ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bagepally News: ಕಾರಣವಿಲ್ಲದೆ ನೌಕರರ ವಜಾ : ಗಾರ್ಮೆಂಟ್ ಫ್ಯಾಕ್ಟರಿ ಕಾರ್ಮಿಕರಿಂದ ಪ್ರತಿಭಟನೆ

ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಏಕಾಏಕಿ ಯಾವುದೇ ಸ್ಪಷ್ಟ ಕಾರಣ ವಿಲ್ಲದೆ ಮತ್ತು ನೋಟೀಸ್ ನೀಡದೇ ಕೆಲಸದಿಂದ ತೆಗೆದು ಹಾಕಲಾಗಿದೆ. ಯಾವುದೇ ಕಾರ್ಮಿಕನನ್ನು ಕೆಲಸದಿಂದ ತೆಗೆಯಬೇಕಾದರೆ ಹಲವಾರು ನಿಯಮ ನಿಬಂಧನೆಗಳಿರುತ್ತವೆ. ಆದರೆ ಇ-ಫ್ಯಾಕ್ಟರಿಯಲ್ಲಿ ನಿಯಮ ಗಳನ್ನು ಗಾಳಿಗೆ ತೂರಲಾಗಿದೆ.

ಗಾರ್ಮೆಂಟ್ ಫ್ಯಾಕ್ಟರಿ ಕಾರ್ಮಿಕರಿಂದ ಪ್ರತಿಭಟನೆ

Ashok Nayak Ashok Nayak Aug 21, 2025 8:33 PM

ಬಾಗೇಪಲ್ಲಿ: ತಾಲೂಕಿನ ಹೊರವಲಯದ ೪೪ರ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ ಇರುವ ಚೌಧರಿ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಯಾವುದೇ ಮುಖ್ಯ ಕಾರಣವಿಲ್ಲದೆ ಸುಮಾರು 150 ಕಾರ್ಮಿಕರನ್ನು  ಕೆಲಸದಿಂದ ತೆಗೆದು ಹಾಕಿದ್ದಾರೆಂದು ಆರೋಪಿಸಿ ಸಿಪಿಐಎಂ ಪಕ್ಷ ಮತ್ತು ಸಿಐಟಿಯು ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಹೆಂಗಸರ ಸಮಸ್ಯೆ, ತುರ್ತು ಸಂದರ್ಭದಲ್ಲಿ ರಜೆ ಮತ್ತಿತರ ವಿಚಾರಗಳಿಗೂ ಮಾನವೀಯತೆ ತೋರುವುದಿಲ್ಲ. ಬುಧವಾರ ಸಂಜೆ ೫.೩೦ ಗಂಟೆಗೆ ಬಂದ ಅಧಿಕಾರಿಗಳು,ನಾಳೆಯಿಂದ ಕೆಲಸಕ್ಕೆ ಬರಬೇಡಿ ಎಂದು ಹೇಳಿ ಹೊರಟರು. ನಮ್ಮ ಮುಂದಿನ ಗತಿಯೇನು? ಎಂದು ಪ್ರತಿಭಟನಾಕಾರರು ನೋವು ತೋಡಿಕೊಂಡರು.

ಈ ವೇಳೆ ಮಾತನಾಡಿದ ಸಿಐಟಿಯು ಮುಖಂಡ ಕೆ.ಮುನಿಯಪ್ಪರವರು, ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಏಕಾಏಕಿ ಯಾವುದೇ ಸ್ಪಷ್ಟ ಕಾರಣವಿಲ್ಲದೆ ಮತ್ತು ನೋಟೀಸ್ ನೀಡದೇ ಕೆಲಸದಿಂದ ತೆಗೆದು ಹಾಕಲಾಗಿದೆ. ಯಾವುದೇ ಕಾರ್ಮಿಕನನ್ನು ಕೆಲಸದಿಂದ ತೆಗೆಯಬೇಕಾದರೆ ಹಲವಾರು ನಿಯಮ ನಿಬಂಧನೆಗಳಿರುತ್ತವೆ. ಆದರೆ ಇ-ಫ್ಯಾಕ್ಟರಿಯಲ್ಲಿ ನಿಯಮ ಗಳನ್ನು ಗಾಳಿಗೆ ತೂರಲಾಗಿದೆ.ಮಹಿಳಾ ಕಾರ್ಮಿಕರಿಗೆ ವಿಶ್ರಾಂತಿ ಕೊಠಡಿಯಿಲ್ಲ, ಮೇಲಾಧಿಕಾರಿ ಗಳು ನಿಂದಿಸುತ್ತಾರೆ ಎಂಬ ದೂರುಗಳಿವೆ. ಹಾಗಾಗಿ ಕಾರ್ಮಿಕ ವಿರೋಧಿ ನಿಲುವುಗಳನ್ನು ಅನುಸರಿಸುತ್ತಿದ್ದು, ಕೂಡಲೇ ಅವರ ಕ್ಷಮೆಯಾಚಿಸಬೇಕು ಎಂದರು.

ಇದನ್ನೂ ಓದಿ: India-China Trade: ಭಾರತ- ಚೀನಾ ವ್ಯಾಪಾರ ಮತ್ತೆ ಪುನರಾರಂಭ; ರಸಗೊಬ್ಬರ, ಸುರಂಗ ಯಂತ್ರ ರಫ್ತಿಗೆ ಡ್ರಾಗನ್‌ ರಾಷ್ಟ್ರ ಒಪ್ಪಿಗೆ

ನಂತರ ಗಾರ್ಮೆಂಟ್ಸ್ ನ ಎಚ್.ಆರ್ ಮ್ಯಾನೇಜರ್ ಮಹೇಂದ್ರರವರು ಮಾತನಾಡಿ, ಪ್ರೊಡಕ್ಷನ್ ಕಡಿಮೆಯಾಗಿದ್ದು, ಕಾರ್ಮಿಕರನ್ನು ಕೆಲಸಕ್ಕೆ ಬರದಂತೆ ಸೂಚಿಸಲಾಗಿತ್ತು. ನಮ್ಮ ಗಾರ್ಮೆಂಟ್ಸ್  ಮಾಲೀಕರು ವಿದೇಶದಲ್ಲಿದ್ದು, ಅವರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಹಾಗಾಗಿ ನಾಳೆಯಿಂದ ಕೆಲಸಕ್ಕೆ ಬರಬಹುದು ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಿಪಿಐಎಂ ಮುಖಂಡರಾದ ಜಿ.ಕೃಷ್ಣಪ್ಪ, ವಾಲ್ಮೀಕಿ ಅಶ್ವತ್ಥಪ್ಪ ಸೇರಿದಂತೆ ಹಲವಾರು ಮಂದಿ ಇದ್ದರು.

ಚೌಧರಿ ಗಾರ್ಮೆಂಟ್ಸ್  ಕಾರ್ಮಿಕರನ್ನು ಏಕಾಏಕಿ ಕೆಲಸಕ್ಕೆ ಬರಬೇಡಿ ಎಂಬ ವಿಚಾರವಾಗಿ ಸ್ಥಳಕ್ಕೆ ಭೇಟಿ ನೀಡಲಾಗಿದ್ದು, ಅಲ್ಲಿನ ಮಾಲೀಕರು,ಆಡಳಿತ ಮಂಡಳಿಯವರು ಸಭೆ ನಡೆಸಿ, ನಿರ್ಧಾರ ತೆಗೆದುಕೊಳ್ಳಬೇಕು. ಕಾರ್ಮಿಕ ಕಾನೂನುಗಳ ಅಡಿಯಲ್ಲೆ ನಿರ್ಧಾರ ತೆಗೆದುಕೊಳ್ಳಬೇಕು. ಅಲ್ಲಿ ಯವರೆಗೆ ಯಾವುದೇ ಕಾರ್ಮಿಕರನ್ನು ಕೆಲಸಕ್ಕೆ ಬರದಂತೆ ಅಡ್ಡಿ ಪಡಿಸಬಾರದು ಎಂದು ಎಚ್.ಆರ್.ಮ್ಯಾನೇಜರ್ ಮತ್ತಿತರರಿಗೆ ಸೂಚಿಸಲಾಗಿದೆ
- ರಾಕೇಶ್, ಕಾರ್ಮಿಕ ನಿರೀಕ್ಷಕ ,ಬಾಗೇಪಲ್ಲಿ