ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur Breaking: ಪಶುಸಂಗೋಪನೆ ಇಲಾಖೆ ನೆರವು ನೀಡುವ ಮೂಲಕ ರೈತರ ಕೈಹಿಡಿಬೇಕಿದೆ

ರಂಗಪ್ಪ ಆರು ಸೀಮೆ ಹಸುಗಳನ್ನು ಸಾಕಿಕೊಂಡು,ಅವುಗಳ ನಿರ್ವಹಣೆ ಮಾಡಿ,ಅವು ನೀಡುವ ಹಾಲಿ ನಿಂದ ಬಂದ ಹಣದಿಂದ ಕುಟುಂಬ ಸಾಗಿಸುತ್ತಿದ್ದರು.ಬೇಸಿಗೆಯಲ್ಲಿ ಹುಲ್ಲಿಗೆ ಬರ ವಿರಬಾರದು ಎಂದು ಮುಂದಾಲೋಚನೆಯಿAದ ಹುಲ್ಲು ಕೊಂಡು ಬಣವೆ ಮಾಡಿದ್ದರು. ತಮ್ಮ ಆರು ಸೀಮೆ ಹಸುಗಳಿಗಾಗಿ ಸುಮಾರು ೫೦ ಸಾವಿರ ಬೆಲೆ ಬಾಳುವ ಒಣ ಹುಲ್ಲನ್ನು ಸಂಗ್ರಹಿಸಿ ತಮ್ಮ ಜಮೀನಿನ ಬಳಿ ಬಣವೆ ಹಾಕಿಕೊಂಡಿದ್ದರು

ಬಾಗೇಪಲ್ಲಿ: ಮುದ್ದಲಪಲ್ಲಿ ಗ್ರಾಮದ ಕೃಷಿಕಾರ್ಮಿಕ ರಂಗಪ್ಪ ಹೈನುಗಾರಿಕೆಯಿಂದ ಜೀವನ ಕಟ್ಟಿ ಕೊಂಡಿದ್ದು ತನಗಿರುವ 6 ಹಸುಗಳಿಗೆಂದು ಸಂಗ್ರಹಿಸಿದ್ದ ಹುಲ್ಲಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹಾಳಾಗಿದ್ದು, ಪಶುಸಂಗೋಪನೆ ಇಲಾಖೆ ನೆರವು ನೀಡುವ ಮೂಲಕ ರೈತರ ಕೈಹಿಡಿ ಬೇಕಿದೆ. ತಾಲೂಕಿನ ದೇವರಗುಡಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದ್ದಲಪಲ್ಲಿ ಗ್ರಾಮದಲ್ಲಿ ಈ ದುರ್ಘಟನೆ ಘಟನೆ ನಡೆದಿದೆ. ಜೀವನಾಧಾರಕ್ಕೆಂದು ಸಣ್ಣ ಪ್ರಮಾಣದಲ್ಲಿ ಹೈನುಗಾರಿಕೆ ಮಾಡಿ, ಹಸುಗಳನ್ನು ಸಾಕಿಕೊಂಡಿದ್ದ ನಿವಾಸಿ ರಂಗಪ್ಪರವರು ತಮ್ಮ ಜಾನುವಾರುಗಳಿಗಾಗಿ ಸಂಗ್ರಹಿಸಿ ಟ್ಟಿದ್ದ ಹುಲ್ಲಿನ ಬಣವೆಯು ಬೆಂಕಿ ಅವಘಡದಿಂದ ಭಸ್ಮವಾಗಿದ್ದು ದಿಕ್ಕು ತೋಚದಂತಾಗಿರುವ ರಂಗಪ್ಪನ ಕುಟುಂಬ ಕಣ್ಣೀರಲ್ಲಿ ಕೈತೊಳೆಯುವಂತೆ ಆಗಿದೆ.

ರಂಗಪ್ಪ ಆರು ಸೀಮೆ ಹಸುಗಳನ್ನು ಸಾಕಿಕೊಂಡು,ಅವುಗಳ ನಿರ್ವಹಣೆ ಮಾಡಿ,ಅವು ನೀಡುವ ಹಾಲಿನಿಂದ ಬಂದ ಹಣದಿಂದ ಕುಟುಂಬ ಸಾಗಿಸುತ್ತಿದ್ದರು.ಬೇಸಿಗೆಯಲ್ಲಿ ಹುಲ್ಲಿಗೆ ಬರ ವಿರಬಾರದು ಎಂದು ಮುಂದಾಲೋಚನೆಯಿAದ ಹುಲ್ಲು ಕೊಂಡು ಬಣವೆ ಮಾಡಿದ್ದರು. ತಮ್ಮ ಆರು ಸೀಮೆ ಹಸುಗಳಿಗಾಗಿ ಸುಮಾರು ೫೦ ಸಾವಿರ ಬೆಲೆ ಬಾಳುವ ಒಣ ಹುಲ್ಲನ್ನು ಸಂಗ್ರಹಿಸಿ ತಮ್ಮ ಜಮೀನಿನ ಬಳಿ ಬಣವೆ ಹಾಕಿಕೊಂಡಿದ್ದರು. ಆದರೆ ಹುಲ್ಲಿನ ಬಣವೆಯ ಸಮೀಪವಿದ್ದ ಟ್ರಾನ್ಸ್ ಫಾರ್ಮರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು,ಅದರಡಿಯಿದ್ದ ಒಣ ಗಿಡಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಆ ಬೆಂಕಿಯು ಹಾಗೇಯೆ ಎಲ್ಲೆಡೆ ಹರಡಿ,ಸಮೀಪದ ಹುಲ್ಲಿನ ಬಣವೆಗೆ ತಾಗಿ ಸಂಪೂರ್ಣ ಭಸ್ಮವಾಗಿದೆ. ಇದರಿಂ ದಾಗಿ ಹಸುಗಳಿಗೆ ಮೇವಿಲ್ಲದೆ ಮುಂದೇನು ಎಂಬ ಸಂಕಷ್ಟದಲ್ಲಿ ರೈತ ರಂಗಪ್ಪ ಕಂಗಾಲಾಗಿದ್ದಾರೆ.

*
ಬೇಸಿಗೆಯಲ್ಲಿ ತೀವ್ರ ಹುಲ್ಲಿನ ಅಭಾವ ಎದುರಾಗುತ್ತದೆ. ಹಾಗಾಗಿ ಹಸುಗಳ ಮೇವಿಗೆಂದು ಹುಲ್ಲನ್ನು ಸಂಗ್ರಹಿಸಿ ಬಣವೆ ಹಾಕಿಕೊಂಡಿದ್ದೆವು. ಆದರೆ ಈಗ ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣ ಭಸ್ಮವಾಗಿದೆ. ಈಗಿನ ದುಬಾರಿ ಕಾಲಘಟ್ಟದಲ್ಲಿ ಮತ್ತೆ ಮೇವನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಇಂಥ ಅವಘಡಗಳಿಂದ ಉಂಟಾದ ನಷ್ಟವನ್ನು ಸರಕಾರ ತುಂಬಿಸಿದರೆ ಒಳಿತು. ಮೇವನ್ನು ಪೂರೈಸ ಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ.

ಎಂ.ಆರ್. ಶ್ರೀನಿವಾಸ್, ರೈತ ರಂಗಪ್ಪ ಮಗ,ಮುದ್ದಲಪಲ್ಲಿ