ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gauribidanur News: ಡಿ.ಪಾಳ್ಯ ಹೋಬಳಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಪ್ರಸ್ತುತ ತಾಲ್ಲೂಕಿನಲ್ಲಿ ಹಣದ ರಾಜಕೀಯ ನಡೆಯುತ್ತಿದೆ, ಅವರು ಹಣ ನೀಡಿ ರಾಜಕೀಯ ಮಾಡು ವವರಲ್ಲ, ಡೈರಿ ಮತ್ತು ಸಹಕಾರಿ ಚುನಾವಣೆಗಳಲ್ಲೂ ಕೂಡ ಚುನಾವಣೆಗೆ ಲಕ್ಷಾಂತರ ರೂ ಹಣ ಬೇಕಾಗಿದೆ. ಇದನ್ನು ಜನತೆ ಸ್ವಲ್ಪ ಯೋಚನೆ ಮಾಡಿ.  ತಾಲ್ಲೂಕಿನಲ್ಲಿ ನೆಮ್ಮದಿ ಮತ್ತು ಗಲಭೆ ಇಲ್ಲದೆ ನಡೆಸಿಕೊಂಡು ಬಂದವರು. ವಿರೋಧ ಪಕ್ಷಗಳು ಮುಖಂಡರು ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿ ದ್ದಾರೆ.

ಗೌರಿಬಿದನೂರು: ತಾಲ್ಲೂಕಿನ ಡಿ.ಪಾಳ್ಯ ಗ್ರಾಮದಲ್ಲಿ ಹೋಬಳಿ ಮಟ್ಟದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿತ್ತು.

ಮಾಜಿ ಶಾಸಕ ಹಾಗೂ ಎನ್.ಎಚ್.ಪ್ರಾಧಿಕಾರದ ಅಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ಹೋಬಳಿಯ ಹಲವು ಗ್ರಾಮಗಳಿಗೆ ರಸ್ತೆಗಳನ್ನು, ಸಮುದಾಯ ಭವನಗಳನ್ನು, ಬಸ್ ವ್ಯವಸ್ಥೆ ಯನ್ನು, ಸಿ.ಸಿ ರಸ್ತೆಗಳನ್ನು ಮಾಡಿಸಿದ್ದೇನೆ. ನಾನು ಜನರ ಮಧ್ಯೆ ಇರುವವನು ಅವರಂತೆ ಬಡವ ರನ್ನು ಉದ್ದಾರ ಮಾಡದೇ ಬೆಟ್ಟ ಗುಡ್ಡಗಳಲ್ಲಿ ಸೋಲಾರ್ ಪ್ಲಾಂಟ್ ಮಾಡಿ ಸಂಪತ್ತನ್ನು ಆಕ್ರಮಿಸಿಕೊಳ್ಳುವವನಲ್ಲ ಎಂದರು. 

ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿ ಕಾರ್ಯಕ್ರಮಗಳು ಜನಸಾಮಾನ್ಯರ ಬದುಕಿಗೆ ಆಸರೆಯಾಗಿವೆ. ನಾವು ಹಿಂದೂಗಳೇ, ನಮ್ಮ ತಂದೆ ತಾಯಿಗಳು ನಮಗೆ ಸಂಸ್ಕಾರ ಹೇಳಿಕೊಟ್ಟಿ ದ್ದಾರೆ, ಹಿಂದೂ ಧರ್ಮಕ್ಕೆ 5000 ವರ್ಷಗಳ ಇತಿಹಾಸವಿದೆ, ಬಿಜೆಪಿಗೆ 23 ವರ್ಷಗಳ ಇತಿಹಾಸವಿದೆ.

ರಾಜಕಾರಣ ಎಂದರೆ ನಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುವವರ ಜೊತೆ ನಾವು ನಿಲ್ಲಬೇಕು, ಮತಕ್ಕೆ ತುಂಬಾ ಬೆಲೆ ಇದೆ, ಇಪ್ಪತ್ತೈದು ವರ್ಷಗಳಲ್ಲಿ ನಾನು ಎಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ.

ಇದನ್ನೂ ಓದಿ: Gauribidanur News: ಬಡಾವಣೆಗೆ ಅಟಲ್ ಜೀ ಹೆಸರು ನಾಮಕರಣ

ಸೀರೆ ಮತ್ತು ಕ್ಯಾಲೆಂಡರ್ ನೀಡಿ ರಾಜಕೀಯ ಮಾಡುವವನಲ್ಲ, ಬೋರ್ಡ್ ಹಾಕಿ ಹೋಗುವವನಲ್ಲ ಕೆಲಸ ಮಾಡಬೇಕು, ಮುಂಬರುವ ದಿನಗಳಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದರು.

ಮತಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ. ಅದನ್ನು ಐನೂರೊ ಸಾವಿರಕ್ಕೋ ಮಾರಿಕೊಳ್ಳಬೇಡಿ. ಅಲ್ಲಿ ಈಗ ಇರುವ ಶಾಸಕರ ಬಳಿ ಕೂಲಿ ಆಳುಗಳ ತರ ನಿಂತು ಕೊಳ್ಳಬೇಕು. ಕೆಲವರು ಮೇಸ್ತ್ರಿಗಳ ತರ ಇದ್ದಾರೆ, ಸ್ವಾಭಿಮಾನಕ್ಕಿಂತ ದೊಡ್ಡದು ಯಾವುದು ಇಲ್ಲ ಎಂದು ಛೇಡಿಸಿದರು.

ಈಗಿನ ಶಾಸಕರು ಎಷ್ಟು ಬಾರಿ ಹಳ್ಳಿಗಳಿಗೆ ಬಂದಿದ್ದಾರೆ ? ನಾನು ಕೂಡ ಸೀರೆ ಕೊಟ್ಟು ರಾಜಕೀಯ ಮಾಡಬೇಕಾ? ಇಲ್ಲಾ ನಿಮ್ಮ ಕಷ್ಟಗಳಿಗೆ ಸ್ಪಂದಿಸಬೇಕಾ ? ಹಳ್ಳಿಗಳಲ್ಲಿ ನಡೆಯುವ ಚುನಾವಣೆ ಗಳಲ್ಲಿ ನಾವು ಒಬ್ಬರೇ ಒಂದು ಕಡೆ, ಉಳಿದ ಗಿರಾಕಿಗಳೆಲ್ಲ ಒಂದು ಕಡೆ ಎಂದರು.

ರಾಜಕೀಯ ಮಾಡಲು ಬದ್ದತೆ ಇರಬೇಕು, ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದರು.

ಶಾಸಕರು ಎಷ್ಟು ಜನ ಬಡವರ ಮದುವೆಗೆ ಮತ್ತು ಅಂತ್ಯ ಸಂಸ್ಕಾರಕ್ಕೆ ಬಂದಿದ್ದಾರೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಮಾತನಾಡಿ, 2008 ರವರೆಗೂ ನಗರಗೆರೆ ಮತ್ತು ಡಿ.ಪಾಳ್ಯ ಹೋಬಳಿ ಆರ್ಥಿಕ, ಶೈಕ್ಷಣಿಕವಾಗಿ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ಹಿಂದುಳಿದಿದ್ದವು. ಆದರೆ ಶಿವಶಂಕರ್ ರೆಡ್ಡಿ ಯವರು ಶಾಸಕರಾದ ಮೇಲೆ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಗಮನದಲ್ಲಿಡಿ. ಅವರು ಬಡವರು, ಕಾರ್ಮಿಕರು, ರೈತರ ಪರವಾಗಿ ಶ್ರಮಿಸಿದವರು. 25 ವರ್ಷಗಳಲ್ಲಿ ಯಾವುದೇ ಚುನಾವಣೆ ಆಗಬೇಕಾದರೆ ಗ್ರಾಮಗಳಲ್ಲಿ ಕೂತು ಒಳ್ಳೆಯವರನ್ನು ಆಯ್ಕೆ ಮಾಡಲು ಹೇಳುತ್ತಿದ್ದರು. 

ಪ್ರಸ್ತುತ ತಾಲ್ಲೂಕಿನಲ್ಲಿ ಹಣದ ರಾಜಕೀಯ ನಡೆಯುತ್ತಿದೆ, ಅವರು ಹಣ ನೀಡಿ ರಾಜಕೀಯ ಮಾಡುವವರಲ್ಲ, ಡೈರಿ ಮತ್ತು ಸಹಕಾರಿ ಚುನಾವಣೆಗಳಲ್ಲೂ ಕೂಡ ಚುನಾವಣೆಗೆ ಲಕ್ಷಾಂತರ ರೂ ಹಣ ಬೇಕಾಗಿದೆ. ಇದನ್ನು ಜನತೆ ಸ್ವಲ್ಪ ಯೋಚನೆ ಮಾಡಿ.  ತಾಲ್ಲೂಕಿನಲ್ಲಿ ನೆಮ್ಮದಿ ಮತ್ತು ಗಲಭೆ ಇಲ್ಲದೆ ನಡೆಸಿಕೊಂಡು ಬಂದವರು. ವಿರೋಧ ಪಕ್ಷಗಳು ಮುಖಂಡರು ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿದ್ದಾರೆ. ಸ್ಥಳೀಯರೇ ಆದ ಶಶಿಧರ್ 6000 ಮತಗಳನ್ನು ತೆಗೆದುಕೊಂಡು, ಜೆಡಿಎಸ್ ನ ನರಸಿಂಹಮೂರ್ತಿ 11,000 ಮತಗಳನ್ನು ತೆಗೆದುಕೊಂಡು ಅಸ್ತಿತ್ವವನ್ನು ಕಳೆದುಕೊಂಡಿದ್ದಾರೆ, 

ಆದರೆ ಶಿವಶಂಕರ್ ರೆಡ್ಡಿ  ಸೋತಿದ್ದರು. ಆದರೂ ತಾಲ್ಲೂಕಿನಲ್ಲಿ ತಮ್ಮ ಸೇವಾ ಕಾರ್ಯಗಳನ್ನು ಮುಂದುವರೆಸಿದ್ದಾರೆ. ಸೀರೆ, ಕ್ಯಾಲೆಂಡರ್ ಗಳಿಂದ ನಿಮ್ಮ ಹೊಟ್ಟೆ ತುಂಬುವುದಿಲ್ಲ. ಸರ್ಕಾರ ನಿಮಗೆ ಸವಲತ್ತುಗಳನ್ನು ನೀಡುತ್ತಿದೆ, ಶಿವಶಂಕರ್ ರೆಡ್ಡಿ ರವರಿಗೆ ನಷ್ಟವಾಗಿಲ್ಲ, ಕ್ಷೇತ್ರಕ್ಕೆ ನಷ್ಟವಾಗಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶಿವಶಂಕರರೆಡ್ಡಿ ನೇತೃತ್ವದಲ್ಲಿ ನಡೆಯುತ್ತವೆ ಎಂದರು.

ಮುಖಂಡರಾದ ಖಾದರ್ ಸುಬಾನ್ ಖಾನ್ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಕಾರ್ಯಕ್ರಮಗಳು ಜನಸಾಮಾನ್ಯರ ಬದುಕಿಗೆ ಆಸರೆಯಾಗಿವೆ. ತಾಲ್ಲೂಕಿನ ಸತತವಾಗಿ 25 ವರ್ಷಗಳ ಶಾಸಕರಾಗಿದ್ದವರು, ಮಂತ್ರಿಗಳಾಗಿ, ಉಪಸಭಾಪತಿಗಳಾಗಿ ಆಳ್ವಿಕೆ ನೀಡಿದವರು, ಇವರ ಅಭಿವೃದ್ಧಿ ಕಾರ್ಯಗಳು ಶಾಶ್ವತವಾಗಿವೆ. ಶಿವಶಂಕರ್ ರೆಡ್ಡಿ ರವರು ಹಣದಿಂದ ರಾಜಕೀಯ ಮಾಡಿದವರಲ್ಲ, ಅವರು ಗೆಲ್ಲಲು 30 ಕೋಟಿ ಹಣ ನೀಡುತ್ತೇನೆ ಎಂದು ಹೇಳಿದಾಗ ನಾನು ಸೋತರು ಚಿಂತೆ ಇಲ್ಲ ಆದರೆ ಹಣವನ್ನು ಕೊಟ್ಟು ರಾಜಕೀಯ ಮಾಡುವುದಿಲ್ಲ ಎಂದು ಹೇಳಿದವರು, 2000 ಹಣವನ್ನು ಕೊಟ್ಟು ಗೆಲ್ಲುವ ಅವಶ್ಯಕತೆ ಅವರಿಗೆ ಇಲ್ಲ, ತಾಲ್ಲೂಕು ಆಡಳಿತ ಅಧೋಗತಿಗೆ ಹೋಗಿದೆ ಜನಸಾಮಾನ್ಯರು ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. 

ಇದೇ ವೇಳೆ ಸಭೆಯಲ್ಲಿ ಮುಖಂಡರಾದ ಅಶ್ವತ್ಥನಾರಾಯಣಗೌಡ, ಪ್ರಕಾಶರೆಡ್ಡಿ, ಹನುಮಂತರೆಡ್ಡಿ, ಆನಂದ್, ಅರುಂಧತಿ, ಗಂಗಾಧರಪ್ಪ, ರಮೇಶನಾಯಕ, ರಾಂಬಾಬು, ತಾರಾನಾಥ್, ಕರೇತಿಮ್ಮಯ್ಯ, ಮೈಲಾರಿ, ಗೋಪಿನಾಥ್, ರಫೀಕ್, ನಾಗೇಶ್, ವೆಂಕಟಾದ್ರಿ, ಮಂಜುನಾಥ, ಗಂಗರಾಜು, ಶ್ರೀನಿವಾಸ ರೆಡ್ಡಿ, ರೇಣುಕಮ್ಮ, ನಿರಂಜನ್, ದೀಪಂಶು, ಹನುಮಾನ್, ವಿಶ್ವನಾಥ್, ರಾಮಾಂಜಿನಮ್ಮ, ಲಕ್ಷ್ಮಯ್ಯ,‌ ಶಾಮ್ ಸುಂದರ್, ಕಂಬಕ್ಕ ವೆಂಕಟೇಶ್, ಶಾಹಿದ್ ಅಹಮದ್, ನಾರಾಯಣಸ್ವಾಮಿ, ನವೀನ್ , ಆನಂದರೆಡ್ಡಿ ಮತ್ತು ಪಕ್ಷದ ಕಾರ್ಯಕರ್ತರು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.