ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chikkaballapur News: ಓದು ಸಂಸ್ಕೃತಿಗೆ ಹಿರಿಯ ಸಾಹಿತಿ ಸರಸಮ್ಮ ಪ್ರೋತ್ಸಾಹ: ಮಹಿಳಾ ಕಾಲೇಜಿಗೆ ₹10 ಸಾವಿರ ಮೌಲ್ಯದ ಪುಸ್ತಕ ದಾನ

ಶಿಕ್ಷಕ ವೃತ್ತಿಯೊಂದಿಗೆ ಸಾಹಿತ್ಯ ಸೇವೆಯನ್ನೂ ಸಮರ್ಪಕವಾಗಿ ಮುಂದುವರಿಸಿಕೊಂಡು ಬರುತ್ತಿರುವ ಸರಸಮ್ಮ ಅವರ ಸೇವೆ ಶ್ಲಾಘನೀಯವಾಗಿದೆ ಎಂದು ಹೇಳಿದರು. ವಿದ್ಯಾರ್ಥಿನಿ ಯರು ಪದವಿಯ ಪಠ್ಯದ ಜೊತೆಗೆ ಕಥೆ ಕಾದಂಬರಿ ವಿಮರ್ಶೆ ಸಂಶೋಧನಾ ಗ್ರಂಥಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು

ಚಿಕ್ಕಬಳ್ಳಾಪುರ: ಪುಸ್ತಕ ಓದು ಸಂಸ್ಕೃತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಹಿರಿಯ ಸಾಹಿತಿ ಎ.ಸರಸಮ್ಮ ಅವರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿ ಗಳಿಗೆ ₹10 ಸಾವಿರ ಮೌಲ್ಯದ ಪುಸ್ತಕಗಳನ್ನು ದಾನ ಮಾಡಿದರು.

ನಗರ ಹೊರವಲಯದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ “ಪುಸ್ತಕ ಸಂಸ್ಕೃತಿ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜೆನ್ ಜಿ ಯುಗ ದಲ್ಲಿ ಪುಸ್ತಕ ಓದುವ ಅಭ್ಯಾಸ ಕಡಿಮೆಯಾಗುತ್ತಿದೆ ಎಂಬ ಆತಂಕ ಸಮಾಜದಲ್ಲಿದೆ. ಆದರೆ ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿದರೆ ಓದಿನ ಸಂಸ್ಕೃತಿಯನ್ನು ಮತ್ತಷ್ಟು ಬೆಳೆಸಲು ಸಾಧ್ಯವಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ನಾನು ಈವರೆಗೆ 45 ಕೃತಿಗಳನ್ನು ರಚಿಸಿದ್ದೇನೆ. ಕಥೆ, ಕವನ, ಚುಟುಕು, ದರ್ಶನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೆಲಸ ಮಾಡಿದ್ದೇನೆ. ಕೃತಿ ರಚಿಸುವುದಕ್ಕಿಂತ ಅದನ್ನು ಮುದ್ರಿಸಿ ಓದುಗರ ಕೈಗೆ ತಲುಪಿಸುವುದೇ ದೊಡ್ಡ ಸವಾಲಾಗಿದೆ. ಎಷ್ಟೇ ಕಷ್ಟ ವಾದರೂ ನನ್ನ ಪ್ರಯತ್ನವನ್ನು ಬಿಟ್ಟಿಲ್ಲ. ಪುಸ್ತಕ ಲೋಕಾರ್ಪಣೆಯ ನಂತರ ಓದುಗರನ್ನು ಮುಟ್ಟಬೇಕಾದರೆ ಅದರ ಮುಖಪುಟದ ವಿನ್ಯಾಸವು ಪ್ರಮುಖ ಪಾತ್ರ ವಹಿಸುತ್ತದೆ” ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: Chikkaballapur News: ನಾಯಿ ಮತ್ತು ಹಾವು ಕಡಿತದಿಂದಾಗುವ ಸಾವನ್ನು ಕಡಿಮೆ ಮಾಡಲು ಕ್ರಮ ವಹಿಸಿ: ಡಾ.ಎನ್.ಭಾಸ್ಕರ್

ಓದುವ ಸಮಯದಲ್ಲಿ ವೈಯಕ್ತಿಕ ಸುಖ ಲಾಲಸೆ ಗಳಿಗೆ ವಿದ್ಯಾರ್ಥಿಗಳು ಗಮನ ಕೊಡ ಬಾರದು. ನಿಶ್ಚಿತ ಯೋಜನೆ ಅಧ್ಯಾಪಕರ ಮಾರ್ಗದರ್ಶನ ಪರಿಶ್ರಮವಿದ್ದಲ್ಲಿ ಗುರಿ ಮುಟ್ಟಲು ಸಾಧ್ಯ ಎಂದರು.

ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ವಿ.ಕೃಷ್ಣ ಮಾತನಾಡಿ, ಶಿಕ್ಷಕ ವೃತ್ತಿ ಯೊಂದಿಗೆ ಸಾಹಿತ್ಯ ಸೇವೆಯನ್ನೂ ಸಮರ್ಪಕವಾಗಿ ಮುಂದುವರಿಸಿಕೊಂಡು ಬರುತ್ತಿರುವ ಸರಸಮ್ಮ ಅವರ ಸೇವೆ ಶ್ಲಾಘನೀಯವಾಗಿದೆ ಎಂದು ಹೇಳಿದರು. ವಿದ್ಯಾರ್ಥಿನಿಯರು ಪದವಿಯ ಪಠ್ಯದ ಜೊತೆಗೆ ಕಥೆ ಕಾದಂಬರಿ ವಿಮರ್ಶೆ ಸಂಶೋಧನಾ ಗ್ರಂಥಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಜಿ.ಡಿ. ಚಂದ್ರಯ್ಯ ಮಾತನಾಡಿ, ಎಲ್ಲವೂ ವ್ಯವಹಾರಿಕವಾಗಿರುವ ಇಂದಿನ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತವಾಗಿ ಪುಸ್ತಕ ದಾನ ಮಾಡಿರುವುದು ಮಾದರಿಯ ಕೆಲಸವಾಗಿದೆ. ಇಂತಹ ಸಾಹಿತಿಗಳ ಸಾಹಿತ್ಯ ಸೇವೆ ಹೆಚ್ಚೆಚ್ಚು ಮುಂದುವರಿಯಬೇಕು ಎಂದು ಆಶಿಸಿದರು.

ಕನ್ನಡ ಉಪನ್ಯಾಸಕ ಮುನಿರಾಜು ಎಂ ಅರಿಕೆರೆ ಮಾತನಾಡಿ, ಹಿರಿಯ ಸಾಹಿತಿ ಸರಸಮ್ಮ ಅವರು ಗಡಿ ಜಿಲ್ಲೆಯಲ್ಲಿ ಕನ್ನಡದ ಪರಿಮಳವನ್ನು ಪಸರಿಸುವ ಉದ್ದೇಶದಿಂದ ಪದವಿ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ನೀಡಿರುವುದು ಅರ್ಥಪೂರ್ಣ ಕಾರ್ಯವಾಗಿದೆ. ವಿದ್ಯಾರ್ಥಿ ಗಳು ಪುಸ್ತಕಗಳನ್ನು ಓದಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕ್ರೀಡಾಪಟು ಲೋಕೇಶ್, ಸಾಹಿತಿ ಸರಸಮ್ಮ ನಿವೃತ್ತ ಪ್ರಾಂಶುಪಾಲ ಬಿವಿ ಕೃಷ್ಣ, ಇಂಗ್ಲೀಷ್ ಉಪನ್ಯಾಸಕ ನರಸಿಂಹಮೂರ್ತಿ ಸೇರಿದಂತೆ ಅಂತಿಮ ವರ್ಷದ ಬಿ.ಎ ಹಾಗೂ ದ್ವಿತೀಯ ಬಿಎ ಐಚ್ಛಿಕ ಕನ್ನಡ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.