ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

MP Dr K Sudhakar: ಬಾಂಗ್ಲಾ ನಿವಾಸಿಗಳ ಹೆಸರು ಸೇರದಂತೆ ಎಚ್ಚರ ವಹಿಸಿ, ಪ್ರಜಾಪ್ರಭುತ್ವ ಉಳಿಸುವ ಗುರುತರ ಜವಾಬ್ದಾರಿ ಇರಲಿ: ಸಂಸದ ಡಾ.ಕೆ.ಸುಧಾಕರ್

ರಾಮನಗರದ ಕಲ್ಯಾಣ ಮಂಟಪದಲ್ಲಿ ವಿದೇಶಿ ಪ್ರಜೆಗಳನ್ನು ಕೂಡ ಸೇರಿಸಿ ಮತದಾರರ ಪಟ್ಟಿಗೆ ಸೇರಿಸುವ ಕೆಲಸ ನಡೆಯುತ್ತಿರುವ ಆರೋಪ ಕೇಳಿ ಬಂದಿದೆ. ಇದರಲ್ಲಿ ಬಾಂಗ್ಲಾ ನಿವಾಸಿಗಳು ಕೂಡ ಇದ್ದಾರೆ. ಕಾಂಗ್ರೆಸ್ ಸರ್ಕಾರ ಕೇವಲ ಮತಕ್ಕಾಗಿ ಇಂತಹ ಕೆಲಸ ಮಾಡುತ್ತಿದೆ. ಈ ಹಿಂದೆ ವಾಸ ದೃಢೀಕರಣ ಪತ್ರ ನೀಡುವ ಅಧಿಕಾರವನ್ನು ಪಿಡಿಒಗೆ ನೀಡಲು ಕ್ರಮ ವಹಿಸಲಾಗಿತ್ತು.

ಬಿಎಲ್‌ಎ-2 ಕಾರ್ಯಕರ್ತರು ಚುನಾವಣಾಧಿಕಾರಿಗಳ ಜೊತೆ ಇದ್ದು, ಅರ್ಹ ಮತದಾರರ ಹೆಸರು ಪಟ್ಟಿಗೆ ಸೇರುವಂತೆ ಕ್ರಮ ವಹಿಸಬೇಕಿದೆ. ಬಾಂಗ್ಲಾ ನಿವಾಸಿಗಳ ಸೇರಿದಂತೆ ಅನರ್ಹರ ಹೆಸರು ಮತದಾರರ ಪಟ್ಟಿಗೆ ಸೇರದಂತೆ ಎಚ್ಚರ ವಹಿಸಬೇಕೆಂದು ಸಂಸದ ಡಾ.ಕೆ.ಸುಧಾಕರ್ ಸೂಚನೆ ನೀಡಿದರು.

ಚಿಕ್ಕಬಳ್ಳಾಪುರ: ಬಿಎಲ್‌ಎ-9 ಕಾರ್ಯಕರ್ತರು ಚುನಾವಣಾಧಿಕಾರಿಗಳ ಜೊತೆ ಇದ್ದು, ಅರ್ಹ ಮತದಾರರ ಹೆಸರು ಪಟ್ಟಿಗೆ ಸೇರುವಂತೆ ಕ್ರಮ ವಹಿಸಬೇಕಿದೆ. ಬಾಂಗ್ಲಾ ನಿವಾಸಿಗಳ ಸೇರಿದಂತೆ ಅನರ್ಹರ ಹೆಸರು ಮತದಾರರ ಪಟ್ಟಿಗೆ ಸೇರದಂತೆ ಎಚ್ಚರ ವಹಿಸಬೇಕೆಂದು ಸಂಸದ ಡಾ.ಕೆ.ಸುಧಾಕರ್(MP Dr K Sudhakar) ಸೂಚನೆ ನೀಡಿದರು.

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-ಎಸ್‌ಐಆರ್ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ನಡೆದ ಬಿಎಲ್‌ಎ-2 ಕಾರ್ಯಕರ್ತರ ಜೊತೆಗಿನ ಸಭೆಯಲ್ಲಿ ಮಾತನಾಡಿದರು.

ರಾಮನಗರದ ಕಲ್ಯಾಣ ಮಂಟಪದಲ್ಲಿ ವಿದೇಶಿ ಪ್ರಜೆಗಳನ್ನು ಕೂಡ ಸೇರಿಸಿ ಮತದಾರರ ಪಟ್ಟಿಗೆ ಸೇರಿಸುವ ಕೆಲಸ ನಡೆಯುತ್ತಿರುವ ಆರೋಪ ಕೇಳಿ ಬಂದಿದೆ. ಇದರಲ್ಲಿ ಬಾಂಗ್ಲಾ ನಿವಾಸಿಗಳು ಕೂಡ ಇದ್ದಾರೆ. ಕಾಂಗ್ರೆಸ್ ಸರ್ಕಾರ ಕೇವಲ ಮತಕ್ಕಾಗಿ ಇಂತಹ ಕೆಲಸ ಮಾಡುತ್ತಿದೆ. ಈ ಹಿಂದೆ ವಾಸ ದೃಢೀಕರಣ ಪತ್ರ ನೀಡುವ ಅಧಿಕಾರವನ್ನು ಪಿಡಿಒಗೆ ನೀಡಲು ಕ್ರಮ ವಹಿಸಲಾಗಿತ್ತು. ಅದಕ್ಕೂ ಮೊದಲು ಕಂದಾಯ ಇಲಾಖೆಗೆ ಮಾತ್ರ ಆ ಅಧಿಕಾರವಿತ್ತು. ಇದನ್ನು ನಾನು ಹಿರಿಯ ಗಮನಕ್ಕೆ ತಂದಿದ್ದು, ಅದನ್ನು ತಡೆಹಿಡಿಯ ಲಾಗಿದೆ.

ಇದನ್ನೂ ಓದಿ: Chikkaballapur News: ಭರತನಾಟ್ಯದ ಭವ್ಯ ರಂಗಪ್ರವೇಶ: ಸಂಸ್ಕೃತಿ ಸಂರಕ್ಷಣೆಯೊಂದಿಗೆ ಆಧ್ಯಾತ್ಮಿಕ ಉನ್ನತಿಗೆ ಕೃತಿಕಾ ಹೆಜ್ಜೆ

ಈಗ ಕಾಂಗ್ರೆಸ್ ಸರ್ಕಾರ ಬಾಂಗ್ಲಾ ನಿವಾಸಿಗಳಿಗೆ ವೋಟರ್ ಐಡಿ ಮಾಡಿಸಿಕೊಡುತ್ತಿದೆ. ಇದು ಅತ್ಯಂತ ದುರದೃಷ್ಟಕರವಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೂ ಈ ರೀತಿ ಆಗದಂತೆ ಕಾರ್ಯಕರ್ತರು ಎಚ್ಚರ ವಹಿಸಬೇಕಿದೆ. ಮಂಚೇನಹಳ್ಳಿ, ಹಾರೋಹಳ್ಳಿ, ಮಂಡಿಕಲ್, ಪೆರೇಸಂದ್ರ ಮೊದಲಾದ ಭಾಗಗಳ ಮುಖಂಡರು ವಿಶೇಷ ಎಚ್ಚರ ವಹಿಸ ಬೇಕು ಎಂದು ಸೂಚಿಸಿದರು.

ಬಿಎಲ್‌ಒಗಳು ಸರ್ಕಾರದಿಂದ ಅಧಿಕೃತವಾಗಿ ನಿಯೋಜಿಸ್ಪಟ್ಟಿರುತ್ತಾರೆ. ಅವರು ಪ್ರತಿ ಮನೆಗೆ ಕನಿಷ್ಠ ಮೂರು ಬಾರಿ ಭೇಟಿ ಮಾಡಿ ಪರಿಶೀಲನೆ ನಡೆಸಬೇಕಾಗುತ್ತದೆ. ಬಿಎಲ್‌ಎ ಗಳು ಕಡ್ಡಾಯವಾಗಿ ಈ ಅಧಿಕಾರಿಗಳ ಜೊತೆ ಇದ್ದು, ಮತದಾರರ ಪಟ್ಟಿಗೆ ಅರ್ಹ ಮತದಾರರ ಹೆಸರು ಸೇರುವಂತೆ ನೋಡಿ ಕೊಳ್ಳಬೇಕು. ಬೇರೆ ದೇಶದವರ ಹೆಸರು ಪಟ್ಟಿಗೆ ಸೇರದಂತೆ ತೀವ್ರ ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಿದರು.

cbpm5ss1

ಭಾರತೀಯ ಜನತಾ ಪಾರ್ಟಿ ದೆಹಲಿ ಅಥವಾ ಬೆಂಗಳೂರಿನಿಂದ ಬೆಳೆದಿಲ್ಲ. ದೇಶದ ಪ್ರತಿ ಕಾರ್ಯ ಕರ್ತನಿಂದ ಬೂತ್ ಮಟ್ಟದಿಂದಲೇ ಬಿಜೆಪಿ ಬೆಳೆದಿದೆ. ಬಿಎಲ್‌ಎ 2 ಎಂಬುದು ಗುರುತರವಾದ ಜವಾಬ್ದಾರಿಯಾಗಿದ್ದು, ಪ್ರಜಾಪ್ರಭುತ್ವವನ್ನು ಉಳಿಸುವ ಹೊಣೆ ನೀಡಲಾ ಗಿದೆ. ಅರ್ಹ ಮತದಾರರು ಹೆಸರನ್ನು ಪಟ್ಟಿಗೆ ಸೇರಿಸುವುದು ಹಾಗೂ ಅನರ್ಹರನ್ನು ಪಟ್ಟಿ ಯಿಂದ ತೆಗೆದು ಹಾಕುವಂತೆ ನೋಡಿ ಕೊಳ್ಳುವ ಜವಾಬ್ದಾರಿ ಬಿಎಲ್‌ಎ 2 ಕಾರ್ಯಕರ್ತರಿಗೆ ಇದೆ ಎಂದರು.

ಪಕ್ಷದ ಕಾರ್ಯಕರ್ತರು ನೇರವಾಗಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಾರೆ. ಜನಪ್ರತಿನಿಧಿಗಳು ಕಾರ್ಯ ಕರ್ತರ ಮೂಲಕವೇ ಜನರ ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ಆದ್ದರಿಂದಲೇ ಬಿಜೆಪಿ ಕಾರ್ಯಕರ್ತ ರಿಗೆ ವಿಶೇಷ ಗೌರವ ಇದೆ. ಕಾರ್ಯಕರ್ತರು ತಮ್ಮ ಬೂತ್ ಮಟ್ಟ ದಲ್ಲಿ ಯಾರು ಹೊಸ ಮತದಾರರು ಎಂದು ತಿಳಿದುಕೊಳ್ಳಬೇಕು. ಮಹಿಳೆಯರು, ಪುರುಷರು, ಹೊಸ ಮತದಾರರು, ವೃದ್ಧರು, ವಿಕಲ ಚೇತನರು, ಯೋಜನೆಗಳ ಫಲಾನುಭವಿಗಳು ಹೀಗೆ ಬೇರೆ ಬೇರೆ ಜನವರ್ಗದ ಬಗ್ಗೆ ಕಾರ್ಯಕರ್ತರ ಬಳಿ ಮಾಹಿತಿ ಇರಬೇಕು. ಕಾರ್ಯಕರ್ತರು ಪ್ರತಿ ಮನೆಗೆ ಹೋಗಿ ಜನಸಂಪರ್ಕ ಸಾಧಿಸಬೇಕು. ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಮನೆಗೆ ಭೇಟಿ ನೀಡುವ ಬದಲು ಆಗಾಗ್ಗೆ ಭೇಟಿ ನೀಡಬೇಕು ಎಂದರು.

70 ವರ್ಷ ಮೇಲ್ಪಟ್ಟ ವೃದ್ಧರಿಗೆ ಕೇಂದ್ರ ಸರ್ಕಾರದಿಂದ ಆಯುಷ್ಮಾನ್ ಭಾರತ್ ಯೋಜನೆ ಯಡಿ 5 ಲಕ್ಷ ರೂ. ವಿಮೆ ಲಭ್ಯವಿದೆ. ಇಂತಹ ಯೋಜನೆಗಳು ಜನರಿಗೆ ಲಭ್ಯವಾಗುವಂತೆ ಮಾಡಲು ಕಾರ್ಯ ಕರ್ತರು ಕ್ರಮ ವಹಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರು ನೀಡುತ್ತಿರುವ ಯೋಜನೆಗಳ ಲಾಭ ಜನರಿಗೆ ತಲುಪಲು ಕಾರ್ಯಕರ್ತರು ಸೇತುವೆಯಂತೆ ಕೆಲಸ ಮಾಡಬೇಕು.

2002ರ ಬಳಿಕ ಎಸ್‌ಐಆರ್ ಆಗಿರಲಿಲ್ಲ. ಪಕ್ಷದ ಕಾರ್ಯಕರ್ತರು ಇದರ ಪ್ರಕ್ರಿಯೆಯನ್ನು ಅರಿತು ಕೊಂಡು ಕೆಲಸ ಮಾಡಬೇಕು. ಯಾವುದೇ ಅರ್ಹ ಮತದಾರರ ಹೆಸರು ಬಿಟ್ಟು ಹೋಗದಂತೆ ಎಚ್ಚರ ವಹಿಸಬೇಕು. ಮೃತಪಟ್ಟವರ ಹೆಸರನ್ನು ತೆಗೆದು ಹಾಕಲು ಕೂಡ ಕ್ರಮ ವಹಿಸಬೇಕು ಎಂದರು.