ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರಸ್ತೆಗಿಳಿದು ದ್ವಿಚಕ್ರ ವಾಹನ ಸವಾರರಿಗೆ ಎಚ್ಚರಿಕೆ ಕೊಟ್ಟ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಕುಶಲ್ ಚೌಕ್ಸೆ

ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಇಂದಿನಿಂದ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದ್ದು ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಚಾಲಕರಿಗೆ ಪೊಲೀಸರು ತಡೆದು ದಂಡ ವಿಧಿಸುತಿದ್ದರು. ನಗರದ ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಕುಶಲ್ ಚೌಕ್ಸೆ ಕಾರ್ಯಚರಣೆ ನಡೆಸಿದರು.

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಇಂದಿನಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಜಾರಿ ಮಾಡಲಾಗಿದ್ದು ಹೆಲ್ಮೆಟ್ ಧರಿಸಿಯೇ ವಾಹನ ಚಲಾಯಿಸಬೇಕು ಎಂದು ಸಾರ್ವಜನಿಕರಿಗೆ ಒಂದು ವಾರದಿಂದ ಪ್ರಚಾರ ಮಾಡಲಾಗಿತ್ತು. ಆದರೂ ಶಿರಸ್ತ್ರಾಣ ಧರಿಸದೆ ಸಂಚಾರದಲ್ಲಿ ತೊಡಗಿದ್ದ ಸವಾರರನ್ನ ಸ್ವತಃ ರಸ್ತೆಗಿಳಿದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕುಶಲ್ ಚೌಕ್ಸೆ ತಡೆದು ಬುದ್ದಿ ಹೇಳಿ ದಂಡ ವಿಧಿಸಿದ್ದಲ್ಲದೇ ಹೆಲ್ಮಟ್ ತೊಡಿಸಿ ನಾಳೆಯಿಂದ ಕಡ್ಡಾಯವಾಗಿ ಹೆಲ್ಮೆಟ್ ಹಾಕದಿದ್ದರೆ ದಂಢ ವಿಧಿಸುವುದಾಗಿ ಎಚ್ಚರಿಕೆ ನೀಡಿದರು.

ಇಂದು ಸಹ ಪೊಲೀಸರು ಬೈಕ್ ರ್ಯಾಲಿ ನಡೆಸಿ ಸೈರನ್ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು.

ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಇಂದಿನಿಂದ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದ್ದು ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಚಾಲಕರಿಗೆ ಪೊಲೀಸರು ತಡೆದು ದಂಡ ವಿಧಿಸುತಿದ್ದರು. ನಗರದ ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಕುಶಲ್ ಚೌಕ್ಸೆ ಕಾರ್ಯಚರಣೆ ನಡೆಸಿದರು.

ಇದನ್ನೂ ಓದಿ: Chikkanayakanahalli News: ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ : ಪೂರ್ವಭಾವಿ ಸಭೆ ಹಾಗು ಸಮಿತಿ ರಚನೆ

ಒಂದು ವಾರದಿಂದ ಪೊಲೀಸರು ಆಟೊ ಪ್ರಚಾರ ಧ್ವನಿ ವರ್ಧಕ ಮೂಲಕ, ಬೀದಿ ನಾಟಕ, ನಗರ ಸಭೆ ವಾಹನಗಳು, ಗ್ರಾಮಪಂಚಾಯಿತಿ ವಾಹನಗಳಲ್ಲಿ ವಿಭಿನ್ನವಾಗಿ ಜಾಗೃತಿ ಮೂಡಿಸಲಾಗಿತ್ತು ಆದರೂ ಹೆಲ್ಮೆಟ್ ಧರಿಸದೆ ಸಂಚಾರ ಮಾಡುತಿದ್ದ ಸವಾರರನ್ನ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕುಶಲ್ ಚೌಕ್ಸೆ ನಾಯಕತ್ವ ದಲ್ಲಿ ಡಿವೈ ಎಸ್ ಪಿ ಶಿವಕುಮಾರ್ ಹಾಗೂ ವಿವಿಧ ಠಾಣಿಗಳ ಪಿ ಎಸೈಗಳು ಮತ್ತು ಸಿಬ್ಬಂದಿ ವರ್ಗ, ಸಂಚಾರಿ ಠಾಣೆ ಪೋಲೀಸರು ಹಿಡಿದು ದಂಢ ವಿಧಿಸುತಿದ್ದರು. ಇದೇ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾದ್ಯಕ್ಷ ರಾಮೇಗೌಡ, ಯುವ ಅಧ್ಯಕ್ಷ ಬಾಲು ಉಚಿತವಾಗಿ ಹೆಲ್ಮೆಟ್ ವಿತರಿಸಿದರು.

ಹೆಲ್ಮೆಟ್ ಕಡ್ಡಾಯವಾದ ಮೊದಲ ದಿನ ಇಂದು ಹೆಲ್ಮೆಟ್ ಇಲ್ಲದೆ ಬಂದವರಿಗೆ ಕನಿಷ್ಟ ಮಟ್ಟದ ದಂಡ ವಿಧಿಸಿ ನಾಳೆಯಿಂದ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಎಚ್ವರಿಕೆ ನೀಡಿದರು.ಹೆಲ್ಮೆಟ್ ಧರಿಸಿದ ಪೊಲೀಸ್ ಮತ್ತು ಸಾರ್ವಜನಿಕರಿಂದ ಜನರಿಗೆ ಅರಿವು ಮೂಡಿಸಲು ಸೈರನ್ ನೊಂದಿಗೆ ರ್ಯಾಲಿ ಮಾಡಿ ಜಾಗೃತಿಗೊಳಿಸಿದರು.

ಈ ವೇಳೆ ಡಿವೈಎಸ್ಪಿ ಶಿವಕುಮಾರ್, ನಗರ, ಗ್ರಾಮಾಂತರ ಠಾಣೆಯ ಪೊಲೀಸರು ಸಂಚಾರಿ ಠಾಣೆಯ ಪಿ ಎಸ್ ಐ ಗಳಾದ ಮಂಜುಳ ಮತ್ತು ವಿದ್ಯಾ ಹಾಗು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿ ದ್ದರು.