ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಡಾ.ರಾಜ್ ಕುಮಾರ್ ರವರ ಸರಳ ಜೀವನ ಶೈಲಿ, ಮೌಲ್ಯಗಳನ್ನು ಎಲ್ಲರೂ ಪಾಲಿಸಬೇಕು: ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್*

ಡಾ. ರಾಜಕುಮಾರ್ ಅವರು ನಟಿಸಿದ ಚಿತ್ರ ಕಥೆಗಳು ಸಾಮಾಜಿಕ ಸಮಸ್ಯೆಗಳನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಸಂದೇಶಗಳುನ್ನು ನೀಡುವ ರೀತಿಯಲ್ಲಿ ಮೂಡಿ ಬರುತ್ತಿದ್ದವು. ಅಭಿನಯ ವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡಿದ್ದ ಅವರು ಯಾವುದೇ ರೀತಿಯ ಪಾತ್ರ ನೀಡಿ ದರೂ ಸಹ ನೋಡುಗರಿಗೆ ಮನಮುಟ್ಟುವ ಹಾಗೆ ತಲುಪಿಸುವ ಕಲೆ ಅವರಲ್ಲಿತ್ತು

ಚಿಕ್ಕಬಳ್ಳಾಪುರ: ಡಾ.ರಾಜ್ ಕುಮಾರ್ ಮೇರು ನಟರಾಗಿದ್ದರೂ ಸಹ ಸ್ವಲ್ಪವೂ ಕೂಡ ಅಹಂ ಇಲ್ಲದೆ ಸಾಮಾನ್ಯರಲ್ಲಿ ಸಾಮನ್ಯರಾಗಿದ್ದು, ಕನ್ನಡ ಚಿತ್ರರಂಗಕ್ಕೆ ಅಪಾರ ಕೀರ್ತಿ ತಂದುಕೊಟ್ಟರು, ಅವರ ಸರಳ ಜೀವನ ಶೈಲಿ ಹಾಗೂ ನೈತಿಕ ಮೌಲ್ಯ ಆದರ್ಶಗಳನ್ನು ಯುವ ಜನತೆಯೂ ಜೀವನ ದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಡಿ.ಹೆಚ್. ಅಶ್ವಿನ್ ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಜಿ ಪಂ, ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗ ದಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ, ನಟ ಸಾರ್ವಭೌಮ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ರತ್ನ ಡಾ. ರಾಜ್ ಕುಮಾರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಡಾ.ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ ದರು.

ಡಾ. ರಾಜಕುಮಾರ್ ಅವರು ನಟಿಸಿದ ಚಿತ್ರ ಕಥೆಗಳು ಸಾಮಾಜಿಕ ಸಮಸ್ಯೆಗಳನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಸಂದೇಶಗಳುನ್ನು ನೀಡುವ ರೀತಿಯಲ್ಲಿ ಮೂಡಿ ಬರುತ್ತಿದ್ದವು. ಅಭಿನಯ ವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡಿದ್ದ ಅವರು ಯಾವುದೇ ರೀತಿಯ ಪಾತ್ರ ನೀಡಿ ದರೂ ಸಹ ನೋಡುಗರಿಗೆ ಮನಮುಟ್ಟುವ ಹಾಗೆ ತಲುಪಿಸುವ ಕಲೆ ಅವರಲ್ಲಿತ್ತು. ಸರಳ ಜೀವನ ಅನುಸರಿ ಸಿದ್ದ ಅವರು ಅನ್ಯ ಭಾಷೆಯ ಚಿತ್ರರಂಗಗಳಿಂದ ಹೆಚ್ಚಿನ ಅವಕಾಶಗಳು  ಬಂದರೂ ಸಹ ಒಪ್ಪಿ ಕೊಳ್ಳದೆ ಕನ್ನಡ ಅಭಿಮಾನವನ್ನು ಮೆರೆದರು. ತಾವು ನಟಿಸಿದ ಚಿತ್ರಗಳಲ್ಲಿ ಧೂಮಪಾನ ಮತ್ತು ಮದ್ಯಪಾನ ದೃಶ್ಯಗಳಿಗೆ ಅವಕಾಶ ನೀಡುತ್ತಿರಲಿಲ್ಲ. ತಮ್ಮದೇ ಮೌಲ್ಯಗಳನ್ನು ಅಳವಡಿಸಿ ಕೊಂಡು ಇತರರಿಗೆ ಮಾದರಿಯಾಗಿದ್ದರು ಎಂದು ಬಣ್ಣಿಸಿದರು.

ಇದನ್ನೂ ಓದಿ: Chikkaballapur News: ನನ್ನ ವಿರುದ್ಧ ನಿಂತು ಜಿಲ್ಲಾ ಪಂಚಾಯಿತಿ ಸ್ಥಾನ ಗೆಲ್ಲಲಿ ನೋಡೋಣ : ಕಾಕಲ ಚಿಂತೆ ರಾಜಣ್ಣ ಸವಾಲು

ಕನ್ನಡ ಸಾಹಿತ್ಯ  ಪರಿಷತ್ ನ  ಚಿಕ್ಕಬಳ್ಳಾಪುರ  ಜಿಲ್ಲಾಧ್ಯಕ್ಷ ಪ್ರೊ.ಕೋಡಿರಂಗಪ್ಪ ಮಾತನಾಡಿ, ಡಾ.ರಾಜ್ ಕುಮಾರ್ ಅವರು ನಟಿಸದೇ ಇರುವ ಪಾತ್ರವೇ ಇಲ್ಲ, ಡಾ. ರಾಜ್ ಕುಮಾರ್ ಎಂದರೆ ಕನ್ನಡದ ದೊಡ್ಡ ಶಕ್ತಿ. ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಹೀಗೆ ಎಲ್ಲಾ ಪಾತ್ರಗಳನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿ ಸಮಾಜಕ್ಕೆ ಅತ್ಯುತ್ತಮ ಸಂದೇಶಗಳನ್ನು ನೀಡಿದವರು. ಸಚ್ಚಾರಿತ್ರ‍್ಯದ ಮೇರು ನಟ ಡಾ.ರಾಜ್ ಕುಮಾರ್ ಅವರು ಗೋಕಾಕ್ ಚಳುವಳಿಗೆ ಧುಮುಕಿದ ಪರಿಣಾಮ ಚಳುವಳಿಗೆ ಹೊಸ ಶಕ್ತಿ ಬಂದಿತು. ಕೇವಲ ನಟನಾ ಕೌಶಲ್ಯದಿಂದಷ್ಟೇ ಅಲ್ಲದೇ ನಾಡು ನುಡಿ ಹೋರಾಟಗಳಲ್ಲಿ ಭಾಗವಹಿಸಿ ಕನ್ನಡಿಗರನ್ನು ಪ್ರೇರೇಪಿಸುತ್ತಿದ್ದರು. ಯಾವುದೇ ಪಾತ್ರ ನೀಡಿದರೂ ಅದಕ್ಕೆ ನ್ಯಾಯ ಕೊಡುತ್ತಿದ್ದರು. ಒಡೆದು ಹೋದ ಅನೇಕ ಸಂಬಂಧಗಳು  ಅವರ ಚಲನಚಿತ್ರ ಗಳನ್ನು ನೋಡಿಕೊಂಡು ಬಂದ ನಂತರ ಒಂದಾಗಿ ಗಟ್ಟಿಯಾಗುತ್ತಿದ್ದವು. ಅವರ ಚಲನಚಿತ್ರಗಳು ಕೌಟುಂಬಿಕ ಸಂದೇಶಗಳಿAದ ಕೂಡಿದ್ದು, ಅವರು ಅತ್ಯುತ್ತಮ ಗಾಯಕರಾಗಿಯೂ ಜನಮನ ಗೆದ್ದಿದ್ದಾರೆ. ನೈತಿಕ ಮೌಲ್ಯಗಳು, ಸಾಮಾಜಿಕ ಮೌಲ್ಯಗಳನ್ನು ಬಿತ್ತುವಲ್ಲಿ ಡಾ.ರಾಜ್ ಚಿತ್ರಗಳು ಯಶಸ್ವಿಯಾಗಿವೆ ಎಂದರು.

ಪತ್ರಕರ್ತರಾದ ಟಿ.ಎಸ್.ನಾಗೇಂದ್ರ ಬಾಬು ಮಾತನಾಡಿ, ಸಿಂಗಾನಲ್ಲೂರು ಪುಟ್ಟ ಸ್ವಾಮಿಯ ಮತ್ತು ಅವರ ಧರ್ಮಪತ್ನಿ ಲಕ್ಷ್ಮಮ್ಮ ರವರ ಸುಪುತ್ರರಾಗಿ 1929 ಏಪ್ರಿಲ್ 24ರಂದು ಜನಿಸಿದ ಮುತ್ತುರಾಜು ಈ ಮುತ್ತುರಾಜು ಮುಂದೆ 1954ರಲ್ಲಿ ಬೇಡರ ಕಣ್ಣಪ್ಪ ಚಲನಚಿತ್ರದ ಮೂಲಕ ಕನ್ನಡ ಚಲನಚಿತ್ರ ರಂಗ ಪ್ರವೇಶ ಮಾಡಿ ರಾಜಕುಮಾರ್ ಆದರು ಎಂದರು.

ರಾಜಕುಮಾರ್ ಅವರು ಕನ್ನಡ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡುವ ಮುನ್ನ ನಾಟಕ ಕಂಪೆನಿಗಳಲ್ಲಿ ಅಭಿನಯ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಚಿಕ್ಕಬಳ್ಳಾಪುರಕ್ಕೂ ಸಹ ಡಾ. ರಾಜಕುಮಾರ್ ಮತ್ತು ಅವರ ತಂಡದ ಕ್ಯಾಂಪ್ ಬಂದಿತ್ತು. ಈಗಿನ ಬಿಬಿ ರಸ್ತೆಯ ವಾಣಿ ಟಾಕೀಸ್ ಒಂದು ತಿಂಗಳುಗಳ ಕಾಲ ನಾಟಕಗಳನ್ನು ಮಾಡಿದ್ದರು. ಅದೇ ಸಂದರ್ಭದಲ್ಲಿ ಚಿಕ್ಕಬಳ್ಳಾಪುರಕ್ಕೆ ಡಾ. ರಾಜಕುಮಾರ್, ಗುಬ್ಬಿ ವೀರಣ್ಣ, ಜಯಮ್ಮ ನರಸಿಂಹರಾಜು, ಟಿ.ಎನ್. ಬಾಲಕೃಷ್ಣ , ಜಿ .ವಿ. ಅಯ್ಯರ್ ಮುಂತಾದವರು ಬಂದಿದ್ದರು ಎಂದರು.

ಡಾ.ರಾಜಕುಮಾರ್ ಅವರ ಅತ್ಯಂತ ಜನಪ್ರಿಯ ಸಿನಿಮಾ ಬಂಗಾರದ ಮನುಷ್ಯ ಚಿಕ್ಕಬಳ್ಳಾಪುರ ಸಮೀಪ ಬಿಜ್ಜವರ ಗ್ರಾಮದಲ್ಲಿ ಒಂದು ತಿಂಗಳ ಕಾಲ ಚಿತ್ರಿಕರಣ ನಡೆದಿತ್ತು. ರಾಜಕುಮಾರ್ ಅಭಿನಯದ ಹುಲಿಯ ಹಾಲಿನ ಮೇವು ಚಲನಚಿತ್ರ ನಂದಿ ಗ್ರಾಮದಲ್ಲಿ ಚಿತ್ರೀಕರಣ ನಡೆಯಿತು. ಚಿಕ್ಕಬಳ್ಳಾಪುರಕ್ಕೆ ಸಮೀಪ ನಂದಿ ಬೆಟ್ಟದ ಹೊರಾಂಗಣದಲ್ಲಿ ಅನೇಕ ಚಿತ್ರಗಳ ಚಿತ್ರೀಕರಣ ಆಗಿತ್ತು ಹಾಗೆಲ್ಲ ಡಾ. ರಾಜಕುಮಾರ್ ಅವರ ಅಭಿಮಾನಿಗಳು ಚಿಕ್ಕಬಳ್ಳಾಪುರದಿಂದ ಹೊರಟು ಡಾ. ರಾಜಕುಮಾರ್ ಅವರನ್ನು ಕಣ್ತುಂಬಿಕೊಳ್ಳುತ್ತಿದ್ದರು ಎಂದು ರಾಜ್ ಕುಮಾರ್ ಅವರ ಜೀವನ ಚರಿತ್ರೆ ಕುರಿತು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಹೇಶ್ ಕುಮಾರ್ ಮತ್ತು ಪ್ರಸನ್ನ ಕುಮಾರ್ ಅವರ ಕಲಾತಂಡದಿAದ ಡಾ.ರಾಜ್ ಕುಮಾರ್ ಅವರು ನಟಿಸಿದ ಹಾಗೂ ಅವರು ಕಂಠದಾನ ಮಾಡಿದ ಚಲನಚಿತ್ರ ಗೀತೆಗಳ ಗಾಯನ ನಡೆಯಿತು. ಡಾ. ರಾಜಕುಮಾರ್ ಅವರ ಧ್ವನಿಯಲ್ಲಿ ನಿವೃತ್ತ ಪ್ರಾಂಶುಪಾಲರಾದ ಬಿ.ವಿ.ಕೃಷ್ಣಪ್ಪ ರವರು ಮಿಮಿಕ್ರಿ ಮಾಡಿ ಎಲ್ಲರ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ರಘು, ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಮಹೇಶ್, ಜಿಲ್ಲಾ ಖಜಾನಾಧಿಕಾರಿ ಸುಲೋ ಚನ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮುನಿರತ್ನಮ್ಮ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ (ಪ್ರ), ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸದಸ್ಯರು ಹಾಗೂ ವಿವಿಧ ಕನ್ನಡಪರ ಸಂಘಟನೆ ಗಳ ಮುಖಂಡರು, ಡಾ.ರಾಜ್ ಕುಮಾರ್ ಅಭಿಮಾನಿಗಳು ಹಾಜರಿದ್ದರು.