ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

MLA Subbareddy: ಸಹಕಾರ ಕ್ಷೇತ್ರ ಪಕ್ಷಾತೀತವಾಗಿರಲಿ: ಗುಡಿಬಂಡೆಯಲ್ಲಿ ಶಾಸಕ ಸುಬ್ಬಾರೆಡ್ಡಿ ಕರೆ

ಸಹಕಾರ ಸಂಸ್ಥೆಗಳು ರೈತರ ಜೀವನಾಡಿಗಳಾಗಿದ್ದು, ಇಲ್ಲಿ ಚುನಾವಣೆಗಳು ರಾಜಕೀಯ ಬಣ್ಣ ವಿಲ್ಲದೆ ನಡೆದರೆ ಮಾತ್ರ ಸಂಸ್ಥೆಗಳ ನೈಜ ಅಭಿವೃದ್ಧಿ ಸಾಧ್ಯವಾಗುತ್ತದೆ. ಚುನಾವಣೆ ವೇಳೆ ರಾಜಕೀಯ ವೈಷಮ್ಯಗಳನ್ನು ತರುವುದರಿಂದ ಸಂಘದ ಬೆಳವಣಿಗೆ ಕುಂಠಿತವಾಗುವುದಲ್ಲದೆ, ಸಾಮಾನ್ಯ ಜನರಿಗೆ ಸಿಗಬೇಕಾದ ಸೌಲಭ್ಯಗಳು ಸರಿಯಾಗಿ ತಲುಪುವುದಿಲ್ಲ.

ಗುಡಿಬಂಡೆ: ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿರುವ ಸಹಕಾರ ಸಂಘಗಳಲ್ಲಿ ರಾಜಕೀಯ ಬೆರೆಸುವುದು ಪ್ರಗತಿಗೆ ಮಾರಕ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ(MLA S.N. Subbareddy) ಎಚ್ಚರಿಸಿದ್ದಾರೆ. ಪಟ್ಟಣದ ಗಜಾನನ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಚಿಮುಲ್ ನೂತನ ನಿರ್ದೇಶಕರ ಗೌರವ ಸಮರ್ಪಣಾ ಸಮಾರಂಭ ದಲ್ಲಿ ಮಾತನಾಡಿದರು.

ಸಹಕಾರ ಸಂಸ್ಥೆಗಳು ರೈತರ ಜೀವನಾಡಿಗಳಾಗಿದ್ದು, ಇಲ್ಲಿ ಚುನಾವಣೆಗಳು ರಾಜಕೀಯ ಬಣ್ಣವಿಲ್ಲದೆ ನಡೆದರೆ ಮಾತ್ರ ಸಂಸ್ಥೆಗಳ ನೈಜ ಅಭಿವೃದ್ಧಿ ಸಾಧ್ಯವಾಗುತ್ತದೆ. ಚುನಾವಣೆ ವೇಳೆ ರಾಜಕೀಯ ವೈಷಮ್ಯಗಳನ್ನು ತರುವುದರಿಂದ ಸಂಘದ ಬೆಳವಣಿಗೆ ಕುಂಠಿತವಾಗುವು ದಲ್ಲದೆ, ಸಾಮಾನ್ಯ ಜನರಿಗೆ ಸಿಗಬೇಕಾದ ಸೌಲಭ್ಯಗಳು ಸರಿಯಾಗಿ ತಲುಪುವುದಿಲ್ಲ. ಆದ್ದರಿಂದ ಸಹಕಾರ ಕ್ಷೇತ್ರವು ಎಲ್ಲ ಪಕ್ಷಗಳಿಗೂ ಅತೀತವಾಗಿ ಕೆಲಸ ಮಾಡಬೇಕು ಎಂದು ಶಾಸಕರು ಪ್ರತಿಪಾದಿಸಿದರು. ಹೈನುಗಾರಿಕೆಯನ್ನು ಲಾಭದಾಯಕವಾಗಿಸಲು ಸರ್ಕಾರ ದಿಂದ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಕೊಡಿಸಲು ತಾವು ಸಿದ್ಧರಿರುವುದಾಗಿ ಇದೇ ವೇಳೆ ಭರವಸೆ ನೀಡಿದರು.

ಇದನ್ನೂ ಓದಿ: MLA SN Subbareddy:‌ ಅದ್ದೂರಿಯಾಗಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡಲು ಎಲ್ಲರ ಸಹಕಾರ ಅಗತ್ಯ : ಸುಬ್ಬಾರೆಡ್ಡಿ

ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಚಿಮುಲ್ ನೂತನ ಅಧ್ಯಕ್ಷ ಮಂಜುನಾಥರೆಡ್ಡಿ ಮಾತನಾಡಿ, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಹೈನುಗಾರಿಕೆ ವಿಸ್ತರಣೆಗೆ ಹೊಸ ಯೋಜನೆ ಗಳನ್ನು ಜಾರಿಗೆ ತರಲಾಗುವುದು ಎಂದರು. ರೈತರಿಗೆ ಮೇವು ಬೀಜಗಳ ವಿತರಣೆ ಮತ್ತು ಪ್ರೋತ್ಸಾಹಧನ ನೀಡುವ ಮೂಲಕ ಹೈನುಗಾರರನ್ನು ಆರ್ಥಿಕವಾಗಿ ಸಬಲಗೊಳಿಸಲು ಒಕ್ಕೂಟ ಬದ್ಧವಾಗಿದೆ ಎಂದು ತಿಳಿಸಿದರು.

ನಿರ್ದೇಶಕ ಆದಿನಾರಾಯಣರೆಡ್ಡಿ ಮಾತನಾಡಿ, ತಾಲೂಕಿನ ಹಾಲು ಉತ್ಪಾದಕರು ಗುಣಮಟ್ಟದ ಹಾಲು ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಜಾನುವಾರುಗಳಿಗೆ ವಿಮೆ ಮಾಡಿಸುವುದು ಅತ್ಯಗತ್ಯವಾಗಿದ್ದು, ರೈತರಿಗೆ ನೆರವಾಗಲು ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸುವಂತೆ ಶಾಸಕರಲ್ಲಿ ವಿನಂತಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಸಂಘಗಳ ಪದಾಧಿಕಾರಿಗಳು, ಹಾಲು ಉತ್ಪಾದಕ ಸಂಘಗಳ ನಿರ್ದೇಶಕರು ಹಾಗೂ ಚಿಮುಲ್ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.