ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

UGCET: ಏ.16ರಿಂದ ಯುಜಿ ಸಿ.ಇ.ಟಿ ಪರೀಕ್ಷೆಗೆ ಜಿಲ್ಲಾಡಳಿತ ಸಕಲ ಸಿದ್ದತೆ: ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ

ಏ.16 ಮತ್ತು ಏ.17ರಂದು ನಡೆಯಲಿರುವ ಯು ಜಿ ಸಿ ಇ ಟಿ ಪರೀಕ್ಷೆಯನ್ನು ಜಿಲ್ಲೆಯಲ್ಲಿ ಯಾವುದೇ ಲೋಪಗಳಿಲ್ಲದೆ ಸುಗಮವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು. ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ನಡೆದ “ಯುಜಿ ಸಿಇಟಿ” ಪರೀಕ್ಷೆಗಳ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ದರು.

ಜಿಲ್ಲೆಯಲ್ಲಿ 15 ಪರೀಕ್ಷಾ ಕೇಂದ್ರಗಳು : 7302 ವಿದ್ಯಾರ್ಥಿಗಳು ನೋಂದಣಿ

ಏಪ್ರಿಲ್ ೧೬  ಮತ್ತು ಏಪ್ರಿಲ್ ೧೭ ರಂದು ನಡೆಯಲಿರುವ ಯು ಜಿ ಸಿ ಇ ಟಿ ಪರೀಕ್ಷೆಯನ್ನು ಜಿಲ್ಲೆಯಲ್ಲಿ ಯಾವುದೇ ಲೋಪಗಳಿಲ್ಲದೆ ಸುಗಮವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.

Profile Ashok Nayak Apr 9, 2025 10:36 PM

ಚಿಕ್ಕಬಳ್ಳಾಪುರ : ಏಪ್ರಿಲ್ 16 ಮತ್ತು ಏಪ್ರಿಲ್ 17ರಂದು ನಡೆಯಲಿರುವ ಯು ಜಿ ಸಿ ಇ ಟಿ ಪರೀಕ್ಷೆಯನ್ನು ಜಿಲ್ಲೆಯಲ್ಲಿ ಯಾವುದೇ ಲೋಪಗಳಿಲ್ಲದೆ ಸುಗಮವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು. ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ನಡೆದ “ಯುಜಿ ಸಿಇಟಿ” ಪರೀಕ್ಷೆಗಳ ಪೂರ್ವ ಸಿದ್ದತಾ  ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಒಟ್ಟು 15 ಪರೀಕ್ಷಾ ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆಗಳು ನಡೆಯಲಿದ್ದು 7302 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದಾರೆ.

ಪರೀಕ್ಷಾ ಕೇಂದ್ರಗಳಲ್ಲಿ ಪಾರದರ್ಶಕತೆ ಕಾಪಾಡುವ ದೃಷ್ಟಿಯಿಂದ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿನ ಜೆರಾಕ್ಸ್ ಸೆಂಟರ್ ಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ. ವಿದ್ಯಾರ್ಥಿಗಳು ಯಾವುದೇ ವದಂತಿಗಳಿಗೆ ಕಿವಿಗೊಡದೆ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು ಎಂದರು.

ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ

ಮೂಲಭೂತ ಸೌಕರ್ಯ

ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲಾ ಮೂಲಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದ್ದು, ವಿದ್ಯುತ್ ವ್ಯತ್ಯಯವಾಗದಂತೆ ಎಚ್ಚರವಹಿಸಲು ಹಾಗೂ ವಿದ್ಯಾರ್ಥಿಗಳ ಓದಿಗೆ ತೊಂದರೆಯಾಗದAತೆ ಬೆಸ್ಕಾಂಗೆ ಸೂಚಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತ ಪೊಲೀಸ್ ಭದ್ರತೆ ಒದಗಿಸಲಾಗುವುದು. ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆಯಲ್ಲಿ ಭಾಗವಹಿಸಬೇಕು ಎಂದು ಪರೀಕ್ಷೆಯನ್ನು ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಶುಭಾಷಯಗಳನ್ನು ಜಿಲ್ಲಾಧಿಕಾರಿಗಳು ಕೋರಿದರು.

ವೇಳಾ ಪಟ್ಟಿ

ದಿನಾಂಕ:೧೬-೦೪-೨೦೨೫ ರಂದು ಬೆಳಗ್ಗೆ ೧೦:೩೦ ರಿಂದ ೧೧:೫೦ ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ ೨:೩೦ ರಿಂದ ೩:೫೦ ರ ವರೆಗೆ ರಸಾಯನ ಶಾಸ್ತ್ರ ಹಾಗೂ ದಿನಾಂಕ:೧೭-೦೪-೨೦೨೫ ರಂದು ಬೆಳಗ್ಗೆ ೧೦:೩೦ ರಿಂದ ೧೧:೫೦ ರವರೆಗೆ ಗಣಿತಶಾಸ್ತ್ರ, ಮಧ್ಯಾಹ್ನ ೨:೩೦ ರಿಂದ ೩:೫೦ ರ ವರೆಗೆ ಜೀವಶಾಸ್ತ್ರ ವಿಷಯಗಳು ಎರಡು ಅವಧಿಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಕಡ್ಡಾಯವಾಗಿರುವುದರಿಂದ ಪ್ರತಿ ಕೊಠಡಿಯಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.

15 ಪರೀಕ್ಷಾ ಕೇಂದ್ರಗಳ ವಿವರ

ಜಿಲ್ಲೆಯಲ್ಲಿ ಒಟ್ಟು ೧೫ ಪರೀಕ್ಷಾ ಕೇಂದ್ರಗಳ ಪೈಕಿ  ನಾಗಾರ್ಜುನ ಪದವಿ ಪೂರ್ವ ಕಾಲೇಜು, ಬ್ಲಾಕ್ - ೧ ಮತ್ತು ಬ್ಲಾಕ್-೨ಬೆಂಗಳೂರು ಗ್ರಾಮಾಂತರ,ಎಸ್.ಜೆ.ಸಿ ತಾಂತ್ರಿಕ ಮಹಾ ವಿದ್ಯಾಲಯ ಬ್ಲಾಕ್-೧ ಮತ್ತು ಬ್ಲಾಕ್-೨ ಬಿ.ಬಿ ರಸ್ತೆ, ಚಿಕ್ಕಬಳ್ಳಾಪುರ, ಬಿ.ಜಿ.ಎಸ್‌ವರ್ಲ್ಡ್ ಸ್ಕೂಲ್, ಜ್ಞಾನಗಂಗಾಕ್ಯಾAಪಸ್, ಚಿಕ್ಕಬಳ್ಳಾಪುರ, ಎಸ್.ಬಿ.ಜಿ.ಎನ್.ಎಸ್, ಗ್ರಾಮಾಂತರ ಪದವಿ ಪೂರ್ವ ಕಾಲೇಜು ಅಗಲಗುರ್ಕಿ, ಚಿಕ್ಕಬಳ್ಳಾಪುರ, ಬಿಜಿಎಸ್ ಸೈನ್ಸ್ ಅಕಾಡಮಿ, ಪದವಿ ಕಾಲೇಜು, ಅಗಲಗುರ್ಕಿ, ಚಿಕ್ಕಬಳ್ಳಾಪುರ,  ಬಿ.ಜಿ.ಎಸ್ ಆಂಗ್ಲ ಪ್ರೌಢ ಶಾಲೆ ಅಗಲಗುರ್ಕಿ, ಚಿಕ್ಕಬಳ್ಳಾಪುರ, ಶ್ರೀ ಕೃಷ್ಣ ರುಕ್ಕಿಣಿ ಪದವಿ ಪೂರ್ವ ಕಾಲೇಜು, ನಂ ೪೦ಸಿ, ಇಂಡಸ್ಟ್ರಿಯಲ್ ಏರಿಯಾ, ಬಿ.ಬಿ ರೋಡ್, ಚಿಕ್ಕಬಳ್ಳಾಪುರ,  ಶಾಂತಿನಿಕೇತನ್ ಪದವಿ ಪೂರ್ವ ಕಾಲೇಜು, ಎಲ್.ಐ.ಸಿ ಆಫೀಸ್ ಎದುರು, ಭಾರತಿನಗರ, ಚಿಕ್ಕಬಳ್ಳಾಪುರ, ಸರ್ಕಾರಿ ಪದವಿ ಪೂರ್ವ ಕಾಲೇಜು, ಬಿ. ಬಿರಸ್ತೆ, ಚಿಕ್ಕಬಳ್ಳಾಪುರ,ನ್ಯೂಟನ್ ಇಂಟಿಗ್ರೇಟೆಡ್ ಪದವಿ ಪೂರ್ವ ಕಾಲೇಜು, ಸಾಧುಮಠ ರಸ್ತೆ, ಚಿಕ್ಕಬಳ್ಳಾಪುರ,ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎಂ.ಜಿ ರಸ್ತೆ, ಚಿಕ್ಕಬಳ್ಳಾಪುರ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಶಿಡ್ಲಘಟ್ಟ ರಸ್ತೆ, ಚಿಕ್ಕಬಳ್ಳಾಪುರ, ಬೆಸ್ಟ್ ಪದವಿ ಪೂರ್ವ ಕಾಲೇಜು, ಶಿಡ್ಲಘಟ್ಟ ರಸ್ತೆ, ಚಿಕ್ಕಬಳ್ಳಾಪುರ.

ಪರೀಕ್ಷಾ ಗೌಪ್ಯ ವಸ್ತುಗಳನ್ನು ಜಿಲ್ಲಾ ಖಜಾನೆಯ ಅಭಿರಕ್ಷೆಯಲ್ಲಿಡಲು ತ್ರಿ ಸದಸ್ಯ ಸಮಿತಿಯನ್ನು ರಚಿಸಲಾಗಿದೆ ಪರೀಕ್ಷಾ ಗೌಪ್ಯ ವಸ್ತುಗಳು ಈ ಜಿಲ್ಲೆಗೆ ಬರುವ ದಿನದಂದು ಅವುಗಳನ್ನು ಪಡೆದು ಜಿಲ್ಲಾ ಖಜಾನೆಯ ಅಭಿರಕ್ಷೆಯಲ್ಲಿ ಇಡುವುದು.ಪರೀಕ್ಷಾ ದಿನಾಂಕ ದಂದು ನಿಗಧಿತ ಸಮಯಕ್ಕೆ ಅವುಗಳನ್ನು ಸಂಬAಧಿಸಿದ ಪರೀಕ್ಷಾ ಕೇಂದ್ರಗಳ ಮಾರ್ಗಾಧಿಕಾರಿಗಳಿಗೆ  ವಿತರಣೆ ಮಾಡುವುದು. ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳ ರಹಸ್ಯ ಬಂಡಲ್ ಗಳನ್ನು ಜಿಲ್ಲಾ ಖಜಾನೆಗೆ ಸುವ್ಯವಸ್ಥಿತವಾಗಿ ತಲುಪಿಸುವಂತೆ ಸೂಚಿಸಲಾಗಿದೆ.

ಪರೀಕ್ಷಾರ್ಥಿಗಳಿಗೆ ಅಸನ ವ್ಯವಸ್ಥೆ, ಗಾಳಿ, ಬೆಳಕು, ಕುಡಿಯುವ ನೀರು, ಶೌಚಾಲಯ ಇನ್ನಿತರೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.ಪ್ರತಿ ಪರೀಕ್ಷಾ ಕೇಂದ್ರಕ್ಕೂ ಶಾಂತಿ ಮತ್ತು ಸುವ್ಯವಸ್ಥೆ ಪಾಲನೆಗೆ ಪೊಲೀಸ್ ಸಿಬ್ಬಂದಿ ನೇಮಿಸಲಾಗು ವುದು ಮತ್ತು ಎಲ್ಲಾ ಪರೀಕ್ಷಾ ಕೊಠಡಿಗಳಲ್ಲಿ ಗಡಿಯಾರ ಅಳವಡಿಸಲು ಸೂಚನೆ ನೀಡಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ ೨೦೦ ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಸಾರ್ವಜನಿಕ ನಿಷೇಧಿತ ಪ್ರದೇಶವೆಂದು ಘೋಷಿಸಲಾಗುವುದು ಮತ್ತು ಎಲ್ಲಾ ಮಾರ್ಗಾಧಿಕಾರಿಗಳಿಗೆ ಪೋಲೀಸ್ ಬೆಂಗಾವಲನ್ನು ಒದಗಿಸಲಾಗುವುದು. ಅಭ್ಯರ್ಥಿಗಳನ್ನು ಶೋಧನೆ ಮಾಡಲು ಪರೀಕ್ಷಾ ಕೇಂದ್ರಗ ಳಿಗೆ ಅಗತ್ಯವಿರುವ ಪುರುಷ/ಮಹಿಳಾ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದರು.

ವಿಜ್ಞಾನ ವಿಷಯದ ಉಪನ್ಯಾಸಕರನ್ನು ಕೊಠಡಿ ಮೇಲ್ವಿಚಾರಕರನ್ನಾಗಿ ನೇಮಿಸಿಕೊಳ್ಳದಂತೆ ಸೂಚಿಸಿದೆ.ಪರೀಕ್ಷೆ ದಿನದಂದು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಬಸ್ ಸೌಲಭ್ಯ ವನ್ನು ಒದಗಿಸಬೇಕು ಎಂದು ಸಾರಿಗೆ ಇಲಾಖೆಗೆ ತಿಳಿಸಿದರು.

ಪರೀಕ್ಷೆಗೆ ಹಾಜರಾಗುವ ಮತ್ತು ಗೈರು ಹಾಜರಾಗುವ ಅಭ್ಯರ್ಥಿಗಳ ವಿವರ ಗಳನ್ನು ಆನ್ ಲೈನ್ ಮೂಲಕ ದಾಖಲಿಸಲು ಕ್ರಮ ವಹಿಸಬೇಕು. ಆಸನ ವ್ಯವಸ್ಥೆಯ ಬಗ್ಗೆ ಮಾಹಿತಿಯನ್ನು ಕಾಲೇಜು ಆವರಣದಲ್ಲಿ ೩ ರಿಂದ ೪ ಕಡೆ ಸೂಚನಾ ಫಲಕದಲ್ಲಿ ಪ್ರಕಟಿಸುವ ಮೂಲಕ ವಿದ್ಯಾರ್ಥಿಗಳು ಗುಂಪು ಸೇರುವುದನ್ನು ತಡೆಗಟ್ಟಲು ಕ್ರಮ ವಹಿಸುವಂತೆ ಸೂಚಿಸಿದರು. ಮೊಬೈಲ್, ಸ್ಮಾರ್ಟ್ ವಾಚ್ ಇನ್ನಿತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಪರೀಕ್ಷಾ ಕೇಂದ್ರದೊಳಗೆ ತರುವುದನ್ನು ನಿಷೇಧಿಸುಲಾಗಿದೆ. ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯ ಒಳಗೆ ಯಾವುದೇ ರೀತಿಯ ಕೈಗಡಿಯಾರ ವನ್ನು ಕಟ್ಟಿಕೊಂಡು/ತೆಗೆದುಕೊAಡು ಹೋಗುವಂತಿಲ್ಲ. ಆದ್ದರಿಂದ ಬೆಲ್ ವೇಳಾಪಟ್ಟಿಯಂತೆ ನಿಗದಿತ ಸಮಯಕ್ಕೆ ಬೆಲ್ ಬಾರಿಸುವ ಬಗ್ಗೆ ಮತ್ತು ಪ್ರತಿ ಕೊರಡಿಗಳಲ್ಲಿ ಗೋಡೆ ಗಡಿಯಾರಗಳು ಇರುವಂತೆ ಕ್ರಮವಹಿಸಲು ಸೂಚಿಸಲಾಗಿದೆ ಪರೀಕ್ಷೆಯ ಪಾವಿತ್ರತೆಯನ್ನು ಕಾಪಾಡಿ, ಪರೀಕ್ಷೆ ಯನ್ನು ಸುವ್ಯವಸ್ಥಿತವಾಗಿ ನಡೆಯಲು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮರಿಸ್ವಾಮಿ ಹಾಗೂ ವಿವಿಧ ಇಲಾಖೆಗಳ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿ ಗಳು ಉಪಸ್ಥಿತರಿದ್ದರು.