ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dr M C Sudhakar: ಆಜಾದ್‌ಚೌಕ ಮತ್ತು ಪಾಲಿಟೆಕ್ನಿಕ್ ಕಾಲೇಜಿ ನಲ್ಲಿ ವೇಗವಾಗಿ ಸಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದ ಡಾ.ಎಂ.ಸಿ.ಸುಧಾಕ‌ರ್

ನಗರದ ಹೃದಯ ಭಾಗದಲ್ಲಿರುವ ಆಜಾದ್ ಚೌಕದಲ್ಲಿ ನಿರ್ಮಾಣ ಗೊಂಡಿರುವ ಉದ್ಯಾನವನಕ್ಕೆ ನೆರೆಯ ಆಂಧ್ರಪ್ರದೇಶದ ರಾಜಮಂಡ್ರಿಯಿಂದ ವಿವಿಧ ರೀತಿಯ ವಿಶಿಷ್ಟ ಗಿಡಗಳನ್ನು ತರಿಸಿ ಅವುಗಳನ್ನು ನೆಡುವಂತೆ ಮಾಡಿ ನಗರದ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಪರಿಸರದಲ್ಲಿ ಗಿಡಗಳ ಮಹತ್ವದ ಕುರಿತು ಹಾಗೂ ಈ ಸ್ಥಳದಲ್ಲಿರುವ ದೇವಾಲಯಕ್ಕೆ ಬರುವ ಸಾರ್ವಜನಿಕರಿಗೆ ಅನುಕೂಲವಾಗುವ ವಾತಾವರಣ ನಿರ್ಮಾಣ ಮಾಡು ವಲ್ಲಿ ನೆರವಾಗಲಿದೆ.

ಚಿಂತಾಮಣಿ: ನಗರ ಸ್ವಚ್ಛತೆ ಕಾಪಾಡಬೇ ಕಾದರೆ ಕಸವನ್ನು ನಗರಸಭೆ ವಾಹನಗಳಿಗೆ ನೀಡಬೇಕು ಹಾಗೂ ಏಕಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು ಇದಕ್ಕೆ ಸಾರ್ವಜನಿಕರು ಸಹಕಾರಿಸಬೇಕೆಂದು ಶಾಸಕ ಡಾ.ಎಂ.ಸಿ.ಸುಧಾಕರ್(Dr M C Sudhakar) ಹೇಳಿದರು.

ನಗರದ ಆಜಾದ್ ಚೌಕ ಮತ್ತು ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿ ಗಳನ್ನು ವೀಕ್ಷಣೆ ಮಾಡಿ ಮಾತನಾಡಿ ನಗರದ ಹೃದಯ ಭಾಗದಲ್ಲಿರುವ ಆಜಾದ್ ಚೌಕದಲ್ಲಿ ನಿರ್ಮಾಣ ಗೊಂಡಿರುವ ಉದ್ಯಾನವನಕ್ಕೆ ನೆರೆಯ ಆಂಧ್ರಪ್ರದೇಶದ ರಾಜಮಂಡ್ರಿಯಿಂದ ವಿವಿಧ ರೀತಿಯ ವಿಶಿಷ್ಟ ಗಿಡಗಳನ್ನು ತರಿಸಿ ಅವುಗಳನ್ನು ನೆಡುವಂತೆ ಮಾಡಿ ನಗರದ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಪರಿಸರದಲ್ಲಿ ಗಿಡಗಳ ಮಹತ್ವದ ಕುರಿತು ಹಾಗೂ ಈ ಸ್ಥಳದಲ್ಲಿರುವ ದೇವಾಲಯಕ್ಕೆ ಬರುವ ಸಾರ್ವಜನಿಕರಿಗೆ ಅನುಕೂಲವಾಗುವ ವಾತಾವರಣ ನಿರ್ಮಾಣ ಮಾಡು ವಲ್ಲಿ ನೆರವಾಗಲಿದೆ.ಇಲ್ಲಿಯೇ ಎಲ್‌ಇಡಿ ಪರದೆ ವ್ಯವಸ್ಥೆಯನ್ನು ಕೈಗೊಂಡಿದ್ದು ಸರ್ಕಾರ ವಿವಿಧ ಕಾರ್ಯಕ್ರಮಗಳು ಹಾಗೂ ಜನರಿಗೆ ಅಗತ್ಯವಿರುವ ದೃಶ್ಯಗಳು ಭಿತ್ತರಗೊಳ್ಳುತ್ತದೆಯೆಂದರು.

ಪ್ಲಾಸ್ಟಿಕ್ ಸಂಪೂರ್ಣವಾಗಿ ಬಳಕೆ ಮಾಡುವುದನ್ನು ನಿಯಂತ್ರಿಸ ಬೇಕಾದರೆ ಅದು ಕೇವಲ ಸಾರ್ವಜನಿಕರಿಂದ ಮಾತ್ರ ಸಾಧ್ಯವೆಂದರು.

ಈ ಸಂದರ್ಭದಲ್ಲಿ ಪೌರಾಯುಕ್ತಾರಾದ ಜಿ ಎನ್ ಚಲಪತಿ, ಮುಖಂಡರಾದ ಶೇಕ್ ಸಾಧಿಕ್, ಉಮೇಶ್, ಕೆ ಎಲ್ ಎನ್ ನಾಗರಾಜ್, ಮಾಜಿ ನಗರಸಭಾ ಸದಸ್ಯರಾದ ಜಗದೀಶ್ ಸೇರಿದಂತೆ ಮತ್ತಿತರರು ಇದ್ದರು.

ಇದನ್ನೂ ಓದಿ: Dr M C Sudhakar: ರಾಮಕುಂಟೆಯಲ್ಲಿ ನಿರ್ಮಾಣ ಹಂತದಲ್ಲಿರುವ ಖಾಸಗಿ ಬಸ್ ಟರ್ಮಿನಲ್ ಪರಿಶೀಲನೆ ನಡೆಸಿದ ಸಚಿವ ಡಾ.ಎಂ.ಸಿ ಸುಧಾಕರ್