಾಳೆ ಮಾರಿ ಕುಣಿತ, ಮತ್ತು ಪಂಜರಶಾಲೆ,ಕಲ್ಯಾಣದ ಕೂಗು, ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ನಾಟಕಗಳು ಪ್ರೇಕ್ಷಕರ ಮನಸೂರೆಗೊಂಡವು.

ವೇದಿಕೆಯಲ್ಲಿ ರಂಗಕರ್ಮಿ ಸಿ.ಬಸವಲಿಂಗಯ್ಯ, ಸಾಹಿತಿ ಪಾತಮುತ್ತುಕದಹಳ್ಳಿ ಚಲಪತಿ ಗೌಡ, ಶಿಕ್ಷಕ ಸತೀಶ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಡಿ.ಎಂ. ರವಿಕುಮಾರ್ , ಗಾಯಕ  ಕುಮಾರ್ ಚಿಕ್ಕಬಳ್ಳಾಪುರ ಇದ್ದರು. ಸಕಲರಂಗಹೆಜ್ಜೆ ಟ್ರಸ್ಟ್ ನ ದಿಲೀಪ್ ಕುಮಾರ್ ಇತರರು ಇದ್ದರು.