ಒಳಮೀಸಲಾತಿ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಾದಿಗ ಸಂಘಟನೆಗಳ ವತಿಯಿಂದ ಪ್ರತಿಭಟನೆ
ಮಾದಿಗ ದಂಡೋರಾ ತಾಲೂಕು ಅಧ್ಯಕ್ಷ ಚಿನ್ನಪೂಜಪ್ಪ ಮಾತನಾಡಿ, 2013ರಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಂತಹ ಸಮಯದಲ್ಲಿ ಮಾದಿಗ ಸಮುದಾಯದ ಬಹು ದಶಕಗಳ ಬೇಡಿಕೆ ಆಗಿರುವ ಒಳಮೀಸಲಾತಿಯನ್ನು ಜಾರಿಗೆ ತರುವುದಾಗಿ ಮಾತುಕೊಟ್ಟಿರುವ ಮುಖ್ಯಮಂತ್ರಿ ಸಿದ್ದರಾ ಮಯ್ಯ ಅಂದಿನಿಂದ ಇದುವರೆಗೂ ಒಳಮೀಸಲಾತಿ ಜಾರಿಗೊಳಿಸದೆ ಮಾದಿಗರಿಗೆ ಅನ್ಯಾಯ ಮಾಡುತ್ತಿದ್ದಾರೆ.


ಬಾಗೇಪಲ್ಲಿ: ಕಳೆದ 30 ವರ್ಷಗಳಿಂದ ಒಳಮೀಸಲಾತಿ ಜಾರಿಗಾಗಿ ಹೋರಾಟ ಮಾಡುತ್ತಿರುವ ಮಾದಿಗ ಜನಾಂಗಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಮೋಸ ಮಾಡಲು ಹೊರಟಿದ್ದು ರಾಜ್ಯ ಸಚಿವ ಸಂಪುಟದ ಕೆಲ ಸಚಿವರ ಪಿತೂರಿಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆದುಕೊಳ್ಳುತ್ತಿದ್ದಾ ರೆಂದು ಮಾದಿಗ ದಂಡೋರಾ ತಾಲೂಕು ಅಧ್ಯಕ್ಷ ಚಿನ್ನಪೂಜಪ್ಪ ಸರ್ಕಾರದ ವಿರುದ್ದ ಕಿಡಿಕಾರಿದರು.
ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಒಳಮೀಸಲಾತಿ ವರದಿಯನ್ನು ಜಾರಿಗೊಳಿಸು ವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಾದಿಗ ಸಂಘಟನೆಗಳ ಒಕ್ಕೂಟದ ನೂರಾರು ಕಾರ್ಯಕರ್ತರು ಬಾಗೇಪಲ್ಲಿ ಪಟ್ಟಣ ಮುಖ್ಯರಸ್ತೆಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ಕಚೇರಿ ಮುಂಭಾಗದಲ್ಲಿ ಜಮಾಯಿಸಿ ತಹಶೀಲ್ದಾರ್ ಮನೀಷಾ ಪತ್ರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು.
ಇದನ್ನೂ ಓದಿ: Chikkaballapur News: ಸರಕಾರಿ ಶಾಲಾವರಣ ಸ್ವಚ್ಛತೆ: ಗ್ರಾ.ಪಂ ಸದಸ್ಯ ಮತ್ತು ಮಹಿಳಾ ಸಂಘದ ಅಧ್ಯಕ್ಷೆ ನಡುವೆ ಜಗಳ
ಮಾದಿಗ ದಂಡೋರಾ ತಾಲೂಕು ಅಧ್ಯಕ್ಷ ಚಿನ್ನಪೂಜಪ್ಪ ಮಾತನಾಡಿ, 2013ರಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಂತಹ ಸಮಯದಲ್ಲಿ ಮಾದಿಗ ಸಮುದಾಯದ ಬಹು ದಶಕಗಳ ಬೇಡಿಕೆ ಆಗಿರುವ ಒಳಮೀಸಲಾತಿಯನ್ನು ಜಾರಿಗೆ ತರುವುದಾಗಿ ಮಾತುಕೊಟ್ಟಿರುವ ಮುಖ್ಯಮಂತ್ರಿ ಸಿದ್ದರಾ ಮಯ್ಯ ಅಂದಿನಿಂದ ಇದುವರೆಗೂ ಒಳಮೀಸಲಾತಿ ಜಾರಿಗೊಳಿಸದೆ ಮಾದಿಗರಿಗೆ ಅನ್ಯಾಯ ಮಾಡುತ್ತಿದ್ದಾರೆ.
ರಾಜ್ಯ ಸರ್ಕಾರ ರಚನೆ ಮಾಡಿರುವ ಎಲ್ಲಾ ಅಯೋಗಗಳ ವರದಿ ಅಧಾರಿತ ಹಾಗೂ ನ್ಯಾಯಾ ಲಯದ ಸೂಚನೆಯಂತೆ ಮಾದಿಗರಿಗೆ ಒಳಮೀಸಲಾತಿ ನೀಡಬಹುದೆಂದು ಅಯೋಗಗಳು ವರದಿ ಸಲ್ಲಿಸಿದ್ದರು ಒಳಮೀಸಲಾತಿ ಜಾರಿ ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಮಾದಿಗರ ಮತಗಳಿಂದ ಅಧಿಕಾರಕ್ಕೆ ಬರುತ್ತಿರುವ ಕಾಂಗ್ರೆಸ್ ಪಕ್ಷ ದಶಗಳಿಂದಲೂ ಮಾದಿಗರಿಗೆ ಅನ್ಯಾಯ ಮಾಡುತ್ತಲೇ ಬಂದಿದ್ದು, ರಾಜ್ಯದಲ್ಲಿ ಮಾದಿಗರಿಗೆ ಅನ್ಯಾಯ ಮಾಡು ತ್ತಿರುವ ದರಿದ್ರ ಸಿದ್ದರಾಮಯ್ಯನ ಸರ್ಕಾರ ಅಧಿಕಾರ ನಡೆಸುತ್ತಿದೆ.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಒಂದು ತಿಂಗಳಳೊಗೆ ಒಳಮೀಸಲಾತಿ ಜಾರಿಗೊಳಿಸುವುದಾಗಿ ೨೦೨೩ ರಲ್ಲಿ ಚಿತ್ರದುರ್ಗದಲ್ಲಿ ನಡೆದ ಎಸ್ಸಿ, ಎಸ್ಟಿ ಜನಾಂಗದ ಚುನಾವಣಾ ಸಭೆಯಲ್ಲಿ ಘೋಷಣೆ ಮಾಡಿ ಇಂದಿಗೆ ೨೮ ತಿಂಗಳು ಕಳೆಯುತ್ತಿದ್ದರೂ ಸರ್ಕಾರ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಒಳಮೀಸಲಾತಿ ವರದಿ ಜಾರಿಗೊಳಿಸಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಜ.೧೯ರ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿಗೊಳಿಸದಿದ್ದರೆ ಉಗ್ರ ಹೋರಾಟ ನಡೆಸ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ದ.ಸಂ.ಸ ಸಂಘಟನಾ ಸಂಚಾಲಕ ಎನ್.ಗಿರೀಶ್ ಮಾತನಾಡಿ, ಮಾದಿಗ ಜನಾಂಗದ ಮಕ್ಕಳ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಭವಿಷ್ಯತ್ತಿನ ದೃಷ್ಠಿಯಿಂದ ೩ ದಶಗಳಿಂದ ಹೋರಾಟ ನಡೆಸುತ್ತಿದ್ದೇವೆ. ಹೈಕೋರ್ಟ್ ಒಳಮೀಸಲಾತಿ ಜಾರಿಗೊಳಿಸುವ ತಿರ್ಮಾನವನ್ನು ಅಯಾ ರಾಜ್ಯ ತೆಗೆದುಕೊಳಳಬಹುದು ಎಂದು ಅದೇಶ ಮಾಡಿದ್ದರೂ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಒಳಮೀಸಲಾತಿ ಜಾರಿ ಮಾಡುವ ಮನಸ್ಸಿಲ್ಲ ಇದರಿಂದ ಮಾದಿಗ ಸಮುದಾಯ ಅತ್ಯಂತ ನೋವು ಅನುಭವಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಅಚೇಪಲ್ಲಿ ಆಧಿ, ಬಿ.ಎನ್.ಕೃಷ್ಣಮೂರ್ತಿ, ಎನ್.ವೆಂಕಟೇಶ್, ಪರಗೋಡು ಗಂಗರಾಜು, ಕೃಷ್ಣಪ್ಪ, ಮಹೇಶ್, ಆನಂದ, ವೆಂಕಟೇಶ್, ನರಸಿಂಹಪ್ಪ, ವಿಜಯ್, ಗಂಗಾಧರ, ಈರಪ್ಪ, ನವೀನ್, ಸಿ.ವಿ.ವೆಂಕಟೇಶ್, ಸುನೀಲ್ ಕುಮಾರ್, ನವೀನ್ ಕುಮಾರ್, ನಾಗಪ್ಪ ಮತ್ತಿತರರು ಇದ್ದರು.