ಚಿಕ್ಕಬಳ್ಳಾಪುರ: ಏ.5ರಂದು ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಮಾದಾರ ಮಹಾಸಭಾ, ಮಾದಿಗ ಮೀಸಲಾತಿ ಹೋರಾಟ ಸಮಿತಿ, ಇನ್ನಿತರೆ ಸಂಘಟನೆಗಳ ಸಹಯೋಗದಲ್ಲಿ ಇದೇ ಪ್ರಥಮ ಬಾರಿಗೆ ಅದ್ಧೂರಿಯಾಗಿ ಐತಿಹಾಸಕವಾಗಿ ಬಾಬು ಜಗಜೀವನ್‌ರಾಮ್ ಜಯಂತಿ ಆಯೋಜಿಸಲು ನಿರ್ಧರಿಸಲಾಗಿದೆ. ಸುಮಾರು 5 ಸಾವಿರ ಮಂದಿ ಇದರಲ್ಲಿ ಭಾಗಿಯಾಗ ಲಿದ್ದಾರೆ ಎಂದು ಮಾದಾರ ಮಹಾಸಭಾದ ಜಿಲ್ಲಾಧ್ಯಕ್ಷ ಪಟ್ರೇನಹಳ್ಳಿ ಕೃಷ್ಣ ತಿಳಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಹಸಿರು ಕ್ರಾಂತಿಯ ಹರಿಕಾರ ಹಾಗೂ ಮಾಜಿ ಕೇಂದ್ರ ಸಚಿವ ಬಾಬು ಜಗಜೀವನ್‌ರಾಂ ಅವರ 119ನೇ ಜಯಂತಿಯನ್ನು ಜಿಲ್ಲಾ ಕೇಂದ್ರದಲ್ಲಿ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ರಂಗನಾಥಸ್ವಾಮಿ ದೇವಾಲಯದ ಮುಂಭಾಗದಿಂದ ಪೂರ್ಣಕುಂಭ ಸ್ವಾಗತ. ಪಲ್ಲಕ್ಕಿ ಉತ್ಸವ, ಸರಕಾರಿ ಇಲಾಖೆಗಳ ಸ್ಥಬ್ದ ಚಿತ್ರಗಳು, ಜಾನಪದ ಕಲೆಗಳ ಪ್ರದರ್ಶನದ ಮೂಲಕ ಕನ್ನಡ ಭವನದಲ್ಲಿ ಜನತೆ ಸಮಾವೇಶಗೊಂಡು ವೇದಿಕೆ ಕಾರ್ಯ ಕ್ರಮ ನಡೆಯಲಿದ್ದು ಜಿಲ್ಲಾಡಳಿತವೂ ಸಹಕಾರ ನೀಡುತ್ತಿದೆ. ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮುಖಂಡರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Chikkaballapur News: ನಾವು ಭೂಮಿ ಕೊಡುವುದಿಲ್ಲ ಒಂದು ಬಣ: ನಾವು ಕೊಡುತ್ತೇವೆ ಮತ್ತೊಂದು: ಇಬ್ಬಾಗವಾದ ರೈತ ಸಂಘಗಳು
ವೇದಿಕೆ ಕಾರ್ಯಕ್ರಮದಲ್ಲಿ ಜನಜೀವನ್‌ರಾಮ್ ಅವರ ಬಗ್ಗೆ ವಿಶೇಷ ಉಪನ್ಯಾಸ ಏರ್ಪಡಿ ಸಿದ್ದು ಮಾತಂಗ ಫೌಂಡೇಷನ್‌ನ ಆರ್.ಲೋಕೇಶ್ ನೀಡಲಿದ್ದಾರೆ. ಸಮುದಾಯದ ಸಾಧಕ ರನ್ನು, ವಿದ್ಯಾರ್ಥಿಗಳು, ಹೋರಾಟಗಾರರನ್ನು ಕಲಾವಿದರನ್ನು, ಸತ್ಕರಿಸುವ ಕೆಲಸ ಮಾಡ ಲಾಗುವುದು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಲಿತ ಮುಖಂಡ ಬಾಲಕುಂಟಹಳ್ಳಿ ಗಂಗಾಧರ್, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಮಹಾ ನಾಯಕ ಅಂಬೇಡ್ಕರ್ ಸೇನೆ ಅಧ್ಯಕ್ಷ ನಾರಾಯಣಸ್ವಾಮಿ ಬಾಬೂಜಿ ಅವರ ಜಯಂತಿಯನ್ನು ಎಲ್ಲರ ಸಹಭಾಗಿತ್ವ ದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುರಳಿ ಮೋಹನ್, ಗೌತಮ್ ಗಂಗಾಧರ್, ದಿಬ್ಬೂರು ಶ್ರೀನಿವಾಸ್, ಪ್ರಕಾಶ್, ವೇಣು, ಕೇಶವಮೂರ್ತಿ, ಮುನಿಕೃಷ್ಣಯ್ಯ, ಎಪಿಎಸ್ ಆನಂದ್, ಜಿ.ಮುನಿಕೃಷ್ಣ, ಪಿಳ್ಳಾಂಜಿ, ಈರಚಿನ್ನಪ್ಪ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.