ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chikkaballapur News: ಐತಿಹಾಸಿಕ ಕಲ್ಯಾಣಿಗಳಿಗೆ ಮರುಜೀವ ನೀಡುವ ಮೂಲಕ ಜಲಮೂಲಗಳ ಸಂರಕ್ಷಣೆಗೆ ಒತ್ತು ನೀಡಲಾಗಿದೆ: ಡಾ.ನವೀನ್ ಭಟ್

ತಾಲ್ಲೂಕಿನಾದ್ಯಂತ 30 ಕಲ್ಯಾಣಿಗಳನ್ನು ಗುರುತಿಸಿದ್ದು ಅದರಲ್ಲಿ ಕೊಂಡಪ್ಪ ಕಲ್ಯಾಣಿ ಯು ಒಂದು ಈ ಕಲ್ಯಾಣಿಗೆ ಅನೇಕ ವರ್ಷಗಳ ಇತಿಹಾಸವಿದೆ ಆದರೆ ಮಣ್ಣು, ತ್ಯಾಜ್ಯ, ಕಸ ಕಡ್ಡಿಗಳು ತುಂಬಿಕೊಂಡು ನೀರು ಶೇಖರಣೆ  ಆಗುತ್ತಿರಲ್ಲಿಲ್ಲ ಈಗಾಗಿ ಸ್ವಚ್ಛತಾ ಅಭಿಯಾನವನ್ನು ಇಂದು ಹಮ್ಮಿಕೊಳ್ಳಲಾಗಿದೆ, ಈ ಅಭಿಯಾನದಲ್ಲಿ ನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು

ಜಲಮೂಲಗಳಾದ ಕಲ್ಯಾಣಿಗಳ ಸ್ವಚ್ಛತೆ ಕೈಗೊಂಡು ಪರಿಸರ ಸ್ನೇಹಿ ನಾಡಾಗಿ ಪರಿವರ್ತಿಸುವ ಒಂದು ಸಣ್ಣ ಪ್ರಯತ್ನವನ್ನು ಆಂದೋಲನದ ಮೂಲಕ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ತಿಳಿಸಿದರು

ಚಿಕ್ಕಬಳ್ಳಾಪುರ: ಕಲ್ಯಾಣಿಗಳ ಸ್ವಚ್ಛತೆಯ ಮೂಲಕ ಪುರಾತನ ಜಲಮೂಲಗಳ ಸುರಕ್ಷತೆ( Safety of ancient water bodies)ಗೆ ಜಿಲ್ಲಾಡಳಿತ ಮುತುವರ್ಜಿ ವಹಿಸಿದೆ. ಜಲಮೂಲಗಳ ಜೀವಸೆಲೆಗಳನ್ನು ಕಾಪಾಡಿಕೊಂಡು ಪರಿಸರ ಸ್ನೇಹಿ ನಾಡಾಗಿ ಪರಿವರ್ತಿಸುವ ಒಂದು ಸಣ್ಣ ಪ್ರಯತ್ನವನ್ನು ಈ ಆಂದೋಲನದ ಮೂಲಕ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿ ಕಾರಿ ಡಾ.ನವೀನ್ ಭಟ್ ತಿಳಿಸಿದರು.

ತಾಲ್ಲೂಕಿನ ಮಂಚನಬೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಡಪ್ಪ ಕಲ್ಯಾಣಿ ಸಮೀಪ ಸೋಮವಾರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಸ್ವಚ್ಛತಾ ಅಭಿಯಾನದಡಿ ಐತಿಹಾಸಿಕ ಕಲ್ಯಾಣಿಗಳ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.

kalyani 2

ತಾಲ್ಲೂಕಿನಾದ್ಯಂತ 30 ಕಲ್ಯಾಣಿಗಳನ್ನು ಗುರುತಿಸಿದ್ದು ಅದರಲ್ಲಿ ಕೊಂಡಪ್ಪ ಕಲ್ಯಾಣಿ ಯು ಒಂದು ಈ ಕಲ್ಯಾಣಿಗೆ ಅನೇಕ ವರ್ಷಗಳ ಇತಿಹಾಸವಿದೆ ಆದರೆ ಮಣ್ಣು, ತ್ಯಾಜ್ಯ,ಕಸ ಕಡ್ಡಿಗಳು ತುಂಬಿಕೊಂಡು ನೀರು ಶೇಖರಣೆ  ಆಗುತ್ತಿರಲ್ಲಿಲ್ಲ ಈಗಾಗಿ ಸ್ವಚ್ಛತಾ ಅಭಿಯಾನವನ್ನು ಇಂದು ಹಮ್ಮಿಕೊಳ್ಳಲಾಗಿದೆ, ಈ ಅಭಿಯಾನದಲ್ಲಿ ನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ಇದನ್ನೂ ಓದಿ: Chikkaballapur News: ಸದ್ಗುರು ಸನ್ನಿಧಿಯಲ್ಲಿ ‘ಸಪ್ತಋಷಿ ಆವಾಹನಂ’ ಪ್ರಕ್ರಿಯೆ ನಡೆಸಿಕೊಟ್ಟ ಕಾಶಿ ವಿಶ್ವನಾಥ ದೇವಸ್ಥಾನದ ಏಳು ಜನ ಅರ್ಚಕರು

ಈ ಸ್ವಚ್ಛತಾ ಅಭಿಯಾನವನ್ನು ಇದೇ ರೀತಿ ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿರುವ ಕಲ್ಯಾಣಿಗಳ ನೈರ್ಮಲ್ಯಿಕರಣ ಮಾಡಲು ಯೋಜನೆ ಮಾಡಲಾಗಿದೆ. ಅದೇ ರೀತಿಯಾಗಿ ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡುವುದರಿಂದ ಪ್ಲಾಸ್ಟಿಕ್ ಮುಕ್ತ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲೆಯಾಗಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು.

ಈ ಸಂಬಂಧ ಗ್ರಾಮ ಪಂಚಾಯಿತಿ ವತಿಯಿಂದ ಈಗಾಗಲೇ ಅರಿವು ಮೂಡಿಸಲಾಗಿದೆ. ಯಾರೊಬ್ಬರೂ ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಎಸೆಯದೇ, ಕಸ ಸಂಗ್ರಹಣೆ ಮಾಡುವ ಸ್ವಚ್ಛತಾ ವಾಹನಗಳಿಗೆ ನೀಡಿ, ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

kalyani

ಸ್ವಾಭಾವಿಕವಾಗಿ ಮಳೆಗಾಲವು ಜೂನ್ ತಿಂಗಳಿನಿಂದ ಪ್ರಾರಂಭವಾಗಲಿದೆ. ಅದಕ್ಕೂ ಮುನ್ನವೇ ಜಿಲ್ಲೆಯಲ್ಲಿ ಮಳೆ ಆರಂಭವಾಗಿದೆ ಆದ್ದರಿಂದ ಎಲ್ಲಾ ಜಲಮೂಲಗಳನ್ನು ಸಿದ್ಧತೆ ಮಾಡಿ, ನೀರು ಶೇಖರಣೆ ಮಾಡುವ ಮೂಲಕ ನೀರು ಇಂಗುವಂತೆ ಮಾಡಬೇಕಿದೆ ಎಂದರು.

ಜಿಲ್ಲಾ ಪಂಚಾಯತ್‌ನ ಸಹಾಯಕ ನಿರ್ದೇಶಕರಾದ ಮುನಿರಾಜು, ತಾಲ್ಲೂಕು ಪಂಚಾ ಯತ್ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್ ಜಿ.ಆರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀಧರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಕೃಷ್ಣ, ತಾಲ್ಲೂಕಿನ ಎಲ್ಲಾ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ನರೇಗಾ ಸಿಬ್ಬಂದಿ, ಓಖಐಒ ಸಿಬ್ಬಂದಿ, ತಾಲ್ಲೂಕಿನ ಎಲ್ಲಾ ಪಂಚಾಯಿತಿಗಳ ಕರ ವಸೂಲಿಗಾರರು ಜಲಗಾರರು, ಸ್ವಚ್ಛತಾಗಾರರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಸೇರಿದಂತೆ ಇತರರು ಹಾಜರಿದ್ದರು.