ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chikkaballapur News: ಅರಣ್ಯ ಇಲಾಖೆ, ಕಂದಾಯ ಇಲಾಖೆ ಮತ್ತು ದಲಿತರ ಭೂಮಿ ವಿವಾದ ತಾರಕಕ್ಕೆ: ಜೂ.29ರಂದು ಜಿಲ್ಲಾವ್ಯಾಪಿ ಹೋರಾಟದ ಎಚ್ಚರಿಕೆ

1972ರಲ್ಲಿ ದಲಿತರಿಗೆ ಭೂಮಿ ಮಂಜೂರಾ ಗಿದ್ದು,ಇದಕ್ಕೆ ಸಂಬಂಧಪಟ್ಟ ಸಮಗ್ರ ದಾಖಲಾತಿಗಳು ಸಾಗುವಳಿ ಮಾಡುತ್ತಿರುವ 13 ದಲಿತ ಕುಟುಂಬಗಳ ಹೆಸರಿನಲ್ಲಿಯೇ ಇದೆ. ಆದರೆ 1991ರಲ್ಲಿ ಕಂದಾಯ ಇಲಾಖೆ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದೆ ಎನ್ನುತ್ತಾರೆ. ಹೀಗೆ ಮಾಡುವಾಗ ತಾನೇ ಮಂಜೂರು ಮಾಡಿರುವ ಭೂಮಿಯ ಬಗ್ಗೆ ಅದಕ್ಕೆ ಅರಿವು ಇರಬೇಕಿತ್ತು ಅಲ್ಲವೆ? ಅದೆಲ್ಲಾ ಹೋಗಲಿ ಅರಣ್ಯ ಇಲಾಖೆ ತನಗೆ ಸೇರದ ಭೂಮಿಯನ್ನು ಇಷ್ಟು ವರ್ಷಗಳ ಕಾಲ ಯಾಕೆ ಸುಪರ್ಧಿಗೆ ಪಡೆಯಲು ಮುಂದಾ ಗಲಿಲ್ಲ.? ಈಗಲೇ ಯಾಕೆ ಮುಂದಾಗಿದೆ

ಅರಣ್ಯ ಇಲಾಖೆ, ಕಂದಾಯ ಇಲಾಖೆ ಮತ್ತು ದಲಿತರ ಭೂಮಿ ವಿವಾದವು ೮ನೇ ದಿನ ತಾರಕಕ್ಕೇರಿದ್ದು  ಜೂ.29ರಂದು ಜಿಲ್ಲಾವ್ಯಾಪಿ ಹೋರಾಟ ನಡೆಸುವ ಬಗ್ಗೆ ಮುಖಂಡರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.

ಚಿಕ್ಕಬಳ್ಳಾಪುರ: 1972ರಲ್ಲಿ ದಲಿತರಿಗೆ ಮಂಜೂರಾಗಿರುವ ಭೂಮಿ ಈವರೆಗೆ ಅವರಿಗೆ ಬದುಕು ಕೊಟ್ಟಿತ್ತು.ಈಗ ಏಕಾಏಕಿ ಅರಣ್ಯ ಇಲಾಖೆ ಎಂಬ ಗುಮ್ಮತೋರಿಸಿ ಬದುಕು ಕಸಿಯಲು ಹೊರಟಿರು ವುದು ಸರಿಯಲ್ಲ.ಈ ವಿವಾದವನ್ನು ತಕ್ಷಣ ಇತ್ಯರ್ಥಪಡಿಸಬೇಕು. ಇಲ್ಲದಿದ್ದರೆ ಜೂ.29ರಂದು ಜಿಲ್ಲಾದ್ಯಂತ ತಾಲೂಕು ಅರಣ್ಯ ಇಲಾಖೆ ಕಚೇರಿಗಳ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳ ಲಾಗುವುದು ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು.

ನಗರ ಹೊರವಲಯ ಜಿಲ್ಲಾ ಉಪ ಅರಣ್ಯಾಧಿಕಾರಿಗಳ ಕಚೇರಿ ಎದುರು ಕಳೆದ 8 ದಿನಗಳಿಂದ ದಸಂಸ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಸ್ಥಳದಲ್ಲಿ ಸೋಮವಾರ ತುರ್ತಾಗಿ ಏರ್ಪಡಿಸಿದ್ದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮುಖಂಡರು ಮಾತನಾಡಿದರು.

ದಸಂಸ ಜಿಲ್ಲಾ ಸಂಚಾಲಕ ಸಿ.ಜಿ.ಗಂಗಪ್ಪ ಮಾತನಾಡಿ, 1972ರಲ್ಲಿ ದಲಿತರಿಗೆ ಭೂಮಿ ಮಂಜೂರಾ ಗಿದ್ದು,ಇದಕ್ಕೆ ಸಂಬಂಧಪಟ್ಟ ಸಮಗ್ರ ದಾಖಲಾತಿಗಳು ಸಾಗುವಳಿ ಮಾಡುತ್ತಿರುವ 13 ದಲಿತ ಕುಟುಂಬಗಳ ಹೆಸರಿನಲ್ಲಿಯೇ ಇದೆ. ಆದರೆ 1991ರಲ್ಲಿ ಕಂದಾಯ ಇಲಾಖೆ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದೆ ಎನ್ನುತ್ತಾರೆ. ಹೀಗೆ ಮಾಡುವಾಗ ತಾನೇ ಮಂಜೂರು ಮಾಡಿರುವ ಭೂಮಿಯ ಬಗ್ಗೆ ಅದಕ್ಕೆ ಅರಿವು ಇರಬೇಕಿತ್ತು ಅಲ್ಲವೆ? ಅದೆಲ್ಲಾ ಹೋಗಲಿ ಅರಣ್ಯ ಇಲಾಖೆ ತನಗೆ ಸೇರದ ಭೂಮಿಯನ್ನು ಇಷ್ಟು ವರ್ಷಗಳ ಕಾಲ ಯಾಕೆ ಸುಪರ್ಧಿಗೆ ಪಡೆಯಲು ಮುಂದಾಗಲಿಲ್ಲ.? ಈಗಲೇ ಯಾಕೆ ಮುಂದಾಗಿದೆ. ಇದನ್ನೆಲ್ಲಾ ನೋಡಿದರೆ ಯಾವುದೋ ಕಾಣದ ಕೈಗಳು ಇದರ ಹಿಂದೆ ನಿಂತಿ ಆಟವಾಡುತ್ತಿರುವುದು ಸ್ಪಷ್ಟವಾಗಿದೆ ಎಂದ ಅವರು ಬಡವರಿಗೆ ನ್ಯಾಯ ದೊರಯುವವರೆಗೆ ಈ ಹೋರಾಟ ನಿಲ್ಲುವುದಿಲ್ಲ ಎಂದರು.

ಇದನ್ನೂ ಓದಿ: Chikkaballapur News: ನಂದಿಗಿರಿಧಾಮದ ಸೂರ್ಯೋದಯದ ಸೊಬಗಿನಲ್ಲಿ ಯಶಸ್ವಿಯಾದ ‘ಕಲಾ ನಡಿಗೆ ನಿಮ್ಮ ಬಳಿಗೆ’ ಕಾರ್ಯಕ್ರಮ

ರಾಜ್ಯ ಸಂಚಾಲಕ ಕೆ.ಸಿ.ರಾಜಾಕಾಂತ್ ಮಾತನಾಡಿ, ಬಡವರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ನ್ಯಾಯಕ್ಕೆ ಆಗ್ರಹಿಸಿ ಒಂದು ವಾರದಿಂದ ಉಪ ಅರಣ್ಯ ಇಲಾಖೆ ಎದುರು ಪ್ರತಿಭಟನೆ ನಡೆಸು ತ್ತಿದ್ದೇವೆ. ಈ ವಿಚಾರ ಗಂಭೀರವಾದರೂ ಕೂಡ ಈವರೆಗೆ ತಹಶೀಲ್ದಾರಾಗಲಿ ಜಿಲ್ಲಾಧಿಕಾರಿಗಳಾಗಲಿ ಮುಂದೆ ಬಂದು ಅರಣ್ಯ ಇಲಾಖೆ ಅಧಿಕಾರಿಗಳು ರೈತರೊಟ್ಟಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕಾಗಿತ್ತು. ಈ ಕೆಲಸ ಆಗದಿರುವುದು ನೋಡಿದರೆ ಇವರಿಗೆ ಜನಪರ ಕಾಳಜಿಗಿಂತ ಶ್ರೀಮಂತರ ಹಿತಕಾಯುವುದೇ ದೊಡ್ಡ ಕಾಯಕವಾಗಿದೆ ಎನಿಸುತ್ತಿದೆ ಎಂದು ದೂರಿದರು. ಸ್ಪಷ್ಟ ಉತ್ತರ ನೀಡುತ್ತಿಲ್ಲ ಎಂದು ಆರೋಪಿಸಿದರು.

1972ರಲ್ಲಿ ಕಂದಾಯ ಇಲಾಖೆಯು ಸಾಗುವಳಿ ನಿರತ ದಲಿತರಿಗೆ ನೀಡಿರುವ ಭೂಮಿಯನ್ನು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಗಣಿಸದೆ, ಬಡವರ ಭೂಮಿಯನ್ನು ಅರಣ್ಯ ಇಲಾಖೆ ಹೆಸರಿನಲ್ಲಿ ವಶಪಡಿಸಿಕೊಳ್ಳಲು ಯತ್ನಿಸುತ್ತಿರುವುದು ಸರಿಯಲ್ಲ ಎಂದು ಆರೋಪಿಸಿದ ಅವರು, ವಿ.ಟಿ.ಯು. ಹಾಗೂ ಈಶಾ ಹಾಗೂ ನಂದಿ ಮೆಡಿಕಲ್ ಕಾಲೇಜು ಸಂಸ್ಥೆಗಳ ವಶದಲ್ಲಿರುವ ನೂರಾರು ಎಕರೆ ಭೂಮಿ ಕೂಡ ಅರಣ್ಯ ಇಲಾಖೆಗೆ ಸೇರಿದ್ದೇ.ಈ ಭೂಮಿಯ ವಿಚಾರದಲ್ಲೂ ಹೀಗೆ ನಡೆದಿಕೊಳ್ಳ ಬೇಕಿತ್ತು ಅಲ್ಲವೆ? ಎಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.

ತಹಶೀಲ್ದಾರ್ ರಶ್ಮಿ ಅವರ ಕಾರ್ಯವೈಖರಿಯನ್ನು ತೀವ್ರವಾಗಿ ಟೀಕಿಸಿದ ಮುಖಂಡರು, ಈ ಸಮಸ್ಯೆಗೆ ಕಾರಣರಾಗಿರುವ ಅಧಿಕಾರಿಯ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜೂ.29 ರೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಬೃಹತ್ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

1991-92ರಲ್ಲಿ ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ಭೂಮಿ ಹಸ್ತಾಂತರ ಮಾಡುವಾಗ, ಈಗಾಗಲೇ ಜನರು ಸಾಗುವಳಿ ಮಾಡುತ್ತಿದ್ದ ಭೂಮಿಯ ಕುರಿತು ಯಾಕೆ ಪರಿಶೀಲನೆ ನಡೆಸಲಿಲ್ಲ ಎಂಬ ಪ್ರಶ್ನೆಯನ್ನೂ ಅವರು ಮುಂದಿಟ್ಟರು.

ಜಿಲ್ಲಾ ಅರಣ್ಯಾಧಿಕಾರಿಗಳು ನಿಮ್ಮ ಉಳುಮೆಯ ಭೂಮಿಗೂ ಅರಣ್ಯ ಇಲಾಖೆಗೂ ಯಾವುದೇ ಸಂಬAಧವಿಲ್ಲ ಎಂದು ಒಮ್ಮೆ ಹೇಳಿದರೆ ಮತ್ತೊಮ್ಮೆ ನಿಮ್ಮ ಭೂಮಿ ನಮ್ಮ ಸರಹದ್ದಿನಲ್ಲಿಯೇ ಬರುತ್ತಿದೆ ಎಂದು ಹೇಳುತ್ತಾ ಗೊಂದಲ ಮೂಡಿಸಿದ್ದಾರೆ.ಇನ್ನು ಜಿಲ್ಲಾ ಉಪವಿಭಾಗಾಧಿಕಾರಿಗಳ ಪರವಾಗಿ ಧರಣಿ ನಿರತರ ಬಳಿ ಬಂದಿದ್ದ ಪ್ರತಿನಿಧಿ ಗೊಂದಲ ನಿವಾರಣೆ ಬದಲಿಗೆ ಗೊಂದಲ ಹೆಚ್ಚಾಗುವಂತೆ ಮಾಡಿದ್ದರಿಂದ ಧರಣಿ ನಿರತರವಾಗಿದೆ. 1991ರಲ್ಲಿ ಈ ಭೂಮಿಯನ್ನು ಅರಣ್ಯ ಇಲಾಖೆಗೆ ಹೇಗೆ ಹಸ್ತಾಂತರ ಮಾಡಲಾಯಿತು ಎಂಬುದನ್ನು ಅಧಿಕಾರಿಗಳು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಸಂಘಟನಾ ಸಂಚಾಲಕ ಬಿ.ವಿ. ವೆಂಕಟರಮಣ ಮಾತನಾಡಿ, ಡಿಎಫ್‌ಒ ಹಾಗೂ ಎಸಿಎಫ್ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಸಹಕಾರ ನೀಡುತ್ತಿಲ್ಲ. ನಂದಿ ಮೆಡಿಕಲ್ ಕಾಲೇಜಿಗೆ ಫಾರೆಸ್ಟ್ ಭೂಮಿ ನೀಡಲಾಗಿದೆ. ಇದರಂತೆ ಈಶಾ ಸಂಸ್ಥೆಗೆ ಅರಣ್ಯ ಭೂಮಿ ನೀಡಿರುವಾಗ, ದಲಿತರಿಗೆ ಎರಡು ಎಕರೆ 3 ಎಕರೆ ಭೂಮಿ ನೀಡಿ ನ್ಯಾಯ ನೀಡುವಲ್ಲಿ ಸರ್ಕಾರ ಹಾಗೂ ಅಧಿಕಾರಿಗಳು ವಿಫಲರಾಗಿ ದ್ದಾರೆ ಎಂದು ಟೀಕಿಸಿದರು. ಹೈಕೋರ್ಟ್ ಆದೇಶದ ಪ್ರಕಾರ ದಲಿತರ ಒತ್ತುವರಿ ತೆರವು ಮಾಡಬಾರದು ಎಂಬ ಸೂಚನೆ ಇದ್ದರೂ ಅದನ್ನು ಪಾಲಿಸಲಾಗುತ್ತಿಲ್ಲ. ಪಾಲಿಸುವಂತೆ ನಾವು ಆಗ್ರಹಿಸುತ್ತಿದ್ದೇವೆ ಎಂದರು.

ಸಂಘಟನಾ ಸಂಚಾಲಕ ಎನ್.ಎ. ವೆಂಕಟೇಶ್ ಮಾತನಾಡಿ, ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸಮನ್ವಯ ಸಾಧಿಸಿ ದಲಿತರಿಗೆ ನ್ಯಾಯ ಒದಗಿಸಬೇಕು. ಜೂ.29ರಂದು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಅರಣ್ಯ ಇಲಾಖೆ ಕಚೇರಿಗಳ ಎದುರು ಪ್ರತಿಭಟನೆ ನಡೆಸಲಾಗುವುದು. ತಹಶೀಲ್ದಾರ್ ವಿರುದ್ಧ ಕ್ರಮ ಜರುಗುವವರೆಗೆ ಹೋರಾಟ ನಿಲ್ಲುವುದಿಲ್ಲ. ಕಂದಾಯ ಇಲಾಖೆ ಜನಪರವಾಗಿ ಕಾರ್ಯನಿರ್ವಹಿಸಿ ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕಿತ್ತು. ಆದರೆ ಕಳೆದ ಎಂಟು ದಿನಗಳಿಂದ ಸಮಸ್ಯೆ ಪರಿಹರಿಸುವ ಪ್ರಯತ್ನ ನಡೆದಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದು, ಜನಪ್ರತಿನಿಧಿಗಳು ಕೂಡ ಜನರ ಪರವಾಗಿ ನಿಲ್ಲುತ್ತಿಲ್ಲ ಎಂಬ ಭಾವನೆ ಮೂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಫಾರೆಸ್ಟ್ ಸೆಟ್ಲ್ಮೆಂಟ್ ಸೆಲ್‌ನಿಂದ ಕ್ಲಿಯರೆನ್ಸ್ ದೊರೆತಿದ್ದರೂ ಕಂದಾಯ ಇಲಾಖೆ ಅನಗತ್ಯ ತೊಂದರೆ ನೀಡುತ್ತಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪರಮೇಶ್ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ಕೂಡ ದಲಿತರ ಸಮಸ್ಯೆಯನ್ನು ನಿರ್ಲಕ್ಷಿಸಿದೆ. ಸುಮೋಟೋ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕಾಗಿದ್ದರೂ ಅದಾಗಿಲ್ಲ. ಸಂಬಂಧಿಸಿದ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತಾಲೂಕು ಸಂಚಾಲಕ ಪರಮೇಶ್, ಜಿಲ್ಲಾ ಸಂಚಾಲಕ ಪಿ.ಜಿ. ಗಂಗಪ್ಪ, ಜಿಲ್ಲಾ ಸಂಘಟನಾ ಸಂಚಾಲಕ ಬಿ.ವಿ. ವೆಂಕಟರಮಣ, ಎನ್.ಎ. ವೆಂಕಟೇಶ್, ಸಂಘಟನಾ ಸಂಚಾಲಕ ಶ್ರೀರಂಗಪ್ಪ, ಕಲಾಮಂಡಳಿ ಸಂಚಾಲಕ ಇಸ್ಕೂಲಪ್ಪ, ಬಾಗೇಪಲ್ಲಿ ತಾಲೂಕು ಸಂಚಾಲಕ ಪೈಪಾಳ್ಯ ರವಿ, ಗೌರಿಬಿದನೂರಿನ ಟಿ. ನರಸಿಂಹಮೂರ್ತಿ, ಶಿಡ್ಲಘಟ್ಟ ತಾಲೂಕು ಸಂಚಾಲಕ ದೊಡ್ಡ ತಿರುಮಲಪ್ಪ, ಚಿಂತಾಮಣಿ ತಾಲೂಕು ಸಂಚಾಲಕ ಎಸ್.ಸಿ. ನಾರಾಯಣಸ್ವಾಮಿ, ಮಂಚೇನಹಳ್ಳಿ ತಾಲೂಕು ಸಂಚಾಲಕ ಎಂ. ನರಸಿಂಹಮೂರ್ತಿ, ಗುಡಿಬಂಡೆ ತಾಲೂಕು ಸಂಚಾ ಲಕ ಸಿ.ವಿ. ರಮಣ್ಣ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.