ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Good Friday: ಶ್ರದ್ಧಾಭಕ್ತಿಯಿಂದ ನೆರವೇರಿದ ಕ್ರಿಶ್ಚಿಯನ್ ಧರ್ಮದ ಶುಭ ಶುಕ್ರವಾರ ಆಚರಣೆ: ವಿಶೇಷ ಪ್ರಾರ್ಥನೆಯಲ್ಲಿ ಭಾಗಿ

ಏಸು ಸ್ವಾಮಿಯ ಪ್ರೀತಿಯಲ್ಲಿ ವ್ಯತ್ಯಾವಿಲ್ಲ, ಕ್ಷಮಾಪಣೆಯಲ್ಲಿ ಆಯ್ಕೆಗಳಿಲ್ಲ. ಎಲ್ಲರಿಗಾಗಿ ದೇವರದಲ್ಲಿ ಪ್ರಾರ್ಥನೆ ಮಾಡುವ ಸ್ವಾಮಿ, ಶಿಲುಬೇರಿದಾಗಲೂ ಜನರಿಗಿಯೇ ವಿವಿಧ ಅರ್ಥ ವುಳ್ಳ, ದೃಷ್ಟಿಕೋನವುಳ್ಳ ಮಾತುಗಳನ್ನಾಡಿದ್ದಾರೆ. ಸ್ವಾಮಿಯ ಸಂದೇಶ ಜೀವನದಲ್ಲಿ ಅಳವಡಿಸಿ ಕೊಂಡರೆ ಜೀವನ ಸುಂದರಮಯವಾಗುವುದು

ವಿಶೇಷ ಪ್ರಾರ್ಥನಾ ಸಭೆಗಳಲ್ಲಿ ಏಸು ಕ್ರಿಸ್ತನನ್ನು ಸ್ತುತಿ ಮಾಡುವ ಮೂಲಕ ಪವಿತ್ರ ಹಬ್ಬ ಶುಭ ಶುಕ್ರವಾರವನ್ನು ಕ್ರೈಸ್ತರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಚಿಕ್ಕಬಳ್ಳಾಪುರ: ವಿಶೇಷ ಪ್ರಾರ್ಥನಾ ಸಭೆಗಳಲ್ಲಿ ಏಸು ಕ್ರಿಸ್ತನನ್ನು ಸ್ತುತಿ ಮಾಡುವ ಮೂಲಕ ಪವಿತ್ರ ಹಬ್ಬ ಶುಭ ಶುಕ್ರವಾರ(Good Friday)ವನ್ನು ಕ್ರೈಸ್ತರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ನಗರದ ಕ್ರೈಸ್ತರ ಪ್ರಮುಖ ದೇವಾಲಯಗಳಾದ ಸಿಎಸ್‌ಐ ಕ್ರೈಸ್ಟ್ ಚರ್ಚ್, ಸೆಂಟ್ ಕ್ಸೇವಿ ಯರ್ ಚರ್ಚ್,ವಾಪಸಂದ್ರದಲ್ಲಿನ ಚರ್ಚ್ ಸೇರಿದಂತೆ ಇತರೆ ಚರ್ಚ್ಗಳಿಗೆ ಹೆಚ್ಚಿನ ಸಂಖ್ಯೆ ಯಲ್ಲಿ ಭೇಟಿ ನೀಡಿದ ಕ್ರೈಸ್ತರು ಏಸು ಕ್ರಿಸ್ತನ ಸಂದೇಶಗಳನ್ನು ಆಲಿಸಿದರು.

ಶುಭ ಶುಕ್ರವಾರವಾದ ಬೆಳಗ್ಗೆ 11 ಘಂಟೆಗೆ ಹಮ್ಮಿಕೊಂಡಿದ್ದ ವಿಶೇಷ ಸಭೆಗಳಿಗೆ ಉಪವಾಸ ದೊಂದಿಗೆ ಆಲಯದಲ್ಲಿ ಸೇರಿದ ಕ್ರೈಸ್ತರು, ಏಸುಕ್ರಿಸ್ತನ ಸಂದೇಶಗಳ ಬಗ್ಗೆ ಸಭಾ ಪಾಲಕರು ನೀಡಿದ ಬೋಧನೆಯನ್ನು ಆಲಿಸಿದರು.ಶುಭ ಶುಕ್ರವಾದ ಅಂಗವಾಗಿ ವಿಶೇಷ ಪ್ರಾರ್ಥನೆ ಹಾಗೂ ಗೀತೆಗಳನ್ನು ಹಾಡಲಾಯಿತು.

ಇದನ್ನೂ ಓದಿ: Good Friday: ಗುಡ್‌ ಫ್ರೈಡೆ ಅಂಗವಾಗಿ ಕ್ರಿಶ್ಚಿಯನ್ ಸಮುದಾಯಕ್ಕೆ ದಿನಸಿ ವಿತರಿಸಿದ ಸಂದೀಪ್‌ ರೆಡ್ಡಿ

ಸಿಎಸ್‌ಐ  ಚರ್ಚ್ ಸಭಾಪಾಲಕ ರೆ. ವಿ.ಪ್ರವೀಣ್ ಸಂದೇಶ ನೀಡಿ ಮಾತನಾಡಿ, ಏಸು ಸ್ವಾಮಿ ಯ ಪ್ರೀತಿಯಲ್ಲಿ ವ್ಯತ್ಯಾವಿಲ್ಲ, ಕ್ಷಮಾಪಣೆಯಲ್ಲಿ ಆಯ್ಕೆಗಳಿಲ್ಲ. ಎಲ್ಲರಿಗಾಗಿ ದೇವರದಲ್ಲಿ ಪ್ರಾರ್ಥನೆ ಮಾಡುವ ಸ್ವಾಮಿ, ಶಿಲುಬೇರಿದಾಗಲೂ ಜನರಿಗಿಯೇ ವಿವಿಧ ಅರ್ಥವುಳ್ಳ, ದೃಷ್ಟಿಕೋನವುಳ್ಳ ಮಾತುಗಳನ್ನಾಡಿದ್ದಾರೆ.ಸ್ವಾಮಿಯ ಸಂದೇಶ ಜೀವನದಲ್ಲಿ ಅಳವಡಿಸಿ ಕೊಂಡರೆ ಜೀವನ ಸುಂದರಮಯವಾಗುವುದು ಎಂದು ಹೇಳಿದರು.

ಶಾಂತಿ ಕ್ಷಮಾಪಣೆಯ ಸಂದೇಶವನ್ನು ಏಸುವು ಸಾರಿದ್ದು, ಸಣ್ಣ ತಪ್ಪುಗಲು ಹಾಗೂ ಕ್ಷಣಿಕಕ್ಕೆ ಮಾತ್ರ ಕ್ಷಮಾಪಣೆಯನ್ನು ಸೀಮಿತಗೊಳಿಸಿದೆ, ಎಲ್ಲ ವಿಷಯಗಳನ್ನು ಮೆರೆಯುವು ದಾಗಿದೆ. ಕ್ಷಮಿಸುವುದು ಎಂಬುದು ಬಲಹೀನತೆ ಅಲ್ಲ ಎಂದು ಸ್ವಾಮಿಯು ಸಾರಿದ್ದಾರೆ ಎಂದು ಹೇಳಿದರು.

ಪ್ರಸ್ತುತ ಸನ್ನಿವೇಶ ಮಾತಿನ ಯುದ್ಧ ಮಾಡುವ ವ್ಯಕ್ತಿಯ ಚಾರಿತ್ರö ಹರಣ ಮಾಡುವ ಪ್ರಸಂಗ ಹೆಚ್ಚಾಗುತ್ತಿದ್ದು,ಒಬ್ಬರಿಂದ ಒಬ್ಬರನ್ನು ನೋಯಿಸಲಾಗುತ್ತಿದೆ. ಅವಮಾನಕ್ಕೆ ತಕ್ಕ ಪ್ರತಿಕಾರವಿಲ್ಲದೆ ಸಮಾಧಾನ ಇಲ್ಲ ಎಂಬಂತಾಗಿದೆ. ಆದ್ದರಿಂದ ಪ್ರಸ್ತುತ ಸಮಾಜಕ್ಕೆ ಸ್ವಾಮಿಯ ಸಂದೇಶ ಅಗತ್ಯವಿದೆ. ಕ್ಷಮಿಸುವ ವ್ಯಕ್ತಿಗಳಾಗಿ ಜೀವಿಸಬೇಕು. ಷರತ್ತು, ಆಯ್ಕೆ ಗಳನ್ನು ಬಿಟ್ಟು ಕ್ಷಮಾಗುಣ ಬೆಳೆಸಿಕೊಳ್ಳಬೇಕೆಂದರು.

ಉಪವಾಸ ನಿರತ ಕ್ರೈಸ್ತರಿಗೆ ಚರ್ಚ್ಗಳಲ್ಲಿ ಪ್ರಾರ್ಥನೆಯ ನಂತರ ಲಘು ಉಪಹಾರ, ಪಾನಕ, ಮಜ್ಜಿಗೆ ಹಾಗೂ ಕೋಸಂಬರಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಘನ ಇಮ್ಯಾನುಯಲ್ ಪುನೀತ್, ಚರ್ಚಿನ ಕಾರ್ಯದರ್ಶಿ ವಿ ದಾಸ್, ಖಜಾಂಚಿ ಹೆನ್ರಿ ಪ್ರಸನ್ನ ಕುಮಾರ್, ಅರುಣ್ ಕುಮಾರ್,ಪಾಲ್ ಅಬ್ರಹಮ್, ಕಿರಣ್ ವಿಕ್ಟರಿ, ಆದರ್ಶ್, ಸ್ವಾಮಿ ದಾಸ್ ಎಸ್, ಸಂದೀಪ್ ಎಸ್, ರಾಜಶೇಖರ್ ಇತರರು ಉಪಸ್ಥಿತರಿದ್ದರು.