ನಗರದಲ್ಲಿ ಪಾದಚಾರಿ ಮಾರ್ಗ ನಿರ್ಮಿಸಲು ಹಣ ಬಿಡುಗಡೆಗೆ ಕೋರಿ ಮಾಜಿ ಅಧ್ಯಕ್ಷ ಆನಂದಬಾಬು ರೆಡ್ಡಿ ಮನವಿ
ಪತ್ರದಲ್ಲಿರುವಂತೆ ಚಿಕ್ಕಬಳ್ಳಾಪುರ ನಗರವು ಜಿಲ್ಲಾ ಕೇಂದ್ರ ಸ್ಥಾನವಾಗಿದ್ದು, ನಗರಸಭೆ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ವಾಹನ ಸಾಂದ್ರತೆ ಹೆಚ್ಚಾಗಿದ್ದು, ಇದರಿಂದ ಸಾರ್ವಜನಿಕರ ಓಡಾಟಕ್ಕೆ ಬಹಳಷ್ಟು ತೊಂದರೆಯುAಟಾಗಿದೆ. ರಸ್ತೆಗಳ ಎರಡೂ ಕಡೆ ಪಾದಚಾರಿ ಮಾರ್ಗ ಲಭ್ಯವಿಲ್ಲದ ಕಾರಣ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ.

ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ಆಯುಕ್ತರ ಬೆಂಗಳೂರಿನ ಕಚೇರಿ ವಿಶೇಷ ಅಧಿಕಾರಿ ಮೋನಿಕಾರಿಗೆ ನಗರದಲ್ಲಿ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಹಣ ಬಿಡುಗಡೆಗೆ ಮಾಡುವಂತೆ ನಗರ ಸಭಾ ಸದಸ್ಯರ ನಿಯೋಗ ಆನಂದಬಾಬುರೆಡ್ಡಿ ನೇತೃತ್ವದಲ್ಲಿ ತೆರಳಿ ಮನವಿ ಪತ್ರ ಸಲ್ಲಿಸಿದರು.

ಚಿಕ್ಕಬಳ್ಳಾಪುರ: ನಗರಸಭೆ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಪಾದಾಚಾರಿ ಮಾರ್ಗ ನಿರ್ಮಾಣ ಮಾಡಲು ಅನುದಾನ ಮಂಜೂರು ಮಾಡುವಂತೆ ಕೋರಿ ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ಆಯುಕ್ತರಿಗೆ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಆನಂದಬಾಬುರೆಡ್ಡಿ ನೇತೃತ್ವದ ನಗರ ಸಭಾ ಸದಸ್ಯರ ನಿಯೋಗ ಬೆಂಗಳೂರಿಗೆ ತೆರಳಿ ಮನವಿ ಸಲ್ಲಿಸಿದ್ದಾರೆ ಈ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ಬಿಡುಗಡೆ ಮಾಡಿರುವ ನಿಯೋಗ ಪತ್ರದ ಸಾರಾಂಶವನ್ನು ನಾಗರೀಕರಿಗೆ ತಿಳಿಸಿದ್ದಾರೆ.
ಪತ್ರದಲ್ಲಿರುವಂತೆ ಚಿಕ್ಕಬಳ್ಳಾಪುರ ನಗರವು ಜಿಲ್ಲಾ ಕೇಂದ್ರ ಸ್ಥಾನವಾಗಿದ್ದು, ನಗರಸಭೆ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ವಾಹನ ಸಾಂದ್ರತೆ ಹೆಚ್ಚಾಗಿದ್ದು, ಇದರಿಂದ ಸಾರ್ವಜನಿಕರ ಓಡಾಟಕ್ಕೆ ಬಹಳಷ್ಟು ತೊಂದರೆಯುAಟಾಗಿದೆ. ರಸ್ತೆಗಳ ಎರಡೂ ಕಡೆ ಪಾದಚಾರಿ ಮಾರ್ಗ ಲಭ್ಯವಿಲ್ಲದ ಕಾರಣ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಆದ್ದರಿಂದ ನಗರಸಭೆ ವ್ಯಾಪ್ತಿಯ ಬಿ ಬಿ ರಸ್ತೆಯ ರೈಲ್ವೆಗೇಟ್ ನಿಂದ ಶನಿಮಹಾತ್ಮ ದೇವಸ್ಥಾನದವರೆಗೆ ಎರಡೂ ಕಡೆ ಪಾದಚಾರಿ ಮಾರ್ಗ ಮತ್ತು ಚರಂಡಿ ನಿರ್ಮಾಣ ಮಾಡಬೇಕು ಎಂದು ಕೋರಿದ್ದಾರೆ.
ಇದನ್ನೂ ಓದಿ: Chikkaballapur News: ಸತ್ಯ ಸಾಯಿ ಗ್ರಾಮದಲ್ಲಿ ‘ಒಂದು ವಿಶ್ವ ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಉತ್ಸವ 2025
ಮುಂದುವರೆದು ಬಲಮುರಿ ವೃತ್ತದಿಂದ ರೈಲ್ವೆ ಸ್ಟೇಷನ್‌ವರೆಗೆ ರಸ್ತೆಯ ಎರಡೂ ಕಡೆ ಪಾದಚಾರಿ ಮಾರ್ಗ ಮತ್ತು ಚರಂಡಿ ನಿರ್ಮಾಣ ತುರ್ತಾಗಿ ಆಗಬೇಕು. ಎಂ.ಜಿ. ರಸ್ತೆಯಿಂದ ಸರ್ಕಾರಿ ಆಸ್ಪತ್ರೆ ವರೆಗೆ ರಸ್ತೆಯ ಎರಡೂ ಕಡೆ ಪಾದಚಾರಿ ಮಾರ್ಗ ನಿರ್ಮಾಣವನ್ನು ಕೈಗೊಳ್ಳಲು ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ಸಂಸ್ಥೆ ಕೂಡಲೇ ಅನುದಾನ ಮಂಜೂರು ಮಾಡಲು ಒತ್ತಾಯಿಸಿ ಮಂಗಳವಾರ ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್)ಆಯುಕ್ತೆ ದೀಪಾ ಚೋಳನ್ ಮತ್ತು ವಿಶೇಷ ಅಧಿಕಾರಿ ಮೋನಿಕಾರಿಗೆ ನಗರ ಸಭಾ ಸದಸ್ಯರ ನಿಯೋಗ ಮನವಿಯನ್ನು ಮಾಡಿದ್ದಾರೆ. ಇದಕ್ಕೆ ಅಧಿಕಾರಿಗಳಿಂದ ಪೂರಕ ಸ್ಪಂಧನೆ ದೊರೆತಿದೆ ಎಂದು ಹೇಳಲಾಗಿದೆ.
ಈ ನಿಯೋಗದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಆನಂದಬಾಬುರೆಡ್ಡಿ ನೇತೃತ್ವದ ನಿಯೋಗದಲ್ಲಿ ಸ್ಥಾಯಿಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯಾಚಾರಿ, ಸದಸ್ಯರಾದ ಸತೀಶ್, ಯತೀಶ್, ಮಂಜುನಾಥಾಚಾರಿ, ರುಕ್ಮಿಣಿ ಮುನಿರಾಜು ಇದ್ದರು.