ಚಿಕ್ಕಬಳ್ಳಾಪುರ: ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ಭೂ ಸ್ವಾಧೀನದ ಅಂತಿಮ ಅಧಿಸೂಚನೆಯ ಆದೇಶದಂತೆ ತ್ವರಿತ ಗತಿಯಲ್ಲಿ ದರಪಟ್ಟಿ ನಿಗಧಿ ಮಾಡಲು ಒತ್ತಾಯಿಸಿ ಮಾ.23ರಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅನಿರ್ಧಿಷ್ಠಾವಧಿ ಧರಣಿ ನಡೆಸಲಾಗು ವುದು ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಅವರಿಗೆ ರೈತರ ಪರ ಹೋರಾಟ ಸಮಿತಿ ಮನವಿ ಪತ್ರ ನೀಡಿದರು.
ನಗರ ಹೊರವಲಯ ಜಿಲ್ಲಾಡಳಿತ ಭವನದಲ್ಲಿ ಜಂಗಮಕೋಟೆ ಹೋಬಳಿ ಕೆಐಎಡಿಬಿಗೆ ಜಮೀನು ಕೊಡಲು ಇಚ್ಚಿಸಿರುವ ರೈತರ ಪರ ಹೋರಾಟ ಸಮಿತಿ ವತಿಯಿಂದ ಅನಿರ್ದಿಷ್ಟಾವಧಿ ಧರಣಿಗೆ ಅನುಮತಿ ಕೋರಿ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಭಕ್ತರಹಳ್ಳಿ ಪ್ರತೀಶ್ ಮಾತನಾಡಿ, ಬಯಲು ಸೀಮೆಯ ಬರಡು ಜಿಲ್ಲೆ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಯಾವುದೇ ನದಿನಾಲೆಗಳ ಅಶ್ರಯ ಇಲ್ಲ,ಸಾವಿರರು ಅಡಿಗಳು ಕೊರೆದರೂ ಒಂದಿಂಚು ನೀರು ಸಿಗುತ್ತಿಲ್ಲ,ನಮ್ಮ ನಿರುದ್ಯೋಗಿ ಮಹಿಳೆಯರು, ಪುರುಷರು ಉದ್ಯೋಗ ಅರಿಸಿ ಹೊರ ಜಿಲ್ಲೆಗಳಿಗೆ ವಲಸೆ ಹೋಗುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮೂಲಕ ಜಂಗಮಕೋಟೆ ಹೋಬಳಿಯ 13, ಹಳ್ಳಿಗಳಲ್ಲಿ 2823, ಎಕರೆ ಜಮೀನು 2024ರ ಜೂನ್ 25ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿರುತ್ತದೆ.
ಈ ವಿಚಾರವಾಗಿ ಈ ಭಾಗದ ರೈತ ಸಂಘಟನೆ ಹಾಗೂ ನಾವುಗಳು ಫಲವತ್ತಾದ ಕೃಷಿಗೆ ಯೋಗ್ಯವಾದ ನೀರಾವರಿ ಪ್ರದೇಶವನ್ನು ಕೈ ಬಿಡಬೇಕು, ಉಳಿದ ಜಮೀನುಗಳು ಅಂತಿಮ ಅಧಿಸೂಚನೆ ಹೊರಡಿಸಬೇಕೇಂದು ಅಂದಿನಿಂದ ಇಂದಿನ ದಿನದ ವರೆವಿಗೂ ಸರ್ಕಾರದ ವಿರುದ್ದ ಹೋರಾಟಮಾಡಿದ ಪರಿಣಾಮ ಸರ್ಕಾರ 2026 ಫೆಬ್ರವರಿ 25ರಂದು 491ಎಕರೆ ಪ್ರದೇಶವನ್ನು ಬಿಟ್ಟು ಅಧಿಸೂಚನೆ ಹೊರಡಿಸಿರುತ್ತಾರೆ. ಹಾಗಾಗಿ ಈ ವಿಚಾರದಲ್ಲಿ ಸರ್ಕಾರ ತಕ್ಷಣ ರೈತರ ಸಭೆ ಕರೆದು ಅಂತಿಮ ಬಿಟ್ಟು ಉಳಿದ 2332 ಎಕರೆ ಜಮೀನುಗಳ ಭೂಸ್ವಾಧೀನದ ಅಂತಿಮ ಅಧಿಸೂಚನೆಯ ಆದೇಶವನ್ನು ದರಪಟ್ಟಿಯನ್ನು ತೀರ್ಮಾನ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿ ಹಾಗೂ ಜಿಲ್ಲೆಯ ನೀರಾವರಿ, ಹಾಗೂ ಇತರೆ ಸಮಸ್ಯೆಗಳ ಪರಿಹಾರಕ್ಕಾಗಿ ಮಾ.23ರಂದು ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಅನಿರ್ದಿಷ್ಟ ಧರಣಿಯನ್ನು ಹಮ್ಮಿಕೊಳ್ಳುತ್ತೇವೆಂದರು.
ಈ ಹೋರಾಟಕ್ಕೆ ರೈತಪರ, ದಲಿತ ಪರ, ಕಾರ್ಮಿಕ ಪರ, ಕನ್ನಡಪರ, ಸಂಘಟನೆಗಳು ಬೆಂಬಲ ಸೂಚಿಸಿರುತ್ತದೆ.
ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿ ಕೈಗಾರಿಕಾ ಪ್ರದೇಶಕ್ಕೆ ಸಂಬಂಧಿಸಿದಂತೆ ತಕ್ಷಣ ರೈತರ ಸಭೆ ಕೆರೆದು ಪ್ರತಿ ಎಕರೆಗೆ ಕನಿಷ್ಠ 3 ಕೋಟಿ ಭೂ ಪರಿಹಾರ, ಭೂಮಿ ನೀಡಿದ ಪ್ರತಿ ರೈತನ ಮನೆಗೊಂದು ಉದ್ಯೋಗ ಭೂಪರಿಹಾರ ಒಪ್ಪಂದ , ರೈತನಿಗೆ ಬದಲಿ ಪರ್ಯಾಯ ಜಮೀನು ನೀಡಲು ಕ್ರಮ ವಹಿಸಬೇಕು.
ಎಚ್ ಎನ್ ವ್ಯಾಲಿ 3, ನೇ ಹಂತದ ಶುದ್ದಿಕರಣ ಮಾಡಲು ಕ್ರಮ ವಹಿಸಬೇಕು. ಚಿಕ್ಕಬಳ್ಳಾ ಪುರ ತಾಲ್ಲೂಕಿನ ನಂದಿಹೋಬಳಿಯ ಕುಡವತಿ ಗ್ರಾಮದ ರೈತರಿಗೆ ದಾರಿ ಸಮಸ್ಯೆ ನಿವಾರಿಸಬೇಕು.