ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಎರಡು ದಿನಗಳ ಕಾಲ ‘ವಿಕಸಿತ ಭಾರತದಲ್ಲಿ ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ (ಸಿಎಸ್‌ಆರ್) ಪಾತ್ರ’ ವಿಷಯದ ಕುರಿತು ರಾಷ್ಟ್ರೀಯ ಸಮಾವೇಶ ನಡೆಯಿತು. ವಿಕಸಿತ ಭಾರತ ನಿರ್ಮಾಣದಲ್ಲಿ ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ (ಸಿಎಸ್‌ಆರ್) ಪ್ರಮುಖ ಗೇಮ್‌ಚೇಂಜರ್ ಆಗಿ ಕಾರ್ಯನಿರ್ವಹಿಸಬಹುದು ಎಂದು 'ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್' ಸಂಸ್ಥಾ ಪಕ ಸದ್ಗುರು ಮಧುಸೂದನ ಸಾಯಿ ಅಭಿಪ್ರಾಯಪಟ್ಟರು.
ಮುದ್ದೇನಹಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, “ಮಾನವೀಯ ಮೌಲ್ಯಗಳಿಂದ ದೇಶವನ್ನು ವಿಕಸಿತಗೊಳಿಸಬಹುದು. ಸರ್ಕಾರ, ಸಂಸ್ಥೆಗಳು ಮತ್ತು ಸಮಾಜ ಒಟ್ಟಾಗಿ ಕಾರ್ಯನಿರ್ವಹಿಸಿದರೆ ಮಾತ್ರ ವಿಕಸಿತ ಭಾರತ ನಿರ್ಮಾಣದ ಗುರಿಯನ್ನು ಸಾಧಿಸಲು ಸಾಧ್ಯ,” ಎಂದು ಹೇಳಿದರು.
'ಒನ್ ವರ್ಲ್ಡ್ ಒನ್ ಫ್ಯಾಮಿಲಿ' ಮಿಷನ್ ನೇತೃತ್ವದಲ್ಲಿ ನಡೆಯುತ್ತಿರುವ ಉಚಿತ ಶಿಕ್ಷಣ, ಪೋಷಕಾಂಶ ಆಹಾರ ವಿತರಣೆ ಮತ್ತು ಉಚಿತ ಆರೋಗ್ಯ ಸೇವೆಗಳಂತಹ ಯೋಜನೆಗಳು ಸಮಾಜದಲ್ಲಿ ಸಮಾನತೆ ಹಾಗೂ ಮಾನವೀಯತೆಯನ್ನು ಬಲಪಡಿಸುತ್ತಿವೆ. ಇಂತಹ ಸೇವಾ ಕಾರ್ಯಗಳು ವಿಕಸಿತ ಭಾರತದ ಕನಸಿಗೆ ಮಹತ್ವದ ಕೊಡುಗೆ ನೀಡುತ್ತಿವೆ ಎಂದು ಹೇಳಿದರು.
ಇದನ್ನೂ ಓದಿ: Sadguru Sri Madhusudan Sai: ಒಟ್ಟಾಗಿ ಕೆಲಸ ಮಾಡಿದರೆ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ: ಶ್ರೀ ಮಧುಸೂದನ ಸಾಯಿ
ಇಂಡಿಯನ್ ಆಯಿಲ್ ಸಂಸ್ಥೆಯ ಪ್ರತಿನಿಧಿ ಸಿದ್ದಾರ್ಥ್ ಅಗರವಾಲ್ ಮಾತನಾಡಿ, “ಸಿಎಸ್‌ಆರ್ ಅನ್ನು ನಾವು ಸಮಾಜಕ್ಕೆ ಮರಳಿ ನೀಡುವ ಅವಕಾಶವಾಗಿ ಪರಿಗಣಿಸುತ್ತೇವೆ. ಕರ್ನಾಟಕದಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ,” ಎಂದು ತಿಳಿಸಿದರು. ಜೊತೆಗೆ ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ’ ಮಿಷನ್ ಜೊತೆಗೆ ಕೈಜೋಡಿಸುವ ಭರವಸೆಯನ್ನೂ ವ್ಯಕ್ತಪಡಿಸಿದರು.
ಗೇಲ್ ಇಂಡಿಯಾ ಸಂಸ್ಥೆಯ ಪ್ರತಿನಿಧಿ ಆಯುಷ್ ಗುಪ್ತಾ, ತಮ್ಮ ಮೊದಲ ಭೇಟಿಯ ಅನುಭವವನ್ನು ಹಂಚಿಕೊAಡರು. ಅವರು ಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ಸೇವಾ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. “ಇಲ್ಲಿ ನಡೆಯುತ್ತಿರುವ ಸೇವಾ ಕಾರ್ಯಗಳು ಸಮಾಜಕ್ಕೆ ನೇರ ಪ್ರೇರಣೆಯಾಗಿವೆ. ವೈಯಕ್ತಿಕ ಹಾಗೂ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ ಹೆಚ್ಚಾದಾಗ ಮಾತ್ರ ನಿಜವಾದ ಬದಲಾವಣೆ ಸಾಧ್ಯ,” ಎಂದು ಹೇಳಿದರು.
ಎರಡು ದಿನಗಳ ಕಾಲ ನಡೆದ ಈ ಸಮಾವೇಶದಲ್ಲಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಅಧ್ಯಕ್ಷ ಮನೋಜ್ ಜೈನ್, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನಟೇಶ್, ಓಲಾ ಫೌಂಡೇಶನ್‌ನ ದೆವೇಶ್ ವರ್ಮಾ, ಸೆಬಿ ಮಾಜಿ ನಿರ್ದೇಶಕ ಎಸ್.ವಿ. ಮುರಳೀಧರ್ ರಾವ್, ಆಂಧ್ರ ಪ್ರದೇಶದ ಬಾಪಟ್ಲಾ ಕ್ಷೇತ್ರದ ಲೋಕಸಭಾ ಸದಸ್ಯ ಕೃಷ್ಣ ಪ್ರಸಾದ್ ತನ್ನೇಟಿ, ತೆಲಂಗಾಣದ ಶಾಸಕ ಪಲ್ವೈ ಹರೀಶ್ ಬಾಬು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಸುಮಾರು 80ಕ್ಕೂ ಹೆಚ್ಚು ಸಂಸ್ಥೆಗಳ ಸಿಇಓಗಳು, ನಿರ್ದೇಶಕರು, ಪ್ರತಿನಿಧಿಗಳು ಹಾಗೂ ಸಿಎಸ್‌ಆರ್ ತಜ್ಞರು ಸಮಾವೇಶದಲ್ಲಿ ಪಾಲ್ಗೊಂಡು, ಸಾಮಾಜಿಕ ಬದಲಾವಣೆಯಲ್ಲಿ ಸಿಎಸ್‌ಆರ್‌ನ ಮಹತ್ವ ಮತ್ತು ಅದರ ಪರಿಣಾಮಕಾರಿ ಅನುಷ್ಠಾನದ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ’ ಮಿಷನ್‌ನಡಿ ಕಾರ್ಯ ನಿರ್ವಹಿಸು ತ್ತಿರುವ ವಿವಿಧ ಟ್ರಸ್ಟ್ಗಳ ಸಿಬ್ಬಂದಿಯೂ ಉಪಸ್ಥಿತರಿದ್ದರು.