ಚಿಂತಾಮಣಿ: ಕಾಂಗ್ರೆಸ್ ಪಕ್ಷದ ಭರವಸೆಯ ಯುವ ಮುಖಂಡರಾದ ಅಬ್ದುಲ್ ಸಮದ್ ಅವರು ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಸ್ನೇಹಿತರು,ಹಿತೈಷಿಗಳು ಮತ್ತು ಅಭಿಮಾನಿಗಳೊಂದಿಗೆ ಚಿಂತಾಮಣಿ ತಾಲೂಕಿನ ಕೈವಾರ ಪಟ್ಟಣದಲ್ಲಿ ಅದ್ಧೂರಿಯಾಗಿ ಆಚರಿಸಿಕೊಂಡರು.
ಹುಟ್ಟುಹಬ್ಬದ ಸಂಭ್ರಮಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ,ಸಮದ್ ಅವರು ಸಾಂಪ್ರದಾಯಿಕ ಶೈಲಿಯಲ್ಲಿ ಹಾರ-ತುರಾಯಿಗಳಿಂದ ಗೌರವಿಸಲ್ಪಟ್ಟರು. ಸ್ನೇಹಿತರು ಮತ್ತು ಬೆಂಬಲಿಗರು ಅವರಿಗೆ ಶಾಲನ್ನು ಹೊದಿಸಿ,ಮಾಲೆ ಹಾಕಿ ಅಭಿನಂದಿಸಿದರು.
ಇದನ್ನೂ ಓದಿ: Chikkaballapur News: ದಲಿತ ರೈತರ ಭೂಸ್ವಾಧೀನಕ್ಕೆ ಆಗ್ರಹ: ಆ.27ರಂದು ಸಿಂಗಾಟಕದಿರೇನಹಳ್ಳಿಯಲ್ಲಿ ಭೂ ಪ್ರವೇಶ ಚಳುವಳಿ
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಕೇಕನ್ನು ಕತ್ತರಿಸಿ ಎಲ್ಲರಿಗೂ ಹಂಚಲಾಯಿತು. ಅಬ್ದುಲ್ ಸಮದ್ ಅವರು ತಮ್ಮ ಸ್ನೇಹಿತರಿಗೆ ಕೇಕ್ ತಿನ್ನಿಸುತ್ತಾ,ಅವರ ಪ್ರೀತಿ ಮತ್ತು ಹಾರೈಕೆಗೆ ಧನ್ಯವಾದಗಳನ್ನು ಸಲ್ಲಿಸಿದರು.ಎಲ್ಲರೂ ಸೇರಿ ಹುಟ್ಟುಹಬ್ಬದ ಹಾಡನ್ನು ಹಾಡಿ, ಚಪ್ಪಾಳೆ ತಟ್ಟುತ್ತಾ ಸಂಭ್ರಮಿಸಿದರು.
ಹುಟ್ಟುಹಬ್ಬದ ಸಂದರ್ಭದಲ್ಲಿ ಮಾತನಾಡಿದ ಅಬ್ದುಲ್ ಸಮದ್ ಅವರು ನನ್ನ ಮೇಲೆ ಇಷ್ಟೊಂದು ಪ್ರೀತಿ ತೋರಿಸುತ್ತಿರುವ ನನ್ನ ಸ್ನೇಹಿತರು, ಬೆಂಬಲಿಗರು ಮತ್ತು ಪಕ್ಷದ ಹಿರಿಯರಿಗೆ ನಾನು ಚಿರಋಣಿಯಾಗಿದ್ದೇನೆ. ಇವರ ಹಾರೈಕೆ ಮತ್ತು ಸಹಕಾರವೇ ನನ್ನ ಯಶಸ್ಸಿನ ಹಿಂದಿರುವ ಶಕ್ತಿ. ಮುಂದಿನ ದಿನಗಳಲ್ಲಿ ಯುವಕರ ಪರವಾಗಿ,ಸಮಾಜದ ಏಳಿಗೆಗಾಗಿ ಇನ್ನಷ್ಟು ಶ್ರಮಿಸುತ್ತೇನೆ ಎಂದು ತಿಳಿಸಿದರು.
ಈ ಹುಟ್ಟುಹಬ್ಬದ ಆಚರಣೆಯು ಕೇವಲ ಒಂದು ಸಂಭ್ರಮಾಚರಣೆಯಲ್ಲದೆ,ಅವರ ಬೆಂಬಲಿಗರಲ್ಲಿ ಹೊಸ ಉತ್ಸಾಹ ಮತ್ತು ಚೈತನ್ಯವನ್ನು ತುಂಬಿತು. ಕಾರ್ಯಕ್ರಮದಲ್ಲಿ ನೂರಾರು ಯುವಕರು ಭಾಗವಹಿಸಿ,ಸಮದ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಸೀನಪ್ಪ, ಸೈಯದ್ ಮುಜಾಹಿದ್, ಸೈಯದ್ ಅಮ್ಜದ್, ಬಟ್ಟು, ಅಮೀನ್, ಟಿಪ್ಪು ಸುಲ್ತಾನ್,ಹಾಗೂ ಸಂಘಟಕರು, ಅಪಾರ ಸಂಖ್ಯೆಯ ಕ್ರೀಡಾ ಭಿಮಾನಿಗಳು ಉಪಸ್ಥಿತರಿದ್ದರು.