ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkanayakanahalli News: ವಿದ್ಯುತ್ ಕಂಬದಿಂದ ಬಿದ್ದು ಲೈನ್‌ಮನ್ ಸಾವು

Chikkanayakanahalli News: ಚಿಕ್ಕನಾಯಕನಹಳ್ಳಿ ತಾಲೂಕಿನ ಅಜ್ಜಿಗುಡ್ಡೆ ಸಮೀಪ ಶನಿವಾರ ಮಧ್ಯಾಹ್ನ ಘಟನೆ ನಡೆದಿದೆ. ವಿದ್ಯುತ್ ತಂತಿ ಸರಿಪಡಿಸಲು ಕಂಬವನ್ನೇರಿದ್ದಾಗ ಆಕಸ್ಮಿಕವಾಗಿ ಕ್ಲಾಂಪ್ ಮುರಿದ ಪರಿಣಾಮ ಕಂಬದ ಮೇಲಿಂದ ಬಿದ್ದು ಲೈನ್‌ಮನ್ ಮೃತಪಟ್ಟಿದ್ದಾರೆ. ಈ ಸಂಬಂಧ ಚಿಕ್ಕನಾಯಕನಹಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ಕಂಬದಿಂದ ಬಿದ್ದು ಲೈನ್‌ಮನ್ ಸಾವು

Prabhakara R Prabhakara R Aug 16, 2025 9:50 PM

ಚಿಕ್ಕನಾಯಕನಹಳ್ಳಿ: ವಿದ್ಯುತ್ ತಂತಿ ಸರಿಪಡಿಸಲು ಕಂಬವನ್ನೇರಿದ್ದಾಗ ಆಕಸ್ಮಿಕವಾಗಿ ಕ್ಲಾಂಪ್ ಮುರಿದ ಪರಿಣಾಮ ಕಂಬದಿಂದ ಬಿದ್ದು ಲೈನ್‌ಮನ್ ಮೃತಪಟ್ಟಿರುವ ಘಟನೆ ತಾಲೂಕಿನ ಅಜ್ಜಿಗುಡ್ಡೆ ಸಮೀಪ ಶನಿವಾರ ಮಧ್ಯಾಹ್ನ ನಡೆದಿದೆ. ಬಾಗಲಕೋಟೆ ಜಿಲ್ಲೆ ಗಜೇಂದ್ರಗಡದ ಮುತ್ತು ಉಳ್ಳಪ್ಪ (28) ಮೃತಪಟ್ಟವರು.

ತಿಮ್ಮನಹಳ್ಳಿ ಉಪ ವಿಭಾಗದಲ್ಲಿ 8 ವರ್ಷಗಳಿಂದ ಇವರು ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ಪತ್ನಿ, ಚಿಕ್ಕವಯಸ್ಸಿನ ಮಗಳು ಇದ್ದಾರೆ. ವಿದ್ಯುತ್ ಲೇನ್ ಸಮಸ್ಯೆಯಾಗಿದೆ ಎಂದು ಸ್ಥಳಿಯರು ಶಾಖಾಧಿಕಾರಿಗೆ ವಿಷಯ ತಿಳಿಸಿದ್ದರು. ಈ ಸಂಬಂಧ ಕಾತ್ರಿಕೆಹಾಲ್ ವ್ಯಾಪ್ತಿಯ ಲೈನ್‌ಮನ್ ಮುತ್ತು ಅವರಿಗೆ ವಿದ್ಯುತ್ ಲೇನ್ ದುರಸ್ತಿಗೆ ಸೂಚನೆ ನೀಡಲಾಗಿತ್ತು. ಅದರಂತೆ ಮುತ್ತು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ವಿದ್ಯುತ್‌ ತಂತಿ ಸರಿಪಡಿಸುವ ವೇಳೆ ಆಕಸ್ಮಿಕವಾಗಿ ಕ್ಲಾಂಪ್ ಮುರಿದು ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಸ್ಥಳಿಯರು ತಿಳಿಸಿದ್ದಾರೆ.

ತಿಮ್ಮನಹಳ್ಳಿ ಶಾಖಾಧಿಕಾರಿ ರಘು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಮುತ್ತು ಉಳ್ಳಪ್ಪ ದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಬೆಸ್ಕಾಂ ಇಇ ಸೋಮಶೇಖರಗೌಡ, ಎಇಇ ಗವಿರಂಗಪ್ಪ, ಶೆಟ್ಟಿಕೆರೆ ಎಸ್‌ಓ ಇರ್ಫಾನ್, ಸಹಾಯಕ ಗೂಳೂರು ನಾಗರಾಜ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ಸಂಬಂಧ ಪಟ್ಟಣದ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಥಿನ್ನರ್‌ನಿಂದ ಮನೆಗೆ ಹೊತ್ತಿಕೊಂಡ ಬೆಂಕಿ, ಬಾಲಕ ಸಾವು, ತಂದೆಗೆ ತೀವ್ರ ಗಾಯ

ಧಾರವಾಡ: ಧಾರವಾಡದಲ್ಲಿ (Dharawad News) ಘೋರವಾದ ದುರಂತವೊಂದು ಸಂಭವಿಸಿದೆ. ಪೇಂಟ್‌ ತೆಳು ಮಾಡಲು ಬಳಸುವ ಥಿನ್ನರ್ (Thinner) ಬಾಟಲಿಯಿಂದ ಮನೆಯಲ್ಲಿ ಬೆಂಕಿ (Fire accident) ಹೊತ್ತಿಕೊಂಡಿದ್ದು, ಈ ಘಟನೆಯಲ್ಲಿ ನಾಲ್ಕು ವರ್ಷದ ಬಾಲಕ ಸಾವನಪ್ಪಿದ್ದಾನೆ. ಮಗನನ್ನು ರಕ್ಷಿಸಲು ಬಂದ ತಂದೆಗೆ ಗಂಭೀರವಾದ ಗಾಯಗಳಾಗಿವೆ. ಧಾರವಾಡದ ಸಂತೋಷ್ ನಗರದಲ್ಲಿ ನಿನ್ನೆ ಈ ಘಟನೆ ಸಂಭವಿಸಿದೆ.

ಇದನ್ನೂ ಓದಿ: Self Harming: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ 13 ವರ್ಷದ ಬಾಲಕಿ; ಕಾರಣ ನಿಗೂಢ

ನಾಲ್ಕು ವರ್ಷದ ಬಾಲಕ ಅಗಸ್ತ್ಯ ಸಾವನಪ್ಪಿದ್ದು ಆತನ ತಂದೆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಾಲಕನ ಅಜ್ಜಿ ಒಲೆ ಹೊತ್ತಿಸಲು ಥಿನ್ನರ್ ಬಳಸಿದ್ದಾರೆ. ಈ ವೇಳೆ ದಿಡೀರನೆ ಬೆಂಕಿ ಹೊತ್ತಿಕೊಂಡು ಬೆಂಕಿ ಇಡೀ ಮನೆ ಆವರಿಸಿದೆ. ಬೆಂಕಿಯಲ್ಲಿ ಸಿಲುಕಿ ಬಾಲಕ ಅಗಸ್ತ್ಯ ಪರದಾಡುತ್ತಿದ್ದಾಗ ರಕ್ಷಣೆಗೆ ಬಂದ ತಂದೆ ಚಂದ್ರಕಾಂತ ಅವರಿಗೂ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಇಬ್ಬರನ್ನೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಬಾಲಕ ಸಾವನಪ್ಪಿದ್ದಾನೆ. ಸದ್ಯ ತಂದೆ ಚಂದ್ರಕಾಂತ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.