ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅಭಿವೃದ್ಧಿ ಹೊಂದಿರುವ ಚಿಂತಾಮಣಿ ನಗರ ವನ್ನು ಮುಂದಿನ ದಿನಗಳಲ್ಲಿ ಅತ್ಯಾಧುನಿಕ ಹಾಗೂ ಸುಸಜ್ಜಿತ ನಗರವಾಗಿ ರೂಪುಗೊಳಿಸುವ ಉದ್ದೇಶದಿಂದ “ಚಿಂತಾಮಣಿ ನಗರಾಭಿವೃದ್ಧಿ ಪ್ರಾಧಿಕಾರ”ವನ್ನು ಸ್ಥಾಪಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್(Higher Education Minister and District In-charge Minister Dr. M.C. Sudhakar) ತಿಳಿಸಿದರು.
ಜಿಲ್ಲೆಯ ಚಿಂತಾಮಣಿ ತಾಲ್ಲೂಕು ಪಂಚಾಯ್ತಿಯಲ್ಲಿರುವ "ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಕಚೇರಿ"ಯಲ್ಲಿ ಶುಕ್ರವಾರ ಮೊದಲ ಸಾಮಾನ್ಯ ಸಭೆ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಹಾಗೂ ನಮ್ಮ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಹೆಚ್ಚಿನ ಜನರು ಚಿಂತಾಮಣಿ ನಗರದ ಕಡೆ ಒಲವು ತೋರಿ ಇಲ್ಲಿ ವಾಸಿಸಲು ಬರುತ್ತಿದ್ದಾರೆ. ಕಾರಣ ಇಲ್ಲಿ ದೊರೆಯುವ ಮೂಲಭೂತ ಸೌಕರ್ಯಗಳೇ ಆಗಿದೆ. ಆದ್ದರಿಂದ ಚಿಂತಾಮಣಿ ನಗರವು ವೇಗವಾಗಿ ಬೆಳೆಯುತ್ತಿದ್ದು ಈ ಬೆಳವಣಿಗೆಗೆ ತಕ್ಕಂತೆ ನಗರೀಕರಣ ನಡೆಯಬೇಕಿದೆ ಎಂದರು.
ಜನಸಂಖ್ಯೆ ಏರಿದೆ ಎಂಬ ಕಾರಣಕ್ಕೆ ನಗರದ ಹೊರವಲಯದಲ್ಲಿ ನಿರ್ಮಾಣವಾಗುವ ಬಡಾವಣೆ ಗಳು ಅವೈಜ್ಞಾನಿಕವಾಗಿ ಬೆಳೆಯಬಾರದು. ಚಿಂತಾಮಣಿ ನಗರ ಹೊರ ವಲಯದಲ್ಲಿ ತಲೆ ಎತ್ತುತ್ತಿರುವ ಬಡಾವಣೆಗಳನ್ನು ಸಂಪರ್ಕಿಸುವ ರಸ್ತೆಗಳು ಕೂಡ ನಿಯಾಮಾವಳಿ ರೀತ್ಯ ಅಭಿವೃದ್ಧಿ ಆಗಿರಬೇಕು. ನಿಯಮದಂತೆ ರಸ್ತೆಗಳು ದೊಡ್ಡದಾಗಿರಬೇಕು ಎಂದರು.
ನೂತನವಾಗಿ ನಿರ್ಮಾಣವಾಗುತ್ತಿರುವ ಬಡಾವಣೆಗಳಲ್ಲಿ ನಿರ್ಮಿಸಿರುವ ರಸ್ತೆಗಳು, ಒಳಚರಂಡಿ ವ್ಯವಸ್ಥೆ, ಬೀದಿ ದೀಪ, ನೀರು ಪೂರೈಕೆ ವ್ಯವಸ್ಥೆ ಸೇರಿದಂತೆ ಇನ್ನಿತರ ಮೂಲಭೂತ ವ್ಯವಸ್ಥೆಗಳು ಗುಣಮಟ್ಟದಲ್ಲಿ ಕೂಡಿರಬೇಕು. ಬಡವಣೆ ನಿರ್ಮಾಣದ ನಿಯಮಗಳ ರೀತಿಯಲ್ಲಿಯೇ ಆಗಬೇಕು. ಈ ಎಲ್ಲವನ್ನು ಪರಿಶೀಲನೆಯನ್ನು ಮಾಡಲು ಹಾಗೂ ನಿಗಾ ವಹಿಸಲು ಶುಕ್ರವಾರ ಲೋಕಾರ್ಪಣೆ ಗೊಂಡ ನಗರಾಭಿದ್ಧಿ ಪ್ರಾಧಿಕಾರದಿಂದ ಸಹಾಯಕವಾಗಲಿದೆ ಎಂದರು.
ಜಿಲ್ಲಾಧಿಕಾರಿಗಳು ಮಾತನಾಡಿ ಸದ್ಯ ತಾಲೂಕು ಪಂಚಾಯಿತಿ ಆವರಣದಲ್ಲಿ ಕಚೇರಿ ತರೆಯ ಲಾಗಿದ್ದು ಮೊದಲ ಸಾಮಾನ್ಯ ಸಭೆ ನಡೆಸಲಾಗಿದೆ.ಮುಂಬರುವ ದಿನಗಳಲ್ಲಿ 1 ಎಕರೆ ಭೂಮಿ ಒದಗಿಸಿ ಸ್ವಂತ ಕಟ್ಟಡದಲ್ಲಿ ಕಾರ್ಯರ್ನಿಹಿಸಲು ಅವಕಾಶ ಮಾಡಿಕೊಡಲಾಗುವುದು.
ದಾವಣಗೆರೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಜಯಶೀಲರಾಗುವುದು ಖಚಿತ. ಶಾಮನೂರು ಕುಟುಂಬ ದಾವಣಗೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗಿದೆ. ನಾನು ಬಿಡಿಎಸ್ ಪದವಿ ಪಡೆದಾಗ ಇದ್ದ ದಾವಣಗೆರೆಗೂ ಈಗಿನ ಅಭಿವೃದ್ದಿಗೂ ಅಜಗಜಾಂತರ ವ್ಯತ್ಯಾಸವಿದೆ. ಜನಮತ ಶಾಮನೂರು ಕುಟುಂಬದ ಜತೆಗಿದೆ.ಗೆಲುವು ನಮ್ಮದೇ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕೆಐಎಡಿಬಿ ಜಟಾಪಟಿ ಬಗ್ಗೆ ಮಾತನಾಡಿ, ರೈತಸಂಘದ ಒಂದು ಬಣ ನಮ್ಮ ಮೇಲೆ ಆಪಾಧನೆ ಮಾಡುತ್ತಿದ್ದಾರೆ.ಮತ್ತೊಂದು ಬಣ ಭೂಮಿಕೊಡಲು ಸಿದ್ಧವಿದೆ.ಕೈಗಾರಿಕೆ ಸ್ಥಾಪಿಸಲು ಭೂಮಿ ಕೊಡುವ ಸಂಖ್ಯೆ ಹೆಚ್ಚಿರುವ ಕಾರಣವೇ ಅಧಿಸೂಚನೆ ಹೊರಡಿಸಿದೆ.ಉಳ್ಳವರಿಗೆ ನಾವು ಭೂಮಿ ಬಿಟ್ಟಿರುವ ಬಗ್ಗೆ ಅವರೇ ಬಂದು ಹೇಳಲಿ. ತಪ್ಪಾಗಿದ್ದರೆ ಸರಿಪಡಿಸೋಣ, ಪಾಲಿಹೌಸ್ ವಿಚಾರದಲ್ಲಿ ಅಧಿಕಾರಿಗಳು ತಪ್ಪುಮಾಡಿದ್ದಾರೆ ಎಂಬ ಆರೋಪವಿದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ವಿಚಾರದಲ್ಲಿ ತಪ್ಪಾಗಿದ್ದರೂ ಸರಿ ಮಾಡೋಣ. ಶಾಸಕರು ಮತ್ತು ರೈತರ ಅಭಿಪ್ರಾಯ ಪಡೆದೇ 470 ಎಕರೆ ಭೂಮಿ ಕೃಷಿ ಭೂಮಿ ಬಿಟ್ಟು ಅಂತಿಮ ಆದೇಶ ಹೊರಡಿಸ ಲಾಗಿದೆ ಎಂದರು.
ಮೊದಲ ದಿನ 1.20 ಲಕ್ಷ ಘೋಷಣೆ ಮಾಡಲಾಗಿದೆ. ಎರಡನೇ ದಿನ 1.25 ಲಕ್ಷ, ಮೂರನೇ ದಿನ 1.30 ಲಕ್ಷ, ನಾಲ್ಕನೇ ದಿನ 1.60 ಲಕ್ಷ. ಶಿಡ್ಲಘಟ್ಟ ರಸ್ತೆಗೆ 1.50 ಲಕ್ಷ ನಿಗಧಿ ಮಾಡಿದ್ದಾರೆ.
ವೇದಿಕೆಯಲ್ಲಿ ಕೆಲಸ ರೈತ ಮುಖಂಡರು ನಿರಂತರವಾಗಿ ಸುಳ್ಳು ಸುದ್ದಿ ಹಬ್ಬಿಸುವಲ್ಲಿ ನಿರತರಾಗಿ ದ್ದಾರೆ. ಒಂದೇ ಕಂತಿನಲ್ಲಿ ಹಣ ಕೊಡುವುದಿಲ್ಲ ಎಂದೂ ಹೇಳುತ್ತಾ ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.ಇದರ ಹಿಂದೆ ರಿಯಲ್ ಎಸ್ಟೇಟ್ ಕುಳಗಳು ಸೇರಿ ದೊಡ್ಡಮಟ್ಟದ ಲಾಬಿ ಕೆಲಸ ಮಾಡುತ್ತಿರುವುದು ಗೊತ್ತಿದೆ.ಜಂಗಮಕೋಟೆ ಬಳಿ ಮಾಡಲೇ ಬಾರದು, ದಿಬ್ಬೂರಹಳ್ಳಿ ಬಳಿ ಮಾಡುವಂತೆ ನನ್ನ ಬಳಿ ಬಂದು ಹೇಳಿದ್ದಾರೆ.
ರೈತ ಸಂಘದ ಮುಖಂಡರಲ್ಲಿ ಮನವಿ ಯಾರೂ ಕೂಡ ಆಸೆ ಆಮಿಷಗಳಿಗೆ ಒಳಗಾಗಬೇಡಿ. ಯುವಕ ರಿಗೆ ಉದ್ಯೋಗ ದೊರೆಯಬೇಕಾ ಬೇಡವೇ? ಎಂಬುದನ್ನು ಯೋಚಿಸಿ ಎಂದರು.
ಕೆಲವರು ಅಧಿಕಾರ ಇದ್ದಾಗ ಜಿಲ್ಲೆಗೆ ಬೇಕಾದ್ದು ಮಾಡದೆ, ಈಗ ವೇದಿಕೆಗೆ ಬಂದು ಮೊಸಳೆ ಕಣ್ಣೀರು ಹಾಕುವ, ತನಿಖೆ ಮಾಡಿಸುವ ಮತಾಡಿದ್ದಾರೆ. ನನ್ನದಾಗಲಿ, ಸಂಬAಧಿಕರದ್ದಾಗಲಿ ಒಂದು ಎಕರೆ ಭೂಮಿ ಜಂಗಮಕೋಟೆ ಭಾಗದಲ್ಲಿ ಇಲ್ಲ. ನಾನು ಇಂತಹ ಬೆದರಿಕೆಗಳಿಗೆ ಬಗ್ಗುವುದಿಲ್ಲ.ನಾನು ಒಂದು ಕಡೆ ನಿಲ್ಲುತ್ತೇನೆ, ಅವರು ಒಂದು ಕಡೆ ನಿಲ್ಲಲ್ಲಿ. ಓಟ್ ಮಾಡಿಸೋಣ ರಾಜ್ಯದ ಜನ ಯಾರನ್ನು ಕಳ್ಳ ಎನ್ನುತ್ತಾರೆ, ಯಾರನ್ನು ಛೀ ಥೂ ಎಂದು ಉಗಿಯುತ್ತಾರೆ ನೋಡೋಣ. ಅವರಿಗೆ ಜಿಲ್ಲೆಯಲ್ಲಿ ಆಗುತ್ತಿರುವ ಅಭಿವೃದ್ದಿ ಕಾರ್ಯಗಳನ್ನು ಸಹಿಸದೆ ಹೀಗೆ ಮಾತನಾಡುತ್ತಿದ್ದಾರೆ. ಅವರು ಮೂರುವರೆ ವರ್ಷ ಸಚಿವರಾಗಿದ್ದರು, ನಾನೂ ಕೂಡ ಸಚಿವನಾಗಿದ್ದೇನೆ. ನನ್ನ ಅವಧಿಯ ಸಾಧನೆ ಗಳ ಪಟ್ಟಿ ನಾನು ಮಾಡುತ್ತೇನೆ. ಅವರ ಅವಧಿಯ ಸಾಧನೆಗಳ ಪಟ್ಟಿ ಅವರು ಮಾಡಿ ಬಿಡುಗಡೆ ಮಾಡಲಿ ನೋಡೋಣ ಎಂದು ಡಾ.ಕೆ.ಸುಧಾಕರ್ ಹೆಸರು ಹೇಳದೆ ಮಾತಿನಲ್ಲೇ ಚುಚ್ಚಿದರು.
ಬಿಜೆಪಿ ಪಕ್ಷವು ಅಧಿಕಾರಕ್ಕೆ ಬಂದ ಕೂಡಲೇ ನನ್ನ ಬಗ್ಗೆ ಸಚಿವ ಸ್ಥಾನದ ಅವಧಿಯ ಆಡಳಿತದ ಬಗ್ಗೆ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸಲಿ, ಅದಕ್ಕೂ ಮೊದಲು ದಾಖಲೆಯಿದ್ದರೆ ಬಿಡುಗಡೆ ಗೊಳಿಸಲಿ,ವಿಡಿಯೋ ಮಾಡಿ ಬಿಡಲಿ. ಬಹುಶಃ ಅವರು ಕುದುರಿಸುವ ವ್ಯವಹಾರಗಳು ಎಲ್ಲರೂ ಕುದಿರಿಸುತ್ತಾರೆ ಎಂದು ಭಾವಿಸಿಕೊಂಡು ಇದ್ದಾರೆ.ಯರ‍್ಯಾರಿಗೆ ರಾತ್ರಿ ಏನೇನು ಕಳಿಸಿಕೊಟ್ಟರು, ಹಗಲೊತ್ತು ಯಾರಿಗೆ ಏನು ಕಳಿಸಿಕೊಟ್ಟರು?ಯರ‍್ಯಾರ ಜೊತೆ ಏನೇನು ಆಯ್ತು, ಇವೆಲ್ಲಾ ಅವರ ಪಕ್ಷದವರೇ ಮಾತನಾಡಿದ್ದಾರೆ. ನಾವು ಮಾತಾಡಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ ಪ್ರಭು, ಚಿಂತಾಮಣಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಾಥ್ (ಬಾಬುರೆಡ್ಡಿ), ಚಿಂತಾಮಣಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರು ಸೇರಿದಂತೆ ವಿವಿಧ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.