ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Nandi Hills: ವಿಶ್ವವಿಖ್ಯಾತ ನಂದಿ ಬೆಟ್ಟದಲ್ಲಿ ಬೆಂಕಿಯ ಅನಾಹುತ

ಬೆಟ್ಟದ ಮಧ್ಯ ಭಾಗದಲ್ಲಿ ಹೊತ್ತಿಕೊಂಡ ಬೆಂಕಿ ಕ್ಷಣಕ್ಷಣಕ್ಕೂ ವ್ಯಾಪಿಸಿ, ಸುಲ್ತಾನ್ ಪೇಟೆ ಭಾಗದ ಕಡೆಗೆ ಕೆನ್ನಾಲಿಗೆ ಚಾಚಿದ ದೃಶ್ಯಗಳು ದೂರದಿಂದಲೇ ಗೋಚರಿಸಿವೆ ಎಂಬುದು ದಾರಿ ಹೋಕರ ಮಾಹಿತಿಯಾಗಿದ್ದು ಬೆಂಕಿಯ ಜ್ವಾಲೆಗಳು ಎತ್ತರಕ್ಕೆ ಏರಿ ದಟ್ಟ ಹೊಗೆ ಆಕಾಶ ಮುಟ್ಟಿದಂತಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.

ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ಪ್ರವಾಸಿ ತಾಣ ನಂದಿ ಬೆಟ್ಟದಲ್ಲಿ ಮಂಗಳವಾರ ಸಂಜೆ ಅಕಸ್ಮಾತ್ ಬೆಂಕಿ ಕಾಣಿಸಿಕೊಂಡು ಹತ್ತಾರು ಎಕರೆ ಪ್ರದೇಶ ಬೆಂಕಿಗಾಹುತಿಯಾದ ಘಟನೆ ಸಂಭವಿಸಿದೆ. ಕಿಡಿಗೇಡಿಗಳ ಕೃತ್ಯದಿಂದಲೇ ಬೆಂಕಿ ಹೊತ್ತಿಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಬೆಟ್ಟದ ಮಧ್ಯ ಭಾಗದಲ್ಲಿ ಹೊತ್ತಿಕೊಂಡ ಬೆಂಕಿ ಕ್ಷಣಕ್ಷಣಕ್ಕೂ ವ್ಯಾಪಿಸಿ, ಸುಲ್ತಾನ್ ಪೇಟೆ ಭಾಗದ ಕಡೆಗೆ ಕೆನ್ನಾಲಿಗೆ ಚಾಚಿದ ದೃಶ್ಯಗಳು ದೂರದಿಂದಲೇ ಗೋಚರಿಸಿವೆ ಎಂಬುದು ದಾರಿಹೋಕರ ಮಾಹಿತಿಯಾಗಿದ್ದು ಬೆಂಕಿಯ ಜ್ವಾಲೆಗಳು ಎತ್ತರಕ್ಕೆ ಏರಿ ದಟ್ಟ ಹೊಗೆ ಆಕಾಶ ಮುಟ್ಟಿದಂತಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.

ಇದನ್ನೂ ಓದಿ: Chikkaballapur News: ಹೋಳಿ ಯುಗಾದಿ ರಂಜಾನ್ ಹಬ್ಬಗಳು ಭಾವೈಕ್ಯತೆಯಿಂದ ಆಚರಿಸಿ: ಡಿವೈಎಸ್‌ಪಿ ಮುರಳೀಧರ್

ಬೆಂಕಿ ಕಾಣಿಸಿಕೊಂಡ ಪ್ರದೇಶ ಕಡು ಬಂಡೆಗಲ್ಲುಗಳಿಂದ ಕೂಡಿದ್ದು, ಅಗ್ನಿಶಾಮಕ ದಳದ ವಾಹನಗಳು ನೇರವಾಗಿ ತಲುಪಲು ಸಾಧ್ಯವಾಗದಂತಹ ಸ್ಥಳವಾಗಿರುವುದರಿಂದ ಬೆಂಕಿ ನಂದಿಸುವ ಕಾರ್ಯದಲ್ಲಿ ಅಡಚಣೆ ಎದುರಾಗಿದೆ. ಸಿಬ್ಬಂದಿ ಪಾದಚಾರಿ ಮಾರ್ಗದಿಂದಲೇ ಮೇಲಕ್ಕೆ ತೆರಳಿ ಬೆಂಕಿ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯ ದೃಶ್ಯಗಳನ್ನು ಸುಲ್ತಾನ್ ಪೇಟೆ ಸ್ಥಳೀಯರೊಬ್ಬರು ತಮ್ಮ ಮೊಬೈಲ್ ಫೋನ್‌ ಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊAಡಿದ್ದು, ಈ ವಿಡಿಯೋಗಳು ಸಖತ್ ವೈರಲ್ ಆಗಿವೆ.

ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ನಡೆಸಿರುವ ಬಗ್ಗೆ ಸ್ಥಳೀಯ ರಿಂದ ಮಾಹಿತಿ ಲಭ್ಯವಾಗಿದೆ. ಬೆಂಕಿ ಅನಾಹುತದ ನಿಖರ ಕಾರಣ ಮತ್ತು ಹಾನಿ ಪ್ರಮಾಣ ಕುರಿತು ಅಧಿಕೃತ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಪ್ರಕೃತಿ ಸೌಂದರ್ಯದ ಸಂಕೇತವಾದ ನಂದಿ ಬೆಟ್ಟದಲ್ಲಿ  ಬೇಸಿಗೆಯಲ್ಲಿ ಈ ರೀತಿಯ ಘಟನೆ ಗಳು ಸಂಭವಿಸುವುದು ಪರಿಸರ ಪ್ರೇಮಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಜಿಲ್ಲಾಡಳಿತ ಅರಣ್ಯ ಇಲಾಖೆ ಇಂತಹ ಘಟನೆಗಳ ಬಗ್ಗೆ ಜಾಗೃತೆ ವಹಿಸಲಿ ಎನ್ನುವುದು ಸಾರ್ವ ಜನಿಕರ ಆಗ್ರಹವಾಗಿದೆ.