ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bangalore News: ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದಲ್ಲಿ ಅದ್ದೂರಿ ಕಾರ್ಯಕ್ರಮ: ಡಾ.ಟಿ.ಎಸ್.ಸತ್ಯವತಿ ಅವರಿಗೆ ಸನ್ಮಾನ ಹಾಗೂ ಕೈಲಾಸ ಮಾನಸ ಸರೋವರ ದರ್ಶನ

ಕಾರ್ಯಕ್ರಮದ ಆರಂಭದಲ್ಲಿ "ದೀಪಂ ಜ್ಯೋತಿ ಪರಬ್ರಹ್ಮ" ಎಂಬ ಮಂಗಳಗೀತೆಯ ನಡುವೆ ಸಂಗೀತ ವಿದ್ವಾಂಸರಾದ ಡಾ.ಟಿ.ಎಸ್.ಸತ್ಯವತಿ ಹಾಗೂ ಹಿರಿಯ ಆಡಳಿತಾಧಿಕಾರಿ ಶ್ರೀ ಸಿ.ವಿ.ಗೋಪಿನಾಥ್ ಅವರು ಸಾಂಪ್ರದಾಯಿಕವಾಗಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪಸ್ಥಿತರಿದ್ದ ಗಣ್ಯರು ಹಾಗೂ ಯೋಗಸಾಧಕರು ಈ ಶುಭ ಕ್ಷಣಕ್ಕೆ ಸಾಕ್ಷಿಯಾದರು.

ಬೆಂಗಳೂರು: ಶ್ರೀ ಪ್ರಸನ್ನ ವೀರಾಂಜನೇಯ ಸೇವಾ ಟ್ರಸ್ಟ್‌ನ ಪ್ರತಿಷ್ಠಿತ ವಿಭಾಗವಾದ ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದಲ್ಲಿ ಶನಿವಾರ ಸಂಜೆ ನಡೆದ ಉಭಯ ಕಾರ್ಯಕ್ರಮವು ಆಧ್ಯಾತ್ಮಿಕತೆ, ಸಂಸ್ಕೃತಿ ಹಾಗೂ ಭಾರತೀಯ ಪರಂಪರೆಯ ಸೊಬಗನ್ನು ಅನಾವರಣಗೊಳಿಸಿತು.

ಕಾರ್ಯಕ್ರಮದ ಆರಂಭದಲ್ಲಿ "ದೀಪಂ ಜ್ಯೋತಿ ಪರಬ್ರಹ್ಮ" ಎಂಬ ಮಂಗಳಗೀತೆಯ ನಡುವೆ ಸಂಗೀತ ವಿದ್ವಾಂಸರಾದ ಡಾ. ಟಿ. ಎಸ್. ಸತ್ಯವತಿ ಹಾಗೂ ಹಿರಿಯ ಆಡಳಿತಾಧಿಕಾರಿ ಶ್ರೀ ಸಿ. ವಿ. ಗೋಪಿನಾಥ್ ಅವರು ಸಾಂಪ್ರದಾಯಿಕವಾಗಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪಸ್ಥಿತರಿದ್ದ ಗಣ್ಯರು ಹಾಗೂ ಯೋಗಸಾಧಕರು ಈ ಶುಭ ಕ್ಷಣಕ್ಕೆ ಸಾಕ್ಷಿಯಾದರು.

ನಂತರ, ಇತ್ತೀಚೆಗೆ ರಾಷ್ಟ್ರಪತಿಗಳಿಂದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಸಂಗೀತಗಾರ್ತಿ ಹಾಗೂ ಸಂಸ್ಕೃತ ವಿದ್ವಾಂಸರಾದ ಡಾ.ಟಿ.ಎಸ್.ಸತ್ಯವತಿ ಅವರನ್ನು ಶ್ರೀ ಸಿ.ವಿ. ಗೋಪಿನಾಥ್, ಹಿರಿಯ ಸಂಗೀತ ವಿದ್ವಾಂಸರು ಹಾಗೂ ಇತರ ಗಣ್ಯರು ಫಲಪುಷ್ಪ,  ಮತ್ತು ಸ್ಮರಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು.

ಇದನ್ನೂ ಓದಿ: Bangalore University: ಕಳೆದ ಆರು ತಿಂಗಳಿಂದ ಮುಂದೂಡಿಕೆಯಾಗಿದ್ದ ಬೆಂಗಳೂರು ವಿವಿ ಪಿಎಚ್.ಡಿ ಪ್ರವೇಶ ಪ್ರಕ್ರಿಯೆ ಅಂತಿಮ ಘಟ್ಟಕ್ಕೆ; ಆಗಸ್ಟ್ 3, 4ರಂದು ಸಂದರ್ಶನ

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಸತ್ಯವತಿ ಅವರು, ತಮಗೆ ನೀಡಿದ ಗೌರವಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು. ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದ ಸದಸ್ಯರು ತಮ್ಮ ಮೇಲೆ ತೋರಿದ ಆತ್ಮೀಯತೆ, ಪ್ರೀತಿ ಹಾಗೂ ಗೌರವದಿಂದ ತಾವು ಭಾವುಕರಾಗಿರುವುದಾಗಿ ತಿಳಿಸಿದರು.

ಯೋಗ ಕೇಂದ್ರವು ಕೇವಲ ಯೋಗಾಭ್ಯಾಸಕ್ಕೆ ಸೀಮಿತವಾಗಿರದೆ, ಸಮಾಜದಲ್ಲಿ ಆರೋಗ್ಯ, ಸಂಸ್ಕೃತಿ, ಮಾನವೀಯ ಮೌಲ್ಯಗಳು ಮತ್ತು ಸೇವಾ ಚಟುವಟಿಕೆಗಳನ್ನು ಬೆಳೆಸುತ್ತಿರುವ ರೀತಿ ಶ್ಲಾಘನೀಯವಾಗಿದೆ ಎಂದು ಪ್ರಶಂಸಿಸಿದರು. ಇಂತಹ ಸಂಸ್ಥೆಗಳೇ ಸಮಾಜಕ್ಕೆ ನಿಜವಾದ ದಾರಿ ದೀಪಗಳಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಎರಡನೇ ಭಾಗವಾಗಿ, ಭಾರತದ ಆಡಳಿತ ಸೇವೆಯ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಅನಾಥಾಲಯ ಟ್ರಸ್ಟ್, ಮೈಸೂರಿನ ಅಧ್ಯಕ್ಷರಾಗಿರುವ ಶ್ರೀ ಸಿ. ವಿ. ಗೋಪಿನಾಥ್ ಅವರು "ಕೈಲಾಸ ಮಾನಸ ಸರೋವರ ದರ್ಶನ" ಎಂಬ ವಿಷಯದ ಕುರಿತು ಸುಮಾರು ಎರಡು ಗಂಟೆಗಳ ಕಾಲ ಅಪರೂಪದ ಚಿತ್ರಗಳು ಹಾಗೂ ದೃಶ್ಯಾವಳಿಗಳೊಂದಿಗೆ ಅತ್ಯಂತ ಮನೋಜ್ಞ ಉಪನ್ಯಾಸ ನೀಡಿದರು.

Presentation by Sri Gopinath ok

ಕೈಲಾಸ ಪರ್ವತ ಹಾಗೂ ಮಾನಸ ಸರೋವರದ ಭೌಗೋಳಿಕ, ಐತಿಹಾಸಿಕ, ಆಧ್ಯಾತ್ಮಿಕ ಹಾಗೂ ವೈದಿಕ ಮಹತ್ವವನ್ನು ಅವರು ಸುಂದರವಾಗಿ ವಿವರಿಸಿದರು. ವೇದಗಳು, ಉಪನಿಷತ್ತುಗಳು, ಪುರಾಣ ಗಳು ಹಾಗೂ ಶಿವತತ್ತ್ವದ ಉಲ್ಲೇಖಗಳೊಂದಿಗೆ ಕೈಲಾಸದ ಆಧ್ಯಾತ್ಮಿಕ ವೈಭವವನ್ನು ಮನಮುಟ್ಟು ವಂತೆ ನಿರೂಪಿಸಿದರು. ತಾವು ಕೈಗೊಂಡ ಯಾತ್ರೆಯ ಅನುಭವಗಳು, ಯಾತ್ರಿಕರು ಎದುರಿಸುವ ಸವಾಲುಗಳು, ಅಲ್ಲಿನ ಪ್ರಕೃತಿ ವೈಭವ ಹಾಗೂ ಭಕ್ತಿಯಲ್ಲಿ ಅಡಗಿರುವ ಅಂತರಂಗದ ಅನುಭವಗಳನ್ನು ವರ್ಣಮಯ ಛಾಯಾಚಿತ್ರಗಳ ಮೂಲಕ ಜೀವಂತವಾಗಿ ಪ್ರಸ್ತುತ ಪಡಿಸಿದರು.

ಅವರ ಉಪನ್ಯಾಸವು ಕೇವಲ ಪ್ರವಾಸ ವರ್ಣನೆಯಾಗಿರದೆ, ಭಾರತೀಯ ಆಧ್ಯಾತ್ಮಿಕ ಪರಂಪರೆ, ವೇದಾಂತ ಚಿಂತನೆ ಹಾಗೂ ಶಿವಭಕ್ತಿಯ ಆಳವಾದ ಸಂದೇಶವನ್ನು ಸಾರುವ ಪ್ರೇರಣಾದಾಯಕ ಅನುಭವವಾಗಿ ಎಲ್ಲರ ಮನಸ್ಸನ್ನು ಸ್ಪರ್ಶಿಸಿತು. ಸಭಿಕರು ಸಂಪೂರ್ಣ ಎರಡು ಗಂಟೆಗಳ ಕಾಲ ಅಪಾರ ಆಸಕ್ತಿಯಿಂದ ಉಪನ್ಯಾಸವನ್ನು ಆಲಿಸಿ, ಹಲವಾರು ಪ್ರಶ್ನೆಗಳನ್ನು ಕೇಳಿ ಸಂವಾದದಲ್ಲಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಯೋಗ ಕೇಂದ್ರದ ಪದಾಧಿಕಾರಿಗಳು, ಹಿರಿಯ ಯೋಗಸಾಧಕರು, ಸಂಗೀತಾ ಸಕ್ತರು, ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.

ಅಂತಿಮವಾಗಿ ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದ ವತಿಯಿಂದ ಎಲ್ಲಾ ಗಣ್ಯರಿಗೆ, ಅತಿಥಿಗಳಿಗೆ ಹಾಗೂ ಭಾಗವಹಿಸಿದ ಯೋಗಸಾಧಕರು ಮತ್ತು ಭಕ್ತರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಕಾರ್ಯಕ್ರಮದ ನಂತರ ಎಲ್ಲರಿಗೂ ಆತ್ಮೀಯ ಭೋಜನದ ವ್ಯವಸ್ಥೆ ಮಾಡಲಾಗಿತ್ತು.