ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಗರಗಳ ನೀರಿನ ಸ್ಥಿತಿ ಸ್ಥಾಪಕತ್ವ ಮತ್ತು ಬಳಕೆ ಕುರಿತ ತರಬೇತಿಗೆ ಜಿಲ್ಲಾಧಿಕಾರಿ ಜಿ.ಪ್ರಭು ಚಾಲನೆ

ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಲಭ್ಯವಿರುವ ಜಲಮೂಲಗಳ ನೀರಿನ ಸಮರ್ಪಕ ಬಳಕೆ ಮತ್ತು ಬಳಸಿದ ನೀರಿನ ನಿರ್ವಹಣಾ ವ್ಯವಸ್ಥೆಗಳ ಸಮಗ್ರ ಮೌಲ್ಯಮಾಪನ ನಡೆಸಿ ಸುಸ್ಥಿರ ನಿರ್ವಹಣಾ ಕ್ರಮ ಗಳನ್ನು ಅಳವಡಿಸಿಕೊಳ್ಳುವ ಉದ್ದೇಶದಿಂದ “ಜಿಲ್ಲೆಯ ನಗರಗಳ ನೀರಿನ ಸ್ಥಿತಿ ಸ್ಥಾಪಕತ್ವ ನಿರ್ಮಾಣ ಸಹಕಾರ” ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ

ಇಂಡಿಯನ್ ಇನ್‌ಸ್ಟಿಟ್ಯೂಟ್ ಫಾರ್ ಹ್ಯೂಮನ್ ಸೆಟಲ್‌ಮೆಂಟ್ಸ್ ಮತ್ತು ಜಿಲ್ಲಾಡಳಿತದ ಸಹಭಾಗೀತ್ವದಲ್ಲಿ "ಚಿಕ್ಕಬಳ್ಳಾಪುರದ ಆರು ಸಣ್ಣ ನಗರಗಳ ನೀರಿನ ಸ್ಥಿತಿ ಸ್ಥಾಪಕತ್ವ ನಿರ್ಮಾಣ ಸಹಕಾರ" ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು  ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.

ಬಾಗೇಪಲ್ಲಿ, ಚಿಂತಾಮಣಿ, ಚಿಕ್ಕಬಳ್ಳಾಪುರ, ಗುಡಿಬಂಡೆ, ಗೌರಿಬಿದನೂರು, ಶಿಡ್ಲಘಟ್ಟ ನಗರಗಳಲ್ಲಿ ಯೋಜನೆ ಜಾರಿ

ಚಿಕ್ಕಬಳ್ಳಾಪುರ: ಇಂಡಿಯನ್ ಇನ್‌ಸ್ಟಿಟ್ಯೂಟ್ ಫಾರ್ ಹ್ಯೂಮನ್ ಸೆಟಲ್‌ಮೆಂಟ್ಸ್ ಮತ್ತು ಜಿಲ್ಲಾಡಳಿತದ ಸಹಭಾಗೀತ್ವದಲ್ಲಿ "ಚಿಕ್ಕಬಳ್ಳಾಪುರದ ಆರು ಸಣ್ಣ ನಗರಗಳ ನೀರಿನ ಸ್ಥಿತಿ ಸ್ಥಾಪಕತ್ವ ನಿರ್ಮಾಣ ಸಹಕಾರ" ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.

ನಗರಹೊರವಲಯ ಜಿಲ್ಲಾ ಪಂಚಾಯತ್‌ನ ಸರ್.ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ "ನಗರಗಳ ನೀರಿನ ಸ್ಥಿತಿ ಸ್ಥಾಪಕತ್ವ ನಿರ್ಮಾಣ ಸಹಕಾರ ಕುರಿತ ತರಬೇತಿ"ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕರ್ನಾಟಕದ ಆರು ಸಣ್ಣ ನಗರಗಳಲ್ಲಿ ನೀರು, ಬಳಸಿದ ನೀರು, ಹವಾಮಾನ ವೈಪರೀತ್ಯ ನಿರ್ವಹಣೆ ಮತ್ತು ವಿಪತ್ತು ನಿರ್ವಹಣೆಗೆ ತಾಂತ್ರಿಕ ಸಹಕಾರ ನೀಡುವ ಯೋಜನೆಯನ್ನು ಇಂದು ಚಿಕ್ಕಬಳ್ಳಾ ಪುರ ಜಿಲ್ಲೆಯಲ್ಲಿ ಅಧಿಕೃತವಾಗಿ ಪ್ರಾರಂಭಿಸಿರುವುದು ಸಂತಸ ತಂದಿದೆ ಎಂದರು.

ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಲಭ್ಯವಿರುವ ಜಲಮೂಲಗಳ ನೀರಿನ ಸಮರ್ಪಕ ಬಳಕೆ ಮತ್ತು ಬಳಸಿದ ನೀರಿನ ನಿರ್ವಹಣಾ ವ್ಯವಸ್ಥೆಗಳ ಸಮಗ್ರ ಮೌಲ್ಯಮಾಪನ ನಡೆಸಿ ಸುಸ್ಥಿರ ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಳ್ಳುವ ಉದ್ದೇಶದಿಂದ “ಜಿಲ್ಲೆಯ ನಗರಗಳ ನೀರಿನ ಸ್ಥಿತಿ ಸ್ಥಾಪಕತ್ವ ನಿರ್ಮಾಣ ಸಹಕಾರ” ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಇದನ್ನೂ ಓದಿ: Chikkaballapur News: ಏ.23ರಿಂದ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ: ಜಿಲ್ಲಾಧಿಕಾರಿ ಜಿ.ಪ್ರಭು

ಜಿಲ್ಲೆಯ ಆರು ನಗರ ಸ್ಥಳೀಯ ಸಂಸ್ಥೆಗಳು, ಸಿಡಿಆರ್‌ಐ ಹಾಗೂ ಐಐಹೆಚ್‌ಎಸ್ ಇವರ ಸಹಭಾಗಿತ್ವ ದಲ್ಲಿ “ಜಿಲ್ಲೆಯ ನಗರಗಳ ನೀರಿನ ಸ್ಥಿತಿ ಸ್ಥಾಪಕತ್ವ ನಿರ್ಮಾಣ ಸಹಕಾರ” ಎಂಬ ಯೋಜನೆಯನ್ನು ಏಪ್ರಿಲ್ -2026 ರಿಂದ ಮಾರ್ಚ್-2028 ರವರೆಗೆ ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯಡಿ  ಲಭ್ಯ ನೀರು ಬಳಕೆ ಮತ್ತು ಬಳಸಿದ ನೀರನ ನಿರ್ವಹಣಾ ವ್ಯವಸ್ಥೆಗಳ ಸಮಗ್ರ ಮೌಲ್ಯ ಮಾಪನ ನಡೆಸಿ, ಸುಸ್ಥಿರ ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಮೊದಲು ತಾಂತ್ರಿಕ ಮಾರ್ಗಸೂಚಿಗಳನ್ನು ಸಿದ್ದಪಡಿಸಲಾಗುತ್ತದೆ ಎಂದರು.

ಸ್ಥಳೀಯ ಸಂಸ್ಥೆಗಳ ನೀರಿನ ಪೂರೈಕೆಯ ನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸಲು ಯೋಜಿಸ ಲಾಗಿದೆ. ಜೊತೆಗೆ ನೀರಿನ ಸೌಕರ್ಯಗಳನ್ನೊದಗಿಸುವಲ್ಲಿ ಇರುವ ಕೊರತೆಗಳು ಹಾಗೂ ಸವಾಲು ಗಳನ್ನು ವಿಶ್ಲೇಷಣೆಯ ಮೂಲಕ, ಸುರಕ್ಷಿತ ಮತ್ತು ಪರಿಣಾಮಕಾರಿ ನೀರಿನ ಮರುಬಳಕೆ ಉತ್ತೇಜಿಸುವ ಮೂಲಕ ನೀರಿನ ಸ್ಥಿತಿಸ್ಥಾಪಕತ್ವನ್ನು ವೃದ್ಧಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ಯೋಜನೆಗೆ ಸಂಬಂಧಿಸಿದ ಪ್ರಮುಖ ಪಾಲುದಾರರೊಂದಿಗೆ ಪ್ರಾರಂಭಿಕ ಹಂತದ ಚರ್ಚೆಗಳು ಈ ತರಬೇತಿ ಮೂಲಕ ಇಂದಿನಿಂದ ಆರಂಭವಾಗಿದೆ. ಸಿಡಿಆರ್‌ಐ ಹಾಗೂ ಐಐಹೆಚ್‌ಎಸ್ ಸಂಸ್ಥೆಗಳ ಸಹಯೋಗದಲ್ಲಿ “ನೀರಿನ ಸದ್ಬಳಕೆ ಮಾಡಿಕೊಳ್ಳುವ ಈ ಯೋಜನೆ ಜಿಲ್ಲೆಗೆ ಸಹಕಾರಿ ಆಗಲಿದೆ ಎಂದು ತಿಳಿಸಿದರು.

news5c

ಕೋಇಲೇಷನ್ ಫಾರ್ ಡಿಸಾಸ್ಟರ್ ರೆಸಿಲಿಯಂಟ್ ಇನ್ಫ್ರಾಸ್ಟ್ರಕ್ಚರ್ ಅನುದಾನದೊಂದಿಗೆ, ಐಐಹೆಚ್‌ಎಸ್ ಸಂಸ್ಥೆ ಈ ಯೋಜನೆಯನ್ನು ಜಾರಿಗೆ ತರುತ್ತಿದೆ. ಇದು ಭಾರತದ ಸಣ್ಣ ನಗರಗಳಲ್ಲಿ ಅಪಾಯ-ಆಧಾರಿತ ಮೂಲಸೌಕರ್ಯ ಯೋಜನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ಮಹತ್ವದ ಹೆಜ್ಜೆಯಾಗಿದೆ. ಜಿಲ್ಲಾಡಳಿತ ವರ್ಗದ ಪ್ರತಿನಿಧಿಗಳು, ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ತಾಂತ್ರಿಕ ಪರಿಣಿತರನ್ನು ಒಟ್ಟುಗೂಡಿಸಿ, ಯೋಜನೆಯ ವ್ಯಾಪ್ತಿ, ಆದ್ಯತೆಗಳು ಮತ್ತು ಜಾರಿಗೆ ಸಂಬಂಧಿಸಿದ ಮಾರ್ಗಗಳನ್ನು ಚರ್ಚಿಸಿ ಸಮನ್ವಯಗೊಳಿಸಲು ನೆರವಾಗಿದೆ ಎಂದು ತಿಳಿಸಿದರು.

ಈ ಯೋಜನೆ ಮತ್ತು ಅರ್ಬನ್ ಇನ್ಪಾçಸ್ಟçಕ್ಚರ್ ರೆಸಿಲಿಯನ್ಸ್ ಪ್ರೋಗ್ರಾಮ್ ಭಾಗವಾಗಿದೆ. ನಗರಗಳು ಮತ್ತು ಪಟ್ಟಣಗಳು ತಮ್ಮ ಮೂಲಸೌಕರ್ಯ ಯೋಜನೆ, ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ಹವಾಮಾನ ವೈಪರೀತ್ಯ ಹಾಗೂ ವಿಪತ್ತು ಅಪಾಯ ನಿರ್ವಹಣಾ ಸಾಮರ್ಥ್ಯ ವನ್ನು ಅಳವಡಿಸಿಕೊಳ್ಳಲು ನೆರವಾಗುವ ಜಾಗತಿಕ ಪ್ರಯತ್ನವಾಗಿದೆ. ಇದು ಹೂಡಿಕೆಗಳನ್ನು ಹೆಚ್ಚಿಸುವುದರ ಜೊತೆಗೆ ಶಾಶ್ವತ ಮತ್ತು ಸುಸ್ಥಿರ ನಗರಗಳ ಬೆಳವಣಿಗೆಯನ್ನು ಖಚಿತಪಡಿಸುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಿಡಿಆರ್‌ಐ ಪ್ರತಿನಿಧಿ ಮಹೇಶ್ವರ ರಾಜಶೇಖರ್ ಮಾತನಾಡಿ, “ಚಿಕ್ಕಬಳ್ಳಾಪುರ ದಲ್ಲಿ ಆರಂಭವಾದ ಈ ಯೋಜನೆ ನಗರ ಪ್ರದೇಶಗಳಲ್ಲಿ ಹವಾಮಾನ ವೈಪರೀತ್ಯ ಮತ್ತು ನೈಸರ್ಗಿಕ ವಿಪತ್ತು ನಿರ್ವಹಣೆಗೆ ಅಪಾಯ-ಆಧಾರಿತ ಮೂಲಸೌಕರ್ಯವನ್ನು ಉತ್ತೇಜಿಸುವಲ್ಲಿ ಸಿಡಿಆರ್‌ಐ ಯ ಬದ್ಧತೆಯನ್ನು ತೋರಿಸುತ್ತದೆ. ತಾಂತ್ರಿಕ ಸಹಾಯ, ಮಾಹಿತಿ ಆಧಾರಿತ ಯೋಜನೆ ಮತ್ತು ಸ್ಥಳೀಯ ಸಂಸ್ಥೆಗಳ ಸಾಮರ್ಥ್ಯ ನಿರ್ಮಾಣವನ್ನು ಸಮನ್ವಯಗೊಳಿಸುವ ಮೂಲಕ ನಗರಗಳ ನೀರು ಮತ್ತು ಬಳಸಿದ ನೀರಿನ ಮೂಲಸೌಕರ್ಯ ಅಭಿವೃದ್ಧಿಯತ್ತ ಸಾಗಲು ಬೆಂಬಲಿಸುತ್ತಿದ್ದೇವೆ.ಈ ಯೋಜನೆ 100ಕ್ಕೂ ಹೆಚ್ಚು ಪ್ರಸ್ತಾವನೆಗಳಲ್ಲಿ ಆಯ್ಕೆಯಾದ ಯೋಜನೆಗಳಲ್ಲಿ ಒಂದಾಗಿದೆ. ಇತರ ಆಯ್ಕೆಯಾದ ದೇಶಗಳು ಭೂತಾನ್, ಹೊಂಡುರಾಸ್ ಮತ್ತು ಶ್ರೀಲಂಕಾ ದೇಶಗಳಾಗಿವೆ ಎಂದು ಹೇಳಿದರು.

ಈ ಯೋಜನೆಯನ್ನು ಬಾಗೇಪಲ್ಲಿ, ಚಿಂತಾಮಣಿ, ಚಿಕ್ಕಬಳ್ಳಾಪುರ, ಗುಡಿಬಂಡೆ, ಗೌರಿಬಿದನೂರು ಮತ್ತು ಶಿಡ್ಲಘಟ್ಟಗಳಲ್ಲಿ ಅಳವಡಿಸಲಾಗಿದೆ. ಈ ನಗರಗಳು ಹವಾಮಾನ ವೈವಿಧ್ಯತೆ, ಭೂಗರ್ಭಜಲ ಕ್ಷಯ ಮತ್ತು ವೇಗವಾಗಿ ಬದಲಾಗುತ್ತಿರುವ ವಾಸಸ್ಥಳ ಹಾಗೂ ಆರ್ಥಿಕ ಪರಿಸ್ಥಿತಿಗಳ ಪರಿಣಾಮ ವಾಗಿ ಜಲ ಸಂಪನ್ಮೂಲಗಳ ಮೇಲೆ ಹೆಚ್ಚುತ್ತಿರುವ ಒತ್ತಡವನ್ನು ತಗ್ಗಿಸುತ್ತವೆ.

ಮುಂದಿನ ಎರಡು ವರ್ಷಗಳಲ್ಲಿ (ಏಪ್ರಿಲ್ 2026–ಮಾರ್ಚ್ 2028), ಈ ಉಪಕ್ರಮವು ಸ್ಥಳೀಯ ಸಂಸ್ಥೆಗಳಿಗೆ ತಾಂತ್ರಿಕ ಸಹಾಯ ಒದಗಿಸಿ, ಜಲ ಮತ್ತು ಒಳಚರಂಡಿ ವ್ಯವಸ್ಥೆಗಳ ಮೌಲ್ಯಮಾಪನ, ಯೋಜನಾ ಪ್ರಕ್ರಿಯೆಗಳಲ್ಲಿ ಹವಾಮಾನ ಮತ್ತು ವಿಪತ್ತು ಅಪಾಯಗಳ ಅಳವಡಿಕೆ ಹಾಗೂ ಸ್ಥೈರ್ಯಯುತ ಮತ್ತು ಪರಿಣಾಮಕಾರಿ ಮೂಲಸೌಕರ್ಯ ಹಾಗೂ ಸೇವಾ ವಿತರಣೆಗೆ ಕಾರ್ಯತಂತ್ರ ಗಳನ್ನು ರೂಪಿಸಲು ನೆರವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕ ಮಂಜುನಾಥ ಐಐಹೆಚ್‌ಎಸ್   ಸಂಸ್ಥೆಯ ಪ್ರತಿನಿಧಿ ಅಮೀರ್ ಬಶಿರ್ ಬಜಾಜ್ ,ಸಿಡಿಆರ್‌ಐ ಸಂಸ್ಥೆಯ ಪ್ರತಿನಿಧಿಗಳಾದ ಎಸ್ ಜಿ ಸುಜಯ್, ಸಾಬರ್ ಮನ್ಸ್ವಾಮಿ,ಉಮಾ ಮಹೇಶ್ವರ ರಾಜಶೇಖರ್, ನಗರಾಡಳಿ ಸಂಸ್ಥೆಗಳ ಪೌರಾ ಯುಕ್ತರು, ಮುಖ್ಯಾಧಿಕಾರಿಗಳು, ನಗರ ಸ್ಥಳೀಯ ಆಡಳಿತ ಸಂಸ್ಥೆಗಳ ಸಿಬ್ಬಂದಿ ಹಾಜರಿದ್ದರು.