ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chikkaballapur News: ಪೋಶೆಟ್ಟಿಹಳ್ಳಿಯಲ್ಲಿ ಶಾಲಾ ಪ್ರಾರಂಭೋತ್ಸವಕ್ಕೆ ಜಿಲ್ಲಾಧಿಕಾರಿ ಜಿ.ಪ್ರಭು ಅವರಿಂದ ಚಾಲನೆ

ಜಿಲ್ಲೆಯಲ್ಲಿನ 1850 ಶಾಲೆಗಳಿಂದ 1.60 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇವರೆಲ್ಲ ರಿಗೂ ಗುಣಮಟ್ಟದ ಶಿಕ್ಷಣ ಸಿಗುತ್ತಿರುವ ಬಗ್ಗೆ ಖಾತ್ರಿ ಮಾಡಿಕೊಂಡರೆ ಮಾತ್ರ ಶಿಕ್ಷಕರ ಜವಾ ಬ್ದಾರಿ ಈಡೇರಿದೆ ಎಂದರ್ಥ. ಗುಣಮಟ್ಟದ ಶಿಕ್ಷಣ ದೊರಕದ ಹೊರತು ಮಕ್ಕಳು ಸಶಕ್ತರಾಗುವು ದಿಲ್ಲ

ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸೂಕ್ತ ಮೂಲಸೌಕರ್ಯಗಳನ್ನು ಒದಗಿಸುವುದು ಹಾಗೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಅವರು ತಿಳಿಸಿದರು.

ಚಿಕ್ಕಬಳ್ಳಾಪುರ : ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸೂಕ್ತ ಮೂಲಸೌಕರ್ಯ ಗಳನ್ನು ಒದಗಿಸುವುದು ಹಾಗೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.

ತಾಲ್ಲೂಕಿನ ಪೋಶೆಟ್ಟಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಆಯೋ ಜಿಸಿದ್ದ "2026-27ನೇ ಸಾಲಿನ ಶಾಲಾ ಪ್ರಾರಂಭೋತ್ಸವ" ಕಾರ್ಯಕ್ರಮವನ್ನು  ಮಕ್ಕಳಿಗೆ ಸಮವಸ್ತ್ರಮತ್ತು ಪುಸ್ತಕಗಳನ್ನು ವಿತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

1850 ಶಾಲೆಗಳು!!
ಜಿಲ್ಲೆಯಲ್ಲಿನ 1850 ಶಾಲೆಗಳಿಂದ 1.60 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇವರೆಲ್ಲರಿಗೂ ಗುಣಮಟ್ಟದ ಶಿಕ್ಷಣ ಸಿಗುತ್ತಿರುವ ಬಗ್ಗೆ ಖಾತ್ರಿ ಮಾಡಿಕೊಂಡರೆ ಮಾತ್ರ ಶಿಕ್ಷಕರ ಜವಾಬ್ದಾರಿ ಈಡೇರಿದೆ ಎಂದರ್ಥ. ಗುಣಮಟ್ಟದ ಶಿಕ್ಷಣ ದೊರಕದ ಹೊರತು ಮಕ್ಕಳು ಸಶಕ್ತರಾಗುವುದಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: Chikkaballapur News: 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ-2026 ; ಕರಪತ್ರ ಬಿಡುಗಡೆ

ದುರಸ್ತಿಗೆ ಆದ್ಯತೆ !!
ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಗಳ ಕೊಠಡಿಗಳನ್ನು ದುರಸ್ತಿ ಮಾಡಿಸಲು, ಹೊಸ ಕೊಠಡಿ ಗಳ ನಿರ್ಮಾಣ ಮಾಡಲು  ಹಾಗೂ ವಾಸಯೋಗ್ಯಕ್ಕೆ ಅಪಾಯಕಾರಿಯಾಗಿರುವ ಹಳೆ ಕೊಠಡಿಗಳನ್ನು ತೆರವು ಮಾಡಲು ಜಿಲ್ಲಾಡಳಿತ ತುರ್ತು ಕ್ರಮ ತೆಗೆದುಕೊಳ್ಳುತ್ತಿದೆ ಎಂದರು.

ಬಲಸಂವರ್ಧನೆಗಲಿ!!
ಸರ್ಕಾರಿ ಶಾಲೆಗಳಲ್ಲಿ ಬಲಸಂವರ್ಧನೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲು ಜಿಲ್ಲೆಯ ಶಾಲೆಗಳ ಎಲ್ಲಾ ಮುಖ್ಯೋಪಾಧ್ಯಾಯರನ್ನು ಕರೆಸಿ ಒಂದು ದಿನದ ಕಾರ್ಯಗಾರವನ್ನು ಹಮ್ಮಿಕೊಂಡು ಮಕ್ಕಳ ಕಲಿಕಾ ಪ್ರಕ್ರಿಯೆಯನ್ನು ಕರಾರುವಕ್ಕಾಗಿ ಚುರುಕುಗೊಳಿಸಲು ವೈಜ್ಞಾನಿಕ ಕ್ರಮಗಳನ್ನು ತಿಳಿಸಿಕೊಡಲಾಗುತ್ತದೆ. ಪ್ರತಿ ಶಿಕ್ಷಕರ ಬೋಧನಾ ಗುಣಮಟ್ಟ ಹಾಗೂ ಕಾರ್ಯಕ್ಷಮತೆಯನ್ನು ಖಾತ್ರಿ ಮಾಡಿಕೊಳ್ಳಲು ಸಿ.ಆರ್.ಪಿ ಗಳು ಹಾಗೂ ಮೇಲುಸ್ತುವಾರಿ ಅಧಿಕಾರಿಗಳು ಶಿಕ್ಷಕರು ತೆಗೆದುಕೊಳ್ಳುವ ತರಗತಿಗಳಲ್ಲಿ ಕೂತು ಯಾದೃಚ್ಚಿತವಾಗಿ ಪರೀಕ್ಷಿಸಬೇಕು ಎಂದು ಸಲಹೆ ನೀಡಿದರು.

ಬುನಾದಿ ಪರಿಣಾಮಕಾರಿಯಾಗಿರಲಿ!!
ಶಿಕ್ಷಕರು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಬುನಾದಿ ತರಬೇತಿ ನೀಡಬೇಕು. ಪಠ್ಯದಲ್ಲಿ ಓದಿದ್ದನ್ನು ತಮ್ಮ ಸುತ್ತಮುತ್ತಲಿನ ಹತ್ತಿರದ ಪರಿಸರಕ್ಕೆ ಹಾಗೂ ಸಾಮಾಜಿಕ ವ್ಯವಸ್ಥೆಯ ಸಂಸ್ಥೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಪ್ರಾಯೋಗಿಕ ಜ್ಞಾನವನ್ನು ತಿಳಿಸಬೇಕು. ಪರೀಕ್ಷಾ ಸಮಯದಲ್ಲಿ ಮಾತ್ರ ವಿದ್ಯಾರ್ಥಿ ಗಳನ್ನು ಅಭ್ಯಾಸ ಮಾಡಲು ಒತ್ತಡ ಹೇರುವುದರಿಂದ ಪ್ರಯೋಜವಿಲ್ಲ ಎಂದರು.
ಯೋಜಿತ ರೀತಿಯಲ್ಲಿರಲಿ!!
ಶಾಲೆಯ ಆರಂಭದಿಂದಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಯೋಜಿತ ರೀತಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಮಕ್ಕಳ ಮನಸ್ಥಿತಿಯನ್ನು ಸೆಳೆದು ಆಕರ್ಷಕವಾಗಿ ಪಾಠ ಪ್ರವಚನ ಮಾಡಬೇಕು,ಈ ರೀತಿಯ ಕ್ರಮಗಳು ಜಿಲ್ಲೆಯಲ್ಲಿ ಇನ್ನೂ ಮುಂದೆ ಆಗಲೇಬೇಕು. ಈ ವರ್ಷದ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಉತ್ತಮ ಸ್ಥಾನ ಜಿಲ್ಲೆಗೆ ಲಭಿಸುವಂತೆ ಆಗಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಶಿಕ್ಷಕರಿಗೆ ಸೂಚನೆಗಳನ್ನು ನೀಡಿದರು.
ಪಾಠದ ಕಡೆ ಗಮನವಿರಲಿ!!!
ಶಿಕ್ಷಕರು ಹೇಳುವ ಪಾಠ ಪ್ರವಚನಗಳನ್ನು ವಿದ್ಯಾರ್ಥಿಗಳು ಚಾಚುತಪ್ಪದೆ ಕಲಿಯಬೇಕು. ಆಟ ಆಡುವಾಗ ಆಟ, ಪಾಠ ಕಲಿಯುವಾಗ ಪಾಠದ ಕಡೆ ಪೂರ್ಣ ಗಮನ ಇರಬೇಕು. ತರಗತಿಗಳಲ್ಲಿ ಸಂಪೂರ್ಣವಾಗಿ ಗಮನ ಹರಿಸಬೇಕು. ಆಗ ಕಲಿಕೆ ಸುಲಭವಾಗಲಿದೆ ಎಂದು ಜಿಲ್ಲಾಧಿಕಾರಿಗಳು  ಕಿವಿ ಮಾತು ಹೇಳುವ ಜೊತೆಗೆ ವಿದ್ಯಾರ್ಥಿಗಳಿಗೆ ಹೂಗುಚ್ಚ ನೀಡುವ ಮೂಲಕ ಶಾಲಾ ಪ್ರವೇಶಕ್ಕೆ ಮಕ್ಕಳನ್ನು ಸ್ವಾಗತಿಸಿ ಪ್ರೇರೇಪಿಸಿದರು.
ಆರೋಗ್ಯ ತಪಾಸಣೆಗೆ ಒತ್ತು!
ಆರೋಗ್ಯ ಇಲಾಖೆಯ ಜತೆ ಸಮನ್ವಯ ಸಾಧಿಸಿ ಜಿಲ್ಲೆಯ ಎಲ್ಲಾ ಶಾಲೆಗಳ ಮಕ್ಕಳನ್ನು ಸಮಗ್ರ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು.ಐರನ್ ಮತ್ತು ವಿಟಮಿನ್  ಮಾತ್ರೆಗಳನ್ನು ನೀಡಬೇಕು. ಕಿವಿ ಕಣ್ಣು  ತೊಂದರೆ ಇದ್ದು ಅಗತ್ಯವಿರುವವರಿಗೆ ಶಸ್ತç ಚಿಕಿತ್ಸೆಗಳನ್ನು ಸಂಪೂರ್ಣವಾಗಿ ಉಚಿತವಾಗಿ ಮಾಡಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮಾಹಿತಿ ಗೌಪ್ಯವಾಗಿರಬೇಕು!!
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್ ಮಾತನಾಡಿ, ಶಾಲೆಗೆ ಹಾಜರಾಗದ ವಿದ್ಯಾರ್ಥಿಗಳ ಬಗ್ಗೆ ಅವರ ಸಹಪಾಠಿಗಳಿಗೆ ಮಾತ್ರ ತಿಳಿದಿರುತ್ತದೆ. ಯಾವ ಕಾರಣಕ್ಕೆ ನನ್ನ ಸ್ನೇಹಿತ/ ಸ್ನೇಹಿತೆ ಶಾಲೆಗೆ ಬರುತ್ತಿಲ್ಲ ಎಂಬುದನ್ನು ತಮ್ಮ ಶಾಲೆಯ ಶಿಕ್ಷಕರಿಗೆ ಗೌಪ್ಯವಾಗಿ ಮಾಹಿತಿ ನೀಡಬೇಕು. ಶಿಕ್ಷಕರು ಸೂಕ್ತ ಕ್ರಮವಹಿಸಿ ಅಂತಹವರನ್ನು ಶಾಲೆಗೆ ಕರೆತರಲು ಅಗತ್ಯ ಕ್ರಮವಹಿಸುತ್ತಾರೆ, ಮಾಹಿತಿ ಕೊಟ್ಟವರ ವಿವರವನ್ನು ಗೌಪ್ಯವಾಗಿಡಲಿದ್ದಾರೆ. ಮಕ್ಕಳು ಓದಿನ ಜೊತೆಗೆ ಚೆಸ್, ಕೇರಂ, ಪುಟ್ ಬಾಲ್, ಕ್ರಿಕೆಟ್ ಸೇರಿದಂತೆ ಇನ್ನಿತರ ಆಟೋಟಗಳಲ್ಲಿ, ಕ್ರೀಡೆಗಳಲ್ಲಿ, ಸಾಂಸ್ಕೃತಿಕ ಚಟುವಟಿಕೆ ಗಳಲ್ಲಿ ತೊಡಗಿಸಿಕೊಂಡು ತಮ್ಮ ಪ್ರತಿಭೆಗಳನ್ನು ತೋರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವಿ.ರಮೇಶ್, ತಹಸೀಲ್ದಾರ್ ವಿ.ರಶ್ಮಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ, ಡಯಟ್ ಪ್ರಾಂಶುಪಾಲ ವೆಂಕಟೇಶಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯ, ಗ್ರಾಮ ಪಂಚಾಯಿತಿ ಅಭಿವೃಧ್ಧಿ ಅಧಿಕಾರಿ ಅಶ್ವತ್ಥನಾರಾಯಣ, ಮುಖ್ಯ ಶಿಕ್ಷಕರಾದ ಬಿ.ವಿ. ನಾಗವೇಣಿ, ಗೋವಿಂದರಾಜು, ಗ್ರಾಮ ಪಂಚಾಯ್ತಿ ಆಡಳಿತಾಧಿಕಾರಿ ಲಕ್ಷ್ಮೀದೇವಮ್ಮ, ಎಸ್.ಡಿ.ಎಂ.ಸಿ ಸದಸ್ಯರು, ಶಿಕ್ಷಕರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪೋಶೆಟ್ಟಿಹಳ್ಳಿ  ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.