ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chikkaballapur News: ಸಮುದಾಯದ ಆರ್ಥಿಕ ಬಲವರ್ಧನೆಗೆ ಸಹಕಾರ ಸಂಘಗಳು ಅಗತ್ಯ: ಡಾ. ಸಿದ್ದಲಿಂಗಪ್ಪ

ನಗರದ ಜೆಕೆ ಕಂಫರ್ಟ್ನಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಸಹಕಾರ ಸಂಘದ ಸರ್ವಸದಸ್ಯರ ಸಾಮಾನ್ಯ ವಾರ್ಷಿಕ ಸಭೆಯಲ್ಲಿ  ಮಾತನಾಡಿದ ಅವರು, ಪಿಗ್ಮಿ ಉಳಿತಾಯ, ಠೇವಣಿ, ಎಫ್‌ಡಿ ಸೇರಿದಂತೆ ತಮ್ಮ ಎಲ್ಲ ಸಾಧ್ಯವಾದಷ್ಟು ಆರ್ಥಿಕ ವ್ಯವಹಾರಗಳನ್ನು ಸಂಘದ ಮೂಲಕವೇ ನಡೆಸಿದಾಗ ಸಂಸ್ಥೆಯ ಬಂಡವಾಳ ಹೆಚ್ಚುವುದರ ಜತೆಗೆ ಸಮುದಾಯದ ಜನರಿಗೂ ಹೆಚ್ಚಿನ ಸಾಲ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತದೆ

ಚಿಕ್ಕಬಳ್ಳಾಪುರ: ಸಮುದಾಯದ ಆರ್ಥಿಕ ಪ್ರಗತಿಗೆ ಸಹಕಾರ ಸಂಘಗಳು ಪ್ರಮುಖ ವೇದಿಕೆ ಯಾಗಿದ್ದು, ಪ್ರತಿಯೊಬ್ಬರೂ ಸಂಘದೊಂದಿಗೆ ನಿರಂತರ ಆರ್ಥಿಕ ವ್ಯವಹಾರ ನಡೆಸುವ ಮೂಲಕ ಸಂಸ್ಥೆಯನ್ನು ಬಲಿಷ್ಠವಾಗಿ ಕಟ್ಟಬೇಕು ಎಂದು ಎಸ್.ಎಸ್. ನರ್ಸಿಂಗ್ ಹೋಮ್ ಹಿರಿಯ ವೈದ್ಯ ರಾದ ಡಾ.ಸಿದ್ದಲಿಂಗಪ್ಪ ಕರೆ ನೀಡಿದರು.

ನಗರದ ಜೆಕೆ ಕಂಫರ್ಟ್ನಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಸಹಕಾರ ಸಂಘದ ಸರ್ವಸದಸ್ಯರ ಸಾಮಾನ್ಯ ವಾರ್ಷಿಕ ಸಭೆಯಲ್ಲಿ  ಮಾತನಾಡಿದ ಅವರು, ಪಿಗ್ಮಿ ಉಳಿತಾಯ, ಠೇವಣಿ, ಎಫ್‌ಡಿ ಸೇರಿದಂತೆ ತಮ್ಮ ಎಲ್ಲ ಸಾಧ್ಯವಾದಷ್ಟು ಆರ್ಥಿಕ ವ್ಯವಹಾರಗಳನ್ನು ಸಂಘದ ಮೂಲಕವೇ ನಡೆಸಿದಾಗ ಸಂಸ್ಥೆಯ ಬಂಡವಾಳ ಹೆಚ್ಚುವುದರ ಜತೆಗೆ ಸಮುದಾಯದ ಜನರಿಗೂ ಹೆಚ್ಚಿನ ಸಾಲ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತದೆ ಎಂದರು.

ಸಹಕಾರ ಸಂಘವನ್ನು ಕಟ್ಟಿ ಬೆಳೆಸುವುದು ಕೇವಲ ಆಡಳಿತ ಮಂಡಳಿಯ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ಷೇರುದಾರ ಹಾಗೂ ಸದಸ್ಯರು ಸಂಘದ ಬೆಳವಣಿಗೆಯಲ್ಲಿ ಪಾಲುದಾರರಾಗಬೇಕು. ಸಂಘದ ಮೇಲೆ ವಿಶ್ವಾಸವಿಟ್ಟು ವ್ಯವಹಾರ ಹೆಚ್ಚಿಸಿದಷ್ಟೂ ಸಂಸ್ಥೆ ಆರ್ಥಿಕವಾಗಿ ಸದೃಢವಾಗಿ, ಭವಿಷ್ಯದಲ್ಲಿ ಹೆಚ್ಚಿನ ಜನರಿಗೆ ನೆರವಾಗುವ ಸಾಮರ್ಥ್ಯ ಪಡೆದುಕೊಳ್ಳಲಿದೆ ಎಂದು ಹೇಳಿದರು.

ಇದನ್ನೂ ಓದಿ: Chikkaballapur News: 54 ಗ್ರಾಮಗಳಿಗೆ ನೀರಿನ ಬವಣೆ; ತಕ್ಷಣ ಪರಿಹಾರಕ್ಕೆ ಡಿಸಿ ಸೂಚನೆ

ಸಂಘದ ಅಭಿವೃದ್ಧಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಎಸ್,ಎಸ್.ನರ್ಸಿಂಗ್ ಹೋಮ್ ವೈದ್ಯಾಧಿ ಕಾರಿ ಡಾ.ಸಿದ್ದಲಿಂಗಪ್ಪ ಅವರು ವೈಯಕ್ತಿಕವಾಗಿ 50 ಸಾವಿರ ದೇಣಿಗೆ ನೀಡುವುದಾಗಿ ಘೋಷಿಸಿದರು. ಸಮುದಾಯದ ಅಗತ್ಯವನ್ನು ಮನಗಂಡು ಆರಂಭಿಸಿರುವ ಈ ಸಂಸ್ಥೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ತೆರೆದ ಪುಸ್ತಕದಂತೆ ವಾರ್ಷಿಕ ಲೆಕ್ಕ ಮಂಡನೆ

ಸಂಘದ ಅಧ್ಯಕ್ಷ ರಾಮಪ್ಪ ಎಂ. ಮಾತನಾಡಿ, ಸಭೆಯಲ್ಲಿ ಸಂಘದ ಒಂದು ವರ್ಷದ ವಹಿವಾಟು, ಸಾಲ ವಿತರಣೆ, ಆದಾಯ, ಖರ್ಚು ಹಾಗೂ ಲಾಭ-ನಷ್ಟದ ವಿವರಗಳನ್ನು ಸದಸ್ಯರ ಸಮ್ಮುಖದಲ್ಲಿ ಮಂಡಿಸಲಾಯಿತು. ಸಂಘವು ಪ್ರಸಕ್ತ ಸಾಲಿನಲ್ಲಿ 1.5 ಲಕ್ಷ ಸಾಲವಿತರಣೆ ಮಾಡಿದ್ದುಈ ಪೈಕಿ ಸುಮಾರು 5 ಸಾವಿರ ಲಾಭ ಗಳಿಸಿದೆ. ಈಗಾಗಲೇ ಸುಮಾರು 138 ಸದಸ್ಯರನ್ನು ಹೊಂದಿದೆ ಎಂದು ತಿಳಿಸಲಾಯಿತು.

ಸಮುದಾಯದ ಆಲೋಚನೆ ಹಾಗೂ ಅಗತ್ಯವನ್ನು ಗಮನದಲ್ಲಿಟ್ಟುಕೊಂಡೇ ಸಂಘವನ್ನು ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸದಸ್ಯರನ್ನು ಸೇರ್ಪಡೆಗೊಳಿಸಿ ಸಂಸ್ಥೆ ಯನ್ನು ಬಲಿಷ್ಠವಾಗಿ ಬೆಳೆಸುವುದು ತಮ್ಮ ಕನಸಾಗಿದೆ ಎಂದರು. ಪ್ರತಿಯೊಬ್ಬರೂ ಎಫ್‌ಡಿ, ಪಿಗ್ಮಿ ಹಾಗೂ ಇತರ ಆರ್ಥಿಕ ವ್ಯವಹಾರಗಳನ್ನು ಸಂಘದಲ್ಲಿಯೇ ನಡೆಸುವ ಮೂಲಕ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ವೆಂಕಟೇಶ್‌ಮೂರ್ತಿ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸಂಘದ  ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಹಾಗೂ ಷೇರುದಾರರು ಸಂಘದ ಪ್ರಗತಿಗೆ ಶ್ರಮಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಉಪಾಧ್ಯಕ್ಷ ಜಿ.ಆರ್. ನಾರಾಯಣಸ್ವಾಮಿ ಅವರ ಮುಂದಾಲೋಚನೆಗಳು ಹಾಗೂ ಆಡಳಿತ ಮಂಡಳಿಯ ಪ್ರಯತ್ನಗಳು ಸಂಘದ ಬೆಳವಣಿಗೆಗೆ ಪೂರಕವಾಗಿವೆ ಎಂದು ಕೂಡ ಸಭೆಯಲ್ಲಿ ಅಭಿಪ್ರಾಯಪಡಲಾಯಿತು. ಇದೇ ವೇಳೆ ಕಾರ್ಯಕ್ರಮದಲ್ಲಿ ಅತಿಥಿಗಳು ಹಾಗೂ ನಿರ್ದೇಕರನ್ನು ಸನ್ಮಾನಿಸಲಾಯಿತು.ಆರೋಗ್ಯವಿಮೆ ಕಾರ್ಡುಗಳನ್ನು ಕೂಡ ವಿತರಿಸಲಾಯಿತು.

ನಿರ್ದೇಶಕರಾದ ಎಂ. ರಾಜಬಾಬು, ಕೆ.ವಿ. ಶ್ರೀನಿವಾಸ್, ಎಂ.ಎನ್. ಮುನಿರಾಜು, ರತ್ನಮ್ಮ, ಜಯಮ್ಮ, ವೆಂಕಟಕೃಷ್ಣ, ಕೃಷ್ಣಮೂರ್ತಿ, ಅಭಿಲಾಷ್, ವಿ. ಮುನಿರಾಜು, ನಾಗೇಶ್, ಗಜೇಂದ್ರ ಡಿ.ಎಂ. ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು. ಸ್ವಾಗತವನ್ನು ಮುನಿರಾಜು ನೆರವೇರಿಸಿ ದರೆ, ಉಪಾಧ್ಯಕ್ಷ ಜಿ.ಆರ್. ನಾರಾಯಣಸ್ವಾಮಿ ನಿರೂಪಿಸಿದರು.