ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chikkaballapur News: ನಗರಸಭೆಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ : ಅಧಿಕಾರಿಗಳ ಕಾರ್ಯವೈಖರಿಗೆ ಕೆಂಡಾಮಂಡಲ

ಗುರುವಾರ ಮಧ್ಯಾಹ್ನ ನಗರಸಭೆಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಜಿ.ಪ್ರಭು ಪೌರಾಯುಕ್ತ ಮನ್ಸೂರ್ ಅಲಿ ವಿರುದ್ಧ ಕೆಂಡಾಮಂಡಲವಾದರು. ಆಯುಕ್ತರಾಗಿ ನೀವು ಜಿಲ್ಲಾ ಕೇಂದ್ರದಲ್ಲಿ ವಾಸ್ತವ್ಯ ಇರಬೇಕು. ನೀವು ಬೆಂಗಳೂರಿನಿಂದ ಪ್ರಯಾಣ ಮಾಡುವು ದಾದರೆ ಜನರ ಕಷ್ಟ ಗಳನ್ನು ಯಾವಾಗ ಪರಿಹರಿಸುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.

ಜಿಲ್ಲಾಧಿಕಾರಿಗಳು ಭೇಟಿ ನೀಡಿದ್ದ ಚಿತ್ರ

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿನ ನಗರಸಭೆಗೆ ಗುರುವಾರ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಜಿ.ಪ್ರಭು ಅಧಿಕಾರಿಗಳ ಕಾರ್ಯವೈಖರಿಯನ್ನು ಕಣ್ಣಾರೆ ಕಂಡು ಕೆಂಡಾ ಮಂಡಲವಾದರು.

ಹೌದು. ಗುರುವಾರ ಮಧ್ಯಾಹ್ನ ನಗರಸಭೆಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಜಿ.ಪ್ರಭು ಪೌರಾಯುಕ್ತ ಮನ್ಸೂರ್ ಅಲಿ ವಿರುದ್ಧ ಕೆಂಡಾಮಂಡಲವಾದರು. ಆಯುಕ್ತರಾಗಿ ನೀವು ಜಿಲ್ಲಾ ಕೇಂದ್ರದಲ್ಲಿ ವಾಸ್ತವ್ಯ ಇರಬೇಕು. ನೀವು ಬೆಂಗಳೂರಿನಿಂದ ಪ್ರಯಾಣ ಮಾಡುವು ದಾದರೆ ಜನರ ಕಷ್ಟಗಳನ್ನು ಯಾವಾಗ ಪರಿಹರಿಸುತ್ತೀರಿ ಎಂದು ತರಾಟೆಗೆ ತೆಗೆದು ಕೊಂಡರು.

ಸಮಗ್ರ ಸುಧಾರಣೆ ಅಗತ್ಯ!
ನಗರಸಭೆಯ ಎಲ್ಲಾ ಅಧಿಕಾರಿ ನೌಕರ ವರ್ಗದ ಕಾರ್ಯವೈಖರಿ ಪರಿಶೀಲಿಸಿದ ಜಿಲ್ಲಾಧಿ ಕಾರಿಗಳು ನಗರಸಭೆಗೆ ಸಾರ್ವಜನಿಕರಿಂದ ಬರುವ ಯಾವುದೇ ದೂರುಗಳನ್ನು ವೈಜ್ಞಾನಿಕ ವಾಗಿ ದಾಖಲಿಸಿಕೊಂಡು ಅರ್ಜಿದಾರರಿಗೆ ಸ್ವೀಕೃತಿ ನೀಡಬೇಕು ಎಂದು ಸೂಚನೆ ನೀಡಲಾಗಿತ್ತು. ಆದರೆ ನೀವು ಇದನ್ನು ಪಾಲಿಸುತ್ತಿಲ್ಲ ಎಂದರೆ ಏನರ್ಥ. ನಿಮ್ಮ ಅನೀತಿಯ ನಡೆವಳಿಕೆಯ ವಿರುದ್ಧ ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಬರುತ್ತಿವೆ.ನಿಮ್ಮ ನಡವಳಿಕೆ ಸುಧಾರಿಸಲಿಲ್ಲ ಎಂದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: Chikkaballapur News: “ಯುವನಿಧಿ ಅರಿವು ಕಾರ್ಯಾಗಾರ”, ಪಂಚ ಗ್ಯಾರಂಟಿಗಳು ಯಶಸ್ವಿ ಅನುಷ್ಠಾನ: ಯಲುವಳ್ಳಿ ಎನ್ ರಮೇಶ್

ಸ್ವೀಕೃತಿ ಕಡ್ಡಾಯ!!
ನಗರಸಭೆಯ ಸ್ವೀಕೃತಿ ವಿಭಾಗ, ಕಂದಾಯ ಶಾಖೆ, ಅರೋಗ್ಯ ಶಾಖೆ, ಪರಿಸರ ಶಾಖೆಗಳಿಗೆ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದ ಜಿ.ಪ್ರಭು ಅವರು ಯಾವುದೇ ಇಲಾಖೆಗಳಲ್ಲಿ ಪೂರ್ಣಪ್ರಮಾಣದಲ್ಲಿ ಸಾರ್ವಜನಿಕರ ಕೆಲಸ ಮಾಡುತ್ತಿಲ್ಲ ಎಂಬುದನ್ನು ಪತ್ತೆ ಹಚ್ಚುವ ಮೂಲಕ ಸಂಬಂಧಪಟ್ಟ ಅಧಿಕಾರಿಗಳ ಕಾರ್ಯವೈಖರಿಯನ್ನು ಮಾಧ್ಯಮದ ಎದುರು ಎಳೆ ಎಳೆಯಾಗಿ ಬಿಚ್ಚಿಟ್ಟರು.

ತ್ಯಾಜ್ಯವಿಲೇಗೆ ತಾಕೀತು!!
ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳ ಇಕ್ಕೆಲ ಗಳಲ್ಲಿ ಕಸದ ರಾಶಿ ರಾರಾಜಿಸುತ್ತಿದ್ದರೂ ನಗರಸಭೆ ಆಡಳಿತವಾಗಲಿ ಆಯುಕ್ತರಾಗಲಿ ಗಮನ ಹರಿಸುವಲ್ಲಿ ವಿಫಲವಾಗಿದ್ದಾರೆ.ಐತಿಹಾಸಿಕವಾದ ಜಿಲ್ಲೆಗೆ ಬರುವ ಜನತೆ, ಈಶಾ ಕೇಂದ್ರಕ್ಕೆ ಭೇಟಿ ನೀಡುವ ಪ್ರವಾಸಿಗರು ಈ ಕಸದ ದರ್ಶನ ಮಾಡಿಕೊಂಡು ಮುಂದೆ ಸಾಗುವಂತಾಗಿದೆ. ಇದರಿಂದ ಜಿಲ್ಲೆಯ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಲು ಹೇಗೆ ಸಾಧ್ಯ.ಮಾಧ್ಯಮಗಳಲ್ಲಿ ಕೂಡ ಈ ಬಗ್ಗೆ ವರದಿಯಾದರೂ ತಲೆಕೆಡಿಸಿಕೊಳ್ಳದಿದ್ದರೆ ಏನು ಮಾಡಬೇಕು. ತಪ್ಪಿತಸ್ಥರ ವಿರುದ್ದ ಕ್ರಮ ವಹಿಸಬೇಕಲ್ಲ ಎಂದರು ಆಯುಕ್ತರ ವಿರುದ್ಧ ಗರಂ ಆದರು.

8nagara

ಕರ್ತವ್ಯ ಲೋಪ ಸಹಿಸಲ್ಲ!!
ಪರಿಸರ ಅಧಿಕಾರಿ ಉಮಾಶಂಕರ್ ಅವರ ವಿಭಾಗದಲ್ಲಿ ಕುಳಿತ ಜಿಲ್ಲಾಧಿಕಾರಿಗಳು ನೋಡಿ ನಿತ್ಯವೂ ನನಗೆ ಈ ನಗರಸಭೆ ಬಗ್ಗೆ ದೂರುಗಳು ಬರುತ್ತಿವೆ.ದೂರುಗಳನ್ನು ಕೇಳಿಕೊಂಡು ಸುಮ್ಮನಿರಬೇಕಾ? ನಾಗರೀಕರ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇ ಮಾಡಲೇಬೇಕಿದೆ. ಯಾರೂ ಕೂಡ ಕಡತವನ್ನು ಹಾಗೇ ಉಳಿಸಿಕೊಂಡು ಸುಖಾಸುಮ್ಮನೆ ಅವರನ್ನು ಅಲೆಸುವುದನ್ನು ಸಹಿಸುವುದಿಲ್ಲ.೩೦ ದಿನಗಳ ಒಳಗೆ ಕಡತ ವಿಲೇ ಆಗಬೇಕು. ಉಳಿದಿದ್ದರೆ ಸಕಾರಣ ನೀಡಬೇಕು. ಅಧಿಕಾರಿಗಳು ಸಿಬ್ಬಂದಿಗಳಿಗೆ ಸಂಬಂಧಿಸಿದಂತೆ ಸುಧಾರಣೆ ಮಾಡುವ ವಿಚಾರವಾಗಿದ್ದರೆ ಸುಧಾರಣೆಗೆ ಅವಕಾಶ ನೀಡಲಾಗುವುದು. ಆದರೆ ತೀವ್ರತರ ವಾದ ಕರ್ತವ್ಯಲೋಪವಾಗಿದ್ದರೆ ಯಾವ ಕಾರಣಕ್ಕೂ ಸಹಿಸುವ ಮಾತೇ ಇಲ್ಲ ನಿರ್ದಾ ಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇನೆ. ಈ ನಿಯಮ ಜಿಲ್ಲೆಯ ಎಲ್ಲಾ ನಗರಸಭೆ, ಕಂದಾಯ ಇಲಾಖೆ ಸೇರಿ ಎಲ್ಲಾ ಇಲಾಖೆಗಳಿಗೆ ಅನ್ವಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.

cbpm8t

ಭ್ರಷ್ಟಾಚಾರಕ್ಕೆ ಕಡಿವಾಣ!!
ನಗರಸಭೆಯಲ್ಲಿ ಭ್ರಷ್ಟಾಚಾರ
ನಗರಸಭೆಯಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರಿಂದ ಜಿಲ್ಲಾಧಿಕಾರಿಗಳಿಗೆ ನಿರಂತರವಾಗಿ ಪತ್ರಗಳ ಬಂದ ಹಿನ್ನೆಲೆಯಲ್ಲಿ ದಿಢೀರ್ ಭೇಟಿ ನೀಡಿದ್ದರು. ಈ ವೇಳೆ ಖಾರವಾಗಿಯೇ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿಗಳು ನಗರಸಭೆಯನ್ನು ಜನಸ್ನೇಹಿಯಾಗಿ ಬದಲಾಯಿಸಬೇಕು. ಇಲ್ಲವಾದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಲಾಗುವುದು. ಸಮಸ್ಯೆಹೊತ್ತು ಬರುವ ಜನರಿಗೆ ಕಷ್ಟಕೊಡದೆ ಅವರಕಷ್ಟ ಪರಿಹಾರ ಮಾಡಬೇಕು. ಭ್ರಷ್ಟಾಚಾರದ ಮನಸ್ಥಿತಿಗೆ ಅಂಕುಶ ಹಾಕಲಾಗುವುದು. ಸೇವೆಯನ್ನು ಪರಮಗುಣವಾಗಿ ಬೆಳೆಸಿಕೊಳ್ಳಿ ಎನ್ನುನ ಸಂದೇಶವನ್ನು ಜಿಲ್ಲಾಧಿಕಾರಿಗಳು ದಿಢೀರ್ ಭೇಟಿಯ ಮೂಲಕ ರವಾನೆ ಮಾಡಿದರು.