ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chikkaballapur News: ಶರಣರಿಂದ ಲಿಂಗ ಸಮಾನತೆ ಸಾಧ್ಯವಾಯಿತು: ತಹಸೀಲ್ದಾರ್ ರಶ್ಮಿ ಅಭಿಮತ

ಶಿಕ್ಷಣವು ಸರಿ ಯಾವುದು, ತಪ್ಪು ಯಾವುದು ಎಂಬುದನ್ನು ತಿಳಿಸಿಕೊಟ್ಟರೆ. ಶರಣರು ತಿಳಿಸಿ ಕೊಟ್ಟಿರುವ ಮೌಲ್ಯಗಳು ಎಷ್ಟೇ ಸಂಕಷ್ಟ ಬಂದರೂ ಸರಿ ದಾರಿಯಲ್ಲೇ ನಡೆಯುವಂತೆ ಮಾಡುತ್ತವೆ. ಅಂತಹ ಮೌಲ್ಯಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂಬಿಗರು ಕನ್ನಡ ಸಾಹಿತ್ಯ ವನ್ನು ವಿಶ್ವ ಮಟ್ಟಕ್ಕೆ ಪಸರಿಸಿ ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

ಚಿಕ್ಕಬಳ್ಳಾಪುರ : ಅಂಬಿಗರ ಚೌಡಯ್ಯ ಅವರು 12 ನೇ ಶತಮಾನದಲ್ಲಿ ಜೀವಿಸಿದ್ದ ಶಿವಶರಣರು, ವಚನಕಾರರು. ಕಾಯಕಯೋಗಿಯಾಗಿ ತನ್ನದೇ ಆದಂತಂಹ ಕೊಡುಗೆಯನ್ನು ಈ ಸಮಾಜಕ್ಕೆ ನೀಡಿದರು ಎಂದು ತಹಶೀಲ್ದಾರ್ ರಶ್ಮಿ ತಿಳಿಸಿದರು

ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯು ಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಅಂಬಿಗರ ಚೌಡಯ್ಯ ಜಯಂತಿಯ ಅಂಗವಾಗಿ ಚೌಡಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ನೇರ ನುಡಿಯ ನಿಜಶರಣರಾಗಿರುವ ಎಕೈಕ ವ್ಯಕ್ತಿ ಎಂದರೆ ಅದು ಅಂಬಿಗರ ಚೌಡಯ್ಯ ಎಂದು ತಹಸೀಲ್ದಾರ್ ರಶ್ಮಿ ಆವರು ಬಣ್ಣಿಸಿದರು.

ನಿಜಶರಣ ಅಂಬಿಗರ ಚೌಡಯ್ಯ ಅವರಂತ ಶಿವಶರಣರು ಅಂದಿನ ಸಮಾಜದಲ್ಲಿದ್ದ ಲಿಂಗ ಅಸಮಾನತೆ ವಿರುದ್ಧ ಧ್ವನಿ ಎತ್ತಿದ್ದರಿಂದ ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಉದ್ಯೋಗ ದಲ್ಲಿ ತೊಡಗಿಸಿಕೊಂಡಿದ್ದಾರೆ,ಚಾಲಕ ವೃತ್ತಿಯಿಂದ ಹಿಡಿದು ಬಾಹ್ಯಾಕಾಶ ಕ್ಷೇತ್ರದವರೆಗೆ ಮಹಿಳೆ ಯರು ತಮ್ಮ ಚಾಪನ್ನು ಮೂಡಿಸಿದ್ದಾರೆ ಎಂದರು.

ಇದನ್ನೂ ಓದಿ: Chikkaballapur News: ವಾರದ ಒಳಗೆ ದಾಖಲೆ ರಹಿತ ಜನ ವಸತಿಗಳನ್ನು ಗುರ್ತಿಸಿ: ಜಿಲ್ಲಾಧಿಕಾರಿ ಜಿ. ಪ್ರಭು

ಶಿಕ್ಷಣವು ಸರಿ ಯಾವುದು, ತಪ್ಪು ಯಾವುದು ಎಂಬುದನ್ನು ತಿಳಿಸಿಕೊಟ್ಟರೆ. ಶರಣರು ತಿಳಿಸಿ ಕೊಟ್ಟಿರುವ ಮೌಲ್ಯಗಳು ಎಷ್ಟೇ ಸಂಕಷ್ಟ ಬಂದರೂ ಸರಿ ದಾರಿಯಲ್ಲೇ ನಡೆಯುವಂತೆ ಮಾಡು ತ್ತವೆ. ಅಂತಹ ಮೌಲ್ಯಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂಬಿ ಗರು ಕನ್ನಡ ಸಾಹಿತ್ಯವನ್ನು ವಿಶ್ವ ಮಟ್ಟಕ್ಕೆ ಪಸರಿಸಿ ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ನಿತ್ಯ ಜೀವನದ ಅನುಭೂತಿಯ ಅನುಭವಗಳನ್ನು ಅವರ ಕಾಯಕದಲ್ಲಿ ಕಟ್ಟಿಕೊಂಡು ವಚನಗಳನ್ನು ರಚಿಸಿದ್ದಾರೆ ಎಂದರು. 

12 ನೇ ಶತಮಾನದ ವಚನಕಾರರು ವಚನ ಸಾಹಿತ್ಯದ ಮೂಲಕ ಅಕ್ಷರ ಜ್ಞಾನವನ್ನು ಜನಸಾಮಾನ್ಯರ ಮಟ್ಟಕ್ಕೆ ವಿಸ್ತರಣೆ ಮಾಡಿ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕೆಲಸ ಮಾಡಿದರು. ಅವರ ವಚನಗಳು ಹಾಗೂ ತತ್ವ ಸಿದ್ದಾಂತಗಳೇ ನಮ್ಮಗೆ ಇಂದು ದಿವ್ಯದರ್ಶನ ಹಾಗೂ ಮಾರ್ಗದರ್ಶನವಾಗಿವೆ. ಅವರ ಆದರ್ಶಗಳು, ಚಿಂತನೆಗಳು ಅಜರಾಮರ ಎಂದು ಹೇಳಿದರು.

ಉಪನ್ಯಾಸಕ ಪ್ರಕಾಶ್ ಮಾತನಾಡಿ ಅಂಬಿಗರ ಚೌಡಯ್ಯ ಬಾಲ್ಯದಿಂದಲೂ ಸಮಾಜ ಸೇವೆ ವಚನ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಯಾವುದೇ ವಿಷಯಗಳನ್ನು ನೇರವಾಗಿ ಚರ್ಚೆಯ ಮೂಲಕ ಪ್ರತಿಪಾದಿಸುತ್ತಿದ್ದರು ಆದ್ದರಿಂದ ಅಂಬಿಗರ ಚೌಡಯ್ಯರಿಗೆ ಬಸವಣ್ಣ ನವರು ಅಗ್ರ ಸ್ಥಾನ ನೀಡಿದ್ದರು.ಎಂದು ಅಂಬಿಗರ ಚೌಡಯ್ಯ ರವರ ವಚನ ಸಾಹಿತ್ಯದ ಕೊಡುಗೆಗಳನ್ನು ಮತ್ತು ಅವರ ಜೀವನದ ವಿವಿಧ ಮಜಲುಗಳನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ನಿರ್ಮಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಜಿಲ್ಲಾ ಬೆಸ್ತರ ಸಂಘದ ಅಧ್ಯಕ್ಷ ಕೆ.ಜಯರಾಮ್, ಚಿಕ್ಕಬಳ್ಳಾಪುರ ತಾಲ್ಲೂಕು ಬೆಸ್ತರ ಅಧ್ಯಕ್ಷ ಆರ್.ಎ.ರವಿಕುಮಾರ್, ಸಮುದಾಯದ ಮುಖಂಡರಾದ ಸಂಜೀವಪ್ಪ, ಆಂಜಿನಪ್ಪ, ಮುರಳಿ, ನಾಗರಾಜು, ಜಿ.ನರಸಿಂಹಯ್ಯ, ರಾಮ ಚಂದ್ರಪ್ಪ, ಜಿ.ರಾಮಯ್ಯ ಮತ್ತು ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದರು.