ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gauribidanur News: ಕಾದಲವೇಣಿಯಲ್ಲಿ ಕೈವಾರ ತಾತಯ್ಯ ನವರ ದೇವಾಲಯ ನಿರ್ಮಾಣ

ತಾಲೂಕಿನ ಬಲಿಜ ಸಂಘವು ಸಹಾ ಈ ದೇವಾಲಯ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಲಿದೆ ಎಂದು ಜಿಲ್ಲಾ ಬಲಿಜ ಘರ್ಜನೆ ಅಧ್ಯಕ್ಷರಾದ ಪ್ರದೀಪ್ ತಿಳಿಸಿದರು. ತಾತಯ್ಯನವರ ಕೀರ್ತನೆ ಗಳು ಇಂದಿನ ಸಮಾಜಕ್ಕೆ ಮಾರ್ಗದರ್ಶನ, ಅವರು 17ನೇ ಶತಮಾನದಲ್ಲಿ ಜೀವಿಸಿದ್ದು ಅವರು ಬರೆದ ಕಾಲಜ್ಞಾನ ಎಂದಿಗೂ ನಿಜವಾಗಿದೆ ಎಂಬುದು ಭಕ್ತರ ಅನಿಸಿಕೆಯಾಗಿದೆ.

ಗೌರಿಬಿದನೂರು: ತಾಲೂಕು ಕಾದಲವೇಣಿ ಗ್ರಾಮದಲ್ಲಿ ಬಲಿಜ ಸಂಘದಿಂದ ಸುಮಾರು ಎರಡು ಕೋಟಿ ವೆಚ್ಚದಲ್ಲಿ ಕಾಲಜ್ಞಾನಿ ಕೈವಾರ ತಾತಯ್ಯ ದೇವಾಲಯ ನಿರ್ಮಾಣ ಮಾಡಲಾಗುತ್ತಿದೆ ಎಂದು ಕಾದಲವೇಣಿ ರಮೇಶ್ ತಿಳಿಸಿದರು.

ಈ ಸಂಬಂಧ ಅವರು ದೇವಾಲಯದ ಸಮೀಪ ಸುದ್ದಿಗಾರರೊಂದಿಗೆ ಮಾತನಾಡಿ, ಈ ಭಾಗ ದಲ್ಲಿ ಕೈವಾರ ತಾತಯ್ಯನ ಭಕ್ತರು ಭಜನೆ,ಪೂಜೆ ಮಾಡಲು ದೇವಾಲಯವಿಲ್ಲ. ಆದ ಕಾರಣ ಭಕ್ತರ ನೆರವಿನೊಂದಿಗೆ ಈ ದೇವಾಲಯ ನಿರ್ಮಾಣ ಮಾಡುತ್ತಿದ್ದೇವೆ ಎಂದರು.

ಇದನ್ನೂ ಓದಿ: Gauribidanur News: ಶಿವಕುಮಾರಸ್ವಾಮಿ ಜನ ಸೇವೆ ಅಜರಾಮರ: ಮುದುಗೆರೆ ರಾಜಶೇಖರ್

ತಾಲೂಕಿನ ಬಲಿಜ ಸಂಘವು ಸಹಾ ಈ ದೇವಾಲಯ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸ ಲಿದೆ ಎಂದು ಜಿಲ್ಲಾ ಬಲಿಜ ಘರ್ಜನೆ ಅಧ್ಯಕ್ಷರಾದ ಪ್ರದೀಪ್ ತಿಳಿಸಿದರು.ತಾತಯ್ಯ ನವರ ಕೀರ್ತನೆಗಳು ಇಂದಿನ ಸಮಾಜಕ್ಕೆ ಮಾರ್ಗದರ್ಶನ, ಅವರು 17ನೇ ಶತಮಾನದಲ್ಲಿ ಜೀವಿ ಸಿದ್ದು ಅವರು ಬರೆದ ಕಾಲಜ್ಞಾನ ಎಂದಿಗೂ ನಿಜವಾಗಿದೆ ಎಂಬುದು ಭಕ್ತರ ಅನಿಸಿಕೆ ಯಾಗಿದೆ. 

ಜಾತ್ಯತೀತ ಸಮಾಜ ನಿರ್ಮಾಣದಲ್ಲಿ ತಾತಯ್ಯನವರ ಕೊಡುಗೆ ಹೆಚ್ಚಿದೆ. ಹೀಗಾಗಿ ಜಿಲ್ಲೆ ಯಲ್ಲಿ ಕುಲ ಮತ ಭೇದವಿಲ್ಲದೆ ತಾತಯ್ಯ ಅವರನ್ನು ಪೂಜಿಸುತ್ತಾರೆ ಎಂದರು.