ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Air Pollution Control Awareness: ವಾಹನಗಳ ಬಳಕೆ ಕಡಿಮೆ ಮಾಡಿ, ಪರಿಸರ ಸ್ನೇಹಿ ಸಾರಿಗೆಗೆ ಆದ್ಯತೆ ನೀಡಿ; ವಾಹನಗಳ ಹೊಗೆ ಪರೀಕ್ಷೆ ಕಡ್ಡಾಯವಾಗಿ ಮಾಡಿಸಿ

ವಾಯುಮಾಲಿನ್ಯ ನಿಯಂತ್ರಣಕ್ಕೆ ಮರಗಳನ್ನು ಬೆಳೆಸುವುದರ ಜತೆಗೆ ವಾಹನಗಳ ಬಳಕೆ ಯಲ್ಲಿಯೂ ಜವಾಬ್ದಾರಿ ವಹಿಸಬೇಕು. ಅನಗತ್ಯವಾಗಿ ವಾಹನ ಬಳಸುವುದನ್ನು ತಪ್ಪಿಸಿ, ಸಾಧ್ಯ ವಾದಷ್ಟು ಸಾರ್ವಜನಿಕ ಸಾರಿಗೆ ಹಾಗೂ ಪರಿಸರ ಸ್ನೇಹಿ ವಾಹನಗಳಿಗೆ ಆದ್ಯತೆ ನೀಡಬೇಕು. ವಾಹನಗಳ ಹೊಗೆ ಪರೀಕ್ಷೆಯನ್ನು ಕಾಲಕಾಲಕ್ಕೆ ಮಾಡಿಸಿ, ಸಂಚಾರ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಸಲಹೆ ನೀಡಿದರು.

ಚಿಕ್ಕಬಳ್ಳಾಪುರ: ವಾಯುಮಾಲಿನ್ಯ(Air Pollution)ದಿಂದ ಪರಿಸರ ಹಾಗೂ ಜೀವಸಂಕುಲದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಗಟ್ಟಲು ಪ್ರತಿಯೊಬ್ಬರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಪರಿಸರ ಸಂರಕ್ಷಣೆಯ ಮೂಲಕ ಸುಂದರ ಹಾಗೂ ಆರೋಗ್ಯಕರ ಬದುಕನ್ನು ರೂಪಿಸಿಕೊಳ್ಳಲು ಜನರು ಮುಂದಾಗಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗರಾಜ್ ಎಸ್. ನಾಯಕ್ ತಿಳಿಸಿದರು.

ನಗರದ ಹೊರವಲಯದಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ವಾಯುಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ–ನವೆಂಬರ್ 2026(Air Pollution Control Awareness Month – November 2026) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಾಯುಮಾಲಿನ್ಯ ನಿಯಂತ್ರಣಕ್ಕೆ ಮರಗಳನ್ನು ಬೆಳೆಸುವುದರ ಜತೆಗೆ ವಾಹನಗಳ ಬಳಕೆ ಯಲ್ಲಿಯೂ ಜವಾಬ್ದಾರಿ ವಹಿಸಬೇಕು. ಅನಗತ್ಯವಾಗಿ ವಾಹನ ಬಳಸುವುದನ್ನು ತಪ್ಪಿಸಿ, ಸಾಧ್ಯ ವಾದಷ್ಟು ಸಾರ್ವಜನಿಕ ಸಾರಿಗೆ ಹಾಗೂ ಪರಿಸರ ಸ್ನೇಹಿ ವಾಹನಗಳಿಗೆ ಆದ್ಯತೆ ನೀಡಬೇಕು. ವಾಹನಗಳ ಹೊಗೆ ಪರೀಕ್ಷೆಯನ್ನು ಕಾಲಕಾಲಕ್ಕೆ ಮಾಡಿಸಿ, ಸಂಚಾರ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ: Chikkaballapur News: ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು: ಸದಾಶಿವ ಆರಾಧ್ಯ

ವಾಹನ ಖರೀದಿಸುವ ಮುನ್ನ ಅದರ ಅಗತ್ಯವನ್ನು ಪರಿಶೀಲಿಸಬೇಕು. ಒಬ್ಬರೇ ಪ್ರಯಾಣಿಸುವಾಗ ದೊಡ್ಡ ವಾಹನಗಳನ್ನು ಬಳಸುವುದನ್ನು ತಪ್ಪಿಸಿ, ಸಾಧ್ಯವಾದರೆ ಒಟ್ಟಿಗೆ ಪ್ರಯಾಣಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು. ಸ್ನೇಹಿತರೊಂದಿಗೆ ಮಾತನಾಡುವಾಗ ಅಥವಾ ಸಿಗ್ನಲ್‌ಗಳಲ್ಲಿ ವಾಹನ ನಿಲ್ಲಿಸಿದಾಗ ಎಂಜಿನ್ ಆಫ್ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ವಾಹನಗಳ ಎಂಜಿನ್ ಸರ್ವಿಸ್ ಅನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸಬೇಕು. ಅತಿಹಳೆಯ ಹಾಗೂ ಅವಧಿ ಮೀರಿದ ವಾಹನ ಗಳ ಬಳಕೆಯನ್ನು ತಪ್ಪಿಸಿ, ಗುಜರಿ ನೀತಿ ನಿಯಮಗಳನ್ನು ಪಾಲಿಸಬೇಕು. ಗುಣಮಟ್ಟದ ಇಂಧನ ಬಳಸುವುದರ ಜತೆಗೆ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಶಂಕರ್, ಮೋಟಾರು ವಾಹನ ನಿರೀಕ್ಷಕ ಎನ್. ನರಸೇಗೌಡ, ವಾಹನ ತರಬೇತಿ ಶಾಲೆಗಳ ಅಧ್ಯಕ್ಷ ಕೆ.ಪಿ. ನವಮೋಹನ್, ಜಿಲ್ಲೆಯ ವಾಹನ ತರಬೇತಿ ಶಾಲೆಗಳ ಪ್ರಾಂಶುಪಾಲರು, ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.