ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

MLA S.R.Vishwanath: ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಮಹಾನ್ ಪುರುಷರು, ಸಂತರು ಒಂದು ಜಾತಿ, ಧರ್ಮಕ್ಕೆ ಸೀಮಿತವಾದವರಲ್ಲ: ಶಾಸಕ ಎಸ್.ಆರ್.ವಿಶ್ವನಾಥ್

ಅಂಬೇಡ್ಕರ್ ಭಾರತಕ್ಕೆ ನೀಡಿದ ಸಂವಿಧಾನದಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯ ಹಾಗೂ ಸಮಾನವಾದ ಹಕ್ಕು ಸಿಗುತ್ತಿದೆ. ಆದರೆ, ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕಾಂಗ್ರೆಸ್‌ ನವರು ಮೊದಲಿನಿಂದಲೂ ಅಪಮಾನಿಸಿಕೊಂಡೇ ಬಂದರು. ಅವರ ನಿಧನದ ನಂತರವೂ ಅವರಿಗೆ ದಿಲ್ಲಿಯಲ್ಲಿ ಸ್ಮಾರಕ ನಿರ್ಮಾಣಕ್ಕೆ ಜಾಗ ಕೊಡಲಿಲ್ಲ

ಡಾ ಬಿ.ಆರ್.ಅಂಬೇಡ್ಕರ್ ಸೇರಿದಂತೆ ಮಹಾನ್ ಪುರುಷರು, ಸಂತರು ಒಂದು ಜಾತಿ, ಧರ್ಮಕ್ಕೆ ಸೀಮಿತವಾದವರಲ್ಲ, ಅವರೆಲ್ಲರೂ ಸಮಾನತೆಯ ಹರಿಕಾರರು ಎಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ತಿಳಿಸಿದರು.

ಗೌರಿಬಿದನೂರು: ಡಾ ಬಿ.ಆರ್.ಅಂಬೇಡ್ಕರ್ ಸೇರಿದಂತೆ ಮಹಾನ್ ಪುರುಷರು, ಸಂತರು ಒಂದು ಜಾತಿ, ಧರ್ಮಕ್ಕೆ ಸೀಮಿತವಾದವರಲ್ಲ, ಅವರೆಲ್ಲರೂ ಸಮಾನತೆಯ ಹರಿಕಾರರು ಎಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್(Yelahanka MLA S.R.Vishwanath) ತಿಳಿಸಿದರು.

ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ವೃತ್ತದಲ್ಲಿನ ಅಂಬೇಡ್ಕರ್ ಸ್ತೂಪಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಮಾತನಾಡಿದರು.

ಅಂಬೇಡ್ಕರ್ ಭಾರತಕ್ಕೆ ನೀಡಿದ ಸಂವಿಧಾನದಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯ ಹಾಗೂ ಸಮಾನವಾದ ಹಕ್ಕು ಸಿಗುತ್ತಿದೆ. ಆದರೆ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕಾಂಗ್ರೆಸ್‌ನವರು ಮೊದಲಿನಿಂದಲೂ ಅಪಮಾನಿಸಿಕೊಂಡೇ ಬಂದರು. ಅವರ ನಿಧನದ ನಂತರವೂ ಅವರಿಗೆ ದಿಲ್ಲಿಯಲ್ಲಿ ಸ್ಮಾರಕ ನಿರ್ಮಾಣಕ್ಕೆ ಜಾಗ ಕೊಡಲಿಲ್ಲ. ಇದು ಕಾಂಗ್ರೆಸ್ ಪಕ್ಷದ ವೈಖರಿ ಯಾಗಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ: Gauribidabur News: ಅಣ್ಣೆ ಫಾತಿಮಾ ಶಿಕ್ಷಕರ ತರಬೇತಿ ಸಂಸ್ಥೆಯ ಗುರು ಶಿಷ್ಯರ ಸಮಾಗಮ

ಪ್ರಧಾನಿ ಮೋದಿ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಸ್ಮಾರಕ ಸೇರಿದಂತೆ ಅವರು ನೆನಪಿಗಾಗಿ ದೇಶದ ಐದು ಸ್ಥಳಗಳನ್ನು ಅಭಿವೃದ್ಧಿಪಡಿಸಿ ಪ್ರವಾಸಿತಾಣವಾಗಿಸಿದ್ದಾರೆ. ಇದು ಬಿಜೆಪಿಯ ನಿಜವಾದ ಮಾನವೀಯತೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಬಿಜೆಪಿ ಪಕ್ಷದ ಮುಖಂಡ ರವಿನಾರಾಯಣರೆಡ್ಡಿ ಮಾತನಾಡಿ, ಮುಂದಿನ ದಿನಗಳಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ತಾಲೂಕಿನಲ್ಲಿ ನಾಡಹಬ್ಬವನ್ನಾಗಿ ಆಚರಿಸಲಾಗುವುದು. ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ನೀಡಿದ ಸಂವಿಧಾನದಿಂದ ಪ್ರತಿಯೊಬ್ಬ ನಾಗರಿಕನೂ ಸಹ ನೆಮ್ಮದಿಯಿಂದ ಜೀವನ ಮಾಡುವಂತಹ ವಾತಾವರಣ ನಿರ್ಮಾಣವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಡಾ,ಎಚ್.ಎಸ್ ಶಶಿಧರ್, ದಲಿತ ಮುಖಂಡ ಎಚ್.ಎನ್. ಸನಂದಕುಮಾರ್, ಮುಖಂಡರಾದ ಭಾಗ್ಯನಗರದ ಮುನಿರಾಜು, ಜಯಣ್ಣ ಮಾತನಾಡಿದರು.

ಕಾರ್ಯಕ್ರಮಕ್ಕೂ ಮುನ್ನ, ಬಿಜೆಪಿ ಪಕ್ಷದ ಸಾವಿರಾರು ಮಂದಿ ಕಾರ್ಯಕರ್ತರು ನಗರದ ಎಪಿಎಂಸಿ ವೃತ್ತದಿಂದ ಬೃಹತ್ ಬೈಕ್ ರ್ಯಾಲಿ ಮೂಲಕ ನಗರದ ಬಿಎಚ್ ರಸ್ತೆಯಲ್ಲಿ ಸಾಗಿ ಮುಖ್ಯ ರಸ್ತೆಯ ಮೂಲಕ ಎಂಜಿ ವೃತ್ತದಲ್ಲಿ ಸಮಾರೋಪಗೊಂಡರು. ನಗರದೆಲ್ಲಡೆ ಅಂಬೇಡ್ಕರ್ ಭಾವಚಿತ್ರ ವಿರುವ ನೀಲಿ ಧ್ವಜಗಳು ಹಾಗೂ ಭಾರತೀಯ ಜನತಾ ಪಾರ್ಟಿಯ ಧ್ವಜಗಳನ್ನು ರರಾಜಿಸುತ್ತಿದ್ದವು. ಕಾರ್ಯ ಕರ್ತರು ಉತ್ಸಾಹದಿಂದ ತಮ್ಮ ನಾಯಕ ಎಂ.ರವಿನಾರಾಯಣರೆಡ್ಡಿ ಪರವಾಗಿ ಜಯಘೋಷಗಳನ್ನು ಮುಗಿಲೆತ್ತರಕ್ಕೆ ಮಾರ್ಧನಿಸುವಂತೆ ಕೂಗುತ್ತಾ ಸಾಗುತ್ತಿದ್ದು ಕಂಡು ಬಂತು.

ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ವೇಮಾರೆಡ್ಡಿ, ಬಿ.ಎನ್.ರಂಗನಾಥ್, ಮುನಿ ಲಕ್ಷ್ಮಮ್ಮ, ಭರತ್ ರೆಡ್ಡಿ,ಜಯಣ್ಣ,ನಾರಾಯಣಸ್ವಾಮಿ, ಶ್ರೀಧರ್ ರೆಡ್ಡಿ, ಮಲ್ಲಿಕಾರ್ಜುನ, ರಂಗನಾಥ ಗೌಡ, ಮಂಜುನಾಥರೆಡ್ಡಿ, ನರಸಿಂಹಯ್ಯ ಮತ್ತಿತರರು ಹಾಜರಿದ್ದರು.