ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chinthamani News: ಕೀರ್ತನೆ ಹಾಡುವಾಗ ಶಾಸ್ತ್ರೀಯತೆಗಿಂತಲೂ ಭಕ್ತಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು : ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ||ಎಂ.ಆರ್.ಜಯರಾಮ್ ಮನವಿ

ಹಾಡುಗಾರರು ಪ್ರಾತ:ಕಾಲದಲ್ಲಿ ಒಂದು ಕಡೆ ಕುಳಿತು ಒಂದು ಕೀರ್ತನೆಯನ್ನು ಹಾಡುತ್ತಾ ಮಾನಸಿಕ ವಾಗಿ ಪರಮಾತ್ಮನಿಗೆ ಅರ್ಪಿಸಿದರೆ ಅದು ಧ್ಯಾನವಾಗುತ್ತದೆ. ಅದರಿಂದ ಹೆಚ್ಚಿನ ಫಲ ಸಿಗುತ್ತದೆ. ಭಕ್ತಿಯ ಗಾಯನದಿಂದ ಮನಸ್ಸು ಸ್ವಚ್ಛವಾಗಬೇಕು. ಬಹಿರಂಗಕ್ಕಿಂತಲೂ ಮಾನಸಿಕವಾದ ಅಂತರAಗದ ಸ್ವಚ್ಛತೆ ಬಹಳ ಶ್ರೇಷ್ಠವಾದುದು.

ಸಂತರು ತಮ್ಮ ಅನುಭವಸಾರದಿಂದ ರಚಿಸಿರುವ ಕೀರ್ತನೆಗಳು ಶ್ರೇಷ್ಠವಾದುದು. ಅವನ್ನು ಸಂಗೀತದೊAದಿಗೆ ಬೆರೆಸಿ ಹಾಡುವಾಗ ಶಾಸ್ತ್ರೀಯತೆಗಿಂತಲೂ ಹೆಚ್ಚು ಭಕ್ತಿಗೆ ಪ್ರಾಧಾನ್ಯ ನೀಡಿ ಭಾವತುಂಬಿ ಹಾಡುತ್ತಾ ಪರಮಾತ್ಮನಿಗೆ ಸಮರ್ಪಿಸಬೇಕು ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ||ಎಂ.ಆರ್.ಜಯರಾಮ್ ಮನವಿ ಮಾಡಿದರು.

ಚಿಂತಾಮಣಿ : ಸಂತರು ತಮ್ಮ ಅನುಭವಸಾರದಿಂದ ರಚಿಸಿರುವ ಕೀರ್ತನೆಗಳು ಶ್ರೇಷ್ಠವಾದುದು. ಅವನ್ನು ಸಂಗೀತದೊAದಿಗೆ ಬೆರೆಸಿ ಹಾಡುವಾಗ ಶಾಸ್ತ್ರೀಯತೆಗಿಂತಲೂ ಹೆಚ್ಚು ಭಕ್ತಿಗೆ ಪ್ರಾಧಾನ್ಯ ನೀಡಿ ಭಾವತುಂಬಿ ಹಾಡುತ್ತಾ ಪರಮಾತ್ಮನಿಗೆ ಸಮರ್ಪಿಸಬೇಕು ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ||ಎಂ.ಆರ್.ಜಯರಾಮ್ ಮನವಿ ಮಾಡಿದರು.

ಕೈವಾರದಲ್ಲಿ ನಡೆದ ಶ್ರೀಯೋಗಿನಾರೇಯಣ ಸಂಗೀತ ಕಲೆ ಮತ್ತು ಶಿಕ್ಷಣ ಟ್ರಸ್ಟ್ನ ಐದನೇ ವಾರ್ಷಿಕೋತ್ಸವದ ಭಕ್ತಿಗಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಂಗೀತ ಶ್ರೇಷ್ಠವಾದ ಕಲೆ. ಇದು ಪರಮಾತ್ಮನನ್ನು ಒಲಿಸಿಕೊಳ್ಳಲು ಇರುವ ಭಕ್ತಿಮಾರ್ಗ. ಭಕ್ತಿಯಿಂದ ಹಾಡುವಾಗ ಮನಸ್ಸು ಹಗುರವಾಗುತ್ತದೆ. ನಮಗೆ ತಿಳಿಯದೆ ನಮ್ಮ ಸಂಚಿತಕರ್ಮಗಳು ನಾಶವಾಗುತ್ತದೆ. ಸಂತರ ಕೀರ್ತನೆಗಳು ಬೀಜಾಕ್ಷರಗಳಿಂದ ಕೂಡಿರುವುದೇ ಅಲ್ಲದೆ ಅವು ಮಾನವರ ಬದುಕಿಗೆ ನೀತಿಯ ಪಾಠವೂ ಆಗಿದೆ ಎಂದರು.

ಇದನ್ನೂ ಓದಿ: Chinthamani News: ಕೃಷಿ ಇಲಾಖೆ ನೇಮಕಾತಿ ನಿಯಮ ಉಲ್ಲಂಘನೆ ಆರೋಪ: ಕೃಷಿ ಪದವೀಧರರಿಂದ ಬೃಹತ್ ಪ್ರತಿಭಟನೆ!

ಹಾಡುಗಾರರು ಪ್ರಾತ:ಕಾಲದಲ್ಲಿ ಒಂದು ಕಡೆ ಕುಳಿತು ಒಂದು ಕೀರ್ತನೆಯನ್ನು ಹಾಡುತ್ತಾ ಮಾನಸಿಕವಾಗಿ ಪರಮಾತ್ಮನಿಗೆ ಅರ್ಪಿಸಿದರೆ ಅದು ಧ್ಯಾನವಾಗುತ್ತದೆ. ಅದರಿಂದ ಹೆಚ್ಚಿನ ಫಲ ಸಿಗುತ್ತದೆ. ಭಕ್ತಿಯ ಗಾಯನದಿಂದ ಮನಸ್ಸು ಸ್ವಚ್ಛವಾಗಬೇಕು. ಬಹಿರಂಗಕ್ಕಿಂತಲೂ ಮಾನಸಿಕವಾದ ಅಂತರAಗದ ಸ್ವಚ್ಛತೆ ಬಹಳ ಶ್ರೇಷ್ಠವಾದುದು. ಗ್ರಾಮೀಣ ಪ್ರದೇಶದಲ್ಲಿ ಸಂಗೀತ ಶಾಲೆಯನ್ನು ತೆರೆದು ಇಲ್ಲಿನ ಮಕ್ಕಳಿಗೆ ಸಂಗೀತದ ವಿದ್ಯೆಯನ್ನು ಧಾರೆಯೆರೆಯುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

ಸಂಗೀತ ಶಾಲೆಯ ಮುಖ್ಯಸ್ಥ ಎನ್.ಕೆಂಪರಾಜ್‌ರವರು ಮಾತನಾಡಿ, ಗ್ರಾಮೀಣಭಾಗದಲ್ಲಿ ಸಂಗೀತ ಕಲೆಯನ್ನು ಪಸರಿಸುವ ಅಭಿಲಾಷೆಯಿಂದ ಈ ಸಂಸ್ಥೆಯನ್ನು ಆರಂಭಿಸಲಾಗಿದೆ. ಇದಕ್ಕೆ ಸಹಕಾರ ವನ್ನು ನೀಡುತ್ತಿರುವ ಎಲ್ಲರಿಗೂ ನಾವು ಆಭಾರಿಯಾಗಿದ್ದೇವೆ. ಎಷ್ಟೇ ಹಣ ಸಂಪಾದನೆ ಮಾಡಿದರೂ, ಅದು ಸದುಪಯೋಗವಾಗಬೇಕು. ಜನೋಪಕಾರಿ ಕಾರ್ಯಗಳನ್ನು ಮಾಡುತ್ತಾ ಮಾನವ ಜನ್ಮ ಸಾರ್ಥಕ ಮಾಡಿಕೊಳ್ಳಬೇಕು ಎಂಬ ಆಸೆ ನಮ್ಮದು. ಈ ನಿಟ್ಟಿನಲ್ಲಿ ನಮಗೆ ಕೀರ್ತಿಶೇಷ ಎಂ.ಎಸ್.ರಾಮಯ್ಯನವರು ಸ್ಪೂರ್ತಿ ಎಂದರು.

cbpm1dSangeetha Function 22

ಕಾರ್ಯಕ್ರಮದಲ್ಲಿ ಕೈವಾರ ತಾತಯ್ಯನವರ, ತ್ಯಾಗರಾಜಸ್ವಾಮಿಗಳ, ಕನಕದಾಸರ, ಪುರಂದರ ದಾಸರ, ಅನ್ನಮಯ್ಯ ಹಾಗೂ ಹಲವಾರು ಕೀರ್ತನೆಕಾರರ ಕೀರ್ತನೆಗಳನ್ನು ಸಂಗೀತ
ವಿದ್ವಾಂಸರುಗಳು ಸುಶ್ರಾವ್ಯವಾಗಿ ಹಾಡಿದರು. ಪಂಚರತ್ನ ಕೀರ್ತನೆಗಳ ಗೋಷ್ಠಿಗಾಯನವು ನಡೆಯಿತು. ಸಂಗೀತ ಶಾಲೆಯ ವಿದ್ಯಾರ್ಥಿಗಳು ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಭರತನಾಟ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕರಾದ ವಾನರಾಶಿ ಬಾಲಕೃಷ್ಣ ಭಾಗವತರ್, ಕೈವಾರ ಟ್ರಸ್ಟ್ನ ಉಪಾಧ್ಯಕ್ಷರಾದ ಜೆ.ವಿಭಾಕರರೆಡ್ಡಿ, ಖಜಾಂಚಿಗಳಾದ ಆರ್.ಪಿ.ಎಂ.ಸತ್ಯನಾರಾಯಣ್, ಚಿಂತಾಮಣಿ ಸಂಗೀತ ಶಾಲೆಯ ಪ್ರಾಂಶುಪಾಲೆ ಪದ್ಮಾವತಿ, ರಾಜ್ಯಪ್ರಶಸ್ತಿ ವಿಜೇತ ಕಲಾವಿದ ಕೈವಾರ ರಾಮನ್ನ, ಸಂಗೀತ ವಿದ್ವಾಂಸರಾದ ಕೆ.ರಾಮಕುಮಾರ್, ವಿ.ಗೋವರ್ಧನ್, ಶ್ಯಾಮಸುಂದರ್, ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಆರ್.ವಿಜಯಲಕ್ಷಿ÷್ಮ, ಎನ್.ಕೆಂಪರಾಜ್, ಕೆ.ಎನ್.ರವಿ, ಕೆ.ಶಿಲ್ಪ, ಮುನಿವೆಂಕಟರವಣಪ್ಪ, ಎನ್.ಶಂಕರ್ ಹಾಗೂ ಸಂಗೀತ ಕಲಾವಿದರುಗಳು ಉಪಸ್ಥಿತರಿದ್ದರು. ಶಿಕ್ಷಕಿ ಪರಿಮಳ ಮಂಜುನಾಥ್ ಉಪನ್ಯಾಸಕ ವೆಂಕಟರವಣಪ್ಪ ನಿರೂಪಿಸಿದರು.