ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chikkaballapur News: ಪೆರೇಸಂದ್ರ ಕ್ಷೇತ್ರದ 50 ಹಾಲು ಉತ್ಪಾದಕರಿಗೆ ಎನ್‌ಡಿಡಿಬಿ ಆನಂದ್ ಡೈರಿಗೆ ಉಚಿತ ಅಧ್ಯಯನ ಪ್ರವಾಸಕ್ಕೆ ಚಾಲನೆ

ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ಅಮುಲ್ ಮಾದರಿಯ ಸಂಸ್ಥೆಯಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ಅಧ್ಯಯನ ಪ್ರವಾಸವನ್ನು ಆಯೋಜಿಸಲಾಗಿದೆ. ಹಾಲು ಉತ್ಪಾದಕರು ಅಮುಲ್ ಡೈರಿ ಹಾಗೂ ಅದರ ಸಹಕಾರ ಸಂಘಗಳ ಕಾರ್ಯವೈಖರಿ, ಹಾಲು ಸಂಗ್ರಹಣೆ, ಮೌಲ್ಯ ವರ್ಧಿತ ಹಾಲು ಉತ್ಪನ್ನಗಳ ತಯಾರಿಕೆ, ಮಾರುಕಟ್ಟೆ ವ್ಯವಸ್ಥೆ ಹಾಗೂ ಸಹಕಾರ ಆಡಳಿತದ ಕುರಿತು ಪ್ರಾಯೋಗಿಕ ಜ್ಞಾನ ಪಡೆದು ತಮ್ಮ ಗ್ರಾಮಗಳಲ್ಲಿಯೂ ಅಳವಡಿಸಿಕೊಳ್ಳಬೇಕು

ಪೆರೇಸಂದ್ರ ಕ್ಷೇತ್ರದ 50 ಹಾಲು ಉತ್ಪಾದಕರಿಗೆ ಎನ್‌ಡಿಡಿಬಿ ಆನಂದ್ ಡೈರಿಗೆ ಉಚಿತ ಅಧ್ಯಯನ ಪ್ರವಾಸಕ್ಕೆ ಪೆರೇಸಂದ್ರ ಕ್ಷೇತ್ರದ ನಿರ್ದೇಶಕರಾದ ಕೆ.ವಿ. ನಾಗರಾಜು ಚಾಲನೆ ನೀಡಿ ಮಾತನಾಡಿದರು.

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಪೆರೇಸಂದ್ರ ಕ್ಷೇತ್ರದ 50 ಮಂದಿ ಹಾಲು ಉತ್ಪಾದಕರಿಗೆ ಗುಜರಾತ್‌ನ ಎನ್‌ಡಿಡಿಬಿ ಆನಂದ್ ಡೈರಿಗೆ ಉಚಿತ ಅಧ್ಯಯನ ಪ್ರವಾಸವನ್ನು ಬುಧವಾರ ಆಯೋಜಿಸಲಾಯಿತು.

ಕಾರ್ಯಕ್ರಮಕ್ಕೆ ಪೆರೇಸಂದ್ರ ಕ್ಷೇತ್ರದ ನಿರ್ದೇಶಕರಾದ ಕೆ.ವಿ.ನಾಗರಾಜು ಚಾಲನೆ ನೀಡಿ ಮಾತ ನಾಡಿ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ಅಮುಲ್ ಮಾದರಿಯ ಸಂಸ್ಥೆಯಾಗಿ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಈ ಅಧ್ಯಯನ ಪ್ರವಾಸವನ್ನು ಆಯೋಜಿಸಲಾಗಿದೆ.

ಇದನ್ನೂ ಓದಿ: Chikkaballapur News: 30 ದಿನಗಳ ಧರಣಿಗೂ ಸ್ಪಂದಿಸದ ಆಡಳಿತದ ವಿರುದ್ಧ ದಸಂಸ ಆಕ್ರೋಶ; 10 ದಿನಗಳಲ್ಲಿ ಪರಿಹಾರ, ಇಲ್ಲದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ

ಹಾಲು ಉತ್ಪಾದಕರು ಅಮುಲ್ ಡೈರಿ ಹಾಗೂ ಅದರ ಸಹಕಾರ ಸಂಘಗಳ ಕಾರ್ಯವೈಖರಿ, ಹಾಲು ಸಂಗ್ರಹಣೆ, ಮೌಲ್ಯ ವರ್ಧಿತ ಹಾಲು ಉತ್ಪನ್ನಗಳ ತಯಾರಿಕೆ, ಮಾರುಕಟ್ಟೆ ವ್ಯವಸ್ಥೆ ಹಾಗೂ ಸಹಕಾರ ಆಡಳಿತದ ಕುರಿತು ಪ್ರಾಯೋಗಿಕ ಜ್ಞಾನ ಪಡೆದು ತಮ್ಮ ಗ್ರಾಮಗಳಲ್ಲಿಯೂ ಅಳವಡಿಸಿ ಕೊಳ್ಳಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ರಾಸುಗಳನ್ನು ಕಳೆದುಕೊಂಡ ನಾಲ್ವರು ಫಲಾನುಭವಿಗಳಿಗೆ ರಾಸು ವಿಮಾ ಯೋಜನೆಯಡಿ ಒಟ್ಟು 2,20,000 ಮೊತ್ತದ ಚೆಕ್‌ಗಳನ್ನು ವಿತರಿಸಲಾಯಿತು. ಹಾಲು ಉತ್ಪಾದಕರು ಮುಂದಿನ ದಿನಗಳಲ್ಲಿ ಹೆಚ್ಚಿನ ಹಾಲಿನ ಇಳುವರಿ ನೀಡುವ ರಾಸುಗಳನ್ನು ಖರೀದಿಸಿ ಹೈನುಗಾರಿಕೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕರಾದ ಡಾ. ಮನೋರಂಜನ್ ರೆಡ್ಡಿ, ವಿಸ್ತರಣಾಧಿಕಾರಿಗಳಾದ ವೇಣು, ಪ್ರಭಾಕರ್, ನವೀನ್ ಚಂದ್ರ ಹಾಗೂ ಒಕ್ಕೂಟದ ಸಿಬ್ಬಂದಿ ಉಪಸ್ಥಿತರಿದ್ದರು.