ಗೌರಿಬಿದನೂರು: ಸರ್ಕಾರ ನೀಡಿರುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಉತ್ತಮ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಬಲ ಹೊಂದಬೇಕೆಂದು ಶಾಸಕ ಕೆಎಚ್.ಪುಟ್ಟಸ್ವಾಮಿ ಗೌಡರು(MLA KH Puttaswamy Gowda)ತಿಳಿಸಿದರು.
ಅವರು ನಗರದ ಹೊರವಲಯದಲ್ಲಿರುವ ಸಮಾನತಾ ಸೌಧದ ಆವರಣದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ 2025ರ ಸಾಲಿನ ಹತ್ತು ಮಂದಿ ಫಲಾನುಭವಿ ರೈತರಿಗೆ ಕೊಳವೆಬಾವಿಗಳಿಗೆ ಅಗತ್ಯವಾದ ಪಂಪು ಮೋಟಾ ರು, ಪೈಪುಗಳು,ಕೇಬಲ್ಲು ಹಾಗೂ ಇನ್ನಿತೆ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು.
ಇದನ್ನೂ ಓದಿ: Gauribidanur News: ಮದಕರಿ ನಾಯಕನ ಶೌರ್ಯ ಸಾಹಸ ಯುವ ಜನತೆಗೆ ಮಾದರಿ : ಆಂಧ್ರ ಸಂಸದ ಅಂಬಿಕಾ ಜಿ ಲಕ್ಷ್ಮೀನಾರಾಯಣ
ಕೊಳವೆಬಾವಿಗಳಲ್ಲಿ ದೊರಕುವ ನೀರಿನು ಮಿತವಾಗಿ ಬಳಸಿಕೊಂಡು,ವೈಜ್ಞಾನಿಕವಾಗಿ ಕೃಷಿ ಇಲಾಖೆಯ ಅಧಿಕಾರಿಗಳ ಸಲಹೆ ಮೇರೆಗೆ ಬೆಳೆಗಳನ್ನು ಬೆಳೆಯಬೇಕು ಎಂದರು.
ಈ ಸಂಧರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಧನಂಜಯ್ ಹಾಗೂ ಫಲಾನುಭವಿ ರೈತರು ಉಪಸ್ಥಿತರಿದ್ದರು.