ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಕೆನರಾ ಬ್ಯಾಂಕ್ ನಿಂದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಪಿಠೋಪಕರಣಗಳ ವಿತರಣೆ ಮಾಡಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ

ಕೆನರಾ ಬ್ಯಾಂಕ್ ವತಿಯಿಂದ ಮಾಡುವ ಸಹಾಯ ಸರ್ಕಾರಿ ಶಾಲೆಯ ಮಕ್ಕಳಿಗೆ ಸಿಗಬೇಕು ಎಂದು ವಾಪಸಂದ್ರ ಬಾಲಕಿಯರ ಪ್ರೌಢಶಾಲೆಯನ್ನೇ ಶಿಫಾರಸ್ಸು ಮಾಡಿದ್ದು, ಈ ಶಾಲೆಗೆ ನೀರಿನ ಸೌಲಭ್ಯಕ್ಕಾಗಿ ಪಕ್ಕದ ಶಾಲೆ ಬಳಿ ಇರುವ ಕೊಲವೆ ಬಾವಿಯಿಂದ ಪೈಪ್ ಲೈನ್ ಹಾಕಿಸಿ ಕೊಡುವುದಾಗಿ ಕೆನರಾ ಬ್ಯಾಂಕ್ ಅಧಿಕಾರಿಗಳು  ಭರವಸೆ ನೀಡಿದರು

ಚಿಕ್ಕಬಳ್ಳಾಪುರ: ಮನುಷ್ಯ ಶಿಕ್ಷಣದಿಂದ ಜ್ಞಾನ ಪಡೆದರೆ ಮಾತ್ರ ತನ್ನಿಂದ ಮತ್ತೊಬ್ಬರಿಗೆ ಸಹಾಯಕ ಮಾಡಲು ಸಾಧ್ಯ. ಹಾಗಾಗಿ ಕಲಿಯುವ ವಯಸ್ಸಿನಲ್ಲಿ ಮನಸ್ಸಿಟ್ಟು ಕಲಿಯ ಬೇಕು ಹಾಗೂ ಬರೆಯಬೇಕು. ಬರೆದಿದ್ದನ್ನ ಮತ್ತೆ ಮತ್ತೆ ಓದಬೇಕು, ಕಲಿಯುವಾಗ ಎಂದಿಗೂ ಬೇಸರ ಮಾಡಿಕೊಳ್ಳಬಾರದು. ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿ ಉತ್ತಮ ಶ್ರೇಣಿಯಲ್ಲಿ ಪಾಸಾಗಿ ನೂರರಷ್ಟು ಫಲಿತಾಂಶ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. 

ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಬುಧವಾರ ಕೆನರಾ ಬ್ಯಾಂಕ್ ವತಿಯಿಂದ ಹಮ್ಮಿಕೊಂಡಿದ್ದ ಕೆನರಾ ಬ್ಯಾಂಕ್ ಸಿ.ಎಸ್.ಆರ್ ಪಂಡ್ ನಿಂದ ಕಂಪ್ಯೂಟರ್ ಟೇಬಲ್ ಗಳ ವಿತರಣಾ ಸಮಾರಂಭ ಮತ್ತು ಡಿಜಿಟಲ್ ಬ್ಯಾಂಕ್ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇದನ್ನೂ ಓದಿ: Chikkaballapur News: ತಾಯಿಯ ಸ್ಮರಣಾರ್ಥ ಪೌರ ಕಾರ್ಮಿಕರಿಗೆ ಸ್ಪೆಟರ್ ವಿತರಿಸಿದ ನಗರಸಭೆ ಮಾಜಿ ಸದಸ್ಯ ಆರ್.ಮಟಮಪ್ಪ

ಮನುಷ್ಯರಾದ ನಾವು ಶಿಕ್ಷಣ ಅನ್ನೋ ಪದವಿ ಪಡೆದು ಹೆಮ್ಮರವಾಗಿ ಬೆಳೆದು ಸಮಾಜದ ಅಭಿವೃದ್ಧಿಗೆ, ಬೆಳವಣಿಗೆಗೆ ಬೆಳಕಾಗಿ ಬದುಕು ಸಾಗಿಸಬೇಕಾಗಿದೆ. ಸರ್ಕಾರಿ ಶಾಲೆಗಳಲ್ಲಿ ಕಲಿತ ಮಕ್ಕಳೆ ದೇಶದಲ್ಲಿ ಅತ್ಯಂತ ಬುದ್ದಿವಂತ ಮಕ್ಕಳೆಣಿಸಿಕೊಂಡಿದ್ದಾರೆ. ಅದಕ್ಕಾಗಿ ಕೆನರಾ ಬ್ಯಾಂಕ್ ವತಿಯಿಂದ ಮಾಡುವ ಸಹಾಯ ಸರ್ಕಾರಿ ಶಾಲೆಯ ಮಕ್ಕಳಿಗೆ ಸಿಗಬೇಕು ಎಂದು ವಾಪಸಂದ್ರ ಬಾಲಕಿಯರ ಪ್ರೌಢಶಾಲೆಯನ್ನೇ ಶಿಫಾರಸ್ಸು ಮಾಡಿದ್ದು, ಈ ಶಾಲೆಗೆ ನೀರಿನ ಸೌಲಭ್ಯಕ್ಕಾಗಿ ಪಕ್ಕದ ಶಾಲೆ ಬಳಿ ಇರುವ ಕೊಲವೆ ಬಾವಿಯಿಂದ ಪೈಪ್ ಲೈನ್ ಹಾಕಿಸಿ ಕೊಡುವುದಾಗಿ ಕೆನರಾ ಬ್ಯಾಂಕ್ ಅಧಿಕಾರಿಗಳು  ಭರವಸೆ ನೀಡಿದರು.  

ಕಾರ್ಯಕ್ರಮದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ವೆಂಕಟಕೃಷ್ಣ, ಕೆನರಾ ಬ್ಯಾಂಕ್ ಎಫ್.ಎಲ್.ಸಿ ವ್ಯವಸ್ಥಾಪಕಿ ಎ.ಎಂ. ಕವಿತಾ, ಮುಖ್ಯೋಪಾಧ್ಯಾಯ ಸೂರ್ಯಪ್ರಕಾಶ, ಸಿ.ಬಿ.ಆರ್.ಸೆಟಿ ನಿರ್ದೇಶಕ ನಾರಾಯಣಸ್ವಾಮಿ, ಭಗತ್ ಸಿಂಗ್ ಚರಿಟೆಬಲ್ ಟ್ರಸ್ಟ್ ಸಿಬ್ಬಂದಿ ಮಧು, ಶಾಲಾ ಸಿಬ್ಬಂದಿ ಇತರರು ಹಾಜರಿದ್ದರು.