ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chikkaballapur News: ಶ್ರದ್ಧಾಭಕ್ತಿಯಿಂದ ನಡೆದ ಧರ್ಮರಾಯಸ್ವಾಮಿಯ 42ನೇ ವರ್ಷದ ಕರಗ ಮಹೋತ್ಸವ

ಹೂವಿನ ಕರಗದ ಹಿನ್ನೆಲೆಯಲ್ಲಿ ವಹ್ನಿಕುಲ ವಂಶಸ್ಥರು, ಕರಗದಮ್ಮನ ಪುತ್ರರಾದ ವೀರ ಕುಮಾರರು ಗೋವಿಂದ ನಾಮಸ್ಮರಣೆಯೊಂದಿಗೆ ದೇವಿಗೆ ಸಲ್ಲಿಸಬೇಕಾದ ಹರಕೆಯನ್ನು ಶ್ರದ್ಧಾಭಕ್ತಿಯಿಂದ ಅರ್ಪಿಸಿದ್ದು ವಿಶೇಷವಾಗಿತ್ತು. ಕರಗದ ಪೂಜಾರಿ ಕುಪ್ಪಂನ ಬಾಲಾಜಿ ಅವರು ರಾತ್ರಿ 10.30ಕ್ಕೆ ಕರಗಕ್ಕೆ ಪೂಜೆ ಸಲ್ಲಿಸಿದ ನಂತರ ಹೂವಿನ ಕರಗವನ್ನು ತಲೆಯ ಮೇಲೆ ಹೊತ್ತು ತಮಟೆಯ ನಾದಕ್ಕೆ ಪೂರಕವಾಗಿ ಕುಣಿಯುತ್ತಾ ದೇವಾಲಯವನ್ನು 3 ಸುತ್ತು ಪ್ರದಕ್ಷಿಣೆ ಹಾಕಿದ ನಂತರ ನಗರ ಸಂಚಾರಕ್ಕೆ ತೆರಳಿದ್ದು ವಿಶೇಷ.

ಧರ್ಮರಾಯಸ್ವಾಮಿ ಕರಗ ಮಹೋತ್ಸವದ ಚಿತ್ರಗಳು..

ಚಿಕ್ಕಬಳ್ಳಾಪುರ: ನಗರದ ಭಗತ್‌ಸಿಂಗ್ ನಗರದ ಶ್ರೀಧರ್ಮರಾಯಸ್ವಾಮಿಯ 42ನೇ ವರ್ಷದ ಹೂವಿನ ಕರಗಮಹೋತ್ಸವವು ಶ್ರದ್ಧಾಭಕ್ತಿಯಿಂದ ಅಪಾರ ಜನಸ್ತೋಮದ ನಡುವೆ ಶ್ರದ್ಧಭಕ್ತಿಯಿಂದ ನಡೆಯಿತು.

ಕೆಎಸ್‌ಆರ್‌ಟಿಸಿ ಗ್ಯಾರೇಜ್ ಸಮೀಪವಿರುವ ಭಗತ್‌ಸಿಂಗ್ ನಗರದ ಶ್ರೀ ಧರ್ಮರಾಯಸ್ವಾಮಿ ದೇವಾಲಯವನ್ನು ಹೂವಿನ ಕರಗದ ಹಿನ್ನೆಲೆಯಲ್ಲಿ ಸುಣ್ಣಬಣ್ಣ ಬಳಿಯಲಾಗಿದ್ದು ತಳಿರು ತೋರಣ, ವಿದ್ಯುತ್ ದೀಪಾಲಂಕಾರದ ಜತೆಗೆ ಹೂವಿನ ಅಲಂಕಾರದಿಂದ ಶೃಂಗಾರ ಮಾಡಲಾಗಿತ್ತು.

ಇದನ್ನೂ ಓದಿ: Chikkaballapur News: ನನ್ನ ವಿರುದ್ಧ ನಿಂತು ಜಿಲ್ಲಾ ಪಂಚಾಯಿತಿ ಸ್ಥಾನ ಗೆಲ್ಲಲಿ ನೋಡೋಣ : ಕಾಕಲ ಚಿಂತೆ ರಾಜಣ್ಣ ಸವಾಲು

ಹೂವಿನ ಕರಗದ ಹಿನ್ನೆಲೆಯಲ್ಲಿ ವಹ್ನಿಕುಲ ವಂಶಸ್ಥರು, ಕರಗದಮ್ಮನ ಪುತ್ರರಾದ ವೀರ ಕುಮಾರರು ಗೋವಿಂದ ನಾಮಸ್ಮರಣೆಯೊಂದಿಗೆ ದೇವಿಗೆ ಸಲ್ಲಿಸಬೇಕಾದ ಹರಕೆಯನ್ನು ಶ್ರದ್ಧಾಭಕ್ತಿಯಿಂದ ಅರ್ಪಿಸಿದ್ದು ವಿಶೇಷವಾಗಿತ್ತು. ಕರಗದ ಪೂಜಾರಿ ಕುಪ್ಪಂನ ಬಾಲಾಜಿ ಅವರು ರಾತ್ರಿ 10.30ಕ್ಕೆ ಕರಗಕ್ಕೆ ಪೂಜೆ ಸಲ್ಲಿಸಿದ ನಂತರ ಹೂವಿನ ಕರಗವನ್ನು ತಲೆಯ ಮೇಲೆ ಹೊತ್ತು ತಮಟೆಯ ನಾದಕ್ಕೆ ಪೂರಕವಾಗಿ ಕುಣಿಯುತ್ತಾ ದೇವಾಲಯವನ್ನು 3 ಸುತ್ತು ಪ್ರದಕ್ಷಿಣೆ ಹಾಕಿದ ನಂತರ ನಗರ ಸಂಚಾರಕ್ಕೆ ತೆರಳಿದ್ದು ವಿಶೇಷ.

6s

ಕರಗವನ್ನು ಮನೆಯ ಬಳಿ ಬರಮಾಡಿಕೊಳ್ಳುವ ಭಕ್ತರು ನೆಲವನ್ನು ಸಾರಿಸಿ ಗುಡಿಸಿ ರಂಗೋಲಿ ಹಾಕಿ ಮಡಿಯಿಂದ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಕರಗದ ಪೂಜಾರಿ ಸಹ ಭಕ್ತಿಭಾವದಲ್ಲಿ ತಾಯಿಯನ್ನು ಆವಾಹನೆ ಮಾಡಿಕೊಂಡು ಭಕ್ತರ ಮನತಣಿಸುವಲ್ಲಿ ಯಶಸ್ವಿಯಾದರು.

ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ಆಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.ಭಕ್ತಧಿಗಳಿಂದ ಅನ್ನದಾನ ಪಾನಕ ಪನ್ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಕರಗದ ಹಿನ್ನೆಲೆಯಲ್ಲಿ ಮುತ್ತಿನ ಪಲ್ಲಕ್ಕಿ ಉತ್ಸವ, ನಾಟಕ ಪ್ರದರ್ಶನ, ಅನ್ನಸಂತರ್ಪಣೆ, ಕೀಲುಕುದುರೆ, ಡೊಳ್ಳು ಕುಣಿತ ಇತ್ಯಾದಿ ಜಾನಪದ ಕಲಾತಂಡಗಳ ಕುಣಿತ ಕರಗಕ್ಕೆ ಹೊಸಮೆರಗು ತಂದಿತು.

ಭಾನುವಾರ 10 ಗಂಟೆಯ ವೇಳೆಗೆ ಅಗ್ನಿಕುಂಡಪ್ರವೇಶ ಪ್ರವೇಶ ವಸಂತೋತ್ಸವ, ಒನಕೆ ಕರಗದ ಮೂಲಕ ಹೂವಿನ ಕರಗ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು.