ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Krishna Byre Gowda: ಕಂದಾಯ ಖಾತೆಯಲ್ಲೇ ಕೃಷ್ಣಬೈರೇಗೌಡರನ್ನು ಮುಂದುವರೆಸಲು ಕೃಷಿಕ ಸಮಾಜ ಒತ್ತಾಯ

ಬಹಳ ವರ್ಷಗಳಿಂದ ಕುಂಠಿತಗೊಂಡಿದ್ದ, ಫೌತಿ ಖಾತೆ, ಪಿ.ನಂಬರ್ ದುರಸ್ತಿ, ಕಂದಾಯ ಗ್ರಾಮ, ಗ್ರಾಮ ಠಾಣೆಗಳ ರಚನೆ, ಬಹಳ ಮುಖ್ಯವಾಗಿ,ರೈತರ ದಾಖಲೆಗಳ ಡಿಜಿಟಲೀಕರಣ ಮುಂತಾದ ಕಾರ್ಯಗಳನ್ನು ಬಹಳ ವ್ಯವಸ್ಥಿತವಾಗಿ ಮಾಡಿರುವುದರಿಂದ ರೈತ ಸಮುದಾಯಕ್ಕೆ ಅನುಕೂಲ ವಾಗಿತ್ತು. ತಮ್ಮ ದಾಖಲೆ ಗಳಿಗಾಗಿ ರೈತರು ಕಚೇರಿಗೆ ಅಲೆಯುವುದನ್ನು ತಪ್ಪಿಸಿ ಬೆರಳ ತುದಿಯಲ್ಲೇ ಎಲ್ಲಾ ದಾಖೆಗಳು ಸಿಗುವಂತೆ ಮಾಡುವಲ್ಲಿ ಕೃಷ್ಣ ಬೈರೇಗೌಡರು ಪ್ರಗತಿ ಸಾಧಿಸಿದ್ದರು.

ಯಲುವಹಳ್ಳಿ ಸೊಣ್ಣೇಗೌಡ

ಚಿಕ್ಕಬಳ್ಳಾಪುರ : ಕಂದಾಯ ಇಲಾಖೆಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಿರುವ ಕೃಷ್ಣಬೈರೇಗೌಡ( Krishna Byre Gowda)ರನ್ನು ಅದೇ ಖಾತೆಯಲ್ಲಿ ಮುಂದುವರೆಸಬೇಕು ಎಂದು ತಾಲ್ಲೂಕು  ಕೃಷಿಕ ಸಮಾಜದ ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಮಾತನಾಡಿರುವ ಅವರು ರಾಜ್ಯದ ರೈತರು ತೀವ್ರ ಸಂಕಷ್ಟದಲ್ಲಿದ್ದು,ಹಲವಾರು ವರ್ಷಗಳಿಂದಲೂ ತಮ್ಮ ಭೂಮಿಗೆ ದಾಖಲೆಗಳನ್ನು ಹೊಂದಲು ತಾಲ್ಲೂಕು ಕಛೇರಿಗಳಿಗೆ ಅಲೆದು ಅಲೆದು ಚಪ್ಪಲಿ ಸವೆಸಿದ್ದರು. ಮಂತ್ರಿಯಾದ ಕೂಡಲೇ ಅಲೆದಾಡುತ್ತಿದ್ದ ರೈತರ ಬಹುತೇಕ ಸಮಸ್ಯೆಗಳನ್ನು ಬಗೆಹರಿಸಿ, ಇಲಾಖೆಯಲ್ಲಿ ಆಮೂಲಾಗ್ರವಾಗಿ ಸುಧಾರಣೆಮಾಡುತ್ತಿದ್ದರು. ಖಾತಾ ಆಂದೋಲನ(Khata Movement) ನಡೆಸಿ ರೈತರಿಗೆ ಅವರಿದ್ದಲ್ಲಿಯೇ ಖಾತೆ ಕೊಡುವ ಕೆಲಸ ನೀಡಿದ್ದಾರೆ.

ಇದನ್ನೂ ಓದಿ: Minister Krishna Byre Gowda: ಕಂದಾಯ ಸೇವೆಗಳ ಸಮರ್ಪಣ ಮಹಾವೇದಿಕೆಯಲ್ಲಿ ಜಿಲ್ಲೆಯ 25 ಸಾವಿರ ಕಂದಾಯ ಸೇವೆಗಳ ವಿತರಣೆ

ಈ ಹೊತ್ತಿನಲ್ಲಿ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ( Revenue Minister Krishna Byre Gowda)ರನ್ನು ಏಕಾಏಕಿ ಖಾತೆ ಬದಲಾವಣೆ ಮಾಡಿರುವುದು ಸರಿಯಲ್ಲ, ರೈತ ಸಮುದಾಯದ ಒಳಿತಿಗಾಗಿ ಅವರನ್ನು ಅದೇ ಖಾತೆಯಲ್ಲಿಯೇ ಮುಂದುವರೆಸಬೇಕೆಂದು ಒತ್ತಾಯಿಸಿದ್ದಾರೆ.

ಬಹಳ ವರ್ಷಗಳಿಂದ ಕುಂಠಿತಗೊಂಡಿದ್ದ, ಫೌತಿ ಖಾತೆ, ಪಿ.ನಂಬರ್ ದುರಸ್ತಿ, ಕಂದಾಯ ಗ್ರಾಮ, ಗ್ರಾಮ ಠಾಣೆಗಳ ರಚನೆ, ಬಹಳ ಮುಖ್ಯವಾಗಿ, ರೈತರ ದಾಖಲೆಗಳ ಡಿಜಿಟಲೀಕರಣ( Digitization of farmers' records) ಮುಂತಾದ ಕಾರ್ಯಗಳನ್ನು ಬಹಳ ವ್ಯವಸ್ಥಿತವಾಗಿ ಮಾಡಿರುವುದರಿಂದ ರೈತ ಸಮುದಾಯಕ್ಕೆ ಅನುಕೂಲ ವಾಗಿತ್ತು. ತಮ್ಮ ದಾಖಲೆಗಳಿಗಾಗಿ ರೈತರು ಕಚೇರಿಗೆ ಅಲೆಯುವು ದನ್ನು ತಪ್ಪಿಸಿ ಬೆರಳ ತುದಿಯಲ್ಲೇ ಎಲ್ಲಾ ದಾಖೆಗಳು ಸಿಗುವಂತೆ ಮಾಡುವಲ್ಲಿ ಕೃಷ್ಣ ಬೈರೇಗೌಡರು ಪ್ರಗತಿ ಸಾಧಿಸಿದ್ದರು. ಇನ್ನಷ್ಟು ಪ್ರಗತಿಗಾಗಿ ಕಂದಾಯ ಇಲಾಖೆಯಲ್ಲಿಯೇ ಅವರನ್ನು ಮುಂದು ವರೆಸುವುದು ಸೂಕ್ತ ಎಂದು ಅವರು ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಕೂಡಲೇ ಇತ್ತ ಗಮನ ಹರಿಸಿ ಖಾತೆ ಬದಲಾವಣೆ ಮಾಡಬೇಕಿದೆ. ಇಲ್ಲವಾದಲ್ಲಿ ಧನಿಯಿಲ್ಲದೆ ರೈತರ ಧನಿಯನ್ನು ಅಡಗಿಸಿದಂತೆ ಆಗಲಿದೆ ಎಂದು ಮನವಿ ಮಾಡಿದ್ದಾರೆ.