ಶಿಡ್ಲಘಟ್ಟ: ಮುಂದಿನ ದಿನದಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆ(Election of local bodies)ಯಲ್ಲಿ ಕಾಂಗ್ರೆಸ್(Congress) ಕಾರ್ಯಕರ್ತರ ಪಾತ್ರ ಪ್ರಮುಖವಾಗಿದೆ. ಸರ್ಕಾರದ ಅಭಿವೃದ್ಧಿ ಕಾರ್ಯಗಳ ಜನರ ಮುಂದಿಡುವ ಕೆಲಸವನ್ನು ಸ್ಥಳೀಯ ಕಾರ್ಯಕರ್ತರು ಮಾಡು ವಂತೆ ಕೆಪಿಸಿಸಿ(KPCC) ಸಂಯೋಜಕ ಹಾಗೂ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ(Rajiv Gowda) ಕರೆ ನೀಡಿದರು.
ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ತೊಂಟಿಬಾವಿ ಸಮೀಪದ ನೆಲೆಸಿರುವ ಮುತ್ಯಾಲಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು ಪಕ್ಷದ ಸಂಘಟನೆಯಲ್ಲಿ ಪ್ರಮುಖ ಹೊಣೆಗಾರಿಕೆ ನಿಭಾಯಿಸಬೇಕು. ಪಕ್ಷವನ್ನು ಸಂಘಟಿಸಿ ಬಲಪಡಿಸಬೇಕು. ತಮ್ಮ ಮಹತ್ವದ ಜವಾಬ್ದಾರಿ ನಿರ್ವಹಿಸಲು ಅಗತ್ಯ ಬೆಂಬಲ ನೀಡಲು ನಾನು ಬದ್ಧನಾಗಿದ್ದೇನೆ ಎಂದರು.
ಕಾಂಗ್ರೆಸ್ ಸರ್ಕಾರ ಶಿಡ್ಲಘಟ್ಟ ಕ್ಷೇತ್ರಕ್ಕೆ ನಿರೀಕ್ಷೆಗೆ ಮೀರಿ ಅನುದಾನ ಕೊಟ್ಟಿದೆ ಕ್ಷೇತ್ರದ ಅಭಿವೃದ್ಧಿ ಯಲ್ಲಿ ತೊಡಗಿದ್ದಾರೆ. ಜತೆಗೆ ಸರ್ಕಾರ ಬಜೆಟ್‌ನಲ್ಲಿ ಸಹ ಅನೇಕ ಯೋಜನೆಗಳನ್ನು ಕ್ಷೇತ್ರಕ್ಕೆ ನೀಡಿದೆ. ಇದನ್ನು ಕಾರ್ಯಕರ್ತರು ಜನರ ಮುಂದಿಡುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆ ಟಿ ನಾಗರಾಜ್ ಬಂಕ್ ಬೈರೇಗೌಡ ಕಂಪನಿ ದೇವರಾಜ್, ಹಿರೇಬಲ ಕೃಷ್ಣಪ್ಪ, ನರೇಂದ್ರ ತೊಟ್ಟಿಲಗೆನಹಳ್ಳಿ ಮನು, ಕರವೇ ತಾಲ್ಲೂಕು ಅಧ್ಯಕ್ಷ ಮುನಿರಾಜು (ಕುಟ್ಟಿ) ಜಂಗಮ ಕೋಟೆ ಸಲೀಂ, ಮಂಜು, ಸೇರಿದಂತೆ ಕಾಂಗ್ರೆಸ್ ಮುಖಂಡರುಗಳು ಕಾರ್ಯಕರ್ತರುಗಳು ಹಾಜರಿದ್ದರು.