ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Basket Ball: ಬ್ಯಾಸ್ಕೆಟ್‌ಬಾಲ್‌ನಲ್ಲಿ ಪ್ರಥಮ ಸ್ಥಾನ: ಸಿಎಂ ಕಪ್‌ಗೆ ಪಿನಾಕಿನಿ ಕ್ಲಬ್ ತಂಡ ಆಯ್ಕೆ

ವಿಭಾಗದ ಎಂಟು ಜಿಲ್ಲೆಗಳ ತಂಡಗಳು ಭಾಗವಹಿಸಿದ್ದ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡ ಜಿಲ್ಲೆ ಹಾಗೂ ತಾಲೂಕಿಗೆ ಕೀರ್ತಿ ತಂದಿದೆ. ವಿಜೇತ ಆಟಗಾರರು ತಂಡದ ಉಸ್ತುವಾರಿ ಸೈಗೈಸ್ ಸತೀಶ್ ಅವರೊಂದಿಗೆ ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಅವರನ್ನು ಭೇಟಿ ಮಾಡಿ, ಪ್ರೋತ್ಸಾಹಕ್ಕೆ ಕೃತಜ್ಞತೆ ಸಲ್ಲಿಸಿದರು.

ಗೌರಿಬಿದನೂರು: ಬೆಂಗಳೂರಿನ ಕಂಠೀರವ ಕ್ರೀಡಾಂಗಣ(Kanteerava Stadium)ದಲ್ಲಿ ನಡೆದ ದಸರಾ ಕ್ರೀಡಾಕೂಟದ ವಿಭಾಗಮಟ್ಟದ ಬ್ಯಾಸ್ಕೆಟ್‌ಬಾಲ್(Basket Ball) ಪಂದ್ಯಾವಳಿಯಲ್ಲಿ ಪಿನಾಕಿನಿ ಕ್ಲಬ್ ಸೈಗೈಸ್ ತಂಡ ಪ್ರಥಮ ಸ್ಥಾನ ಗಳಿಸಿದ್ದು, ಮೈಸೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಸಿಎಂ ಕಪ್(State Level CM Cup) ಕ್ರೀಡಾಕೂಟಕ್ಕೆ ಆಯ್ಕೆಯಾಗಿದೆ.

ವಿಭಾಗದ ಎಂಟು ಜಿಲ್ಲೆಗಳ ತಂಡಗಳು ಭಾಗವಹಿಸಿದ್ದ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡ ಜಿಲ್ಲೆ ಹಾಗೂ ತಾಲೂಕಿಗೆ ಕೀರ್ತಿ ತಂದಿದೆ. ವಿಜೇತ ಆಟಗಾರರು ತಂಡದ ಉಸ್ತುವಾರಿ ಸೈಗೈಸ್ ಸತೀಶ್ ಅವರೊಂದಿಗೆ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ(MLA K H Puttaswamy Gowda) ಅವರನ್ನು ಭೇಟಿ ಮಾಡಿ, ಪ್ರೋತ್ಸಾಹಕ್ಕೆ ಕೃತಜ್ಞತೆ ಸಲ್ಲಿಸಿದರು.

ಇದನ್ನೂ ಓದಿ: K H Puttaswamy Gowda: ಹೈನೋದ್ಯಮವೇ ಬಯಲುಸೀಮೆ ರೈತರ ಆಸರೆ: ಕೆ.ಎಚ್.ಪುಟ್ಟಸ್ವಾಮಿಗೌಡ

ಆಟಗಾರರನ್ನು ಅಭಿನಂದಿಸಿದ ಶಾಸಕ ಪುಟ್ಟಸ್ವಾಮಿಗೌಡ, ವಿಭಾಗಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ಸಿಎಂ ಕಪ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಗೆಲ್ಲುವಂತಾಗಲಿ ಎಂದು ಶುಭ ಹಾರೈಸಿದರು.

ತಂಡದ ಉಸ್ತುವಾರಿ ಸೈಗೈಸ್ ಸತೀಶ್ ಮಾತನಾಡಿ, ಕೋಲಾರದಲ್ಲಿ ನಡೆದ ಪಂದ್ಯಾವಳಿಯಲ್ಲಿ ತಂಡಕ್ಕೆ ಅನ್ಯಾಯವಾಗುತ್ತಿದೆ ಎಂಬ ವಿಚಾರವನ್ನು ಶಾಸಕರ ಗಮನಕ್ಕೆ ತಂದಾಗ ಅವರು ಸ್ಪಂದಿಸಿ ಸಮಸ್ಯೆ ಪರಿಹಾರಕ್ಕೆ ನೆರವಾದರು. ಅವರ ಪ್ರೋತ್ಸಾಹ ತಂಡದ ಸಾಧನೆಗೆ ಉತ್ತೇಜನ ನೀಡಿದೆ ಎಂದು ಕೃತಜ್ಞತೆ ಸಲ್ಲಿಸಿದರು.

ತಂಡದ ನಾಯಕ ಪವನ್, ವೇಣು, ಅಶೋಕ್, ಲಿಖಿತ್, ನವೀನ್, ಸಂದೀಪ್, ರವಿ, ಧನುಷ್, ಅಬ್ದುಲ್, ಇನಾಯತ್, ದಿಲೀಪ್, ವಿದ್ಯಾಸಾಗರ್ ಸೇರಿದಂತೆ ಆಟಗಾರರು ಉಪಸ್ಥಿತರಿದ್ದರು.