ಚಿಕ್ಕಬಳ್ಳಾಪುರ : ರಾಷ್ಟ್ರೀಯ ಬಾಲ ಸ್ವಾಸ್ಥ್ಯ (ಆರ್.ಬಿ.ಎಸ್.ಕೆ) ಕಾರ್ಯಕ್ರಮದಡಿ ಜಿಲ್ಲೆಯ 18 ವರ್ಷದೊಳಗಿನ ಶ್ರಮಣ ದೋಷವುಳ್ಳ 111 ಮಕ್ಕಳನ್ನು ಗುರುತಿಸಿ ಉಚಿತ ವಾಗಿ ಶ್ರವಣ ಸಾಧನಗಳನ್ನು ವಿತರಿಸಿರುವುದು ಮಾನವೀಯತೆಯನ್ನು ಮೆರೆದ ಅರ್ಥ ಪೂರ್ಣ ಕಾರ್ಯಕ್ರಮ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್(Higher Education Minister and District In-charge Minister Dr.M.C.Sudhakar) ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿಕ್ಕಬಳ್ಳಾಪುರ ಮತ್ತು ರೋಟರಿ ರಾಜ್ ಮಹಲ್ ವಿಲಾಸ್, ಮಾವಟೆ, ಸಂವಾದ್ ಪೌಂಡೇಷನ್,ಇಂಡಿಯಾ ಎನ್‌ಜಿಒ ಬೆಂಗಳೂರು ರವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯತ್ ನ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಿದ್ದ “ಮಕ್ಕಳ ಉಚಿತ ಶ್ರವಣ ದೋಷ ತಪಾಸಣೆ ಮತ್ತು ಶ್ರವಣ ಸಾಧನಗಳ ವಿತರಣಾ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳ ಜನನ ಸಂದರ್ಭದಲ್ಲಿ ಕೆಲವು ದೈಹಿಕ, ಮಾನಸಿಕ ದೋಷಗಳು ಕಂಡು ಬರುವುದಿಲ್ಲ ಆದರೆ ಮಗು ಬೆಳವಣಿಗೆ ಆದಂತೆ ಶ್ರವಣ, ದೃಷ್ಠಿ ಹಾಗೂ ಇನ್ನಿತರ ದೋಷ ಗಳು ಉಂಟಾಗುವ ಸಾಧ್ಯತೆ ಇರುತ್ತದೆ. ರಾಷ್ಟ್ರೀಯ ಬಾಲ ಸ್ವಾಸ್ಥ್ಯ (ಆರ್.ಬಿ.ಎಸ್.ಕೆ) ಕಾರ್ಯಕ್ರಮದಡಿ ಅಂಗನವಾಡಿ ಮಕ್ಕಳಿಗೆ ವರ್ಷಕ್ಕೆ ನಾಲ್ಕು ಬಾರಿ ಹಾಗೂ ಶಾಲಾ ಮಕ್ಕಳಿಗೆ ಎರಡು ಬಾರಿ ಉಚಿತ ಆರೋಗ್ಯ ತಪಾಸಣೆ ಮಾಡಿ ಶ್ರವಣ ದೋಷವಿರುವವರಿಗೆ ಶ್ರವಣ ಸಾಧನ, ದೃಷ್ಠಿ ದೋಷವುಳ್ಳವರಿಗೆ ಕನ್ನಡಕ ಸೇರಿದಂತೆ ಹೆಚ್ಚಿನ ಶಸ್ತ್ರಚಿಕಿತ್ಸೆ ಅಗತ್ಯವಿರುವವರಿಗೆ ಉಚಿತ ಶಸ್ತ್ರಚಿಕಿತ್ಸೆಯನ್ನು ಮಾಡಿಸುವಂತಹ ಕಾರ್ಯ ಜಿಲ್ಲಾಡಳಿತ ದಿಂದ ಮಾಡಲಾಗುತ್ತಿದೆ. ಇಂತಹ ಮಹತ್ವ ಪೂರ್ಣ ಕಾರ್ಯಕ್ರಮಕ್ಕೆ ಸಹಕಾರ ನೀಡಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿರುವ ರೋಟರಿ ಸಂಸ್ಥೆ, ರಾಜ್ ಮಹಲ್ ವಿಲಾಸ್, ಮಾವಟೆ, ಸಂವಾದ್ ಪೌಂಡೇಷನ್, ಇಂಡಿಯಾ ಎನ್‌ಜಿಒ ಹೃದಯ ಪೂರ್ವಕ ಧನ್ಯವಾದಗಳನ್ನು ತಿಳಿಸಲು ಇಚ್ಚಿಸುತ್ತೇನೆ ಎಂದು ತಿಳಿಸಿದರು.
ಸಾಧನಗಳನ್ನು ಬಳಸಿ
ರಾಷ್ಟ್ರೀಯ ಬಾಲ ಸ್ವಾಸ್ಥ್ಯ (ಆರ್.ಬಿ.ಎಸ್.ಕೆ) ಕಾರ್ಯಕ್ರಮದಡಿ ಇಂದು ಅಳವಡಿಸಿರುವ ಶ್ರವಣ ದೋಷ ಸಾಧನಗಳನ್ನು 111 ಮಕ್ಕಳು ಸಹ ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಉಚಿತವಾಗಿ ನೀಡಿದ್ದಾರೆ ಎಂದು ನಿರ್ಲಕ್ಷ್ಯ ಮಾಡಬಾರದು. ಈ ಸಾಧನಗಳನ್ನು ಯಾವ ರೀತಿ ನಿರ್ವಹಿಸಬೇಕು? ಮಳೆಬರುವ ಸಂದರ್ಭದಲ್ಲಿ ಹಾಗೂ ಬೇಸಿಗೆ ಕಾಲದಲ್ಲಿ ಯಾವ ರೀತಿ ಬಳಕೆ ಮಾಡಬೇಕು ಎಂದು ತಜ್ಞ ವೈದ್ಯಯರು ತಿಳಿಸಿಕೊಟ್ಟಿದ್ದಾರೆ. ಜೊತೆಗೆ ಬಳಕೆಯ ಸೂಚನೆಗಳ ಬಗ್ಗೆ ಮಾಹಿತಿ ಇರುವ ಕಾರ್ಡ್ ಅನ್ನು ಪ್ರತಿಯೊಬ್ಬರಿಗೂ ನೀಡಲಾಗಿದೆ ಎಂದರು.
ಅದರಲ್ಲಿನ ಸೂಚನೆಗಳನ್ನು ತಪ್ಪದೆ ಪಾಲಿಸಬೇಕು ಈ ಸಂಬಂಧ ಯಾವುದೇ ಸಂಶಯ ಗಳಿದ್ದಲ್ಲಿ ವೈದ್ಯಾಧಿಕಾರಿಗಳನ್ನು ನೇರವಾಗಿ ಸಂಪರ್ಕಿಸಿ ಬಗೆಹರಿಸಿಕೊಳ್ಳಬಹುದು. ಬಳಕೆ ಹಾಗೂ ನಿರ್ವಹಣೆ ಬಗ್ಗೆ ಆರೋಗ್ಯ ಇಲಾಖೆಯ ಮುಂದಿನ ವಾರದಲ್ಲಿ ಒಂದು ದಿನ ಮತ್ತೊಮ್ಮೆ ತಿಳಿಸಿಕೊಡಲು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸದರಿ ಕಾರ್ಯಕ್ರಮ ದಲ್ಲಿ ತಾವೆಲ್ಲರೂ ಭಾಗವಹಿಸಬೇಕು. ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ತಮ್ಮ ಉಜ್ವಲ ಭವಿಷ್ಯವನ್ನು ಉತ್ತಮ ಕೊಳ್ಳುವಂತೆ ಸಚಿವರು ಆಶಿಸಿ ಶ್ರವಣದೋಷ ನಿವಾರಣಾ ಸಾಧನಗಳನ್ನು ಮಕ್ಕಳಿಗೆ ವಿತರಣೆ ಮಾಡಿದರು.
ಜಿಲ್ಲಾಧಿಕಾರಿ ಜಿ.ಪ್ರಭು ಅವರು ಮಾತನಾಡಿ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ (ಆರ್.ಬಿ.ಎಸ್.ಕೆ) ಕಾರ್ಯಕ್ರಮದಡಿ ಜಿಲ್ಲೆಯ 212000 ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ಮಾಡಿ ಅಗತ್ಯ ವಿರುವವರಿಗೆ ಶಸ್ತ್ರಚಿಕಿತ್ಸೆಗಳನ್ನು ಜಿಲ್ಲಾಡಳಿತ ಸಂಪೂರ್ಣವಾಗಿ ಉಚಿತವಾಗಿ ಮಾಡುವ ಜೊತೆಗೆ ಕನ್ನಡಕ ಹಾಗೂ ಶ್ರವಣ ದೋಷ ನಿವಾರಣಾ ಸಾಧನಗಳನ್ನು ವಿತರಣೆ ಮಾಡು ತ್ತಿದೆ. ಈ ಕಾರ್ಯ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪರಣಾಮಕಾರಿಯಾಗಿ ಅನುಷ್ಟಾನ ಆಗಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ.ನವೀನ್ ಭಟ್, ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕುಮಾರ್, ಖoಣಚಿಡಿಥಿ ರಾಜ್ ಮಹಲ್ ವಿಲಾಸ್ ಸಂಸ್ಥೆಯ ಪ್ರತಿನಿಧಿ ರಾಜಾರಾಮ್ ಕೃಷ್ಣಮೂರ್ತಿ, ಮೋವಟೆ ಸಂಸ್ಥೆಯ ದಿವ್ಯ ಅಗರ್ವಾಲ್, ಸಂವಾದ್ ಫೌಂಡೇಷನ್‌ನ ರಾಧಿಕ ಪೂವಯ್ಯ, ಇಂಡಿಯಾ ಎನ್‌ಜಿಒ ಸಂಸ್ಥೆಯ ಕೃಷ್ಣಮೂರ್ತಿ, ಆರ್.ಸಿ.ಹೆಚ್.ಓ ಡಾ. ಸಂತೋಷ್ ಬಾಬು, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಚಂದ್ರಶೇಖರರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೆಂಕಟೇಶ್ ರೆಡ್ಡಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಮೇಶ್, ವಿವಿಧ ಇಲಾಖೆಗಳ ಅಧಿಕಾರಿಗಳು, ಫಲಾನುಭವಿ ಗಳು, ಸಾರ್ವಜನಿಕರು ಇದ್ದರು.