ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bagepally News: ನಿವೃತ್ತ ಯೋಧರಿಂದ ಎಸ್.ಎಸ್.ಎಲ್.ಸಿ ಮಕ್ಕಳಿಗೆ ಪರೀಕ್ಷಾ ಪರಿಕರಗಳ ವಿತರಣೆ

ಸರ್ಕಾರಿ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಭವಿಷ್ಯವನ್ನು ಉಜ್ವಲಗೊಳಿಸಲು ಈ ಶಾಲೆ ಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಯಾವ ರೀತಿ ಎದುರಿಸಬೇಕು ಎಂಬುದರ ಬಗ್ಗೆ ಧೈರ್ಯ ತುಂಬುವುದರ ಜೊತೆಗೆ,ಗುಂಪು ಅಧ್ಯಯನ, ವಿಶೇಷ ತರಗತಿಗಳನ್ನು ತೆಗೆದುಕೊಂಡು ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿರುವುದು ಸ್ವಾಗತಾರ್ಹ.

ಎಸ್ಸೆಸ್ಸೆಲ್ಸಿ ಪರೀಕ್ಷೆಯು ವಿದ್ಯಾರ್ಥಿಗಳಿಗೆ ಸವಾಲಾಗಿದ್ದು, ಈ ಸವಾಲನ್ನು ಸಮರ್ಥವಾಗಿ ಎದುರಿಸಬೇಕು' ಎಂದು ಶಿಡ್ಲಘಟ್ಟ ನಿವೃತ್ತ ಯೋಧ  ಎಸ್. ವಿ.ಅಯ್ಯರ್ ಕಿವಿಮಾತು ಹೇಳಿದರು.

ಬಾಗೇಪಲ್ಲಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯು ವಿದ್ಯಾರ್ಥಿಗಳಿಗೆ ಸವಾಲಾಗಿದ್ದು, ಈ ಸವಾಲನ್ನು ಸಮರ್ಥ ವಾಗಿ ಎದುರಿಸಬೇಕು’ ಎಂದು ಶಿಡ್ಲಘಟ್ಟ ನಿವೃತ್ತ ಯೋಧ ಎಸ್.ವಿ.ಅಯ್ಯರ್ ಕಿವಿ ಮಾತು ಹೇಳಿದರು.

ಬಾಗೇಪಲ್ಲಿ ತಾಲ್ಲೂಕು ಕಸಬಾ ಹೋಬಳಿ ಸರ್ಕಾರಿ ಪ್ರೌಢಶಾಲೆ ಘಂಟಂವಾರಿಪಲ್ಲಿಯಲ್ಲಿ  ನಿವೃತ್ತ ಯೋಧ ಎಸ್. ವಿ.ಅಯ್ಯರ್ ತನ್ನ ದಿವಂಗತ ಧರ್ಮಪತ್ನಿ ಹೆಚ್.ಎಸ್ ಪ್ರಭಾವತಿರವರ ಜ್ಞಾಪಕಾ ರ್ಥವಾಗಿ  ಹತ್ತನೇ ತರಗತಿ ಮಕ್ಕಳಿಗೆ ಪರೀಕ್ಷಾ ಲೇಖನಗಳಾದ ಪೆನ್ನು, ಪುಸ್ತಕ ಹಾಗೂ ರೈಟಿಂಗ್ ಪ್ಯಾಡ್ ಗಳನ್ನು ಉಚಿತವಾಗಿ ವಿತರಣೆ ಮಾಡಿ ಮಾತನಾಡಿದರು.

ಸರ್ಕಾರಿ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಭವಿಷ್ಯವನ್ನು ಉಜ್ವಲಗೊಳಿಸಲು ಈ ಶಾಲೆ ಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಯಾವ ರೀತಿ ಎದುರಿಸಬೇಕು ಎಂಬುದರ ಬಗ್ಗೆ ಧೈರ್ಯ ತುಂಬುವುದರ ಜೊತೆಗೆ,ಗುಂಪು ಅಧ್ಯಯನ, ವಿಶೇಷ ತರಗತಿಗಳನ್ನು ತೆಗೆದುಕೊಂಡು ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿರುವುದು ಸ್ವಾಗತಾರ್ಹ. ಮುಖ್ಯ ಪರೀಕ್ಷೆಗಳು ಕೆಲವೇ ದಿನಗಳು ಇದ್ದು ವಿದ್ಯಾರ್ಥಿಗಳು ಒಂದು ನಿಮಿಷವನ್ನು ವ್ಯರ್ಥ ಮಾಡದೆ ವ್ಯಾಸಂಗದತ್ತ ಗಮನ ಹರಿಸಬೇಕು. ಮೊಬೈಲ್, ಟಿವಿಯಿಂದ ದೂರವಿರಬೇಕು ಎಂದರು.

ಇದನ್ನೂ ಓದಿ: Bagepally News: ಶಾಂತಿನಿಕೇತನ ಶಾಲೆಯಲ್ಲಿ ಸಂಕ್ರಾಂತಿ ಸಂಭ್ರಮ

ವಿದ್ಯಾರ್ಥಿಗಳು ಯಾವುದೇ ಅನ್ಯ ವಿಷಯಗಳತ್ತ ಮನಸ್ಸು ಹರಿಯಬಿಡದೆ ವಿದ್ಯಾಭ್ಯಾಸದ ಕಡೆ ಗಮನ ನೀಡಬೇಕು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕೇವಲ ಉತ್ತೀರ್ಣರಾದರೆ ಸಾಲದು. ಉನ್ನತ ಮಟ್ಟದಲ್ಲಿ ಉತ್ತೀರ್ಣರಾಗಿ ಶಾಲೆಗೆ, ಪೋಷಕರಿಗೆ ಕೀರ್ತಿ ತರಬೇಕು ಎಂದು ತಿಳಿಸಿದರು.

ಎಸ್. ವಿ.ಅಯ್ಯರ್ ಜೀವನ: ಶಿಡ್ಲಘಟ್ಟದ ನಿವೃತ್ತ ಯೋಧ ಸುಬ್ರಹ್ಮಣ್ಯಂ ವೆಂಕಟೇಶ್ ಅಯ್ಯರ್ (ಎಸ್.ವಿ.ಅಯ್ಯರ್) ಅವರು 1963 ರಿಂದ 1978 ರವರೆಗೆ ಭಾರತೀಯ ವಾಯುಪಡೆ ಸೇನೆಯಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿ, ಪಾಕಿಸ್ತಾನ ಮತ್ತು ಬಾಂಗ್ಲಾ ವಿಮೋಚನಾ ಯುದ್ಧಗಳಲ್ಲಿ ಭಾಗ ವಹಿಸಿ ಇವರು ಜನರಲ್ ಸರ್ವಿಸ್ ಇಂಡಿಯಾ ಪದಕ ಮತ್ತು ಲಾಂಗ್ ಸರ್ವಿಸ್ ಪದಕಗಳನ್ನು ಪಡೆದಿದ್ದಾರೆ.

16cbpm5ja ಒಕ

ಮುಖ್ಯ ಶಿಕ್ಷಕಿ ಜಿ.ರಾಮಸುಬ್ಬಮ್ಮ ಮಾತನಾಡಿ,ಯೋಧರ ತ್ಯಾಗ, ಧೈರ್ಯ ಮತ್ತು ಶಿಸ್ತು ಪ್ರತಿ ಯೊಬ್ಬ ವಿದ್ಯಾರ್ಥಿಯ ಬದುಕಿಗೆ ಅತ್ಯುತ್ತಮ ಪ್ರೇರಣೆಯಾಗಿದೆ  "ಯೋಧರ ಜೀವನ ಸುಲಭ ವಾದುದಲ್ಲ. ದೇಶದ ನಾಗರಿಕರು ಸುರಕ್ಷಿತವಾಗಿರಲಿ ಎಂಬ ಏಕೈಕ ಉದ್ದೇಶದಿಂದ ಅವರು ಗಡಿ ಯಲ್ಲಿ ನಿದ್ರೆ ಬಿಟ್ಟು ಕಾವಲು ಕಾಯುತ್ತಾರೆ. ನಾವು ಹಬ್ಬಗಳನ್ನು ಸಂಭ್ರಮದಿಂದ ಆಚರಿಸಲೆಂದು ಅವರು ತಮ್ಮ ಕುಟುಂಬದಿAದ ದೂರವಿರುತ್ತಾರೆ. ಇಂತಹ ತ್ಯಾಗಮಯಿ ಬದುಕು ನಮಗೆಲ್ಲರಿಗೂ ಆದರ್ಶ," ಎಂದು ಶ್ಲಾಘಿಸಿದರು.

ವಿದ್ಯಾರ್ಥಿಗಳು ಅವರು ಕೊಟ್ಟಿರುವ ಲೇಖನಗಳನ್ನು  ಸದುಪಯೋಗಪಡಿಸಿ ಕೊಂಡು ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಸ್ಥಾನ ಗಳಿಸಿ ಕೀರ್ತಿ ತರಬೇಕು ಎಂದರು.

ಈ ಸಂದರ್ಭದಲ್ಲಿ ಎಸ್.ವಿ.ಅಯ್ಯರ್ ಆಪ್ತರಾದ ರಮೇಶ್, ಶಿವಲಕ್ಷ್ಮೀ, ಬಾಲಕೃಷ್ಣ, ಶಿಕ್ಷಕರಾದ ಎನ್.ಎನ್.ಸಂಧ್ಯಾ,ಕೆ.ಬಿ.ಆಂಜನೇಯ ರೆಡ್ಡಿ, ಜಿ.ಲಕ್ಷ್ಮೀದೇವಮ್ಮ, ಜಿ.ವಿ.ಚಂದ್ರಶೇಖರ, ನಾರಾಯಣ ಸ್ವಾಮಿ, ಶರ್ಮಿಲ, ಹಾಗೂ ಸಿಬ್ಬಂದಿ ವರ್ಗ ಹೆಚ್.ಆರ್.ರಘುನಾಥ್, ಹಾಗೂ ಶಾಲಾ ಮಕ್ಕಳು ಹಾಜರಿದ್ದರು.