ಪ್ರವಾದಿ ಹುಟ್ಟು ಹಬ್ಬದ ಅಂಗವಾಗಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಈದ್ ಮಿಲಾದ್ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಇಸ್ಲಾಂ ಧರ್ಮವೇ ಶಾಂತಿ, ಸೌಹಾರ್ದತೆ, ಮಾನವೀಯತೆ ಎಂಬ ಸಂದೇಶವನ್ನು ಸಾರುತ್ತದೆ.ಪ್ರವಾದಿ ಮುಹಮ್ಮದ್ ಅವರು ಸಮಾಜ ಪರಿವರ್ತನೆಗಾಗಿ ಸೌಮ್ಯದ ಮಾರ್ಗವನ್ನು ಅನುಸರಿಸಿ, ಎಲ್ಲೆಡೆ ಶಾಂತಿ ನೆಲೆಸಬೇಕು ಎಂಬುದೇ ಅವರ ಆಶಯವಾಗಿತ್ತು ನಾವು ಕೂಡ ಅವರ ಹಾದಿಯಲ್ಲಿ ನಡೆಯಬೇಕು

ಪ್ರತಿ ಧರ್ಮವು ಶಾಂತಿ ಸಂದೇಶವನ್ನು ಸಾರುತ್ತದೆಯಾದರೂ,ಕೆಲ ಕಿಡಿಗೇಡಿಗಳ ಪಿತೂರಿಗಳಿಂದ ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ. ಅಂತಹವರ ಮಾತುಗಳಿಗೆ ಕಿವಿಗೊಡದೆ,ಎಲ್ಲರೂ ಒಗ್ಗಟ್ಟಾಗಿ ಶಾಂತಿಯ ಸಂದೇಶ ಸಾರಬೇಕು ಎಂದು ಡಾ.ಎ ಪಿ ಜೆ ಅಬ್ದುಲ್ ಕಲಾಂ ಫೌಂಡೇಶನ್ ರಾಜ್ಯಾಧ್ಯಕ್ಷ ಎಂ ಎಂ ಭಾಷ ತಿಳಿಸಿದರು. -

ಚಿಕ್ಕಬಳ್ಳಾಪುರ : ಪ್ರತಿ ಧರ್ಮವು ಶಾಂತಿ ಸಂದೇಶವನ್ನು ಸಾರುತ್ತದೆಯಾದರೂ,ಕೆಲ ಕಿಡಿಗೇಡಿಗಳ ಪಿತೂರಿಗಳಿಂದ ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ. ಅಂತಹವರ ಮಾತುಗಳಿಗೆ ಕಿವಿಗೊಡದೆ, ಎಲ್ಲರೂ ಒಗ್ಗಟ್ಟಾಗಿ ಶಾಂತಿಯ ಸಂದೇಶ ಸಾರಬೇಕು ಎಂದು ಡಾ.ಎ ಪಿ ಜೆ ಅಬ್ದುಲ್ ಕಲಾಂ ಫೌಂಡೇಶನ್ ರಾಜ್ಯಾಧ್ಯಕ್ಷ ಎಂ.ಎಂಭಾಷ ತಿಳಿಸಿದರು.
ನಗರದ ಜಿಲ್ಲಾಸ್ಪತ್ರೆಯ ಹೊರರೋಗಿಗಳಿಗೆ ಈದ್ ಮಿಲಾದ್ ಅಂಗವಾಗಿ ಅಬ್ದುಲ್ ಕಲಾಂ ಫೌಂಡೇಶನ್ ಹಾಗೂ ಆಲ್ ಇಂಡಿಯಾ ಮಿಲಿ ಕೌನ್ಸಿಲ್ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಅವರು ಮಾತನಾಡಿದರು.
ಪ್ರತಿ ಹಬ್ಬಗಳನ್ನು ಜಾತಿ-ಭೇದಭಾವ ಮರೆತು ಎಲ್ಲರೂ ಒಟ್ಟಾಗಿ ಆಚರಿಸುತ್ತಿದ್ದೇವೆ ನಮ್ಮಲ್ಲಿ ವಿಷಬೀಜ ಬಿತ್ತಲು ಯತ್ನಿಸುವವರ ಮಾತು ಕೇಳದೆ,ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಸಾಗಿದರೆ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯವೆಂದರು.
ಇದನ್ನೂ ಓದಿ: Chinthamani News: ಮುರುಗಮಲ್ಲ ದರ್ಗಾಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ
ಈದ್ ಮಿಲಾದ್ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಇಸ್ಲಾಂ ಧರ್ಮವೇ ಶಾಂತಿ, ಸೌಹಾರ್ದತೆ, ಮಾನವೀಯತೆ ಎಂಬ ಸಂದೇಶವನ್ನು ಸಾರುತ್ತದೆ.ಪ್ರವಾದಿ ಮುಹಮ್ಮದ್ ಅವರು ಸಮಾಜ ಪರಿವರ್ತನೆಗಾಗಿ ಸೌಮ್ಯದ ಮಾರ್ಗವನ್ನು ಅನುಸರಿಸಿ, ಎಲ್ಲೆಡೆ ಶಾಂತಿ ನೆಲೆಸಬೇಕು ಎಂಬುದೇ ಅವರ ಆಶಯವಾಗಿತ್ತು ನಾವು ಕೂಡ ಅವರ ಹಾದಿಯಲ್ಲಿ ನಡೆಯಬೇಕು ಎಂದು ಹೇಳಿದರು.
೧೫೦೦ನೇ ಈದ್ ಮಿಲಾದ್ ಪ್ರಯುಕ್ತ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿ ಶಾಂತಿ ಸಂದೇಶ ಸಾರಲಾಯಿತು. ದಯೆ,ಒಗ್ಗಟ್ಟು,ಪ್ರೀತಿ, ಬದ್ಧತೆ ಇಸ್ಲಾಂ ಧರ್ಮದ ಮೂಲ ತತ್ವಗಳಾಗಿದ್ದು,ಗಳಿಕೆಯ ಒಂದು ಭಾಗವನ್ನು ಬಡವರಿಗೆ ನೀಡುವಂತೆ ಇಸ್ಲಾಂ ತಿಳಿಸಿದೆ.ನಿರ್ಗತಿಕರು ಹಾಗೂ ಅನಾಥರ ಜೀವನದಲ್ಲಿ ಬೆಳಕನ್ನು ತರುವಂತೆ,ಅವರನ್ನು ಉತ್ತಮ ಜೀವನ ಸಾಗಿಸಲು ಪ್ರೇರೇಪಿಸುವ ಧರ್ಮವೇ ಇಸ್ಲಾಂ ಎಂದು ಹೇಳಿದರು.
ಈ ವೇಳೆ ಸೈಯದ್ ಅಮಾನುಲ್ಲಾ, ಅಬ್ದುಲ್ ರೆಹಮಾನ್, ರಾಜಶೇಖರ್, ಹಾಶಿಂ ಬನ್ನೂರು, ಜರಾರ್ ಹುಸೇನ್, ಕಳವಾರ ಶ್ರೀಧರ್, ಇಬ್ರಾಹಿಂ, ತಬ್ಕೀರ್, ಅಮ್ಜದ್, ಸಫೀರ್, ಅರ್ಬಾಜ್, ಅಬು ಬಕರ್, ನವಾಜ್, ರಹಮತ್, ಆಲ್ತಾಫ್ ಇತರರು ಉಪಸ್ಥಿತರಿದ್ದರು.