ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

MLA Puttaswamy Gowda: ಸುಖಾಸುಮ್ಮನೆ ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸಬೇಡಿ: ಶಾಸಕ ಪುಟ್ಟಸ್ವಾಮಿಗೌಡ ತಾಕೀತು

ರೈತಾಪಿ ಜನರನ್ನು ಅವರುಗಳ ಕೆಲಸಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಸುಖಾಸುಮ್ಮನೆ ಅಲೆದಾಡಿಸ ಬಾರದು, ಜನರ ಕೆಲಸ ಕಾರ್ಯಗಳನ್ನು ವಿಳಂಬ ಮಾಡುತ್ತಾ ,ಹಣ ಕ್ಕಾಗಿ ಜನರನ್ನು ಪೀಡಿಸುವುದು ಕಂಡರೆ ಅಥವಾ ದೂರುಗಳು ಕೇಳಿ ಬಂದರೆ ಅಂತಹ ತಪ್ಪಿತಸ್ಥ ಅಧಿಕಾರಿಗಳನ್ನು ಒಂದು ಕ್ಷಣವೂ ಇಲ್ಲಿ ಇರಲು ಬಿಡುವುದಿಲ್ಲ

ಗೌರಿಬಿದನೂರು: ಸಾರ್ವಜನಿಕರ ಕೆಲಸ ಕಾರ್ಯಗಳನ್ನು ತ್ವರಿತಗತಿಯಲ್ಲಿ ಮಾಡಿಕೊಡಬೇಕು, ಜನರನ್ನು ಕಚೇರಿಗಳಿಗೆ ಸುಖಾಸುಮ್ಮನೆ ಅಲೆದಾಡಿಸುವುದನ್ನು ನಾನು ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಶಾಸಕ ಕೆಎಚ್.ಪುಟ್ಟಸ್ವಾಮಿಗೌಡರು(MLA Puttaswamy Gowda) ಎಚ್ಚರಿಕೆ ನೀಡಿದರು.

ನಗರದ ತಾಲೂಕು ಕಚೇರಿಯ ಶಾಸಕರ ಭವನದಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕರ ಕುಂದು ಕೊರತೆಗಳ ಆಲಿಸುವ ಸಂದರ್ಭದಲ್ಲಿ ಮಾತನಾಡಿದರು.

ಶಾಸಕರನ್ನು ಖುದ್ದಾಗಿ ಭೇಟಿ ಮಾಡಿ ತಮ್ಮ ಅಹವಾಲುಗಳನ್ನು ಸಲ್ಲಿಸಲು ತಾಲೂಕಿನ ವಿವಿಧ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರು.

ಇದನ್ನೂ ಓದಿ: Gauribidanur News: ಅರ್ಹ ಮತದಾರರ ಹೆಸರು ಕೈಬಿಟ್ಟು ಹೋಗದಂತೆ ಜವಾಬ್ದಾರಿ ವಹಿಸಿ: ಎನ್. ಎಚ್.ಶಿವಶಂಕರರೆಡ್ಡಿ ಕರೆ

ಹಾಗೆ ಬಂದವರ ಪೈಕಿ ಬಹುತೇಕ ಅರ್ಜಿಗಳು ಕಂದಾಯ ಇಲಾಖೆಗೆ ಸಂಭಂಧಿಸಿದ ಅರ್ಜಿಗಳೇ ಆಗಿದ್ದವು ಎಂಬುದು ವಿಶೇಷ. ಅದರಲ್ಲೂ ಕೂಡ ಜಮೀನುಗಳಿಗೆ ಹೋಗಲು ರಸ್ತೆ ಸಮಸ್ಯೆ ,ಜಮೀನುಗಳ ಖಾತೆ ವಿಳಂಬ ಮುಂತಾದ ದೂರುಗಳನ್ನು ಸಾರ್ವಜನಿಕರು ಶಾಸಕರ ಗಮನಕ್ಕೆ ತಂದರು.

ನಾಗರೀಕರಿಂದ ಹವಳ ಸ್ವೀಕರಿಸಿದ ಶಾಸಕ ಕೆಎಚ್.ಪುಟ್ಟಸ್ವಾಮಿಗೌಡರು ಸಾರ್ವಜನಿಕರ ಪ್ರತಿ ಯೊಂದು ಅರ್ಜಿಯನ್ನು ಗಮನಿಸಿ ಸ್ಥಳದಲ್ಲಿಯೇ ತಹಶಿಲ್ದಾರ್ ಹಾಗೂ ಸಮಸ್ಯೆಗೆ ಸಂಬಂಧಿ ಸಿದ ಅಧಿಕಾರಿಗಳಿಗೆ ಸಮಸ್ಯೆಗಳನ್ನು ನಿಗಧಿತ ಅವಧಿಯಲ್ಲಿ ಬಗೆಹರಿಸಿ ವರದಿ ನೀಡಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಿದರು. ಇದರಿಂದಾಗಿ ಒಂದಷ್ಟು ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಿಕೊಟ್ಟರು.

ನಂತರ ಮಾತನಾಡಿದ ಅವರು ರೈತಾಪಿ ಜನರನ್ನು ಅವರುಗಳ ಕೆಲಸಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಸುಖಾಸುಮ್ಮನೆ ಅಲೆದಾಡಿಸಬಾರದು, ಜನರ ಕೆಲಸ ಕಾರ್ಯಗಳನ್ನು ವಿಳಂಬ ಮಾಡುತ್ತಾ ,ಹಣ ಕ್ಕಾಗಿ ಜನರನ್ನು ಪೀಡಿಸುವುದು ಕಂಡರೆ ಅಥವಾ ದೂರುಗಳು ಕೇಳಿ ಬಂದರೆ ಅಂತಹ ತಪ್ಪಿತಸ್ಥ ಅಧಿಕಾರಿಗಳನ್ನು ಒಂದು ಕ್ಷಣವೂ ಇಲ್ಲಿ ಇರಲು ಬಿಡುವುದಿಲ್ಲ ಎಂದು ನಿರ್ದಾಕ್ಷಿಣ್ಯ ವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ತಹಶಿಲ್ದಾರ್ ಅರವಿಂದ್, ನಗರಸಭೆ ಆಯುಕ್ತ ರಮೇಶ್ ಹಾಗೂ ಇನ್ನಿತರೆ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.