ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜಂಗಮಕೋಟೆ ಹೋಬಳಿಯಲ್ಲೇ ಕೈಗಾರಿಕೆ ಸ್ಥಾಪಿಸಬೇಕು ಎಂದು ಉಪವಾಸ ಸತ್ಯಾಗ್ರಹ

76 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾಡಳಿತ ನಮ್ಮ ಬೇಡಿಕೆಗಳಿಗೆ ಸ್ಪಂದನೆ ತೋರಿಲ್ಲ. ನಮ್ಮದು ಬಡವರ ಪರವಾದ ಹೋರಾಟವಾಗಿದೆ. ಇಲ್ಲಿಗೆ ಬಂದರೆ ಯಾವ ಲಾಭವೂ ಆಗುವುದಿಲ್ಲ. ಆದರೆ ರಿಯಲ್ ಎಸ್ಟೇಟ್ ಪರವಾಗಿ ಪ್ರತಿಭಟನೆ ನಡೆಸುತ್ತಿರುವ ಮತ್ತೊಂದು ರೈತಸಂಘದ ವೇದಿಕೆಗೆ ಹತ್ತಾರುಬಾರಿ ಹೋಗಿ ಅಹವಾಲು ಆಲಿಸು ತ್ತಾರೆ. ಅವರಿಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಡುತ್ತಾರೆ

ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಚಿಂತಾಮಣಿ ತಾಲೂಕು ಅಧ್ಯಕ್ಷ ಕದಿರೇಗೌಡ, ಈಧರೆ ಪ್ರಕಾಶ್, ಸುಬ್ರಮಣಿ, ಸೇರಿ ೫ ಮಂದಿ ಶುಕ್ರವಾರದಿಂದ ಅನ್ನಾಹಾರ ಸೇವಿಸದೆ ನಿರಾಹಾರ ಉಪವಾಸ ಉಪವಾಸ ಕೂತಿದ್ದಾರೆ.

ಚಿಕ್ಕಬಳ್ಳಾಪುರ :ಜಂಗಮಕೋಟೆ ಹೋಬಳಿಗೆ ಸೇರಿದ 13 ಹಳ್ಳಿಗಳ ಭೂಮಿಯಲ್ಲೇ ಸರಕಾರ ಉದೇಶಿಸಿರುವ ಕೈಗಾರಿಕೆ ಅಭಿವೃದ್ದಿ ಪ್ರಾರಂಭಿಸಬೇಕು. ಕೆಐಎಡಿಬಿ ರೈತರ ಭೂಮಿಗೆ ದರ ನಿಗದಿ ಪಡಿಸಬೇಕು. ಹಣ ಬೇಡ ಎನ್ನುವ ರೈತರಿಗೆ ಭೂಮಿ ಕೊಡಬೇಕು. ಒಂದೇ ಕಂತಿನಲ್ಲಿ ರೈತರ ಖಾತೆ ಗಳಿಗೆ ಹಣ ನೀಡಬೇಕು ಎಂದು ಆಗ್ರಹಿಸಿ ರೈತರ ಮತ್ತೊಂದು ಬಣ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದೆ.

ನಗರ ಹೊರವಲಯ ಜಿಲ್ಲಾಡಳಿತ ಭವನದ ಎದುರು ಕೆಐಎಡಿಬಿ ಪರ ಭೂಮಿ ಕೊಡಲು ಒಪ್ಪಿರುವ ರೈತ ಸಂಘಟನೆ ಮತ್ತು ಸಮಾನ ಮನಸ್ಕ ಸಂಘಟನೆಗಳ ಮುಖಂಡರು ಕಳೆದ 76ನೇ ದಿನದ ಪ್ರತಿಭಟನೆಯ ಭಾಗವಾಗಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಚಿಂತಾಮಣಿ ತಾಲೂಕು ಅಧ್ಯಕ್ಷ ಕದಿರೇಗೌಡ, ಈಧರೆ ಪ್ರಕಾಶ್, ಸುಬ್ರಮಣಿ, ಸೇರಿ 5 ಮಂದಿ ಶುಕ್ರವಾರದಿಂದ ಅನ್ನಾಹಾರ ಸೇವಿಸದೆ ನಿರಾಹಾರ ಉಪವಾಸ ಉಪವಾಸ ಕೂತಿದ್ದಾರೆ.

ಇದನ್ನೂ ಓದಿ: Chikkaballapur News: ಕೆ.ಹೆಚ್.ಮುನಿಯಪ್ಪಗೆ ಕಂದಾಯ ಇಲ್ಲವೆ ಸಮಾಜ ಕಲ್ಯಾಣ ಖಾತೆ ನೀಡಿ, ಆಹಾರ ಇಲಾಖೆ ಖಾತೆ ಬೇಡ : ಬಾಲಕುಂಟಹಳ್ಳಿ ಗಂಗಾಧರ್

ಈ ವೇಳೆ ಮಾತನಾಡಿದ ಪ್ರತೀಶ್, 76 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾಡಳಿತ ನಮ್ಮ ಬೇಡಿಕೆಗಳಿಗೆ ಸ್ಪಂಧನೆ ತೋರಿಲ್ಲ. ನಮ್ಮದು ಬಡವರ ಪರವಾದ ಹೋರಾಟವಾಗಿದೆ. ಇಲ್ಲಿಗೆ ಬಂದರೆ ಯಾವ ಲಾಭವೂ ಆಗುವುದಿಲ್ಲ. ಆದರೆ ರಿಯಲ್ ಎಸ್ಟೇಟ್ ಪರವಾಗಿ ಪ್ರತಿಭಟನೆ ನಡೆಸುತ್ತಿರುವ ಮತ್ತೊಂದು ರೈತಸಂಘದ ವೇದಿಕೆಗೆ ಹತ್ತಾರುಬಾರಿ ಹೋಗಿ ಅಹವಾಲು ಆಲಿಸು ತ್ತಾರೆ. ಅವರಿಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಡುತ್ತಾರೆ ಎಂದು ದೂರಿದರು.

ಉಪವಾಸದ ಸಮಯದಲ್ಲಿ ನಮಗೇನಾದರೂ ಆರೋಗ್ಯ ಸಮಸ್ಯೆ ಎದುರಾಗಿ ಅಪಾಯವಾದಲ್ಲಿ ಇದಕ್ಕೆ ಜಿಲ್ಲಾಡಳಿತವೇ ನೇರಹೊಣೆಯಾಗಲಿದೆ.ನಮ್ಮ ಪ್ರಾಣ ಹೋದರೂ ಪರವಾಗಿಲ್ಲ. ಜಂಗಮ ಕೋಟೆ ಭಾಗದಲ್ಲಿ ಕೈಗಾರಿಕೆ ಸ್ಥಾಪನೆ ಆಗುವವರಿಗೆ ಬಿಡುವುದೇ ಇಲ್ಲ. ಕೆಐಎಡಿಬಿಗೆ ಭೂಮಿ ಕೊಡಲು ಮುಂದೆ ಬಂದಿರುವವರೆಲ್ಲಾ ದಲಿತರು, ಹಿಂದುಳಿದವರು ಬಡವರೇ ಆಗಿದ್ದಾರೆ.ಅವರಿಗೆ ಏಕಕಾಲಕ್ಕೆ ಕೋಟಿಗಳ ಲೆಕ್ಕದಲ್ಲಿ ಹಣಬಂದರೆ ಅವರ ಆರ್ಥಿಕ ಸ್ಥಿತಿಗಳು ಬದಲಾಗುವುದು ರಿಯಲ್ ಎಸ್ಟೇಟ್ ಪರವಿರುವ ರೈತಸಂಘದ ಮುಖಂಡರಿಗೆ ಇಷ್ಟವಿಲ್ಲದ ಕಾರಣ ಹೀಗೆ ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.

ಈಧರೆ ಪ್ರಕಾಶ್ ಮಾತನಾಡಿ, ಕೈಗಾರಿಕೆ ಬೇಡ, ನಮ್ಮ ಭೂಮಿ ನಮ್ಮ ಹಕ್ಕು ಎನ್ನುತ್ತಾ ಹೋರಾಟ ಮಾಡುತ್ತಿರುವವರು ನಿಜವಾದ ರೈತಪರ ಕಾಳಜಿ ಇರುವವರಲ್ಲ. ಇವರಿಗೆ ಕಾಳಜಿ ಇದಿದ್ದೇ ಆದರೆ ವರದನಾಯಕನಹಳ್ಳಿ ರೈತರ ಭೂಮಿಯನ್ನು ಅರಣ್ಯ ಇಲಾಖೆ ಕಿತ್ತುಕೊಂಡಾಗ ಯಾಕೆ ಅವರ ಸಹಾಯಕ್ಕೆ ಬರಲಿಲ್ಲ. ಈಗ ಜಂಗಮಕೋಟೆ ಭಾಗದಲ್ಲಿ ರಿಯಲ್ ಎಸ್ಟೇಟ್ ಹೆಚ್ಚಾಗಿ ನಡೆಸಿರುವ ಕಾರಣ ಅವರಿಗೆ ನೆರವಾಗಲು ಹೋರಾಟ ಮಾಡುತ್ತಿದ್ದಾರೆ ಎಂದು ದೂರಿದರು