ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Shidlaghatta Municipal Commissioner Amrutha: ಕಾಂಗ್ರೆಸ್ ಮುಖಂಡ ರಾಜೀವ್‌ ಗೌಡ ನಟೋರಿಯಸ್‌ ಕ್ರಿಮಿನಲ್‌, 16 ಪ್ರಕರಣಗಳು ಇದೆ, ಶೀಘ್ರವೇ ಬಂಧನ: ಎಸ್ಪಿ ಕುಶಲ್ ಚೌಕ್ಸೆ

ಜನವರಿ 14 ರಂದು ರಾಜೀವ್ ಗೌಡ ವಿರುದ್ದ ಶಿಡ್ಲಘಟ್ಟ ನಗರ ಪೋಲಿಸ್ ಠಾಣೆಯಲ್ಲಿ ಎರಡು ದೂರು ದಾಖಲಾಗಿ ಎಫ್ಐಆರ್ ಆಗಿದೆ. ಅಂದಿನಿಂದ ಆತನಿಗಾಗಿ ಯಾವುದೇ ರಾಜಕೀಯ ಒತ್ತವಿಲ್ಲದೇ ಹಗಲು ರಾತ್ರಿ ಬೆಂಗಳೂರು ಸೇರಿದಂತೆ ಅಕ್ಕಪಕ್ಕ ರಾಜ್ಯಗಳಲ್ಲಿ ಪೊಲೀಸರ ಕಾರ್ಯಾ ಚರಣೆ ನಡೆಸಿ ಹುಡುಕಾಡು ತ್ತಿದ್ದೇವೆ.

ಎಸ್ಪಿ ಕುಶಲ್ ಚೌಕ್ಸೆ

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾಗೆ ಧಮ್ಕಿ ಹಾಕಿದ ರಾಜೀವ್ ಗೌಡ ನಟೋರಿ ಯಸ್ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿ ಆಗಿದ್ದಾರೆ ಶೀಘ್ರವೇ ಬಂಧಿಸಲಾಗುವುದು ಎಂದು ಕುಶಾಲ್ ಚೌಕ್ಸೆ ತಿಳಿಸಿದ್ದಾರೆ.

ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ರಾಜೀವ್ ಗೌಡ ವಿರುದ್ದ ಪೋಕ್ಸೋ, ಮೋಸ, ವಂಚನೆ ಸೇರಿದಂತೆ 16 ಪ್ರಕರಣಗಳಿವೆ. ಬೆಂಗಳೂರು ಸೇರಿದಂತೆ ಅಕ್ಕಪಕ್ಕ ರಾಜ್ಯಗಳಲ್ಲಿ ಈತನಿಗಾಗಿ ಹುಡುಕಾಟ ನಡೆದಿದ್ದು ಆದಷ್ಟು ಬೇಗ ಬಂಧಿಸು ತ್ತೇವೆ ಎಂದು  ಪೋಲಿಸ್ ವರಿಷ್ಟಾಧಿಕಾರಿ ಕುಶಲ್ ಚೌಕ್ಸೆ ಮಾಹಿತಿ ಹೊರ ಹಾಕಿದರು.   

ನಗರದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಚಿಂತಾಮಣಿಯಲ್ಲಿ ಸಹಾಯಕ ಪೋಲಿಸ್ ವರಿಷ್ಟಾಧಿಕಾರಿಯಾಗಿದ್ದಾಗ ರಾಜೀವ್ ಗೌಡ ವಿರುದ್ದ ಎರಡು ಪೋಕ್ಸೋ ಪ್ರಕರಣಗಳಲ್ಲಿ ತನಿಖೆ ನಡೆಸಿದ್ದೇನೆ. ಅಪರಾಧಗಳು ಹಾಗೂ ಪೊಲೀಸರ ಕಾರ್ಯವೈಖರಿ ಬಗ್ಗೆ ಆರೋಪಿ ರಾಜೀವಗೌಡನಿಗೆ ಅರಿವು ಇದೆ. ಹಾಗಾಗಿ ಪೊಲೀಸ್ ಕಾರ್ಯಾಚರಣೆ ಕುರಿತು ಮಾಧ್ಯಮ ಗಳ ಮುಂದೆ ಹೆಚ್ಚು ಮಾಹಿತಿ ಬೇಡ ಎಂದರು.

ಇದನ್ನೂ ಓದಿ: Shidlaghatta News: ಸೂರಿಲ್ಲದ ಬಡವರಿಗೆ ಮನೆ ಒದಗಿಸುವಲ್ಲಿ ಸರ್ಕಾರಗಳು ವಿಫಲ: ಮಾನವ ಹಕ್ಕುಗಳ ಕಮಿಟಿ ಮುಂದಾಳತ್ವ ಸಿ.ಎಂ.ಬೈರೇಗೌಡ ಹೇಳಿಕೆ

ಜನವರಿ 14 ರಂದು ರಾಜೀವ್ ಗೌಡ ವಿರುದ್ದ ಶಿಡ್ಲಘಟ್ಟ ನಗರ ಪೋಲಿಸ್ ಠಾಣೆಯಲ್ಲಿ ಎರಡು ದೂರು ದಾಖಲಾಗಿ ಎಫ್ಐಆರ್ ಆಗಿದೆ. ಅಂದಿನಿಂದ ಆತನಿಗಾಗಿ ಯಾವುದೇ ರಾಜಕೀಯ ಒತ್ತವಿಲ್ಲದೇ ಹಗಲು ರಾತ್ರಿ ಬೆಂಗಳೂರು ಸೇರಿದಂತೆ ಅಕ್ಕಪಕ್ಕ ರಾಜ್ಯಗಳಲ್ಲಿ ಪೊಲೀಸರ ಕಾರ್ಯಾ ಚರಣೆ ನಡೆಸಿ ಹುಡುಕಾಡುತ್ತಿದ್ದೇವೆ. ಆರೋಪಿ ಎಡೆಮುರಿ ಕಟ್ಟಲು ಚಿಕ್ಕಬಳ್ಳಾಪುರ ಪೊಲೀಸರು ಸದಾ ಸನ್ನದ್ಧರಾಗಿದ್ದೇವೆ. ಮಾಧ್ಯಮಗಳ ಮೂಲಕ ಪೊಲೀಸರ ಮಾಹಿತಿ‌ ಅರಿತರೆ ಆರೋಪಿ ರಾಜೀವಗೌಡ ತಪ್ಪಿಸಿಕೊಳ್ಳುವ ಯತ್ನ ಮಾಡ ಬಹುದು. ಆದ್ದರಿಂದ ನಾವು ಎಷ್ಟು ತಂಡ ರಚಿಸಿದ್ದೇವೆ. ಯಾರ್ಯಾರು ತಂಡದಲ್ಲಿದ್ದಾರೆ. ಹೇಗೆ ಕಾರ್ಯಾಚರಣೆ ಮಾಡುತ್ತಿದ್ದೇವೆ ಎಂಬು ದನ್ನು ಹೇಳಲು ಸಾಧ್ಯವಿಲ್ಲ ಎಂದರು.

ಶಿಡ್ಲಘಟ್ಟದ ಪೌರಾಯುಕ್ತೆ ಅಮೃತಾಗೌಡಗೆ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ದೂರು ದಾಖ ಲಾಗಿ ಏಳುದಿನ ಕಳೆದರೂ ಈವರೆಗೆ ಕಾಂಗ್ರೆಸ್‌ ಮುಖಂಡ ರಾಜೀವ್‌ ಗೌಡ ಬಂಧನ ಆಗಿಲ್ಲ. ಘಟನೆ ನಡೆದ ದಿನದಿಂದಲೂ ರಾಜೀವ್‌ಗೌಡ ಭೂಗತವಾಗಿದ್ದಾರೆ. ಆದಷ್ಟು ಬೇಗ ರಾಜೀವ್‌ಗೌಡನ್ನ ಬಂಧಿಸುವಂತೆ ಆಗ್ರಹ ಕೇಳಿ ಬಂದಿದೆ. ಈ ನಡುವೆ ರಾಜೀವ್ ಗೌಡಗೆ ಪ್ರಭಾವಿಗಳ ಕೃಪಾಕಟಾಕ್ಷ ಇದೆ ಅಂತ ಬಿಜೆಪಿ-ಜೆಡಿಎಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಪೊಲೀಸರು ಮಾತ್ರ ರಾಜೀವ್‌ಗೌಡ ಬಂಧನಕ್ಕೆ ಬಲೆ ಬೀಸಿದ್ದೇವೆ ಆದಷ್ಟು ಬೇಗ ಬಂಧಿಸುತ್ತೇವೆ ಎಂದಿದ್ದಾರೆ.

ಶಿಡ್ಲಘಟ್ಟದ ಪೌರಾಯುಕ್ತರಿಗೆ ಅಸಭ್ಯವಾಗಿ ಬೆದರಿಕೆ ಹಾಕಿದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಪ್ರಕರಣವು ಈಗ ‘ಜನಸಾಮಾನ್ಯರಿಗೊಂದು ನ್ಯಾಯ, ಪ್ರಭಾವಿಗಳಿಗೊಂದು ನ್ಯಾಯನಾ?’ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿಸಿದೆ. ಸರ್ಕಾರಿ ಮಹಿಳಾ ಅಧಿಕಾರಿಗೆ ಅಸಭ್ಯವಾಗಿ ಮಾತನಾಡಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿ ದಿನಗಳೇ ಕಳೆದಿದ್ದರೂ, ಪೊಲೀಸರು ಇನ್ನೂ ರಾಜೀವ್ ಗೌಡರನ್ನು ಬಂಧಿಸದಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.

ರಾಜೀವ್‌ಗೌಡ ಬೆನ್ನಿಗೆ ನಿಂತಿದ್ದಾರಾ ಪ್ರಭಾವಿ ಸಚಿವರು: ರಾಜೀವ್‌ಗೌಡ ವಿರುದ್ದ ಎಫ್‌ಐಆರ್ ದಾಖಲಾಗಿ ಒಂದು ವಾರವಾದರೂ ಬಂಧಿಸದಿರೋದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ರಾಜೀವ್‌ಗೌಡ ಬೆನ್ನಿಗೆ ಪ್ರಭಾವಿ ಸಚಿವರು ನಿಂತಿರೋ ಮಾತು ಕೇಳಿಬರುತ್ತಿದೆ.ಪೌರಾಯುಕ್ತೆ ಅಮೃತ ಗೌಡ ಹಾಗೂ ತನ್ನ ವಿರುದ್ಧ ನಿಂದನಾತ್ಮಕ ಪದ ಬಳಸಿದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಕಾನೂನು ಕ್ರಮ ಜರುಗಿಸಿ, ಬಂಧಿಸಬೇಕು ಎಂದು ಶಿಡ್ಲಘಟ್ಟ ಶಾಸಕ ಬಿ.ಎನ್ ರವಿಕುಮಾರ್ ಒತ್ತಾಯಿಸಿದ್ದಾರೆ.

ಪ್ರಕರಣ ಸಂಬಂಧ ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ , ರಾಜೀವ್ ಗೌಡ ಬಂಧನ ಮಾಡದಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವ ಕೆ.ಹೆಚ್.ಮುನಿಯಪ್ಪ ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆ. ರಾಜೀವ್ ಗೌಡ ಬೆನ್ನಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಕೆ.ಹೆಚ್.ಮುನಿಯಪ್ಪ ನಿಂತಿದ್ದಾರೆ ಎಂದು ಆರೋಪಿಸಿದ್ದಾರೆ. 

ಈ ನಡುವೆ ಶನಿವಾರ ಚಿಂತಾಮಣಿಯ ಎರಡನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮಿನಿಗೆ ಅರ್ಜಿ ಸಲ್ಲಿಸಿದ್ದು ಅದರ ವಿಚಾರಣೆ ಗುರುವಾರ ಕ್ಕೆ ಮುಂದೂಡಲಾಗಿದೆ.   

ಎಫ್‌ಐಆರ್ ರದ್ದುಗೊಳಿಸುವಂತೆ ಹೈಕೋರ್ಟ್ ಗೆ ಮೊರೆ: ಮಂಗಳವಾರ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿರೋ ಬೆನ್ನಲ್ಲೇ ಪುಢಾರಿ ಬಂಧನಕ್ಕೆ ಒತ್ತಡ ಜಾಸ್ತಿಯಾಗಿದೆ. ಯಾವುದೇ ಕಾರಣಕ್ಕೂ ಪ್ರಭಾವಿಗಳನ್ನು ರಕ್ಷಿಸೋ ಪ್ರಶ್ನೆಯೇ ಇಲ್ಲ ಅಂತ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ ಸುಧಾಕರ್ ಸ್ಪಷ್ಟಪಡಿಸಿದ್ದಾರೆ.  

ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಳಿಸಲು ಶಿಸ್ತು ಸಮಿತಿಗೆ ಸೂಚನೆ: ನಗರಸಭೆ ಪೌರಾ ಯುಕ್ತರಿಗೆ ದೂರವಾಣಿ ಕರೆ ಮಾಡಿ ಏಕವಚನದಲ್ಲಿ ನಿಂದಿಸಿ, ಅವಾಚ್ಯ ಪದಗಳನ್ನು ಬಳಸಿದ ಆರೋಪದ ಮೇಲೆ ಶಿಡ್ಲಘಟ್ಟದ 2023ರ ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ ಅವರಿಗೆ ಸಂಕಷ್ಟ ಎದುರಾಗಿದೆ. ಪಕ್ಷದ ಶಿಸ್ತು ಉಲ್ಲಂಘನೆ ಮತ್ತು ಮುಖಂಡರಿಗೆ ಮುಜುಗರ ತಂದ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಲು ಕೆಪಿಸಿಸಿ ಶಿಸ್ತು ಸಮಿತಿಗೆ ಮಹತ್ವದ ಸೂಚನೆ ನೀಡಲಾಗಿದೆ.

ಕೆಪಿಸಿಸಿ ನೋಟಿಸ್‌ಗೆ ಕ್ಯಾರೆ ಎನ್ನದ ರಾಜೀವ್ ಗೌಡ: ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿ ಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸೂಚನೆಯ ಮೇರೆಗೆ, ಕಳೆದ ಗುರುವಾರದಂದು ರಾಜೀವ್ ಗೌಡ ಗೆ ವಿವರಣೆ ಕೋರಿ ನೋಟಿಸ್ ಜಾರಿ ಮಾಡಲಾಗಿತ್ತು. ನೋಟಿಸ್ ತಲುಪಿದರೂ ಸಹ ಅವರು ಇದುವರೆಗೂ ಯಾವುದೇ ಲಿಖಿತ ಉತ್ತರ ಅಥವಾ ಸ್ಪಷ್ಟನೆ ನೀಡಿಲ್ಲ. ಇದನ್ನು ಉದ್ಧಟತನ ಮತ್ತು ಪಕ್ಷದ ಶಿಸ್ತಿನ ಉಲ್ಲಂಘನೆ ಎಂದು ಪರಿಗಣಿಸಿದೆ.