ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Sadguru Shri Madhusudhan Sai: ರಾಮನಾಮ ಸ್ಮರಣೆಯಿಂದ ದುರ್ಗುಣಗಳ ನಿವಾರಣೆ: ಸದ್ಗುರು ಶ್ರೀ ಮಧುಸೂದನ ಸಾಯಿ

ಶ್ರೀರಾಮನಿಗೆ ಎದುರಾದ ಸಮಸ್ಯೆಗಳನ್ನು ಹನುಮಂತ ನಿವಾರಿಸಿದನು. ಸಾಧ್ಯವಿರುವ ಎಲ್ಲ ರೀತಿ ಯಲ್ಲೂ ಶ್ರೀರಾಮನ ಸೇವೆ ಮಾಡಿದನು. ಹನುಮಂತನ ನಿಸ್ವಾರ್ಥ ಸೇವೆಯು ಸನಾತನ ಧರ್ಮದ ಸಮಾನತೆಯ ತತ್ವವನ್ನು ಸಾರುತ್ತದೆ. ಸನಾತನ ಧರ್ಮದಲ್ಲಿ ಯಾರೂ ಕೀಳಲ್ಲ, ಎಲ್ಲರೂ ಸಮಾನರು. ಏಕೆಂದರೆ, ಸರ್ವವೂ ಬ್ರಹ್ಮಸ್ವರೂಪವೇ ಆಗಿದೆ

ಚಿಕ್ಕಬಳ್ಳಾಪುರ: ರಾಮನಾಮ ಸ್ಮರಣೆಯಿಂದ ಮನಸ್ಸಿನಲ್ಲಿರುವ ದುರ್ಗುಣಗಳು ದೂರವಾಗಿ, ಶ್ರೀರಾಮನ ಸದ್ಗುಣಗಳು ವ್ಯಕ್ತಿಯ ನಡವಳಿಕೆಯಲ್ಲಿ ಪ್ರತಿಫಲಿಸುತ್ತವೆ. ಆತ್ಮಜ್ಞಾನ ಪಡೆಯಲು ಅಹಂಕಾರವನ್ನು ತೊರೆದು, ನಿಸ್ವಾರ್ಥ ಭಾವದಿಂದ ಮುನ್ನಡೆಯಬೇಕು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ(Shri Madhusudan Sai) ಹೇಳಿದರು.

ಮುದ್ದೇನಹಳ್ಳಿ ಸತ್ಯ ಸಾಯಿ ಗ್ರಾಮದಲ್ಲಿ ಭಾನುವಾರ (ಅ. 18) ಶಾರದಾ ನವರಾತ್ರಿ(Navaratri)ಯ ಎಂಟನೇ ದಿನದ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ರಾಮನಾಮದ ಮಹತ್ವ ವಿವರಿಸಿದರು.

ರಾಮ ಎಂಬ ನಾಮವನ್ನು ಕೇಳುವುದೇ ಆನಂದದಾಯಕ. ಅದನ್ನು ಉಚ್ಚರಿಸುವುದೂ ಸುಲಭ. ನಿರಂತರವಾಗಿ ರಾಮನಾಮ ಸ್ಮರಣೆ ಮಾಡಿದಾಗ ಮನಸ್ಸಿನಲ್ಲಿರುವ ದುರ್ಗುಣಗಳು ದೂರವಾಗಿ, ಶ್ರೀರಾಮನ ಗುಣಗಳು ವ್ಯಕ್ತಿಯ ನಡವಳಿಕೆಯಲ್ಲಿ ಪ್ರತಿಬಿಂಬಿಸುತ್ತವೆ ಎಂದು ತಿಳಿಸಿದರು.

ಇದನ್ನೂ ಓದಿ: Sadguru Madhusudhan Sai: ದುರಾಸೆ, ಋಣಾತ್ಮಕ ಚಿಂತನೆಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮ: ಸದ್ಗುರು ಮಧುಸೂದನ ಸಾಯಿ

ಶ್ರೀರಾಮನಿಗೆ ಎದುರಾದ ಸಮಸ್ಯೆಗಳನ್ನು ಹನುಮಂತ ನಿವಾರಿಸಿದನು. ಸಾಧ್ಯವಿರುವ ಎಲ್ಲ ರೀತಿಯಲ್ಲೂ ಶ್ರೀರಾಮನ ಸೇವೆ ಮಾಡಿದನು. ಹನುಮಂತನ ನಿಸ್ವಾರ್ಥ ಸೇವೆಯು ಸನಾತನ ಧರ್ಮದ ಸಮಾನತೆಯ ತತ್ವವನ್ನು ಸಾರುತ್ತದೆ. ಸನಾತನ ಧರ್ಮದಲ್ಲಿ ಯಾರೂ ಕೀಳಲ್ಲ, ಎಲ್ಲರೂ ಸಮಾನರು. ಏಕೆಂದರೆ, ಸರ್ವವೂ ಬ್ರಹ್ಮಸ್ವರೂಪವೇ ಆಗಿದೆ ಎಂದು ಹೇಳಿದರು.

18cbpm4sai ok

ನವರಾತ್ರಿಯ ಅಷ್ಟಮಿಯ ಮಹತ್ವವನ್ನು ಪ್ರಸ್ತಾಪಿಸಿದ ಸದ್ಗುರುಗಳು, ಮಹಿಷಾಸುರನನ್ನು ಸಂಹರಿಸಿದ ದುರ್ಗಾದೇವಿ ಅಧರ್ಮವನ್ನು ಅಳಿಸಿ ಧರ್ಮವನ್ನು ಪ್ರತಿಷ್ಠಾಪಿಸಿದಳು. ಶಿವ ಮತ್ತು ರಾಮ ಇಬ್ಬರೂ ಬೇರೆ ಬೇರೆ ಅಲ್ಲ, ಇಬ್ಬರೂ ಒಂದೇ ಪರಮತತ್ತ್ವದ ಸ್ವರೂಪಗಳು. ಲೋಕ ಕಲ್ಯಾಣಕ್ಕಾಗಿ ಶಿವನು ಹಾಲಾಹಲ ವಿಷವನ್ನು ಸೇವಿಸಿ ಜಗತ್ತನ್ನು ರಕ್ಷಿಸಿದನು ಎಂದು ತಿಳಿಸಿದರು.

ವಿಶ್ವಶಾಂತಿ ಮತ್ತು ಸಮೃದ್ಧಿಯ ಸಂಕಲ್ಪದೊಂದಿಗೆ ಮುದ್ದೇನಹಳ್ಳಿ ಸತ್ಯ ಸಾಯಿ ಗ್ರಾಮದ ಸತ್ಯ ಸಾಯಿ ಹೃದಯ ಮಂದಿರದ ಆವರಣದಲ್ಲಿರುವ ಯಾಗಶಾಲೆಯಲ್ಲಿ ಭಾನುವಾರ ಮಹಾರುದ್ರ ಯಾಗ ಆರಂಭಗೊಂಡಿತು. ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಸಾನ್ನಿಧ್ಯದಲ್ಲಿ ಅ. 18ರಿಂದ 21ರವರೆಗೆ ನಾಲ್ಕು ದಿನಗಳ ಕಾಲ ಯಾಗ ನಡೆಯಲಿದೆ. ಅ. 11ರಿಂದ 21ರವರೆಗೆ ನಡೆಯುತ್ತಿರುವ ನವರಾತ್ರಿ ಹೋಮ, ದುರ್ಗಾ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಭಾಗವಾಗಿ ಯಾಗವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಕರ್ನಾಟಕದ ಉಪಲೋಕಾಯುಕ್ತ ಬಿ. ವೀರಪ್ಪ, ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ವಿಶ್ವ ತಮಿಳು ವಾಣಿಜ್ಯ ಮಂಡಳಿಯ ಅಧ್ಯಕ್ಷ ಜೆ. ಸೆಲ್ವಕುಮಾರ್ ಹಾಗೂ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಡಾ. ಬಿ.ಎನ್. ನರಸಿಂಹಮೂರ್ತಿ ಉಪಸ್ಥಿತರಿದ್ದರು.