ಗೌರಿಬಿದನೂರು: ಲೋಕಸಭೆಯಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲು ನೀಡುವ ನಾರೀ ಶಕ್ತಿ ವಂದನಾ ಸಂವಿಧಾನ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿದ ಪಕ್ಷಗಳು ಮತ್ತು ಆ ಪಕ್ಷದ ಲೋಕಸಭಾ ಸದಸ್ಯರುಗಳ ನಡೆಯ ಬಗೆ ನಗರಸಭೆ ಮಾಜಿ ಅಧ್ಯಕ್ಷೆ ರೂಪಾ ಅನಂತರಾಜು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಳೆಯರಿಗೆ ರಾಜಕೀಯ ಅವಕಾಶ ಕಲ್ಪಿಸುವುದು ತಾತ್ವಿಕವಾಗಿ ಎಲ್ಲರೂ ಒಪ್ಪಿಕೊಂಡಿರುವ ವಿಷಯವಾಗಿದ್ದರೂ ಅಂತಿಮ ಕ್ಷಣದಲ್ಲಿ ಲೋಕಸಭೆಯಲ್ಲಿ ಮಹಿಳಾ ಮಸೂದೆಗೆ ಬೆಂಬಲ ನೀಡದಿರುವುದು ಅವರ ದ್ವಂದ್ವ ರಾಜಕೀಯ ನೀತಿಯನ್ನು ತೋರಿಸುತ್ತದೆ, ಮಹಿಳೆಯರಿಗೆ ಎಲ್ಲಾ ರಂಗಗಳಲ್ಲಿ ಬೆಂಬಲ ಎಂಬ ಘೋಷಣೆಗಳು ಕೇವಲ ರಾಜಕೀಯ ಘೋಷಣೆಗಳಾಗುತ್ತಿವೆ ಎಂದು ಬೇಸರಿಸಿದರು.
ಇದನ್ನೂ ಓದಿ: Gauribidanur News: ಶಿಕ್ಷಣದ ಜೊತೆಗೆ ಬದುಕಿನ ಮೌಲ್ಯಗಳು ಅಗತ್ಯ
ಭಾರತದ ಒಟ್ಟು ಜನಸಂಖ್ಯೆಯ ಸುಮಾರು ಅರ್ಧ ಭಾಗದಷ್ಟು ಮಹಿಳೆಯರಾಗಿದ್ದರೂ ಕೂಡ ಅವರ ಪಾಲ್ಗೊಳ್ಳುವಿಕೆ ಶಾಸನ ಮಂಡಳಿಗಳಲ್ಲಿ ತೀರ ಕಡಿಮೆ, ಈ ಅಸಮತೋಲನ ಸರಿಪಡಿಸುವ ನಿಟ್ಟಿನಲ್ಲಿ ಮಹಿಳಾ ಮೀಸಲು ಮಸೂದೆ ಒಂದು ಐತಿಹಾಸಿಕ ಹೆಜ್ಜೆಯಾಗಬಹುದಿತ್ತು. ಈ ಮಸೂದೆ ಯನ್ನು ಎಲ್ಲರೂ ಬೆಂಬಲ ವ್ಯಕ್ತಪಡಿಸಿದಿದ್ದರೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಆದಿವಾಸಿ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗುತ್ತಿತ್ತು, ಮಹಿಳೆಯರು ರಾಜಕೀಯದಲ್ಲಿ ಪಾಲ್ಗೊಳ್ಳುವಿಕೆ ಹೆಚ್ಚಿದರೆ ಆಡಳಿತ ವ್ಯವಸ್ಥೆಯಲ್ಲಿ ಗುಣಮಟ್ಟದ ಬದಲಾವಣೆ ಸಾಧ್ಯವಾಗುತ್ತಿತ್ತು ಎಂದರು.
ಗ್ರಾಮ ಪಂಚಾಯಿತಿಯಿಂದ ಹಿಡಿದು ರಾಜ್ಯ ಮತ್ತು ರಾಷ್ಟ್ರ ಮಟ್ಟದವರೆಗೂ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಎತ್ತಿ ತೋರಿಸಿದ್ದಾರೆ. ಹೀಗಿರುವಾಗ ನಮಗೆ ಶಾಸನ ಮಂಡಳಿಗಳಲ್ಲಿ ಸಮರ್ಪಕ ಅವಕಾಶ ನೀಡುವುದು ನ್ಯಾಯ ಸಮ್ಮತವು ಹಾಗೂ ಅಗತ್ಯವು ಆಗಿದೆ ಆದರೆ ಈ ಮಸೂದೆಯನ್ನು ವಿರೋಧಿಸಿರುವುದು ಸರಿಯಲ್ಲ ಮಹಿಳಾ ಮಸೂದೆಯನ್ನು ವಿರೋಧಿಸಿದ ಎಲ್ಲಾ ಪಕ್ಷಗಳಿಗೆ ಹಾಗೂ ಆ ಸಂಸತ್ ಸದಸ್ಯರಿಗೆ ಮುಂದಿನ ಚುನಾವಣೆಯಲ್ಲಿ ದೇಶದ ಮಹಿಳೆಯರು ಅವರ ವಿರುದ್ಧ ವಾಗಿ ಮತ ಚಲಾಯಿಸಿ ನಮ್ಮ ನಾರಿಯರ ಶಕ್ತಿಯನ್ನು ತೋರಿಸುತ್ತಾರೆ ಎಂದು ಎಚ್ಚರಿಸಿದರು.