ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪೌರಾಯುಕ್ತರ ವಿರುದ್ಧ ಮಾಜಿ ನಗರಸಭಾ ಸದಸ್ಯ ಮೊಹಮ್ಮದ್ ಶಫೀಕ್ ಆಕ್ರೋಶ: ಸತ್ಯಾಂಶ ಮರೆಮಾಚಬೇಡಿ

ಚಿಂತಾಮಣಿ ನಗರದ ಅವರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಅಧಿಕಾರಿ ಗಳು ಸತ್ಯಾಂಶ ಮರೆ ಮಾಚದೆ ಸಾರ್ವಜನಿಕರ ಮುಂದೆ ವಾಸ್ತವಾಂಶ ಇಡಬೇಕು ಎಂದು ಆಗ್ರಹಿಸಿದರು. ನಗರದಲ್ಲಿ ನಡೆದಿರುವ ಹಲವು ಪ್ರಮುಖ ಘಟನೆಗಳನ್ನು ಉಲ್ಲೇಖಿಸಿದ ಅವರು ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸಿದರು.

ಚಿಂತಾಮಣಿ: ಇತ್ತೀಚೆಗೆ ಕಮಿಷನರ್ ಚಲಪತಿ ಅವರು ಹತಾಶರಾಗಿ ಮಾತನಾಡುತ್ತಾ,ತಮ್ಮನ್ನು ಯಾರೋ ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿರುವುದನ್ನು ಮೊಹಮ್ಮದ್ ಶಫೀಕ್ ಅವರು ಪತ್ರಿಕಾಗೋಷ್ಠಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮನ್ನು ಯಾರೂ ದಾರಿ ತಪ್ಪಿಸುತ್ತಿಲ್ಲ, ಬದಲಿಗೆ ನೀವೇ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದೀರಿ ಎಂದು ಅವರು ನೇರ ವಾಗ್ದಾಳಿ ನಡೆಸಿದ್ದಾರೆ.

ಇಂದು ಚಿಂತಾಮಣಿ ನಗರದ ಅವರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಅಧಿಕಾರಿ ಗಳು ಸತ್ಯಾಂಶ ಮರೆ ಮಾಚದೆ ಸಾರ್ವಜನಿಕರ ಮುಂದೆ ವಾಸ್ತವಾಂಶ ಇಡಬೇಕು ಎಂದು ಆಗ್ರಹಿಸಿದರು. ನಗರದಲ್ಲಿ ನಡೆದಿರುವ ಹಲವು ಪ್ರಮುಖ ಘಟನೆಗಳನ್ನು ಉಲ್ಲೇಖಿಸಿದ ಅವರು ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸಿದರು.

ಬೆಳ್ಳಂಬೆಳಗ್ಗೆ ನಗರದಲ್ಲಿ ಫುಟ್‌ಪಾತ್ ಮೇಲಿದ್ದ ಅತಿಕ್ರಮಣಗಳನ್ನು ತೆರವುಗೊಳಿಸಲಾಗಿಲ್ಲವೇ?ಇದನ್ನು ಅಧಿಕಾರಿಗಳು ಏಕೆ ಮುಚ್ಚಿಡುತ್ತಿದ್ದಾರೆ? ನಗರದ ಪ್ರಮುಖ ಚೌಕದಲ್ಲಿದ್ದ ರಥವನ್ನು ಮುಂಜಾನೆಯ ವೇಳೆಯಲ್ಲಿ ಸದ್ದಿಲ್ಲದೆ ಅಲ್ಲಿಂದ ಸ್ಥಳಾಂತರಿಸಲಾಗಿಲ್ಲವೇ? ರಾತ್ರೋರಾತ್ರಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಯನ್ನು ಸಹ ತೆರವುಗೊಳಿಸುವ ಕೆಲಸ ನಡೆದಿದೆ.

ಇದನ್ನೂ ಓದಿ: Chinthamani Crime: ಗುರುಭವನದ ಬಳಿ ಯುವಕನ ಮೇಲೆ ಹಲ್ಲೆ: ಹಣಕ್ಕಾಗಿ ಬೆದರಿಕೆ, ಇಬ್ಬರು ವಶಕ್ಕೆ

ನಗರದಲ್ಲಿ ಒಂದಲ್ಲ, ಎರಡಲ್ಲ, ಇಂತಹ ಹತ್ತಾರು ಗೊಂದಲಮಯ ನಿರ್ಧಾರಗಳನ್ನು ಅಧಿಕಾರಿ ಗಳು ಕೈಗೊಂಡಿದ್ದಾರೆ. ನಾವು ಮಾತನಾಡುತ್ತಿರುವುದು ಕೇವಲ ಕಲ್ಪನೆಯಲ್ಲ, ಇದು ಕಣ್ಣೆದುರಿ ಗಿರುವ ವಾಸ್ತವಾಂಶ. ಹೀಗಿರುವಾಗ ಅಧಿಕಾರಿಗಳು ಬೇರೆಯವರ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು ಸತ್ಯವನ್ನು ಒಪ್ಪಿಕೊಳ್ಳಬೇಕು ಎಂದು ಮೊಹಮ್ಮದ್ ಶಫೀಕ್ ಅವರು ಆಕ್ರೋಶ ಹೊರ ಹಾಕಿದ್ದಾರೆ.

ಸಾರ್ವಜನಿಕರನ್ನು ದಾರಿ ತಪ್ಪಿಸುವ ಕೆಲಸವನ್ನು ನಾವು ಮಾಡುತ್ತಿಲ್ಲ, ನೀವೇ ಮಾಡುತ್ತಿದ್ದೀರಿ. ಸಂವಿಧಾನಾತ್ಮಕವಾಗಿ ಜನರ ಮತಗಳನ್ನು ಪಡೆದು ಆಯ್ಕೆಯಾಗಿರುವ ಚಿಂತಾಮಣಿ ತಾಲೂಕಿನ ಶಾಸಕರು ಸುಧಾಕರ್ ರೆಡ್ಡಿ ಅವರು. ಆದರೆ, ನೀವೇ ಶಾಸಕರ ರೀತಿಯಲ್ಲಿ ಮಾತನಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ?ಎಂದು ಕಮಿಷನರ್ ಅವರನ್ನು ಪ್ರಶ್ನಿಸಿದ್ದಾರೆ.

ಮುಂದುವರಿದು ಮಾತನಾಡಿದ ಮೊಹಮ್ಮದ್ ಶಫೀಕ್, "ನೀವು ಒಬ್ಬ ಸಾರ್ವಜನಿಕ ಸೇವಕ ಎಂಬು ದನ್ನು ಮರೆಯಬೇಡಿ. ಸಾರ್ವಜನಿಕರು ಹಾಗೂ ನಾವು ಕಟ್ಟುವ ತೆರಿಗೆ ಹಣದಿಂದ ನಿಮಗೆ ಸಂಬಳ ಬರುತ್ತಿದೆ. ನಿಮಗೆ ರಾಜಕೀಯ ಶೈಲಿಯಲ್ಲಿ ಮಾತನಾಡಬೇಕು ಎಂದಿದ್ದರೆ ತಕ್ಷಣವೇ ನಿಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬನ್ನಿ,ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಿ,ನಾವು ಎದುರಿಸಲು ಸಿದ್ಧರಿದ್ದೇವೆ" ಎಂದು ಸವಾಲು ಹಾಕಿದ್ದಾರೆ.

ಚಿಂತಾಮಣಿ ತಾಲೂಕಿನಲ್ಲಿ ಈ ಹಿಂದೆ ಹಲವು ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಆದರೆ ಯಾರೂ ಕೂಡ ಈ ರೀತಿಯಾಗಿ ವರ್ತಿಸಿಲ್ಲ. ನೀವು ಮುನ್ಸಿಪಲ್ ಕಮಿಷನರ್ ಆಗಿದ್ದೀರಿ, ಅದನ್ನು ಬಿಟ್ಟು ಪೊಲೀಸ್ ಕಮಿಷನರ್ ಅಥವಾ ಶಾಸಕರ ತರ ಸಾರ್ವಜನಿಕರ ಮುಂದೆ ಪೋಸ್ ಕೊಡುವುದನ್ನು ಬಿಡಿ.ಕಮಿಷನರ್ ಆಗಿ ನಿಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಕೆಲಸ ಮಾಡಿ ಎಂದು ಶಫೀಕ್ ಕಿಡಿಕಾರಿ ದ್ದಾರೆ.